Sunday, December 31, 2017

ತಂತ್ರಜ್ಞ ತ್ರಿಪದಿಗಳು-೨೨೬ ಹೊಸವರ್ಷದ ಶುಭಾಶಯಗಳು


ತಂತ್ರಜ್ಞ ತ್ರಿಪದಿಗಳು-೨೨೬ ಹೊಸವರ್ಷದ ಶುಭಾಶಯಗಳು
ಎಸೆದು ಹಳೆ ವೈಷಮ್ಯ, ಹೊಸೆದು ಹೊಸ ಬಾಂಧವ್ಯ
ಹೊಸಪಾಠಗಳ ಕಲಿತು, ಹೆಗ್ಗುರಿಯ ಮುಂದಿರಿಸಿ,
ಹೊಸವರ್ಷದಧ್ಯಾಯ ಬರೆಯೊ! ತಂತ್ರಜ್ಞ.
TechnoWise Tripods-226 New Year Greetings
Throwing out old animosities, knitting new relationships,
Learning new lessons, and setting new goals, O! TechnoWise!
Write a new chapter in the book of life.


Tuesday, December 26, 2017

ತಂತ್ರಜ್ಞ ತ್ರಿಪದಿಗಳು-೨೨೫ ತಾಯೆ! ನೀನದ್ವಿತೀಯೆ!


ತಂತ್ರಜ್ಞ ತ್ರಿಪದಿಗಳು-೨೨೫ ತಾಯೆ! ನೀನದ್ವಿತೀಯೆ!
ನವಮಾಸ ಗರ್ಭದಲಿ, ಬುವಿಗಿಳಿಯೆ ತೋಳಿನಲಿ,
ಸವಿಭಾವದಲಿ ಸದಾ ಹೃದಯದಲಿ ಹೊರುವವಳು
ಅವನಿಯಲಿ ತಾಯದ್ವಿತೀಯೆ! ತಂತ್ರಜ್ಞ.
TechnoWise Tripods-225 INIMITABLE MOTHER
The only person who carries nine months in her belly,
A few years in her arms, and with love forever in her heart, O! TechnoWise!
Is the mother who stands-alone inimitably.

Monday, December 25, 2017

ತಂತ್ರಜ್ಞ ತ್ರಿಪದಿಗಳು-೨೩೪ ಕ್ರಿಸ್‌ಮಸ್‌ ಶುಭಾಶಯಗಳು


ತಂತ್ರಜ್ಞ ತ್ರಿಪದಿಗಳು-೨೩೪ ಕ್ರಿಸ್‌ಮಸ್‌ ಶುಭಾಶಯಗಳು
ಒಸರಲೆದೆಯಲಿ ಒಲವು, ಪಸರಿಸಲಿ ನಲಿವುಸಿರಿ,
ಹಸಿರು ಭೂಮಾತೆ, ಸುಖಿ ಜೀವಸಂಕುಲವಿರಲಿ
ಕ್ರಿಸ್‌ಮಸ್‌ ಶುಭಾಶಯವು ನಿಮಗೆ ತಂತ್ರಜ್ಞ.
TechnoWise Tripods-234 CHRISTMAS GREETINGS
May love seep from hearts, and spirit of brotherhood expand,
May mother earth be evergreen, and the entire web of life happy!
O! TechnoWise! merry Christmas Greetings to you.

Sunday, December 24, 2017

ತಂತ್ರಜ್ಞ ತ್ರಿಪದಿಗಳು-೨೨೩ ಹರ್ಷಿಸಲು ಕಲಿಯೊ!


ತಂತ್ರಜ್ಞ ತ್ರಿಪದಿಗಳು-೨೨೩ ಹರ್ಷಿಸಲು ಕಲಿಯೊ!
ಸರಳ ಬಾಳಿಗೆ ಕಾದು, ಹರುಷಪಡುವುದು ಜಟಿಲ
ವಿರದ ದಿನವೆನೆ ಜೋಕೆ! ಕಾಲಗತಿ ಮಿಂಚಂತೆ!
ಇರುವೀಗ ಹರ್ಷಿಸಲು ಕಲಿಯೊ! ತಂತ್ರಜ್ಞ.
TechnoWise Tripods-223 LEARN TO BE HAPPY
Don't wait to become happy till life becomes simple and smooth;
Remember that life is too complex and lightning fast! O! TechnoWise!
Learn to be happy right now and here.


Saturday, December 23, 2017

ತಂತ್ರಜ್ಞ ತ್ರಿಪದಿಗಳು-೨೨೨ ಮಹಾಮಾಹಿತಿ ಯುಗ


ತಂತ್ರಜ್ಞ ತ್ರಿಪದಿಗಳು-೨೨೨ ಮಹಾಮಾಹಿತಿ ಯುಗ
ಮಹಾನದಿ ಮಹಾಪಥ ಮಹಾಸುಕ್ಷೇತ್ರ ಬಳಿ
ಬಹು ಬೆಳೆದ ನಗರಗಳು ಗ್ರಹದಂತೆ ಭ್ರಮಿಸುತಿವೆ
ಮಹಾಮಾಹಿತಿರವಿಯ ಸುತ್ತ ತಂತ್ರಜ್ಞ.
TechnoWise Tripods-222 INFORMATION ERA
The big cities which grew in the vicinity of 
Big rivers 
Or Highway
s or famous places of worship, have virtually become like planets
That go round the sun of information! O! TechnoWise!


Friday, December 22, 2017

ತಂತ್ರಜ್ಞ ತ್ರಿಪದಿಗಳು-೨೨೧ ಹೆಬ್ಬಯಕೆ


ತಂತ್ರಜ್ಞ ತ್ರಿಪದಿಗಳು-೨೨೧ ಹೆಬ್ಬಯಕೆ
ಮುಂದೆ ಗುರಿಯಿರಬೇಕು; ಹಿಂದೆ ಗುರುವಿರಬೇಕು;
ಹೊಂದಿ ಗುರುತರದ ವ್ಯಕ್ತಿತ್ವದಾಯಾಮವಿರೆ,
ಚಂದದಲಿ ಸಫಲ ಹೆಬ್ಬಯಕೆ ತಂತ್ರಜ್ಞ.
TechnoWise Tripods-221 NOBLE GOALS
A grand vision in the front, and a great mentor at the back,
And when the personality dimension is distinct and harmonious,
All noble goals will be fulfilled! O! TechnoWise!



Thursday, December 21, 2017

ತಂತ್ರಜ್ಞ ತ್ರಿಪದಿಗಳು-೨೨೦ಹೊಸತು-ಹಳತು


ತಂತ್ರಜ್ಞ ತ್ರಿಪದಿಗಳು-೨೨೦ಹೊಸತು-ಹಳತು
ಹೊಸತೆಲ್ಲ ಹಸನಲ್ಲ; ಹುಸಿಯಲ್ಲ ಹಳತೆಲ್ಲ;
ಹೊಸ ನಿಕಷದಲಿ ಹಳತ, ಹಳೆ ತರ್ಕದಲಿ ಹೊಸತ-
ಕಸ ಕಳೆಯೆ ಸೋಸಿ, ರಸ ಹೀರು ತಂತ್ರಜ್ಞ.
TechnoWise Tripods-220 NEW-OLD
All new is not good, and all old is not false;
Test the old by a new touchstone, and the new by the old logic;
Filter out the rubbish and drink the essence! O! TechnoWise!






Wednesday, December 20, 2017

ತಂತ್ರಜ್ಞ ತ್ರಿಪದಿಗಳು-೨೧೯ ಮೂರೇ ಮುಖ್ಯ ಪ್ರಶ್ನೆಗಳು


ತಂತ್ರಜ್ಞ ತ್ರಿಪದಿಗಳು-೨೧೯ ಮೂರೇ ಮುಖ್ಯ ಪ್ರಶ್ನೆಗಳು
ಆರೋಗ್ಯ? ಆನಂದ? ಆರಾಮವಿರುವಿರಾ?
ಆರೋಗ್ಯ ಭಾಗ್ಯ! ಆನಂದಶಾಂತಿಗಳಾದ್ಯ!
ಬೇರೆಲ್ಲ ಪ್ರಶ್ನೆಗಳು ಗೌಣ! ತಂತ್ರಜ್ಞ.
TechnoWise Tripods-219 THREE IMPORTANT QUESTIONS
Are you healthy? Are you happy? Are you peaceful?
Health is wealth! Happiness is primary! and Peace is a basis!
All other questions are secondary! O! TechnoWise!






Tuesday, December 19, 2017

ತಂತ್ರಜ್ಞ ತ್ರಿಪದಿಗಳು-೨೧೮ ಕಿನಿಸು ನಿಮಿಷ! ಮನಸು ವರುಷ!


ತಂತ್ರಜ್ಞ ತ್ರಿಪದಿಗಳು-೨೧೮ ಕಿನಿಸು ನಿಮಿಷ! ಮನಸು ವರುಷ!
ಕ್ಷಣದ ಕೋಪದ ನಡುವೆ ಕ್ಷಣ ಸೈರಣೆಯ ನಿಲುವು
ಜನುಮ ಪರಿಯಂತ ತಡೆಯುವುದು ಪಶ್ಚಾತ್ತಾಪ!
ಕಿನಿಸು ನಿಮಿಷಕೆ, ಮನಸು ವರುಷ! ತಂತ್ರಜ್ಞ.
TechnoWise Tripods-218 A MOMENT OF PATIENCE
A moment of patience amidst moments of anger
Saves lifelong regrets and remorse, O! TechnoWise!
A minute of anger is years for the mind!





Monday, December 18, 2017

ತಂತ್ರಜ್ಞ ತ್ರಿಪದಿಗಳು-೨೧೭ ಮತಿವೃಕ್ಷ


ತಂತ್ರಜ್ಞ ತ್ರಿಪದಿಗಳು-೨೧೭ ಮತಿವೃಕ್ಷ
ಉಗುರಿಂದ ಗೈವುದಕೆ, ತೆಗೆವೆ ಯಾತಕೆ ಕೊಡಲಿ?
ದುಗುಡಬುಗುರಿಯು ತಿರುಗಿ, ಕೊನೆಗೆ ನೆಲಕುರುಳುವುದು!
ಚಿಗುರಿಸಿಕೊ ಮತಿವೃಕ್ಷ ನಿತ್ಯ! ತಂತ್ರಜ್ಞ.
TechnoWise tripods-217 TREE OF INTELLECT
Why do you take out the axe when the task can be done using the nail?
The spinning-top of worries finally stops after spinning for sometime;
Germinate your tree of Intellect! O! TechnoWise!

Sunday, December 17, 2017

ತಂತ್ರಜ್ಞ ತ್ರಿಪದಿಗಳು-೨೧೬ ಕಾಲ- ಅವಕಾಶ


ತಂತ್ರಜ್ಞ ತ್ರಿಪದಿಗಳು-೨೧೬ ಕಾಲ- ಅವಕಾಶ
ಕಾಲ ಕಾಯುವುದೆ? ಅನುಕೂಲ ಎಲ್ಲವಕಾಶ?
ಓಲೈಸೆ ಸತ್ಕಾಲ! ಕೈಹಿಡಿಯಲವಕಾಶ!
ಕಾಲಾವಕಾಶ ಈಗಿಲ್ಲಿ! ತಂತ್ರಜ್ಞ.
TechnoWise Tripods-216 TIME OPPORTUNITY
Does time wait for anyone? Is there a place for opportunity?
Time well utilised is good time! and opportunity grabbed is good-opportunity!
Good time is Now! and good opportunity is Here! O! TechnoWise!


Saturday, December 16, 2017

ತಂತ್ರಜ್ಞ ತ್ರಿಪದಿಗಳು-೨೧೫ ಒಳ್ಳೆಯವರು


ತಂತ್ರಜ್ಞ ತ್ರಿಪದಿಗಳು-೨೧೫ ಒಳ್ಳೆಯವರು
ಸುಳ್ಳುಮಾತಲ್ಲ ತಿಳಿ! ಒಳ್ಳೆಯವರಿಲ್ಲಿಹುದು!
ಎಲ್ಲಿಯೂ ಸಿಗಲಿಲ್ಲವೆನ್ನದಿರು! ನೀನಾಗ
ಲೊಲ್ಲೆಯಾ, ಅವರಲ್ಲಿ  ಒಬ್ಬ?  ತಂತ್ರಜ್ಞ!
TechnoWise Tripods-215 GOOD PEOPLE
Not at all false that in this world there're lot of good people! 
Don't tell that you couldn't find even one good person! O TechnoWise!
Why not you yourself become one of them?

Friday, December 15, 2017

ತಂತ್ರಜ್ಞ ತ್ರಿಪದಿಗಳು-೨೧೪ ಭೂತ-ವರ್ತಮಾನ-ಭವಿಷ್ಯ


ತಂತ್ರಜ್ಞ ತ್ರಿಪದಿಗಳು-೨೧೪ ಭೂತ-ವರ್ತಮಾನ-ಭವಿಷ್ಯ
ಒಂದೆ ಕ್ಷಣವೆಂಬಂತೆ, ಹಿಂದೆ ಕಳೆದುದು ಭಾಸ!
ಮುಂದಿನದು ಯುಗದೀರ್ಘವೆನಿಸುವುದು ಆಭಾಸ!
ಇಂದಿನೀ ಕ್ಷಣ ಶ್ರೀನಿವಾಸ ತಂತ್ರಜ್ಞ.
TechnoWise Tripods-214 PAST-PRESENT-FUTURE
When one looks back, it appears time flew away in a flash!
And when looks forward in time, it seems like an epoch, O! TechnoWise!
If you look to the present, it brings precious Presents!

Thursday, December 14, 2017

ತಂತ್ರಜ್ಞ ತ್ರಿಪದಿಗಳು-೨೧೩ ಹರಿನಾಯಕತ್ವ-ಕುರಿನಾಯಕತ್ವ


ತಂತ್ರಜ್ಞ ತ್ರಿಪದಿಗಳು-೨೧೩ ಹರಿನಾಯಕತ್ವ-ಕುರಿನಾಯಕತ್ವ

ಹರಿನಾಯಕತ್ವದಲಿ ಕುರಿಶತದ ಸೈನ್ಯವನು
ಕುರಿಯು ನಾಯಕನಿರುವ ಹರಿಶತವ ಗೆಲ್ಲುವುದು;
ಸ್ಪರುಶಮಣಿ ನಾಯಕದ್ಯುಮಣಿ ತಂತ್ರಜ್ಞ.

TechnoWise Tripods-213 LION LEADERSHIP and SHEEP LEADERSHIP

An army of one hundred sheep led by a lion,
Defeats an army of one hundred lions led by a sheep, O! TechnoWise!
A sunny leader is like a Philosophers' stone.


Wednesday, December 13, 2017

ತಂತ್ರಜ್ಞ ತ್ರಿಪದಿಗಳು-೨೧೨ ಬದುಕು ಮೋಟಾರ್‌ ಕಾರು

ತಂತ್ರಜ್ಞ ತ್ರಿಪದಿಗಳು-೨೧೨ ಬದುಕು ಮೋಟಾರ್‌ ಕಾರು

ಬದುಕು ಮೋಟಾರ್‌ ಕಾರು, ಅದಕೆ ಚಾಲಕ ನೀನು;
ಮೆದುಳು ಚಾಲನಶಕ್ತಿ, ಮತಿ ನಿಯಂತ್ರಣಚಕ್ರ;
ಬದುಕಿನುದ್ದೇಶ ಪಯಣಿಗರು ತಂತ್ರಜ್ಞ.

TechnoWise Tripods-212 LIFE IS A MOTOR CAR

Life is a motor car, and you're its driver;
The brain is the motive engine, and the intellect is the steering wheel;
And O! TechnoWise! the aims of life are the passengers. 


Tuesday, December 12, 2017

ತಂತ್ರಜ್ಞ ತ್ರಿಪದಿಗಳು-೨೧೧ ಕಸದಿಂದ ರಸ


ತಂತ್ರಜ್ಞ ತ್ರಿಪದಿಗಳು-೨೧೧ ಕಸದಿಂದ ರಸ
ಆದುದೆಲ್ಲವು ಒಳಿತೆ? ವಾದವೊಪ್ಪದು ಹೃದಯ!
ಆದ ಕಸದಿಂದಿಷ್ಟು ರಸಪಡೆವ ಪಥ ಹುಡುಕು!
ಸ್ವಾದ ಕೊಡು ಕಹಿಯ ಹಾಗಲಕೆ! ತಂತ್ರಜ್ಞ.
TechnoWise Tripods-211 USE CRISIS AS A TOOL
No heart can believe that whatever happens in life is for the best!
But when something bad happens, learn a lesson and use it, O! TechnoWise!
For making a tasty dish cooking bitter gourd.


Monday, December 11, 2017

ತಂತ್ರಜ್ಞ ತ್ರಿಪದಿಗಳು-210 ಬಲವಂತ


ತಂತ್ರಜ್ಞ ತ್ರಿಪದಿಗಳು-210 ಬಲವಂತ
ಕಿತ್ತೆಸೆಯೆ ಗಿಡದೆಲೆಯ, ತತ್ತರಿಸುವುದು ಗಿಡವು!
ಹೊತ್ತಿಳಿಯೆ, ಹಣ್ಣೆಲೆಯು ಉದುರೆ, ಅದೆ ಗೊಬ್ಬರವು!
ಒತ್ತಾಯವೆಲ್ಲು ತರವಲ್ಲ ತಂತ್ರಜ್ಞ.
TechnoWise-210 FORCE
When you forcibly pluck the leaves, the plant weeps!
When the autumn leaves fall, it becomes menure for the plant!
Force is always injurious!, O! TechnoWise.


Sunday, December 10, 2017

ತಂತ್ರಜ್ಞ ತ್ರಿಪದಿಗಳು-೨೦೯ ಮೌಲ್ಯ ಕೊಡುವವನಾಗು!


ತಂತ್ರಜ್ಞ ತ್ರಿಪದಿಗಳು-೨೦೯ ಮೌಲ್ಯ ಕೊಡುವವನಾಗು!
ಮನ್ನಣೆಯೆ ಅವಕಿಲ್ಲ, ಸೊನ್ನೆಗಳೆ ಇರೆ ಹತ್ತು!
ಸಣ್ಣ ಒಂದಿರೆ ಮುಂದೆ, ಬೆಲೆ ಮಿಲಿಯ! ಮೌಲ್ಯ ಕೊಡು!
ಸೊನ್ನೆಗಳ ಮುಂದೆ ಒಂದಾಗಿ! ತಂತ್ರಜ್ಞ.
TechnoWise Tripods-209 BE A VALUE CREATOR
Ther's no value even if there're ten zeros,
It's billions if one leads ten zeros, O! TechnoWise!
Be a value creator becoming one before zeros.

Thursday, December 7, 2017

ತಂತ್ರಜ್ಞ ತ್ರಿಪದಿಗಳು-208 ಪರೀಕ್ಷಾಕಾಲದ ಮತಿ




ತಂತ್ರಜ್ಞ ತ್ರಿಪದಿಗಳು-208 ಪರೀಕ್ಷಾಕಾಲದ ಮತಿ
ಪರೀಕ್ಷಾಕಾಲಗಳ ಪರಮಾವಧಾನ ಮತಿ
ವರುಷವಿಡಿ ಇರಲಾಗ, ಕ್ಷೇತ್ರಜ್ಞನಾಗಿ ನೀ
ಮೆರೆಯಿಸುವೆ ನಿನ್ನ ಸುಕ್ಷೇತ್ರ ತಂತ್ರಜ್ಞ.
TechnoWise Tripods-208 INTELLECT DURING EXAMINATIONS
If the state of intellect present during the hours of examinations,
Continues to be intensively high throughout the year, O! TechnoWise! 
You'll reach the topmost rung in your own field.

Wednesday, December 6, 2017

ತಂತ್ರಜ್ಞ ತ್ರಿಪದಿಗಳು-೨೦೭ ಕೃತಜ್ಞತೆ


ತಂತ್ರಜ್ಞ ತ್ರಿಪದಿಗಳು-೨೦೭ ಕೃತಜ್ಞತೆ
ನಿತ್ಯಜೀವನದಲ್ಲಿ ಮಿತ ಪ್ರತಿಕ್ರಿಯೆ ಕೊಡುತ;
ಅತಿ ಕೃತಜ್ಞತೆಯಿರಿಸೆ ಅದಕಿದಕೆ ಎಲ್ಲದಕೆ
ದ್ಯುತಿಪೂರ್ಣವಾಗುವುದು ಬಾಳು! ತಂತ್ರಜ್ಞ.
TechnoWise Tripods-207 GRATITUDE
When you show limited reactions to the events of life;
And unlimited gratitude for this, that, and for everything,
Life becomes enlightened, O! TechnoWise!