Monday, July 31, 2017

ತಂತ್ರಜ್ಞ ತ್ರಿಪದಿಗಳು-98 ಪರಿಸರ ವಿನಾಶ

ತಂತ್ರಜ್ಞ ತ್ರಿಪದಿಗಳು-98 ಪರಿಸರ ವಿನಾಶ
ಮರದ ತುದಿಯಲಿ ಕುಳಿತು ಮರದ ಬುಡ ಕಡಿದಂತೆ,
ಕೊರೆದಂತೆ ತನ್ನ ಮನೆ ಸಿರಿಗೆ ತಾನೇ ಕನ್ನ,
ಪರಿಸರ ವಿನಾಶ ಪರಿಣಾಮ ತಂತ್ರಜ್ಞ.
DESTROYING ENVIRONMENT
Like cutting the stem sitting on the tip of the branch,
Like breaking a wallhack hole for burglary of our own house,
Is the effect of destroying our environment.

ತಂತ್ರಜ್ಞ ತ್ರಿಪದಿಗಳು-97 ಜೀವನವಿಮಾನ

ತಂತ್ರಜ್ಞ ತ್ರಿಪದಿಗಳು-97 ಜೀವನವಿಮಾನ
ಜೀವನವಿಮಾನದಲಿ ಸಾವಿರಾರರ ನಡುವೆ
ಯಾವನೋ ನೀನಲ್ಲ; ಧೀರಸಾರಥಿಯಾಗಿ
ನಾವೀನ್ಯವಿರುವತ್ತ ನಡೆಸು ತಂತ್ರಜ್ಞ.
BE THE PILOT!
In the aeroplane of life, be not a passenger among thousands;
Be the pilot, lion-like and spirited,
And to a great destination, fly thousands.

Sunday, July 30, 2017

ತಂತ್ರಜ್ಞ ತ್ರಿಪದಿಗಳು-96 ನಾಳೆ-ನಿನ್ನೆ-ಇಂದು

ತಂತ್ರಜ್ಞ ತ್ರಿಪದಿಗಳು-96 ನಾಳೆ-ನಿನ್ನೆ-ಇಂದು
"ನಾಳೆ"ಯೆಂಬುದು ಬರಿಯ ಆಲೋಚನಾಲಹರಿ;
ಹೇಳಿ ಮುಗಿಸಿದ ಮಾತು "ನಿನ್ನೆ"ದಿನ; ಇಲ್ಲಿ ಈ
ವೇಳೆಯಲೆ ಜನಿಸುತಿದೆ "ಇಂದು" ತಂತ್ರಜ್ಞ.
TOMORROW-YESTERDAY-TODAY
Tomorrow is just a flow of thought;
Yesterday is already a spoken sentence;
But Today is taking birth just now here.

Wednesday, July 26, 2017

ತಂತ್ರಜ್ಞ ತ್ರಿಪದಿಗಳು-95 ಚಿಂತೆ

ತಂತ್ರಜ್ಞ ತ್ರಿಪದಿಗಳು-95 ಚಿಂತೆ
ಕೊಲುತ ಸತ್ಕಾಲವನು ಒಳಗೆ ಕೊರೆಯುವ ಚಿಂತೆ
ನಲಿವಳಿಸಿ ಏನನೂ ಬದಲಿಸದೆ ಇರಲು ನೀ
ಕೆಲಸವಿಲ್ಲದ ಅವಿಶ್ರಾಂತ ತಂತ್ರಜ್ಞ.
WORRY
Killing valuable time, the gnawing worry
Stealing the joy and without making anything better
Keeps you very busy doing nothing.

Tuesday, July 25, 2017

ತಂತ್ರಜ್ಞ ತ್ರಿಪದಿಗಳು-94 ನಿನ್ನ ಪರಿವರ್ತನೆ

ತಂತ್ರಜ್ಞ ತ್ರಿಪದಿಗಳು-94 ನಿನ್ನ ಪರಿವರ್ತನೆ
ಪರಿವರ್ತಿಸುವೆನೆಂದು ಪರರತ್ತ ನೋಡದಿರು;
ಹೊರಟಾಗ ಪರಿವರ್ತಿಸಲು ನಿನ್ನ ನೀನಂದು
ಪರರ ಪರಿವರ್ತನೆಗೆ ನಾಂದಿ ತಂತ್ರಜ್ಞ.
CHANGE
In stead of trying to change others,
when you start changing yourself,
the World would start changing for the better.


Monday, July 24, 2017

ತಂತ್ರಜ್ಞ ತ್ರಿಪದಿಗಳು-93 ಅತಿ-ಮಿತಿ

ತಂತ್ರಜ್ಞ ತ್ರಿಪದಿಗಳು-93 ಅತಿ-ಮಿತಿ
ಮಿತದುಪ್ಪು ಪಾಕಕಲೆ, ಅತಿಯಾಗೆ ರುಚಿಯ ಕೊಲೆ;
ಮಿತದೊಲವು ಜೋಗುಳವು, ಅತಿಯಿರಲಮಂಗಳವು;
ಅತಿರಹಿತ ಮಿತ ಸುಗಮ ಮಾರ್ಗ ತಂತ್ರಜ್ಞ.
Salt, if correct, cooking becomes an art, else it is killing of taste;
Love, if normal, is a lullaby, else it is a curse;
Middle path without extremities is the Best.

Sunday, July 23, 2017

ತಂತ್ರಜ್ಞ ತ್ರಿಪದಿಗಳು-92 ನಿಮಿಷ-ವರುಷ

ತಂತ್ರಜ್ಞ ತ್ರಿಪದಿಗಳು-92 ನಿಮಿಷ-ವರುಷ
ಒಂದು ನಿಮಿಷದ ಕೋಪದಿಂದ ಮನ ಕುದಿದಾಗ
ಒಂದು ನಿಮಿಷದ ತಾಳ್ಮೆ ತರಲಲ್ಲಿ ತಪ್ಪುವುದು
ಮುಂದೆ ವರುಷದ ಪಶ್ಚಾತ್ತಾಪ ತಂತ್ರಜ್ಞ.
Minute-Year:
In a moment of anger when the mind boils
A minute of patience saves you from
Years of regrets.

Saturday, July 22, 2017

ತಂತ್ರಜ್ಞ ತ್ರಿಪದಿ-91 ಸುವ್ಯವಸ್ಥಿತ ಮನಸು

ತಂತ್ರಜ್ಞ ತ್ರಿಪದಿ-91 ಸುವ್ಯವಸ್ಥಿತ ಮನಸು
ಅವಿಧೇಯ ಮಗನಂತೆ ಅವ್ಯವಸ್ಥಿತ ಮನಸು;
ಸುವ್ಯವಸ್ಥಿತಗೊಳಿಸೆ ಸುವಿಧೇಯ ವರಶಿಷ್ಯ;
ಸುವ್ಯವಸ್ಥಿತ ಮನಸೆ ಯೋಗ ತಂತ್ರಜ್ಞ.
Like a disobedient son is the mind indisciplined;
When it is disciplined, it is an obedient student; Disciplined mind is Yoga.


Wednesday, July 19, 2017

ತಂತ್ರಜ್ಞ ತ್ರಿಪದಿಗಳು-90 ಸಫಲ

ತಂತ್ರಜ್ಞ ತ್ರಿಪದಿಗಳು-90 ಸಫಲ
ಅದರತ್ತ ಗುರಿಯಿರಿಸಿ, ಹದನವನು ಅರಿಯುತ್ತ,
ಹದುಳದಲಿ ಮರವೇರಿ ತಿರಿದಾಗ ಸಿಗುವುದದು;
ಉದುರುವುದೆ ಮಂತ್ರಕ್ಕೆ ಮಾವು? ತಂತ್ರಜ್ಞ!
FRUITFUL
Aim should be good, and skill perfect,
You'll get it, with care if you climb the tree;
Fruits will not fall down for reciting Mantra!



ತಂತ್ರಜ್ಞ ತ್ರಿಪದಿಗಳು-89 ನಿಯಂತ್ರಣ

ತಂತ್ರಜ್ಞ ತ್ರಿಪದಿಗಳು-89 ನಿಯಂತ್ರಣ
ಇಳೆಯ ನಡೆ ನಿಯಂತ್ರಿಸುವಳವು ನಿನಗಿರದಾಗ
ಒಳಮನದಿ ನಡೆವ ಪ್ರತಿಕ್ರಿಯೆಯ ನಿಯಂತ್ರಿಸು ನೀನು
ಅಳವು ನಿನ್ನದು ಇರುವುದೊಳಗೆ ತಂತ್ರಜ್ಞ.
CONTROL
When you cannot control the world outside
Be successful to control reactions inside 
Inside lies all your powers.

Monday, July 17, 2017

ತಂತ್ರಜ್ಞ ತ್ರಿಪದಿಗಳು-೮೮ ಕೌಶಲ್ಯವೇ ವಿಜಯಸೂತ್ರ

ತಂತ್ರಜ್ಞ ತ್ರಿಪದಿಗಳು-೮೮ ಕೌಶಲ್ಯವೇ ವಿಜಯಸೂತ್ರ
ಕೌಶಲ್ಯ ತಂತ್ರದಲಿ ಘಾಸಿಗೊಳಿಸುತ ಕೊಲುವ
ಕೇಸರಿಗು ಬಹುಪಾಲು ಬಲಶಾಲಿ ಮದಗಜವು;
ಕೌಶಲ್ಯವೇ ವಿಜಯಸೂತ್ರ ತಂತ್ರಜ್ಞ.
SKILL FOR SUCCESS
Though many times powerful the elephant is,
With its skill and tactics the lion kills it;
The secret of success is the skill.

Sunday, July 16, 2017

ತಂತ್ರಜ್ಞ ತ್ರಿಪದಿಗಳು-87 ಭೂಮಿ-ಮಂಗಳ ಕ್ರಿಕೇಟ್‌

ತಂತ್ರಜ್ಞ ತ್ರಿಪದಿಗಳು-87 ಭೂಮಿ-ಮಂಗಳ ಕ್ರಿಕೇಟ್‌
ಎಂದಾದರೊಂದು ದಿನ, ಚಂದಿರನ ಮನೆಯಿಂದ,
ಒಂದುದಿನದ ಕ್ರಿಕೇಟ್‌, ಬುವಿ-ಮಂಗಳದ ಬಣದ,
ಚಂದದಲಿ ನೋಡುವಿರಿ ಮುಂದೆ ತಂತ್ರಜ್ಞ.
EARTH-MARS CRICKET MATCH
One day, from your home in the Moon
You would enjoy, in the future
One-day-cricket between Earth and Mars.

Saturday, July 15, 2017

ತಂತ್ರಜ್ಞ ತ್ರಿಪದಿಗಳು-86 ಸ್ಪರ್ಶಸುಖ

ತಂತ್ರಜ್ಞ ತ್ರಿಪದಿಗಳು-86 ಸ್ಪರ್ಶಸುಖ
ವ್ಯೋಮಗ್ರಹಗಳ ಸ್ಪರ್ಶ, ಭೂಮಿ ಹಸುರಿನ ಸ್ಪರ್ಶ,
ಕ್ಷೇಮ ಕೋರುವ ವಿಶ್ವನರಹೃದಯ ಸಂಸ್ಪರ್ಶ
ರೋಮಾಂಚನವ ತರಲಿ ನಿನಗೆ ತಂತ್ರಜ್ಞ.
PLEASURE OF TOUCH
Touch of planetary homes, touch of green grass on earth,
Touch of well-wishing human hearts
May they all thrill you always.

ತಂತ್ರಜ್ಞ ತ್ರಿಪದಿಗಳು-85 ರಸನೆಗೆ ಸುರಸ

ತಂತ್ರಜ್ಞ  ತ್ರಿಪದಿಗಳು-85 ರಸನೆಗೆ ಸುರಸ
ರಸ ಸುರಿದು ಬಾನಿಂದ, ರಸ ಬೆಳೆದು ಬುವಿಯಿಂದ,
ರಸಯೆದೆಗೆ ಸಂಗೀತ ಸಾಹಿತ್ಯ ಕಲೆಯಿಂದ;
ರಸನೆಗೊದಗಲಿ ಸದಾ ಸುರಸ ತಂತ್ರಜ್ಞ.
HONEY TO TONGUE
Rain of Honey from the sky, growth of Honey from land,
Honey to the Heart from literature and music;
May all your tongues always be blessed with Honey.


Friday, July 14, 2017

ತಂತ್ರಜ್ಞ ತ್ರಿಪದಿಗಳು-84 ನಾಸಿಕಕೆ ಶ್ರೀಗಂಧ
ಹದಮಳೆಯ ಬಾನಿಂಪು, ಹೃದಯಕಮಲದ ಕಂಪು,
ಹದುಳ ಹೂಹಣ್ಣುಗಳ ಪ್ರಕೃತಿಮಾತೆಯ ಗಂಧ
ಒದಗಿರಲಿ ನಿನ್ನ ನಾಸಿಕಕೆ ತಂತ್ರಜ್ಞ.
FRAGRANCE
Welcome smell of rain from the sky, sweet smell of the lotus of the Heart,
Fragrance of flowers and fruits from mother earth,
May your nose be blessed with all of them.

Thursday, July 13, 2017

ತಂತ್ರಜ್ಞ ತ್ರಿಪದಿಗಳು-೮೩ ಜೀವನ ರೈಲು
ಮನಮತಿಯ ಹಳಿಯ ಜೀವನ ಶತಾಬ್ದೀ ರೈಲು!
ಘನಯಂತ್ರ ನಿಂತಾತ್ಮಚಾಲಕನು ಹೊರನಡೆಯೆ
ಕೊನೆತಾಣದಲಿ ಬಂಡಿ ಶೂನ್ಯ ತಂತ್ರಜ್ಞ.
TRAIN OF LIFE
On the track of Intellect runs the Shatabdi train of Life;
When the great engine stops and the driver leaves,
Empty is the train at this last stop.

Saturday, July 8, 2017

ತಂತ್ರಜ್ಞ ತ್ರಿಪದಿಗಳು-82 ಕಂಗಳಿಗೆ ಮಂಗಳ
ತಂಗದಿರ ತಾರೆಯರ ಬೆಂಗದಿರ ಬೆಳಕುಗಳು
ಸಿಂಗರದ ಬುವಿಬೆಳಕು, ಅಂತರಂಗದ ಬೆಳಕು
ಕಂಗಳಿಗೆ ಮಂಗಳವೆ ಸಿಗಲಿ ತಂತ್ರಜ್ಞ.

ತಂತ್ರಜ್ಞ ತ್ರಿಪದಿಗಳು-81 ಕಿವಿಗೆ ಸವಿದನಿ

ತಂತ್ರಜ್ಞ ತ್ರಿಪದಿಗಳು-81 ಕಿವಿಗೆ ಸವಿದನಿ
ಗಗನಗುಹೆಯಾಚೆ ದನಿ, ಒಗೆದ ಎದೆಯೀಚೆ ದನಿ
ಜಗದ ಶತಕೋಟಿ ದನಿ ಸ್ವರಮೇಳವಾಗುತ್ತ
ಸಿಗಲಿ ಸವಿದನಿ ನಿನ್ನ ಕಿವಿಗೆ ತಂತ್ರಜ್ಞ.

Tuesday, July 4, 2017

ತಂತ್ರಜ್ಞ ತ್ರಿಪದಿಗಳು-80 ಬುದ್ಧಿಗೆ ಬೆಳಕು

ತಂತ್ರಜ್ಞ ತ್ರಿಪದಿಗಳು-80 ಬುದ್ಧಿಗೆ ಬೆಳಕು
ಸಂತರುಕ್ತಿಯ ಬೆಳಕು, ಅಂತರಂಗದ ಬೆಳಕು,
ಅಂತರಿಕ್ಷದ ಲಕ್ಷನಕ್ಷತ್ರಗಳ ಬೆಳಕು,
ಸಂತತವು ಬೆಳಗಿಸಲಿ ಬುದ್ಧಿ ತಂತ್ರಜ್ಞ.
LIGHT TO INTELLIGENCE
Light of saints' sayings, light of the soul,
Light from billions of stars around
May they always light the intellect.

Saturday, July 1, 2017

ತಂತ್ರಜ್ಞ ತ್ರಿಪದಿಗಳು-79 ಮಾಯೆ

ತಂತ್ರಜ್ಞ ತ್ರಿಪದಿಗಳು-79 ಮಾಯೆ
ಸಿಗದು ನೀಲಿಯ ಬಾನು ಗಗನಯಾನದ ಗುರಿಗೆ;
ಮೃಗಜಲಕೆ ಧಾವಿಸುವ ಮೃಗಕೆ ಜಲ ಲಭ್ಯವೇ?
ಜಗದಿ ಕಾಣುವುದೆಷ್ಟೊ ಮಾಯೆ! ತಂತ್ರಜ್ಞ.
UNREAL
When making space travel, blue sky is not reached;
The animal running after the mirage doesn't get water;
Many that we see in this world are unreal.