Thursday, February 27, 2020

ತಂತ್ರಜ್ಞ ತ್ರಿಪದಿಗಳು-೫೫೬ ಎರಡಲಗುಗಳ ಖಡ್ಗ!

ತಂತ್ರಜ್ಞ ತ್ರಿಪದಿಗಳು-೫೫೬ ಎರಡಲಗುಗಳ ಖಡ್ಗ!

ಕಡಿಯುವುದು ಒಂದಲಗು ಪಡೆವ ಮೈತ್ರಿಯ ಹೊರಗೆ!
ಕಡಿಯುವುದು ಇನ್ನೊಂದು ಪ್ರೀತಿ ಬೇರನು ಒಳಗೆ!
ಖಡುಗ, ಎರಡಲಗುಗಳ ಹಮ್ಮು! ತಂತ್ರಜ್ಞ!

TechnoWise Tripods-556 DOUBLE  EDGED  SWORD!

One edge cuts the boon of friendship outside!
The other edge cuts the root of love inside!
Double-edged sword is this Ego! O! TechnoWise!

Wednesday, February 26, 2020

ತಂತ್ರಜ್ಞ ತ್ರಿಪದಿಗಳು-೫೫೫ ಹುಚ್ಚು ಕುದುರೆ!

ತಂತ್ರಜ್ಞ ತ್ರಿಪದಿಗಳು-೫೫೫ ಹುಚ್ಚು ಕುದುರೆ!

ನಿನ್ನಶ್ವ ಕಡಿವಾಣ ಅನ್ಯ ಹಸ್ತದಲೇಕೆ?
ಇನ್ನೆಲ್ಲಿಗೋ ಬಯಸದಲ್ಲಿಗೊಯ್ವರು ಪರರು!
ನಿನ್ನ ವಾಹನ ಹುಚ್ಚು ಕುದುರೆ! ತಂತ್ರಜ್ಞ!

TechnoWise Tripods-555 MAD  HORSE!

Why do you give to others the reins of your horse?
They may lead to places which you don't like at all!
You have mounted a mad horse! O! TechnoWise!


Tuesday, February 25, 2020

ತಂತ್ರಜ್ಞ ತ್ರಿಪದಿಗಳು-೫೫೪ ಯೋಚನೆಗಳು: ಉಚಿತ ಟಿಕೇಟುಗಳು

ತಂತ್ರಜ್ಞ ತ್ರಿಪದಿಗಳು-೫೫೪ ಯೋಚನೆಗಳು: ಉಚಿತ ಟಿಕೇಟುಗಳು

ಬರುವ ಯೋಚನೆಯೆಲ್ಲ ದೊರೆವ ಉಚಿತ ಟಿಕೇಟು!
ಕರೆದೊಯ್ಯುವುದು ನಿನ್ನನೆಲ್ಲಿಗೆಂಬುದನರಿತು,
ಸರಿಯೆನಿಸೆ ವಾಹನವನೇರು! ತಂತ್ರಜ್ಞ!

TechnoWise Tripods-554 THOUGHTS: FREE TICKETS

Thoughts are like free tickets offered!
Only after knowing where they will take you,
Get into a proper vehicle! O! TechnoWise!




Monday, February 24, 2020

ತಂತ್ರಜ್ಞ ತ್ರಿಪದಿಗಳು-೫೫೩ ದಾನದ ಲೆಕ್ಕ

ತಂತ್ರಜ್ಞ ತ್ರಿಪದಿಗಳು-೫೫೩ ದಾನದ ಲೆಕ್ಕ!

ನೂರಿದ್ದು ನಿನ್ನಲ್ಲಿ, ಆರನ್ನು ಕೊಡುವೆ ನೀ!
ಮೂರನ್ನು ಕೊಡುವನವ ತನಗಿದ್ದ ನಾಲ್ಕರಲಿ!
ಆರಕಿಂತಲು ಮೂರೆ ಹೆಚ್ಚು! ತಂತ್ರಜ್ಞ!

TechnoWise Tripods-553 THE ARITMATIC OF BENEFACTION!

You are giving away six, from the one hundred you have!
He is giving away three, from the four he has!
The Three is more than the Six! O! TechnoWise!

Saturday, February 22, 2020

ತಂತ್ರಜ್ಞ ತ್ರಿಪದಿಗಳು-೫೫೨ ಸಂಶ್ರೇಷ್ಠ ಪ್ರಜ್ಞೆ

ತಂತ್ರಜ್ಞ ತ್ರಿಪದಿಗಳು-೫೫೨ ಸಂಶ್ರೇಷ್ಠ ಪ್ರಜ್ಞೆ!

ಮನುಜ ಶ್ರೇಷ್ಠನು ಈ ಭುವನ ಜೀವಕೋಟಿಯಲಿ!
ಮನುಜನೊಳಗಡೆ ಶ್ರೇಷ್ಠ ಬಂಧಮೋಕ್ಷದ ಮನಸು!
ಮನದ ನೆಲೆ ಪ್ರಜ್ಞೆ ಸಂಶ್ರೇಷ್ಠ! ತಂತ್ರಜ್ಞ!

TechnoWise Tripods-552 SUPERLATIVE CONSCIOUSNESS!

Man is the paramount among all the millions of living beings!
And within Man, the Mind is the supreme!
Consciousness, the base of the Mind, is the superlative! O! TechnoWise!



Saturday, February 15, 2020

ತಂತ್ರಜ್ಞ ತ್ರಿಪದಿಗಳು-೫೪೯ ಹೊಣೆಹಣತೆ


ತಂತ್ರಜ್ಞ ತ್ರಿಪದಿಗಳು-೫೪೯ ಹೊಣೆಹಣತೆ
ಹೊಣೆಯ ಸರ್ವರು ನಿರ್ವಹಣೆಗೈಯ್ಯಲು ಸುಸೂತ್ರ!
ಕಾಣಿಸದು ಹಕ್ಕಿನೊತ್ತಾಯಗಳ ಕರಿನೆರಳು,
ಹೊಣೆಹಣತೆ ಬೀರುತಿರೆ ಬೆಳಕು! ತಂತ್ರಜ್ಞ!
TechnoWise Tripods-549 THE LAMP OF DUTY
Everything is fine when all perform their duties well!
There'll not be any black shadow of fights for the right,
When the lamp of duty is shining bright! O! TechnoWise!


Friday, February 14, 2020

ತಂತ್ರಜ್ಞ ತ್ರಿಪದಿಗಳು-೫೪೮ ಅಮೂಲ್ಯ

ತಂತ್ರಜ್ಞ ತ್ರಿಪದಿಗಳು-೫೪೮ ಅಮೂಲ್ಯ!

ಅಮೂಲ್ಯದಮೂಲ್ಯವಿದು! ಜಮೆಗೆ ಎಂದಿಗು ಸಿಗದು!
ಸ್ವಾಮ್ಯ ಯಾರಿಗು ಬರದು! ವೆಚ್ಚಕ್ಕೆ ದೊರೆಯುವುದು!
ಸಮಯವಿದು ಸರ್ವರಿಗು ಉಚಿತ! ತಂತ್ರಜ್ಞ!

TechnoWise Tripods-548 PRICELESS!

It is priceless among the priceless! but you can't store it!
It is beyond ownership! but available always for use!
Time is free for all! O! TechnoWise!

      

Tuesday, February 11, 2020

ತಂತ್ರಜ್ಞ ತ್ರಿಪದಿಗಳು-೫೪೭ ಭವಿಷ್ಯದ ಬೀಜ

ತಂತ್ರಜ್ಞ ತ್ರಿಪದಿಗಳು-೫೪೭ ಭವಿಷ್ಯದ ಬೀಜ

ಇವತ್ತಿನ ಈ ಹೊತ್ತು ಭವಿಷ್ಯಬೀಜವ ಬಿತ್ತು!
ಮಾವೊ ಬೇವೋ ಆಯ್ಕೆ, ಪೂರ್ಣ ನಿನಗಿದೆ ಹಕ್ಕು!
ಸವಿ-ಕಹಿಗಳಿಗೆ ಹೊಣೆಯು ನೀನೆ! ತಂತ್ರಜ್ಞ!

TechnoWise Tripods-547 SEED OF THE FUTURE

At the present moment today, sow the seed of the future!
And full rights you have, to select either the mango or the neem!
But responsible you'll be for fruits sweet or bitter! O! TechnoWise!





Thursday, February 6, 2020

ತಂತ್ರಜ್ಞ ತ್ರಿಪದಿಗಳು-೫೪೬ ಪೂರ್ಣ ಕಲಿಕೆ!


ತಂತ್ರಜ್ಞ ತ್ರಿಪದಿಗಳು-೫೪೬ ಪೂರ್ಣ ಕಲಿಕೆ!
ಇತಿಹಾಸ ಕಲಿಸು ತರಗತಿಗಳಲಿ! ನಿರ್ಮಿಸಲು
ಇತಿಹಾಸ ಕಲಿಸಧಿಕ! ಜೀವಶಾಸ್ತ್ರದ ಜತೆಗೆ
ಜೀವನದ ಕಲೆ ಕಲಿಸು ಪೂರ್ಣ! ತಂತ್ರಜ್ಞ!
TechnoWise Tripods-546 LEARNING
Teach History in the class! And teach more to create History in Life!
Teach Life Sciences in the class! 
And teach more about the Art of Life! O! TechnoWise!




ತಂತ್ರಜ್ಞ ತ್ರಿಪದಿಗಳು-೫೪೫ ಹಾಲು ಮತ್ತು ತುಪ್ಪ

ತಂತ್ರಜ್ಞ ತ್ರಿಪದಿಗಳು-೫೪೫ ಹಾಲು ಮತ್ತು ತುಪ್ಪ

ಹಾಲಾಗಿ ನೀನುಳಿಯೆ, ಬಾಳು ಮರುದಿನ ಹಾಳು!
ಉಳಿವೆ ಬೆಳಕೀವೆ ಹಲವರುಷ ನೀ ಘೃತವಾಗೆ!
ಬೆಳೆದುಳಿಯೆ ಮಾರ್ಪಾಡು ಮಂತ್ರ! ತಂತ್ರಜ್ಞ!

TechnoWise Tripods-545 MILK and GHEE

If you remain as Milk, you stay good just a day!
But, tranformed as Ghee, you're good many years and you light up the altar!
Transformation is the secret of existence and growth! O! TechnoWise!


Wednesday, February 5, 2020

ತಂತ್ರಜ್ಞ ತ್ರಿಪದಿಗಳು-೫೪೪ ಹಕ್ಕು ಮತ್ತು ಕರ್ತವ್ಯ!

ತಂತ್ರಜ್ಞ ತ್ರಿಪದಿಗಳು-೫೪೪ ಹಕ್ಕು ಮತ್ತು ಕರ್ತವ್ಯ!

ಹಕ್ಕು-ಕರ್ತವ್ಯ ನಡು ತಕ್ಕ ಸಂಬಂಧವಿದೆ!
ಚೊಕ್ಕವಿರೆ ಕರ್ತವ್ಯ, ಹಕ್ಕು ಲಭ್ಯವು ನಿನಗೆ!
ಹಕ್ಕು ತರು, ಕರ್ತವ್ಯ ಬೇರು! ತಂತ್ರಜ್ಞ!

TechnoWise Tripods-544 RIGHTS & DUTIES

There's is a fine relationship between Rights and Duties!
Only when you perform your Duties well, you'll get the Rights!
For the Tree of Rights, the Roots are the Duties! O! TechnoWise!

Tuesday, February 4, 2020

ತಂತ್ರಜ್ಞ ತ್ರಿಪದಿಗಳು-೫೪೩ ನೀ ನಿನ್ನ ಕತೆಯ ಕತೆಗಾರ!


ತಂತ್ರಜ್ಞ ತ್ರಿಪದಿಗಳು-೫೪೩ ನೀ ನಿನ್ನ ಕತೆಯ ಕತೆಗಾರ!

ಕತೆ ನಿನ್ನ ಬಾಳಿನದು! ಕತೆಗಾರ ನೀನಿರುವೆ!
ಗತ ಬರೆದು ಮುಗಿಸಿರುವೆ! ಸುಭವಿಷ್ಯ ಬರೆವುದಕೆ,
ವರ್ತಮಾನ ನಿಮಗ್ನನಾಗು! ತಂತ್ರಜ್ಞ!

TechnoWise Tripods-543 YOU ARE THE WRITER OF YOUR STORY!

You are the writer of your own novel of life!
Already printed are many chapters! And for making the future chapters fascinating,
Be immersed in the Present! O! TechnoWise!

Sunday, February 2, 2020

ತಂತ್ರಜ್ಞ ತ್ರಿಪದಿಗಳು-೫೪೨ ತನ್ನ ಅರಿವು


ತಂತ್ರಜ್ಞ ತ್ರಿಪದಿಗಳು-೫೪೨ ತನ್ನ ಅರಿವು

ಹತ್ತು ಗರಿಮೆಯ ಉಪನಿಷತ್ತು ಗೀತೆಯ ಅರ್ಥ,
ಮತ್ತೆಲ್ಲ ಜ್ಞಾನವಿಜ್ಞಾನ ತಿಳಿದರು ವ್ಯರ್ಥ,
ಸುತ್ತಿರಲು ತನ್ನರಿವು ಸೊನ್ನೆ! ತಂತ್ರಜ್ಞ!

TechnoWise Tripods-542 SELF-KNOWLEDGE

The meaning of the ten famous Upanishads and BhagavadGita
And the knowledge of all the branches of Science and Technology is a mere waste,
If the Self-knowledge is a big Zero! O! TechnoWise!