Friday, September 29, 2017

ತಂತ್ರಜ್ಞ ತ್ರಿಪದಿಗಳು-145 ಮರದೆರಡು ಗಿಳಿ-ಕರದೊಂದು ಗಿಳಿ

ತಂತ್ರಜ್ಞ ತ್ರಿಪದಿಗಳು-145 ಮರದೆರಡು ಗಿಳಿ-ಕರದೊಂದು ಗಿಳಿ
ಬರುವುದ ನಿರೀಕ್ಷಿಸುತ ಕೊರಗಿ ಸೊರಗುವ ಬದಲು
ಇರುವುದನೆ ಸವಿಯುತಿರು! ಮರದೆರಡು ಗಿಳಿಗಿಂತ
ಕರದಲಿರುವೊಂದು ಗಿಳಿ ಮೇಲು ತಂತ್ರಜ್ಞ.
TecnoWise-145 Two birds on the tree-one in hand
Instead of expecting something better, and worrying and languishing, 
Enjoy whatever you have! more than two birds in the tree
It is always better having one bird in hand.

ತಂತ್ರಜ್ಞ ತ್ರಿಪದಿಗಳು-೧೪೪ ಗೋಮಟನ ಮುಂದೆ

ತಂತ್ರಜ್ಞ ತ್ರಿಪದಿಗಳು-೧೪೪ ಗೋಮಟನ ಮುಂದೆ
ಹೇಮಸೌಧವ ಛತ್ರ ಚಾಮರವ ತ್ಯಜಿಸಿರುವ 
ಭೂಮ ತಾಪಸಿ ಮಹಿಮ ನಿನ್ನೆದುರು ನಾವೆಲ್ಲ
ಆಮೆಗಳು ಹೇರಾನೆ ಮುಂದೆ ತಂತ್ರಜ್ಞ.
TechnoWise-144 Standing before Gomata
Leaving behind golden palace and all kingly comforts
O Great ascetic! you are standing here, and before you,
We are like small tortoises before a big elephant.

Thursday, September 28, 2017

ತಂತ್ರಜ್ಞ ತ್ರಿಪದಿಗಳು-೧೪೩ ಹರಿಣದಂತಿರು ಇಂದು

ತಂತ್ರಜ್ಞ ತ್ರಿಪದಿಗಳು-೧೪೩ ಹರಿಣದಂತಿರು ಇಂದು 
ಹರಿದ್ವರ್ಣ ವನದಲ್ಲಿ ಹರಿಣಮನವೂ ಹಸಿರು;
ಚಿರತೆ ಹುಲಿ ಸೀಳ್ನಾಯಿ ಮುಂದೆ ಬರುವುದ ಮರೆತು
ಹರುಷದಲ್ಲಿವೆ ಇಲ್ಲಿ ಇಂದು ತಂತ್ರಜ್ಞ.
TechnoWise-143 Be like a Deer Today
In an evergreen forest, green are the minds of deers as well,
Forgetting the future dangers from Cheetas, Tigers, and wild dogs,
Today the deers are verily happy here.  

Wednesday, September 27, 2017

ತಂತ್ರಜ್ಞ ತ್ರಿಪದಿಗಳು-142 ದೀಪಧರ ಗುರು

ತಂತ್ರಜ್ಞ ತ್ರಿಪದಿಗಳು-142 ದೀಪಧರ ಗುರು
ದ್ವೀಪವನು ನೀರಂತೆ, ದೀಪವನು ಬೆಳಕಂತೆ
ನೂಪುರವ ಇನಿದನಿಯು ಸತತ ಸುತ್ತಿರುವಂತೆ
ದೀಪಧರ ಗುರುವ ಅರಿವಿರವು ತಂತ್ರಜ್ಞ.
TechnoWise-142 Enlightened Guru
As an island is surrounded by water, and a lamp by light,
And an anklet by the tinkling sweet sound, 
An enlightened Guru surrounded by the presence of wisdom.

Tuesday, September 26, 2017

ತಂತ್ರಜ್ಞ ತ್ರಿಪದಿಗಳು-141 ನುಡಿಗಿಂತ ದಯೆ ಮುಖ್ಯ

ತಂತ್ರಜ್ಞ ತ್ರಿಪದಿಗಳು-141 ನುಡಿಗಿಂತ ದಯೆ ಮುಖ್ಯ
ನೇರ ನುಡಿವುದಕಿಂತ ತೋರಿಸುವ ದಯೆ ಮುಖ್ಯ;
ಭೂರಿಭಾಷಣಕಿಂತ ನೊಂದವರು ಬಯಸುವುದು
ಚಾರು ಮೃದುಹೃದಯ ಸಂಶ್ರವಣ ತಂತ್ರಜ್ಞ.
TechnoWise-141 Kindness of the Heart
Kindness is more important than a straight talk;
More than words from the mind, the heartsore people desire
The listening from a lovely soft Heart.

Monday, September 25, 2017

ತಂತ್ರಜ್ಞ ತ್ರಿಪದಿಗಳು-140 ಲಯ

ತಂತ್ರಜ್ಞ ತ್ರಿಪದಿಗಳು-140 ಲಯ
ಧ್ವನಿ ಹಲವು ಸೇರಿ ಗಾಯನ, ಚಲನೆ ನರ್ತನವು;
ಮನದ ಯೋಚನೆ ಧ್ಯಾನ, ಕ್ಷಣಗಣನೆ ಸತ್ಕಾಲ
ಧುನಿಯಾಗಿ ಲಯ ಹರಿದು ಬರಲು ತಂತ್ರಜ್ಞ.
TechnoWise-140 Rythm
Several sounds become Music, different movements become Dance, 
Thoughts become Meditation, and seconds become Good Time
When the rythms flow like a river.

Sunday, September 24, 2017

ತಂತ್ರಜ್ಞ ತ್ರಿಪದಿಗಳು-೧೩೯ ಬಾಕ್ಸಿಂಗ್‌ ಕಣ

ತಂತ್ರಜ್ಞ ತ್ರಿಪದಿಗಳು-೧೩೯ ಬಾಕ್ಸಿಂಗ್‌ ಕಣ
ಗುದ್ದಾಟ ಕಣದಂತೆ ಬಿದ್ದೇಳು! ಬಾಳಿನಲಿ;
ಬಿದ್ದನೆನ್ನುತ ಸೋತನೆಂದಿಲ್ಲ ಹಣೆಪಟ್ಟಿ!
ಎದ್ದೇಳಬಲ್ಲವಗೆ ಪಟ್ಟ! ತಂತ್ರಜ್ಞ.
TechnoWise-139 Boxing Ring
As in a Boxing Ring, are Falls and Rises in Life!
When one falls down, defeat is not declared;
One who rises and fights becomes a champion.

Friday, September 22, 2017

ತಂತ್ರಜ್ಞ ತ್ರಿಪದಿಗಳು-138 ಅನ್ಯರ ಆನಂದ

ತಂತ್ರಜ್ಞ ತ್ರಿಪದಿಗಳು-138 ಅನ್ಯರ ಆನಂದ
ದಂದುಗವ ಮರೆತು ಆನಂದ ಕೊಡು ಅನ್ಯರಿಗೆ;
ಬಂದೆ ಬರುವುವು ಅವರ ಹರ್ಷಸೌಗಂಧ, ಅಭಿ
ವಂದನೆಯ ಹಾಡು, ನಿನ್ನತ್ತ ತಂತ್ರಜ್ಞ.
TechnoWise-138 Joy of others
Forgetting your own difficulties, create Joy for others;
Their fragrant air of Joy and thanksgiving songs,
Will no doubt reach you.

Thursday, September 21, 2017

ತಂತ್ರಜ್ಞ ತ್ರಿಪದಿಗಳು-137 ಒಂದು-ನೂರೊಂದು

ತಂತ್ರಜ್ಞ ತ್ರಿಪದಿಗಳು-137 ಒಂದು-ನೂರೊಂದು
ಕೊನೆ! ಅದಕೆ ನಿನ್ನೊಡನೆ! ನಿನಗಾಗಿ ಮಾಡಿದುದು;
ಜನಗಣಕೆ ಮಾಡಿದುದು, ನಿನ್ನ ಬಳಿಕುಳಿಯುವುದು;
ನಿನಗೆ ನೂರೊಂದು, ಕೊಡಲೊಂದು! ತಂತ್ರಜ್ಞ.
TechnoWise-137 One-Hundred and One
What all you do for yourself vanishes when you vanish;
What good you do for others remains even when you are gone;
O TechnoWise! you get hundred and one, if you give one!

Tuesday, September 19, 2017

ತಂತ್ರಜ್ಞ ತ್ರಿಪದಿಗಳು-136 ಶುಭದಿವಸ

ತಂತ್ರಜ್ಞ ತ್ರಿಪದಿಗಳು-136 ಶುಭದಿವಸ
ಹೃದಯ ನುಡಿಯಲು ನಿನಗೆ, ನಿದ್ರೆ ಹೋಗುವ ಮುನ್ನ,
ಬದಲಿಸಿದೆ ಒಳಿತಿನತ್ತೊಬ್ಬನನು ನೀನೆನಲು
ಅದುವೆ ನೀ ಬೆಳೆದ ಶುಭದಿವಸ ತಂತ್ರಜ್ಞ.
TechnoWise-136 Auspicious Day
Before you go to sleep, if your Heart tells you
That you have made someone's life just a little better,
It is an auspicious day of your growth, O TechnoWise!

ತಂತ್ರಜ್ಞ ತ್ರಿಪದಿಗಳು-135 ದುಃಖಿಯಾಗುವುದೇಕೆ ಸಂತೋಷಿ?

ತಂತ್ರಜ್ಞ ತ್ರಿಪದಿಗಳು-135 ದುಃಖಿಯಾಗುವುದೇಕೆ ಸಂತೋಷಿ?
ಬೆಳೆದುಬಂದಂತೆಲ್ಲ, ಎಳೆಯ ಸಂತೋಷಿ ಮಗು
ಅಳಲು ಕಡಲಲಿ ನಿತ್ಯ ಮುಳುಗುತೇಳುವುದೇಕೆ?
ಒಳಗಿನದ ಮರೆತ ಕಾರಣವೆ? ತಂತ್ರಜ್ಞ!
TechnoWise-135 Happiness to Misery
As it grows up, the ever happy child,
Why it goes up and down in the sea of misery?
Forgetting what is inside, is it the reason? O TechnoWise!

Monday, September 18, 2017

ತಂತ್ರಜ್ಞ ತ್ರಿಪದಿಗಳು-134 ಸಹಜ ಆನಂದ

ತಂತ್ರಜ್ಞ ತ್ರಿಪದಿಗಳು-134 ಸಹಜ ಆನಂದ
ಕಿರಿಯ ಮಗುವಂತಾಗೆ ಬರಿದಾಗುವುದು ಮನಸು;
ಹರಿದು ತುಂಬುವುದಲ್ಲಿ ಆನಂದವೊಳಗಿಂದ;
ನರನೊಳಿದೆ ಸಹಜ ಆನಂದ ತಂತ್ರಜ್ಞ.
TechnoWise-134 Bliss
Empty becomes the mind when childlike one is;
And from inside Bliss flows and fills it;
O TechnoWise! Innate is the Bliss in Everyone.


Sunday, September 17, 2017

ತಂತ್ರಜ್ಞ ತ್ರಿಪದಿಗಳು-133 ಸಂತೈಸುವುದು ಗಣಿತ

ತಂತ್ರಜ್ಞ ತ್ರಿಪದಿಗಳು-133 ಸಂತೈಸುವುದು ಗಣಿತ
ಸಂತೋಷ ಕೂಡದದು! ಸಂತಾಪ ಕಳೆಯದದು!
ಸಂತೈಸುವುದು ಗಣಿತ, ಪರಿಹಾರವಿದೆಯೆಂದು
ಎಂತಹ ಸಮಸ್ಯೆಗೂ ಜಗದಿ ತಂತ್ರಜ್ಞ.
TechnoSmart-133 Mathematics
It neither adds joy nor subtracts misery,
But Mathematics consoles that a solution exists
Whatever may be the problem.

Saturday, September 16, 2017

ತಂತ್ರಜ್ಞ ತ್ರಿಪದಿಗಳು-132 ನಿನ್ನೆ- ನಾಳೆ- ಇಂದು

ತಂತ್ರಜ್ಞ ತ್ರಿಪದಿಗಳು-132 ನಿನ್ನೆ- ನಾಳೆ- ಇಂದು
ನಿನ್ನೆ ಮರೆತಿರೆ ನಿನ್ನ! ನಿನ್ನೆಯನು ನೀ ಮರೆಯೊ!
ಇನ್ನು ಸಂಧಿಸದ ನಾಳೆಗೆ ಏಕೆ ಚಿಂತಿಸುವೆ?
ಮನ್ನಿಸೋಲೈಸು ಇಂದನ್ನು ತಂತ್ರಜ್ಞ.
TechnoSmart-132 Yesterday-Tomorrow-Today
As Yesterday has forgotten you, you also forget Yesterday!
Why worry for tomorrow you haven't met?
Honor and attend to Today, a precious present.

Thursday, September 14, 2017

ತಂತ್ರಜ್ಞ ತ್ರಿಪದಿಗಳು-131 ಚೆಂಡುಹೂ ಮುಗುಳುನಗು

ತಂತ್ರಜ್ಞ ತ್ರಿಪದಿಗಳು-131 ಚೆಂಡುಹೂ ಮುಗುಳುನಗು
ಉಂಡು ಮಲಗಿದ ಕೆಲರ ಕಂಡವರು ಮುಂದಿಲ್ಲ;
ಗುಂಡುಕಲ್ಲಂಥವರು ಕ್ಷಣದಿ ಮಣ್ಣಾಗಿಹರು;
ಚೆಂಡುಹೂ ಮುಗುಳುನಗು, ಇರಲು! ತಂತ್ರಜ್ಞ.
TechnoSmart Tripods-131 Flowery Smile
Millions who slept after supper weren't seen again!
And thousands with rocky health, vanished inside soil!
For being alive, have a flowery smile!


Wednesday, September 13, 2017

ತಂತ್ರಜ್ಞ ತ್ರಿಪದಿಗಳು-130 ರಾಜಮಾರ್ಗ

ತಂತ್ರಜ್ಞ ತ್ರಿಪದಿಗಳು-130 ರಾಜಮಾರ್ಗ
ರಾಜಮಾರ್ಗವೆ ಇರದು ಯೋಜಿಸುವ ವಿಜಯಕ್ಕೆ;
ತಾಜಾಪಥವು ರಾಜಪಥವೆ ತಾನಾಗುವುದು,
ಯೋಜಿಸಿದ ಹಿರಿಗುರಿಯ ಮುಟ್ಟೆ ತಂತ್ರಜ್ಞ.
TechnoSmart-130 ROYAL ROAD
No royal roads for the success you plan;
Your new road verily becomes a royal road,
If you attain sucess as planned.





Monday, September 11, 2017

ತಂತ್ರಜ್ಞ ತ್ರಿಪದಿಗಳು-129 ಆತ್ಮಾನುಭವ

ತಂತ್ರಜ್ಞ ತ್ರಿಪದಿಗಳು-129 ಆತ್ಮಾನುಭವ
ಮೌನವೆನುವರು ಬಾಯಿಯೇನನೂ ನುಡಿಯದಿರೆ,
ಧ್ಯಾನವೆನುವರು ಯೋಚನೆಯೆ ಮನದೊಳಿಲ್ಲದಿರೆ,
ಸ್ವಾನುಭವವಾಗ ತನ್ನಾತ್ಮ ತಂತ್ರಜ್ಞ.
TechnoSmart-129 Self-Realization
Silence is when no words emanate from mouth,
When no thoughts in the mind it is Dhyana,
And at that time one experiences the real Self.

ತಂತ್ರಜ್ಞ ತ್ರಿಪದಿಗಳು-128 ಭಾರತ ಜನನಿ

ತಂತ್ರಜ್ಞ ತ್ರಿಪದಿಗಳು-128 ಭಾರತ ಜನನಿ
ಗಣಿತದಲಿ ಶೂನ್ಯ, ತನುಮನಕೆ ದರ್ಶನ ಯೋಗ,
ಘನ ಅಹಿಂಸಾ ಶಾಂತಿ, ಗ್ರಾಮರಾಜ್ಯವ ಕೊಟ್ಟ
ಜನನಿ ಭಾರತಿ ಗೆಲಲಿ ವಿಶ್ವ ತಂತ್ರಜ್ಞ.
TechnoSmart-128 Invincible India
Mother India who contributed to
Zero in Mathematics, Philosophy and Yoga for Mind and Body,
Non-violence , Peace and Village community,
May she conquer with spirit those who conquered her earlier with sword.

Saturday, September 9, 2017

ತಂತ್ರಜ್ಞ ತ್ರಿಪದಿಗಳು-127 ಮನಸು

ತಂತ್ರಜ್ಞ ತ್ರಿಪದಿಗಳು-127 ಮನಸು
ಬುಟ್ಟಿ ಸಚ್ಚಿಂತನೆಗೆ, ಗಟ್ಟಿನೆಲೆ ಧ್ಯಾನಕ್ಕೆ,
ತೊಟ್ಟಿಯಾಗದೆ ಪಶ್ಚಾತ್ತಾಪ ಚಿಂತೆಗೆ, ಮನಸು
ಬಟ್ಟಲಾಗಲಿ ಕಲಾರಸಕೆ ತಂತ್ರಜ್ಞ.
TechnoSmart-127 MIND
For good thoughts, a basket; and for meditation, a foundation;
Not a dustbin for remorse and worries;
Let the Mind be a bowl for aesthetic nectar.


Friday, September 8, 2017

ತಂತ್ರಜ್ಞ ತ್ರಿಪದಿಗಳು-126 ಕತ್ತರಿ-ಸೂಜಿ

ತಂತ್ರಜ್ಞ ತ್ರಿಪದಿಗಳು-126 ಕತ್ತರಿ-ಸೂಜಿ
ಕತ್ತಿ ಕತ್ತರಿ ವಿಭಜಿಸುತ್ತ ಬೇರ್ಪಡಿಸುತಿರೆ,
ಮತ್ತೆ ಸೇರ್ಪಡಿಸಿ ಹೊಲಿವುದು ಸೂಜಿ, ಜೀವನದಿ
ಕತ್ತರಿಸು ಕಮ್ಮಿ, ಹೊಲಿ ಹೆಚ್ಚು ತಂತ್ರಜ್ಞ.
TechnoSmart-126 Scissors-Needles
While knives and scissors cut and separate things,
The needles sew and conjoin the separated ones,
In Life, we ought to cut less and sew more.

Thursday, September 7, 2017

ತಂತ್ರಜ್ಞ ತ್ರಿಪದಿಗಳು-125 ಸತ್ಸಂಗ

ತಂತ್ರಜ್ಞ ತ್ರಿಪದಿಗಳು-125 ಸತ್ಸಂಗ
ಏಕಾಂಗಿ ಯೋಚಿಸುವನೇಕೆ ಮುಗಿಯದು ದಾರಿ?
ಏಕೆ ಮುಗಿಯಿತು? ಎನುವ ಪ್ರಿಯಜನರ ಜತೆ ನಡೆದು!
ಸಾಕೆನಿಸದೆಂದು! ಸತ್ಸಂಗ ತಂತ್ರಜ್ಞ.
TechnoSmart-125 Good Company
Walking alone, one thinks the road doesn't end at all;
One wishes it ends not, when in the company of dear ones;
Enough is not enough! in good company.


Monday, September 4, 2017

ತಂತ್ರಜ್ಞ ತ್ರಿಪದಿಗಳು-124 ಬಾಳಿಲ್ಲ ಬಹುದೀರ್ಘ

ತಂತ್ರಜ್ಞ ತ್ರಿಪದಿಗಳು-124 ಬಾಳಿಲ್ಲ ಬಹುದೀರ್ಘ
ಬಾಳಿಲ್ಲ ಬಹುದೀರ್ಘ, ಕಾಲವೋ ಬಹುವೇಗ,
ನಾಳೆ ಸಿಗದೀ ಇಂದು, ನಿನ್ನೆಯೆಂದೂ ಬರದು,
ಹಾಳಿಡದೆ ಬರುವ ಕ್ಷಣ ನಲಿಯೊ! ತಂತ್ರಜ್ಞ.
Life is short, Time is fast,
Today not available tomorrow,
Yesterday unavailable for ever,
Without wasting time,
Enjoy every moment as it comes.

Sunday, September 3, 2017

ತಂತ್ರಜ್ಞ ತ್ರಿಪದಿಗಳು-123 ಮರಹತ್ಯೆ-ನರಹತ್ಯೆ

ತಂತ್ರಜ್ಞ ತ್ರಿಪದಿಗಳು-123 ಮರಹತ್ಯೆ-ನರಹತ್ಯೆ
ನರನ ಉಚ್ಛ್ವಾಸದಲಿ ಮರದ ನಿಶ್ಶ್ವಾಸವಿದೆ;
ಮರ ನರರ ವೃಂದದಲಿ ಶ್ವಾಸಕೋಶವದೊಂದೆ;
ಮರಹತ್ಯೆ ನರಹತ್ಯೆಯಂತೆ! ತಂತ್ರಜ್ಞ.
TECHNOSMART-123 COMMON LUNG
What the trees exhale humans inhale;
Common lung for the group of trees and humans;
Destroying trees is like murdering humans.

Saturday, September 2, 2017

ತಂತ್ರಜ್ಞ ತ್ರಿಪದಿಗಳು-122 ದಾರಿದೀಪಗಳು

ತಂತ್ರಜ್ಞ ತ್ರಿಪದಿಗಳು-122 ದಾರಿದೀಪಗಳು
ದಾರಿದೀಪಗಳಂತೆ ತೋರುವರು ಸರಿದಾರಿ,
ದೂರವಂತೆಯೆ ಇರಿಸಿ ಸೊಗಗೊಳಿಸುವರು ಯಾನ,
ತೀರ ಆಪ್ತರು ದಾರಿದೀಪ ತಂತ್ರಜ್ಞ.
TECHNOSMART-122 STREET LAMPS
Street lamps lighten our path and guide us,
Without shortening the distance they make our journey pleasant,
Like street lamps are our Well Wishers.

Friday, September 1, 2017

ತಂತ್ರಜ್ಞ ತ್ರಿಪದಿಗಳು-121 ಹೊಂದಾಣಿಕೆ

ತಂತ್ರಜ್ಞ ತ್ರಿಪದಿಗಳು-121 ಹೊಂದಾಣಿಕೆ
ಅಂದದ ಗುಲಾಬಿ ಬೇಕೆಂದು ನೀ ಬಯಸಿದರೆ,
ಹೊಂದಾಣಿಕೆಯ ಮಾಡಬೇಕು ಮುಳ್ಳಿನ ಜತೆಗೆ!
ಹೊಂದಿ ನಡೆದರೆ ಬಾಳು ಚಂದ! ತಂತ್ರಜ್ಞ.
TECHNOSMART-121 CONCORD
Learn to have concord with thorns!
If you desire to have beautiful roses,
With concord beautiful becomes Life!