Sunday, February 24, 2019

ತಂತ್ರಜ್ಞ ತ್ರಿಪದಿಗಳು-೪೯೩ ದುಃಖ


ತಂತ್ರಜ್ಞ ತ್ರಿಪದಿಗಳು-೪೯೩ ದುಃಖ
ಮಕ್ಕಳನು ಹಿರಿಯರನು ಪಕ್ಕದಲ್ಲಿರುವರನು
ಮಿಕ್ಕವರನೆಲ್ಲ ದೂರುವೆ ಚಿಂತೆ ಖೇದಕ್ಕೆ! 
ದುಃಖ ಹೊರಗಲ್ಲ, ಒಳಗಿಂದ! ತಂತ್ರಜ್ಞ.
TechnoWise Tripods-493 MISERY
The cause of your worries and blues
You say are your children, elders, and all others!
But the source of misery is not outside, but inside! O! TechnoWise.



Thursday, February 21, 2019

ತಂತ್ರಜ್ಞ ತ್ರಿಪದಿಗಳು-೪೯೨ ನಿರ್ಧಾರಗಳು


ತಂತ್ರಜ್ಞ ತ್ರಿಪದಿಗಳು-೪೯೨ ನಿರ್ಧಾರಗಳು
ಸಹಜ ಮನದಲಿ ಮಾಡು ಬಹು ಸಣ್ಣ ನಿರ್ಧಾರ!
ಕಹಿಮದ್ದು ಪರಿಯ ನಿರ್ಧಾರ ಮತಿ ಬೆಳಕಿನಲಿ!
ಸಿಹಿ ಕೊಡಲು ಮೀಟು ಎದೆ ವೀಣೆ! ತಂತ್ರಜ್ಞ!
TechnoWise Tripods-492 DECISIONS
Let small decisions take place at the level of the mind!
Bitter medicine like decisions in the light of the intellect!
For sweetening the life of the society, play on the Veena of the heart! O! TechnoWise!

Sunday, February 10, 2019

ತಂತ್ರಜ್ಞ ತ್ರಿಪದಿಗಳು-೪೯೧ ಚಂದದಿಂದಿರು


ತಂತ್ರಜ್ಞ ತ್ರಿಪದಿಗಳು-೪೯೧ ಚಂದದಿಂದಿರು!
ಇಂದಿನೀ ಕ್ಷಣ ಇರುವ, ಮುಂದೆ ಕ್ಷಣಭಂಗುರದ
ಬಂದು ಹೋಗುವ ಬತ್ತಲೆಯ ಬಾಳಿನಲಿ ನೀನು
ಚಂದದಿಂದಿರು! ಪರರನಿರಿಸು! ತಂತ್ರಜ್ಞ.
TechnoWise Tripods-491 BE  BEAUTIFUL!
This life to which we come naked and depart naked,
Exists at this very moment, and may cease to exist the very next moment!
So stay beautiful and let others stay beautiful! O! TechnoWise!



Saturday, February 9, 2019

ತಂತ್ರಜ್ಞ ತ್ರಿಪದಿಗಳು-೪೯೦ ಬೆಳಕಿಂಡಿ


ತಂತ್ರಜ್ಞ ತ್ರಿಪದಿಗಳು-೪೯೦ ಬೆಳಕಿಂಡಿ
ಕಂಡುದನು ನಿನ್ನಲ್ಲಿ ಕಂಡಂತೆ ಹೇಳಿದರೆ,
ಕೆಂಡದಂತಹ ಕೋಪ ಬರಿದಂಡ! ದಿಟದಿ ಬೆಳ
ಕಿಂಡಿಯದು ಆತ್ಮಶೋಧನೆಗೆ! ತಂತ್ರಜ್ಞ.
TechnoWise Tripods-490 VENTILATOR  OF  LIGHT
It is of no use getting fiery-eyed and angry
When someone finds faults with you and criticises!
It is a ventilator of light for Self-examination! O! TechnoWise!

Thursday, February 7, 2019

ತಂತ್ರಜ್ಞ ತ್ರಿಪದಿಗಳು-೪೮೯ ತಾಯಿ


ತಂತ್ರಜ್ಞ ತ್ರಿಪದಿಗಳು-೪೮೯ ತಾಯಿ
ಛಲದಿ ಕತ್ತರಿಸಿ ಹಲ್ಲಲಿ ಸೀರೆ ಹಾಸಿಗೆಯ
ಒಲವಿಂದ ಗೂಡು ಮಾಡಿದೆ ಮುದ್ದು ಮಕ್ಕಳಿಗೆ!
ಇಲಿಯೆ ಅದು? ಅಲ್ಲ, ಅದು ತಾಯಿ! ತಂತ್ರಜ್ಞ.
TechnoWise Tripods-489 MOTHER
Cutting and ripping open clothes and beds with sharp teeth persistently,
She has made the softest and nicest nest for her darling younglings!
Is she a mouse? No, she is a mother! O! TechnoWise!



Sunday, February 3, 2019

ತಂತ್ರಜ್ಞ ತ್ರಿಪದಿಗಳು-೪೮೮ ಕಲಿ! ಕಲಿಕಾಲದಲಿ!


ತಂತ್ರಜ್ಞ ತ್ರಿಪದಿಗಳು-೪೮೮ ಕಲಿ! ಕಲಿಕಾಲದಲಿ!
ಹುಲಿಯೆ? ಹೆಬ್ಬುಲಿಯಾಗು! ಇಲಿಯೆ? ರಥ ಗಣಪನಿಗೆ!
ಬಲಿಯೆ? ನೀನಾಗು ವಾಗ್ದಾನಿ ಬಲು ಎಚ್ಚರದಿ!
ಕಲಿಯೆ? ಕಲಿಕಾಲದಲಿ ಕಲಿತು! ತಂತ್ರಜ್ಞ.
TechnoWise Tripods-488 HERO IN THIS ERA!
A tiger? Be a huge white tiger! A mouse? Be the mount of God Ganesha!
Emperor Bali? Be a careful giver of promises!
A Hero? Be a learner to learn in this Era! O! TechnoWise!