Sunday, September 30, 2018

ತಂತ್ರಜ್ಞ ತ್ರಿಪದಿಗಳು-೪೨೧ ಇಂದಿನ ಚಿಂತೆ


ತಂತ್ರಜ್ಞ ತ್ರಿಪದಿಗಳು-೪೨೧ ಇಂದಿನ ಚಿಂತೆ
ಇಂದು ಮಾಡುವ ಚಿಂತೆ ಮುಂದಿನ ಸಮಸ್ಯೆಗಳ
ಒಂದಿಷ್ಟು ಬಿಡಿಸದಲೆ, ಇಂದಿನ ಪ್ರಶಾಂತಿ ಆ
ನಂದಗಳ ಮಾಡುವುದು ಧ್ವಂಸ! ತಂತ್ರಜ್ಞ!
TechnoWise Tripods-421 WORRYING TODAY
Your worrying today doesn't take away
Even a bit of tomorrow's troubles, but definitely takes away
Today's peace and happiness! O! TechnoWise!


Saturday, September 29, 2018

ತಂತ್ರಜ್ಞ ತ್ರಿಪದಿಗಳು-೪೨೦ ಕರ್ತಾರನ ಗರಿಮೆ


ತಂತ್ರಜ್ಞ ತ್ರಿಪದಿಗಳು-೪೨೦ ಕರ್ತಾರನ ಗರಿಮೆ
ಕಿರಿಯದಕು ಕೊನೆಯಿಲ್ಲ, ಹಿರಿಯದಕು ಕೊನೆಯಿಲ್ಲ!
ಅರಿವಿಗೂ ಕೊನೆಯಿಲ್ಲ, ಇರವಿಗೂ ಕೊನೆಯಿಲ್ಲ!
ಗರಿಮೆ ಕರ್ತಾರನದು ಸ್ಪಷ್ಟ! ತಂತ್ರಜ್ಞ.
TechnoWise Tripods-420 CREATOR, THE GREAT!
There's no end to the micros, and no end to the macros!
The knowledge is without an end, and the existence as well!
The Greatness of the Creator is evident! O! TechnoWise!


Monday, September 24, 2018

ತಂತ್ರಜ್ಞ ತ್ರಿಪದಿಗಳು-೪೧೯ ಕಾಫಿ-ಸತ್ಸಂಗ


ತಂತ್ರಜ್ಞ ತ್ರಿಪದಿಗಳು-೪೧೯ ಕಾಫಿ-ಸತ್ಸಂಗ

ರುಚಿ ಕಾಫಿಗಿದೆ ಸ್ವಂತ! ಖಚಿತ ಪ್ರಮಾಣದಲಿ 
ಶುಚಿಯ ಸಕ್ಕರೆ ಹಾಲು ಬೆರೆಸೆ ರುಚಿತಮದಂತೆ

ರುಚಿರ ಜೀವನಕ್ಕೆ ಸತ್ಸಂಗ! ತಂತ್ರಜ್ಞ

Technowise Tripods-419 COFFEE- GOOD COMPANY

Coffee, of course, has a taste of its own! But if you mix it with
Good milk and sugar, its taste is three-fold!
Your individual life becomes the best when you blend with right people! O! Technowise!




Thursday, September 20, 2018

ತಂತ್ರಜ್ಞ ತ್ರಿಪದಿಗಳು-೪೧೮ ಮನ-ಮತಿ-ಹೃದಯ


ತಂತ್ರಜ್ಞ ತ್ರಿಪದಿಗಳು-೪೧೮ ಮನ-ಮತಿ-ಹೃದಯ
ಜನ ಮೆಚ್ಚುವುದಕಿಂತ ಮನ ಮೆಚ್ಚುವುದು ಮುಖ್ಯ!
ಮನದ ಮೆಚ್ಚಿಗೆಗಿಂತ ನಿಶಿತಮತಿಯದು ಮುಖ್ಯ!
ಘನಹೃದಯ ಮುಖ್ಯಾತಿಮುಖ್ಯ!! ತಂತ್ರಜ್ಞ.
TechnoWise Tripods-418 MIND- INTELLECT - HEART
More than other people, your own Mind should approve your actions!
And the approval of  the sharp Intellect is more important than that of the Mind!
The approval of the Heart is of primary imporance! O! TechnoWise!





Saturday, September 15, 2018

ತಂತ್ರಜ್ಞ ತ್ರಿಪದಿಗಳು-೪೧೭ ನಾಕ-ನರಕ


ತಂತ್ರಜ್ಞ ತ್ರಿಪದಿಗಳು-೪೧೭ ನಾಕ-ನರಕ
ಬೆರೆಸಿ ಕ್ರೋಧದ್ವೇಷ ನರಕಲೋಕದ ಸೃಷ್ಟಿ!
ಸರಸ ಸಂತೋಷ ದಯೆಯಿರಿಸಿ ನಾಕದ ಸೃಷ್ಟಿ!
ನರಕ ನಾಕವೊ? ನಿನ್ನ ಸೃಷ್ಟಿ!!! ತಂತ್ರಜ್ಞ.
TechnoWise Tripods-417 HEAVEN - HELL
The building materials of Hell are anger, and hatred!
And those of Heaven are humour, joy, and compassion! 
Which one you want to create? Hell or Heaven?
O! TechnoWise!



ತಂತ್ರಜ್ಞ ತ್ರಿಪದಿಗಳು-೪೧೬ ನಿನ್ನೆ! ಇಂದು! ನಾಳೆ!


ತಂತ್ರಜ್ಞ ತ್ರಿಪದಿಗಳು-೪೧೬ ನಿನ್ನೆ! ಇಂದು! ನಾಳೆ!
ಪ್ರಿಯ ನಿನ್ನೆ! ನಮನ! ಅನುನಯದಿ ಕಲಿಸಿದೆ ಪಾಠ!
ಪ್ರಿಯ ಇಂದು! ನಮನ! ಉಡುಗೊರೆ ಅಮಿತ ತಂದುದಕೆ!
ಪ್ರಿಯ ನಾಳೆ! ನಮನ! ಸ್ವಾಗತಕೆ! ತಂತ್ರಜ್ಞ.
TechnoWise Tripods-416 YESTERDAY! - TODAY! - TOMORROW!
Dear Yesterday! Thank you for teaching all the lessons of life!
Dear Today! Thank you for being with me with all these valuable presents at present!
Dear Tomorrow! Thank you for your hearty invitation! O! TechnoWise! 




Friday, September 14, 2018

ತಂತ್ರಜ್ಞ ತ್ರಿಪದಿಗಳು-೪೧೫ ಹರುಷಸ್ವಭಾವ


ತಂತ್ರಜ್ಞ ತ್ರಿಪದಿಗಳು-೪೧೫ ಹರುಷಸ್ವಭಾವ
ಬರಿ ಗಿಡ್ಡವಿದು ಬಾಳು! ತ್ವರಿತ ಕಾಲನ ಕಾಲು!
ಮರುಪಂದ್ಯವಿಲ್ಲಿಲ್ಲ! ಹಿಂತಿರುಗುವಂತಿಲ್ಲ!
ಹರುಷಸ್ವಭಾವ ಕೃಷಿಮಾಡು! ತಂತ್ರಜ್ಞ.
TechnoWise Tripods-415 JOY AS INNER NATURE
Life is short! Time is fast!
No replay! No rewind!
Cultivate joy as inner nature! O! TechnoWise!



Thursday, September 13, 2018

ತಂತ್ರಜ್ಞ ತ್ರಿಪದಿಗಳು-೪೧೪ ಸ್ವಪ್ರೀತಿ


ತಂತ್ರಜ್ಞ ತ್ರಿಪದಿಗಳು-೪೧೪ ಸ್ವಪ್ರೀತಿ
ನಿನ್ನ ಮಿತ್ರನು ನೀನೆ! ನಿನ್ನ ಶತ್ರುವು ಕೂಡ!
ನಿನ್ನಿಂದ ಉನ್ನತಿಯ ಜ್ಯೋತಿ! ಅವನತಿರಾತ್ರಿ!
ನಿನ್ನತ್ತ ಹರಿಸು ಸ್ವಪ್ರೀತಿ! ತಂತ್ರಜ್ಞ.
TechnoWise Tripods-414 SELF - LOVE
You're your own friend! and foe as well!
For the light of prosperity or the darkness of adversity, you are the source!
Make the Self-love flow towards you! O! TechnoWise!





Wednesday, September 12, 2018

ತಂತ್ರಜ್ಞ ತ್ರಿಪದಿಗಳು-೪೧೩ ಸಮಸ್ಯೆ-ಉತ್ತರ


ತಂತ್ರಜ್ಞ ತ್ರಿಪದಿಗಳು-೪೧೩ ಸಮಸ್ಯೆ-ಉತ್ತರ
ಜೀವನದ ಅನುಭವವ ಭಾವಿಸುವ ಪರಿ ಮುಖ್ಯ!
ನೋವು ಎನಲು ಸಮಸ್ಯೆ! ಪಾಠವೆನೆ ಉತ್ತರವು!
ಭಾವನೆಯ ಪರಿಯೆ ಜೀವನವು! ತಂತ್ರಜ್ಞ.
TechnoWise Tripods-413 PROBLEM - SOLUTION
How you view your life experience is of utmost importance!
You become a problem or a solution when you see it as a wound or a lesson!
Your life is what your thoughts make it! O! TechnoWise!



Tuesday, September 11, 2018

ತಂತ್ರಜ್ಞ ತ್ರಿಪದಿಗಳು-೪೧೨ ಸ್ವಚ್ಛ ಭಾರತ ಹಸಿರು


ತಂತ್ರಜ್ಞ ತ್ರಿಪದಿಗಳು-೪೧೨ ಸ್ವಚ್ಛ ಭಾರತ ಹಸಿರು
ಮನದಿ ಬೆಳೆಸಿದ ಹಸಿರು, ವನದಿ ಹೊಳೆವುದು ಬಳಿಕ!
ಮನದ ಒಳಗಣ ಶುಚಿಯು ಮನೆ ಹೊರಗೆ ಪ್ರತ್ಯಕ್ಷ!
ಮನಮೂಲ ಸ್ವಚ್ಛ ಭಾರತಕೆ! ತಂತ್ರಜ್ಞ.
TechnoWise Tripods-412 GREEN & CLEAN INDIA
The planted greenery in the mind beautifies the park subsequently!
Only the cleanliness inside the mind becomes visible outside the house!
Mind is the root of Green and Clean India! O! TechnoWise!





Monday, September 10, 2018

ತಂತ್ರಜ್ಞ ತ್ರಿಪದಿಗಳು-೪೧೧ ಅನುಗ್ರಹಗಳು


ತಂತ್ರಜ್ಞ ತ್ರಿಪದಿಗಳು-೪೧೧ ಅನುಗ್ರಹಗಳು
ಎಣಿಸು ನೆನೆಯುತ ಪಡೆದ ಅನುಗ್ರಹಗಳನೆಲ್ಲ!
ನಿನಗಿಲ್ಲದಾಗದರ ಮೌಲ್ಯ ತಿಳಿವುದು ನಿನಗೆ!
ಅನುಭವಿಸು ನಾಳೆ ಇಲ್ಲೆನುತ! ತಂತ್ರಜ್ಞ.
TechnoWise Tripods-411 BLESSINGS
Daily count all the blessings you already have!
The values of such blessings you'll realize when no longer you've them!
Relish them! Who knows, tomorrow may not come at all! O! TechnoWise!

Sunday, September 9, 2018

ತಂತ್ರಜ್ಞ ತ್ರಿಪದಿಗಳು-೪೧೦ ತರಬೇತಿ


ತಂತ್ರಜ್ಞ ತ್ರಿಪದಿಗಳು-೪೧೦ ತರಬೇತಿ
ತರಬೇತಿ ಕೊಡು ಮನಕೆ, ಪರರಲೊಳಿತನು ಹುಡುಕೆ!
ತರಬೇತಿ ಕೊಡು ಎದೆಗೆ, ಪರರೇಳಿಗೆಗೆ ನಲಿಯೆ!
ತರಬೇತಿ ಉನ್ನತಿ ವಿಮಾನ! ತಂತ್ರಜ್ಞ.
TechnoWise Tripods-410 TRAINING
Train your Mind to see something good in others!
Train your Heart to rejoice in the success of others!
For rising higher and higher, Training is the Aeropleane! O! TechnoWise!

Thursday, September 6, 2018

ತಂತ್ರಜ್ಞ ತ್ರಿಪದಿಗಳು-೪೦೯ ನಾಕಕ್ಕೆ ಏಕೆ ನಿರ್ಯಾತ?


ತಂತ್ರಜ್ಞ ತ್ರಿಪದಿಗಳು-೪೦೯ ನಾಕಕ್ಕೆ ಏಕೆ ನಿರ್ಯಾತ?
ಶೋಕವಿರಹಿತ ಸೊಗದ ಲೋಕಹಿತ ಸಾಧ್ಯವಿದೆ!
ಏಕೆ ಸುಖ, ಶಾಂತಿ, ಸಂತೋಷ, ಸೌಂದರ್ಯಗಳ
ನಾಕಕ್ಕೆ ನಿರ್ಯಾತ ಗೈವೆ? ತಂತ್ರಜ್ಞ!
TechnoWise Tripods-409 WHY EXPORT TO HEAVEN?
A misery-free happy world is possible on earth itself!
Why do you export all the good qualities like pleasure, peace, happiness, and beauty-
From the wellknown mother earth to an unknown heaven? O! TechnoWise!




ತಂತ್ರಜ್ಞ ತ್ರಿಪದಿಗಳು-೪೦೮ ಪರಿಪೂರ್ಣ ಕಾಲ!


ತಂತ್ರಜ್ಞ ತ್ರಿಪದಿಗಳು-೪೦೮ ಪರಿಪೂರ್ಣ ಕಾಲ!
ಪರಿಪೂರ್ಣತೆಯ ಕಾಲ ಬರಲೆಂದು ಕಾಯದಿರು!
ನೆರಳಿನಂತೊಡನಿದ್ದು ತುಂಬು ಪೂರ್ಣತೆಯ ರಸ!
ಬರಿದಾದ ಪಾತ್ರೆಯಿದು ಕಾಲ! ತಂತ್ರಜ್ಞ.
TechnoWise Tripods-408 PERFECT  TIME!
Never wait for a perfect time!
Be with time like a shadow and fill it with nectar!
Time is after all an empty vessel! O! TechnoWise!

Wednesday, September 5, 2018

ತಂತ್ರಜ್ಞ ತ್ರಿಪದಿಗಳು-೪೦೭ ಗುರು ನಿತ್ಯಶಿಷ್ಯ!


ತಂತ್ರಜ್ಞ ತ್ರಿಪದಿಗಳು-೪೦೭ ಗುರು ನಿತ್ಯಶಿಷ್ಯ!
ಉರಿವ ಗುರುದೀಪ ಸಾವಿರ ಹಣತೆ ಹಚ್ಚುವುದು!
ಗುರು ಕಲಿಕೆ ನಿಲಿಸೆ, ಶಿಷ್ಯನೆ ಕಲಿತು, ಕಲಿಸುವನು!
ಗುರು ಕಲಿವ ಕಲಿ! ನಿತ್ಯಶಿಷ್ಯ! ತಂತ್ರಜ್ಞ.
TechnoWise Tripods-407 A TEACHER IS AN EVER-LEARNING STUDENT
A teacher is like a lighted lamp lighting thousands of other lamps!
When a teacher stops learning, his own ever-learning student becomes his teacher!
A teacher is always an ever-learning student! O! TechnoWise!


Tuesday, September 4, 2018

ತಂತ್ರಜ್ಞ ತ್ರಿಪದಿಗಳು-೪೦೬ ಕಾದಿರಿಸು ಎಲ್ಲ ಹಕ್ಕುಗಳ!


ತಂತ್ರಜ್ಞ ತ್ರಿಪದಿಗಳು-೪೦೬ ಕಾದಿರಿಸು ಎಲ್ಲ ಹಕ್ಕುಗಳ!
ನಕ್ಕು ನಲಿಯುವ ಸೊಗದ ಹಕ್ಕು ನಿನ್ನಲೆ ಇರಲಿ!
ದುಃಖ ಕ್ಷೋಭೆ ನಿರಾಶೆ ಇರದ ನೆಮ್ಮದಿ ಮನದ
ಹಕ್ಕ ಕಾದಿರಿಸು ನಿನ್ನಲ್ಲೆ! ತಂತ್ರಜ್ಞ.
TechnoWise Tripods-406 RESERVE ALL THE RIGHTS!
Let all the rights of laughing, enjoying, and wellbeing be reserved with you only!
Keep all of them with you without alienating to others,
The rights of not becoming miserable, stressful and disheartened! O! TechnoWise.

Monday, September 3, 2018

ತಂತ್ರಜ್ಞ ತ್ರಿಪದಿಗಳು-೪೦೫ ಆರು - ಅರುವತ್ತು


ತಂತ್ರಜ್ಞ ತ್ರಿಪದಿಗಳು-೪೦೫ ಆರು - ಅರುವತ್ತು
ಹರುಷಖನಿಯಾಗಿದ್ದೆ ನೀ ವರುಷ ಆರಿರುವಾಗ!
ಅರುವತ್ತರಲಿ ಅರುಳುಮರುಳೇಕೆ ಬಂದಿಹುದು?
ಇರದೆ ಬಾಳಿನ ಕಲಿಕೆ ಚೆನ್ನ? ತಂತ್ರಜ್ಞ!
TechnoWise Tripods-405 SIX - SIXTY
You were a bundle of joy at the age of six!
Now at the age of sixty, why are you behaving like a half-mad person?
The lessons of life, were they totally improper?
O! TechnoWise!


Saturday, September 1, 2018

ತಂತ್ರಜ್ಞ ತ್ರಿಪದಿಗಳು-೪೦೪ ಎಚ್ಚರಿಕೆ!... ಎಚ್ಚರಿಕೆ!


ತಂತ್ರಜ್ಞ ತ್ರಿಪದಿಗಳು-೪೦೪ ಎಚ್ಚರಿಕೆ!... ಎಚ್ಚರಿಕೆ!
ಎಚ್ಚರಿಕೆ! ಕಲಿಯುತಿರೆ ಮುಚ್ಚೀತು ಅಜ್ಞಾನ!
ಹೆಚ್ಚಿಸಲು ಕಾಯಕವ ನಿಶ್ಚಿಂತೆ! ಯೋಗಫಲ
ಹುಚ್ಚುಮನ ಸ್ಥಗಿತ! ಎಚ್ಚರಿಕೆ! ತಂತ್ರಜ್ಞ.
TechnoWise Tripods-404 BEWARE! ...BEWARE!
Beware! Learning can seriously damage your ignorance!
Enhancing your duty consciousness can fully destroy your worries!
Meditating in the Yoga-way can firmly bridle your monkey-mind! Beware! O! TechnoWise!