Sunday, November 8, 2020

ತಂತ್ರಜ್ಞ ತ್ರಿಪದಿಗಳು-೭೦೫ ಅಧಿಕತರ ಹೊಳಪು!



ತಂತ್ರಜ್ಞ ತ್ರಿಪದಿಗಳು-೭೦೫ ಅಧಿಕತರ ಹೊಳಪು!

ಅಮವಾಸ್ಯೆ ಕತ್ತಲಲಿ ಅಮಿತತರ ಹೊಳಪಿರುವ

ರಮಣೀಯ ನಕ್ಷತ್ರದಂತೆ ನರಸಾಧಕರ

ಸಮಸ್ಯೆಯಮವಾಸ್ಯೆಯಲಿ ಕಾಂತಿ! ತಂತ್ರಜ್ಞ!

TechnoWise Tripods-705 Brighter Twinkle!

Like stars shining brighter in the darkness of new-moon sky,

The stars of great achievements of humans twinkle brighter

In the new-moon darkness of problems! O! TechnoWise!



Thursday, November 5, 2020

ತಂತ್ರಜ್ಞ ತ್ರಿಪದಿಗಳು-೭೦೪ ನಿಗೂಢ ವಿಶ್ವ!!!

 


ತಂತ್ರಜ್ಞ ತ್ರಿಪದಿಗಳು-೭೦೪ ನಿಗೂಢ ವಿಶ್ವ!!!

ನಾವು ನೋಡುವ ವಿಶ್ವ! ಹಾವು ಬಾವಲಿ ವಿಶ್ವ!

ಜೀವಕೋಟಿಯ ವಿಶ್ವ- ಜೀವದಂತೆಯೆ ಭಿನ್ನ!

ವಿಶ್ವವಾಸ್ತವವತಿ ನಿಗೂಢ!!! ತಂತ್ರಜ್ಞ!

TechnoWise Tripods-704 MYSTERIOUS WORLD!!!

The world that we experience, and which the snakes and bats experience

Are all different like that of millions of species in the world!

The reality of the world is a mystery! O! TechnoWise!






Tuesday, October 27, 2020

ತಂತ್ರಜ್ಞ ತ್ರಿಪದಿಗಳು-೭೦೩ ತುಂಗಶಕ್ತಿಯ ಮತಿ!

 


ತಂತ್ರಜ್ಞ ತ್ರಿಪದಿಗಳು-೭೦೩ ತುಂಗಶಕ್ತಿಯ ಮತಿ!

ತುಂಗಶಕ್ತಿಯ ಮತಿಯ ಮಂಗಮನಸಿಗೆ ಕೊಡಲು,

ಮಂಗಳನ ಪ್ರಾಂಗಣಕೆ ಹಾರುವ ವಿಮಾನವನು

ಅಂಗಳದ ಸುತ್ತ ಎಳೆವಂತೆ! ತಂತ್ರಜ್ಞ!

TechnoWise Tripods-703 POWERFUL INTELLECT!

Keeping the all powerful intellect under the control of the monkey-mind,

Is like dragging a Spaceship, capable of flying to the threshold of the mars,

Around the small courtyard of your house! O! TechnoWise!



Monday, October 26, 2020

ತಂತ್ರಜ್ಞ ತ್ರಿಪದಿಗಳು-೭೦೨ ಧ್ಯಾನ! ಜ್ಞಾನ! ಮೌನ!



ತಂತ್ರಜ್ಞ ತ್ರಿಪದಿಗಳು-೭೦೨ ಧ್ಯಾನ! ಜ್ಞಾನ! ಮೌನ!

ನೀನಿಳಿಯೆ ನಿನ್ನೊಳಗೆ- ನೀನು ಗೈವುದು "ಧ್ಯಾನ"!

ನೀನರಿಯೆ ನೀ ನಿನ್ನ- ಅದುವೆ ಆತ್ಮದ "ಜ್ಞಾನ"!

ನೀನಳಿಯೆ- ದೈವಿಕದ "ಮೌನ"! ತಂತ್ರಜ್ಞ!

TechnoWise Tripods-702 MEDITATION! KNOWLEDGE! SILENCE!

When you go down inside yourself- it's Meditation!

When you know yourself- it's Self-Knowledge!

When your Ego vanishes- it's divine Silence! O! TechnoWise!

 


 

Sunday, October 11, 2020

ತಂತ್ರಜ್ಞ ತ್ರಿಪದಿಗಳು-೭೦೧ ಕರ್ಮ! ಮತ್ತು ಪೂಜೆ!

 


ತಂತ್ರಜ್ಞ ತ್ರಿಪದಿಗಳು-೭೦೧ ಕರ್ಮ! ಮತ್ತು ಪೂಜೆ!

ಪೂಜೆ ಮತ್ತದರೊಡನೆ ನಿಜ ಕರ್ಮ ಗೈ ಮೊದಲು!

ಪೂಜೆಯಂತೆಯೆ ಕರ್ಮ ಮಾಡಲೆರಡನೆ ಹೆಜ್ಜೆ!

ಪೂಜೆಯಾಗಲಿ ಕರ್ಮ! ಕೊನೆಗೆ! ತಂತ್ರಜ್ಞ

TechnoWise Tripods-701 WORK! and WORSHIP!

Do Work, along with it Worship, as the first step!

And the second step is to perform Work as Worship!

The Work becomes the Worship at the end! O! TechnoWise!





Monday, October 5, 2020

ತಂತ್ರಜ್ಞ ತ್ರಿಪದಿಗಳು-೭೦೦ ಹಿನ್ನೋಟ!

 


ತಂತ್ರಜ್ಞ ತ್ರಿಪದಿಗಳು-೭೦೦ ಹಿನ್ನೋಟ!

ಒಪ್ಪದಲಿ ಸತ್ತ್ವದಲಿ ಕುಪ್ಪಳಿಸಿ ಮೆರೆದಿದ್ದ

ಇಪ್ಪತ್ತರ ಶರೀರದೆಲ್ಲ ಕಣಗಳು ಮಾಯ-

ಎಪ್ಪತ್ತು ಕೊಡುವ ಹಿನ್ನೋಟ! ತಂತ್ರಜ್ಞ!

TechnoWise Tripods-700 BACKSIGHT!

The vanishing act of the billions of cells of the twenty-year-old body

Bubbling and glittering with youthful fitness and effervescing energy

Is the backsight which the seventy-year-old body gives! O! Technowise!



Sunday, October 4, 2020

 


ತಂತ್ರಜ್ಞ ತ್ರಿಪದಿಗಳು-೬೯೯ ಮೆದುಳುಗಳು!!!

ಯುದ್ಧ ಅತ್ಯಾಚಾರ, ಕ್ರುದ್ಧ ಹಿಂಸಾಚಾರ

ಬುದ್ಧ ಸಿದ್ಧರ ಧ್ಯಾನ, ಅತೀಂದ್ರಿಯಕೆ ಯಾನ

ಸಿದ್ಧವಿದು ಮೆದುಳು ಎಲ್ಲದಕು! ತಂತ್ರಜ್ಞ!

TechnoWise Tripods-699 BRAINS!!!

Bloody wars and violence, frenzy of outrage and nonsense

Meditation of awakened and enlightened ones, and transcendental bliss

Our brains are ready for everything! O! TechnoWise!






Saturday, October 3, 2020

ತಂತ್ರಜ್ಞ ತ್ರಿಪದಿಗಳು-೬೯೮ ಪ್ರಕೃತಿಭಾಗವದಾಗಿ!



ತಂತ್ರಜ್ಞ ತ್ರಿಪದಿಗಳು-೬೯೮ ಪ್ರಕೃತಿಭಾಗವದಾಗಿ!

ಸುಕೃತಿಯದು ಬದುಕುವುದು ಪ್ರಕೃತಿಭಾಗವದಾಗಿ!

ವಿಕೃತಿಯದು ಶಿಶು-ಮಾತೆ ವಿಚ್ಛೇದನದ ರೀತಿ

ಪ್ರಕೃತಿಯನೆ ವಿಭಜಿಸುವ ಬದುಕು! ತಂತ್ರಜ್ಞ!

TechnoWise Tripods-698 AS PART OF NATURE!

Indeed it's a good deed living as a part of nature!

But living partitioning man from mother nature

Is like separating a baby from the mother! O! TechnoWise!




 

Saturday, September 19, 2020

ತಂತ್ರಜ್ಞ ತ್ರಿಪದಿಗಳು-೬೯೭ ಬಿಂಬ!-ಪ್ರತಿಬಿಂಬ!



ತಂತ್ರಜ್ಞ ತ್ರಿಪದಿಗಳು-೬೯೭ ಬಿಂಬ!-ಪ್ರತಿಬಿಂಬ!

ಒಳಗಿಲ್ಲ ನೀ ವಿಶ್ವದೊಳಗೆ! ವಿಶ್ವವು ನಿನ್ನ

ಒಳಗಿದ್ದು ವಿಶ್ವಪರದೆಯ ಮೇಲೆ ಬಿಂಬಿಸಿದೆ!

ಒಳ-ಹೊರಗು ಬಿಂಬ!-ಪ್ರತಿಬಿಂಬ! ತಂತ್ರಜ್ಞ!

TechnoWise Tripods-697 REAL!-REFLECTION!

You're not inside the Universe! Inside You is the Universe!

What you see outside is the picture projected on the vast screen of the Cosmos!

"Here Inside" and "There Outside" are the Real and the Reflection! O! TechnoWise!






 

Friday, September 18, 2020

ತಂತ್ರಜ್ಞ ತ್ರಿಪದಿಗಳು-೬೯೬ ಶಾಂತಿ!-ಸಂತೋಷ!

 


ತಂತ್ರಜ್ಞ ತ್ರಿಪದಿಗಳು-೬೯೬ ಶಾಂತಿ!-ಸಂತೋಷ!

ಶಾಂತಿ ಸ್ಥಾವರವಾಗೆ ಸಂತೋಷ ಹರಿಯುವುದು!

ಶಾಂತಿ ಜಂಗಮವಾಗೆ ಸಂತೋಷ ಅಲುಗುವುದು!

ಶಾಂತಿ ಘನ, ದ್ರವವು ಸಂತೋಷ! ತಂತ್ರಜ್ಞ!

TechnoWise Tripod-696 PEACE!-HAPPINESS!

When peace becomes static, Happiness starts flowing!

When Peace becomes dynamic, Happiness starts shaking!

Peace is Solid, whereas Happiness is Liquid! O! TechnoWise!



Saturday, September 12, 2020

ತಂತ್ರಜ್ಞ ತ್ರಿಪದಿಗಳು-೬೯೫ ಅರೆ ಜ್ಞಾನ!!!

 



ತಂತ್ರಜ್ಞ ತ್ರಿಪದಿಗಳು-೬೯೫ ಅರೆ ಜ್ಞಾನ!!!

ಇರುವ ತುಸು ಧರ್ಮ ಪರಸ್ಪರ ಕಲಹ ತರುವಷ್ಟು!

ತರಲು ಸಮರಸ- ಧರ್ಮವಿಲ್ಲ ಬೇಕಾದಷ್ಟು!

ಅರೆ ಧರ್ಮದಿಂದ ಆಪತ್ತು! ತಂತ್ರಜ್ಞ!

TechnoWise Tripods-695 HALF KNOWLEDGE!!!

Mankind has just enough religion to bring disharmony and animosity!

It hasn't acquired sufficient religion to infuse harmony and amity!

Half knowledge of religion is always fatal! O! TechnoWise!







Wednesday, September 9, 2020

 


ತಂತ್ರಜ್ಞ ತ್ರಿಪದಿಗಳು-೬೯೪ ಹೆಗ್ಗುರಿ!

ಸಾಮಾನ್ಯ ಮಾನವನಸಾಮಾನ್ಯನಾಗುವುದು

ಭೂಮದೊಡನೊಂದಾಗೆ ಸಾಮಾನ್ಯ ಗುರಿ ತೊರೆದು!

ಭೀಮ ಹೆಗ್ಗುರಿಯ ವಾಮನನು! ತಂತ್ರಜ್ಞ!

TechnoWise Tripods-694 LOFTY GOALS!

Ordinary people become extraordinary iconic persons

When they set extraordinary goals rejecting ordinary ones!

Lofty goals make a pygmy into a real giant! O! TechnoWise! 




Tuesday, September 1, 2020

ತಂತ್ರಜ್ಞ ತ್ರಿಪದಿಗಳು-೬೯೩ ಮಬ್ಬು ಬೆಳಕು!

 


ತಂತ್ರಜ್ಞ ತ್ರಿಪದಿಗಳು-೬೯೩ ಮಬ್ಬು ಬೆಳಕು!

ಎಣ್ಣೆಯಿಲ್ಲದೆ ದೀಪ ಸಣ್ಣದಾಗಿದೆ ಮಿಣುಕು!

ಬಣ್ಣಬಣ್ಣದ ದೀಪ ವಿದ್ಯುತಿಳಿಯಲು ಮಂಕು!

ಕಣ್ಣು ಸೊರಗಿದೆ, ಬೆಳಕು ಮಬ್ಬು! ತಂತ್ರಜ್ಞ!

 TechnoWise Tripods-693 GLOOMY!

The flame is becoming dim and flickering with less and less oil!

The voltage is low and the multi-colored lamps are dull!

The world is gloomy and the eyes are languishing ! O! TechnoWise!






Thursday, August 27, 2020

ತಂತ್ರಜ್ಞ ತ್ರಿಪದಿಗಳು-೬೯೨ ಎತ್ತರದ ಗುರಿ! - ಉತ್ತಮ ವ್ಯಕ್ತಿತ್ವ!

 


ತಂತ್ರಜ್ಞ ತ್ರಿಪದಿಗಳು-೬೯೨ ಎತ್ತರದ ಗುರಿ! - ಉತ್ತಮ ವ್ಯಕ್ತಿತ್ವ!

ಎತ್ತರದ ಗುರಿಗೆ ಬಹು ಉತ್ತಮದ ಕಾರ್ಯಕ್ಕೆ

ಚಿತ್ತವಿರೆ ಸ್ಫೂರ್ತಿಯಿರೆ- ಪ್ರಜ್ಞೆ ವಿಸ್ತರಗೊಂಡು

ವ್ಯಕ್ತಿತ್ವ ಪ್ರತಿಭಾವಿಕಾಸ! ತಂತ್ರಜ್ಞ!

TechnoWise Tripods-692 GREAT  PURPOSE! - GREATER  PERSONALITY!

When you're inspired by some great purpose, an extraordinary task, and a noble vision

Your thoughts become boundless, mind limitless, consciousness expands in every direction,

Your talents become alive, and your personality unimaginably will flower! O! TechnoWise!




Wednesday, August 26, 2020

ತಂತ್ರಜ್ಞ ತ್ರಿಪದಿಗಳು-೬೯೧ ಮಿಥ್ಯಾನುಭವ!

 


ತಂತ್ರಜ್ಞ ತ್ರಿಪದಿಗಳು-೬೯೧ ಮಿಥ್ಯಾನುಭವ!

ಮುಳುಗಿದ್ದು ರವಿಯಲ್ಲ-  ಇಳೆ ತಿರುಗಿದಳು ಅತ್ತ!

ಹೊಳೆವ ಹಗಲಿನ ತಾರೆ-  ರವಿಯ ಬೆಳಕಲಿ ಲುಪ್ತ!

ತಿಳಿವ ಅನುಭವವಿಲ್ಲಿ- ಮಿಥ್ಯ! ತಂತ್ರಜ್ಞ!

TechnoWise Tripods-691 ILLUSION!

The sun doesn't go down, but up goes the earth's horizon!

Stars, though present in daytime, yet covered by the sunlight screen!

Our experience isn't always real-  an illusion! O! TechnoWise!




Wednesday, July 29, 2020

ತಂತ್ರಜ್ಞ ತ್ರಿಪದಿಗಳು-೬೮೩ ಪರಿಪೂರ್ಣ ಧ್ಯಾನ!


ತಂತ್ರಜ್ಞ ತ್ರಿಪದಿಗಳು-೬೮೩ ಪರಿಪೂರ್ಣ ಧ್ಯಾನ!
ಮರದಿಂದ ಮರಕೆ ಕಪಿ ಹಾರುವುದ ತಡೆದದನು
ಇರಿಸೆ ಮರವೊಂದರಲೆ, ಧ್ಯಾನವದು ಪರಿಪೂರ್ಣ
ಮರ-ಮಂಗ-ಮನ ಮಾಯವಾಗೆ! ತಂತ್ರಜ್ಞ!
TechnoWise Tripods-683 REAL MEDITATION!
Preventing the monkey from jumping from tree to tree,
And making it sit quietly on a single tree is real meditation,
When all the trio of Tree-Monkey-Mind vanish! O! TechnoWise! 

Monday, July 27, 2020

ತಂತ್ರಜ್ಞ ತ್ರಿಪದಿಗಳು-೬೮೨ ಸುಪ್ತ-ಪ್ರತ್ಯಕ್ಷ


ತಂತ್ರಜ್ಞ ತ್ರಿಪದಿಗಳು-೬೮೨ ಸುಪ್ತ-ಪ್ರತ್ಯಕ್ಷ
ನವಿಲುಗರಿಗಳ ಸೊಬಗು ಅವಿತಿಹುದು ತತ್ತಿಯಲಿ!
ಸವಿಯು ಗೊರಟಿನ ಒಳಗೆ ಸಿಹಿಮಾವು ಹಣ್ಣಿನಲಿ!
ಬುವಿಯಾಟ ಸುಪ್ತ-ಪ್ರತ್ಯಕ್ಷ! ತಂತ್ರಜ್ಞ!
TechnoWise Tripods-682 HIDE! and SEEK!
The beauty of peacock feathers is concealed in the eggs!
And the sweetness of mango fruits inside the seeds!
Mother earth is playing Hide and Seek! O! TechnoWise!




Saturday, July 25, 2020

ತಂತ್ರಜ್ಞ ತ್ರಿಪದಿಗಳು-೬೮೧ ಉದರಕೆ ಆಹಾರ!


ತಂತ್ರಜ್ಞ ತ್ರಿಪದಿಗಳು-೬೮೧ ಉದರಕೆ ಆಹಾರ!
ಬದುಕಿರಲು ಜೀವಿಗಳ ಉದರ ತುಂಬಲು ಬೇಕು!
ವಿದ್ಯುತ್ತೊ ತೈಲಗಳೊ ಯಂತ್ರದುದರಕು ಬೇಕು!
ಉದರವೇ ಮೊದಲು ಎಲ್ಲದಕು! ತಂತ್ರಜ್ಞ!
TechnoWise Tripods-681 FOOD FOR BELLY!
Like the much needed belly filling of living beings,
Electricity or oil are required for the belly of machines!
Belly filling is primary for everything! O! TechnoWise!





Friday, July 24, 2020

ತಂತ್ರಜ್ಞ ತ್ರಿಪದಿಗಳು-೬೮೦ ರಸಾನುಭವ!


ತಂತ್ರಜ್ಞ ತ್ರಿಪದಿಗಳು-೬೮೦ ರಸಾನುಭವ!
ಬಲು ಭಯದ ಭಾವ ಹೆಬ್ಬುಲಿ ಬರಲು ಗರ್ಜಿಸುತ!
ಹುಲಿಯ ಚಿತ್ರದ ಎದುರು ರಸದ ಮೃದುಲಾನುಭವ!
ಉಳಿಯುವುದು ರಸ, ಅಹಂ ಅಳಿಯೆ! ತಂತ್ರಜ್ಞ!
TechnoWise Tripods-680 AESTHETIC EXPERIENCE!
Intense feeling of fear when a roaring tiger approaches!
In front of a beautiful picture of a tiger, only aesthetic experience!
When the ego vanishes, what remains is aesthetic experience! O! TechnoWise!




Saturday, July 18, 2020

ತಂತ್ರಜ್ಞ ತ್ರಿಪದಿಗಳು-೬೭೮ ನುಡಿ!


ತಂತ್ರಜ್ಞ ತ್ರಿಪದಿಗಳು-೬೭೮ ನುಡಿ!
ವರುಷವೆರಡೇ ಸಾಕು ಸರಿನುಡಿಯ ಶಿಶು ಕಲಿಯೆ!
ಅರಿಯಲೇನನು ನುಡಿಯಬಾರದೆಂಬುದ ತಿಳಿಯೆ
ವರುಷ ನೂರಾದರೂ ಕಡಿಮೆ! ತಂತ್ರಜ್ಞ!f
TechnoWise Tripods-678 SPEECH!
It requires just two years for a child to learn how to speak!
But for elders to realize what not to speak-
Even hundred years are insufficient! O! TechnoWise!



Friday, July 17, 2020

ತಂತ್ರಜ್ಞ ತ್ರಿಪದಿಗಳು-೬೭೭ ವಿಮಾನ ಯಾನ!


ತಂತ್ರಜ್ಞ ತ್ರಿಪದಿಗಳು-೬೭೭ ವಿಮಾನ ಯಾನ!
ಭೂಮಿಯಲಿ ನಿನ್ನಿರವು ವಿಮಾನದೊಳಿರುವಂತೆ!
ವ್ಯೋಮ ಪ್ರಕ್ಷುಬ್ಧತೆಯು ಇಹಸಮಸ್ಯೆಗಳಂತೆ!
ರಮಿಸು ವಿರಮಿಸು ಪೂರ್ಣ ಯಾನ! ತಂತ್ರಜ್ಞ!
TechnoWise Tripods-677 AIR TRAVEL!
Living on earth is like traveling in an airplane!
The turbulence in the sky is like problems in life!
Enjoy and relax throughout the flight! O! TechnoWise!


Thursday, July 16, 2020

ತಂತ್ರಜ್ಞ ತ್ರಿಪದಿಗಳು-೬೭೬ ಪ್ರಜ್ಞಾಸೂರ್ಯ!!


ತಂತ್ರಜ್ಞ ತ್ರಿಪದಿಗಳು-೬೭೬ ಪ್ರಜ್ಞಾಸೂರ್ಯ!!
ಮನುಜ ಜಗವೆಲ್ಲವನು ದಿನಪ ಬೆಳಗಿಸುವ ಪರಿ
ಮನದ ಜಗವೆಲ್ಲವನು ಬೆಳಗುವುದು ಪ್ರಜ್ಞೆಛವಿ!
ದಿನಕಾರ್ಯಗಳಲಿರಿಸು ಪ್ರಜ್ಞೆ! ತಂತ್ರಜ್ಞ!
TechnoWise Tripods-676 THE SUN OF CONSCIOUSNESS!!
The light of Consciousness illuminates the world of the mind
Just like the sun lights up the world of humans!
Do all your worldly tasks consciously! O! TechnoWise!



Wednesday, July 15, 2020

ತಂತ್ರಜ್ಞ ತ್ರಿಪದಿಗಳು-೬೭೫ ಕನಸು!!


ತಂತ್ರಜ್ಞ ತ್ರಿಪದಿಗಳು-೬೭೫ ಕನಸು!!
ಕನಸು ಬೀಳಲು ರಾತ್ರಿ, ಕನಸೆಂದು ನೀನರಿಯೆ!
ಕನಸು ಕಾಣಲು ಹಗಲು, ಹಗಲುಗನಸೆಂದರಿವೆ!
ದಿನ-ರಾತ್ರಿ ಕನಸಲಿರೆ ಭ್ರಾಂತಿ! ತಂತ್ರಜ್ಞ!
TechnoWise Tripods-675 DREAM!!
During your dream at night, you don't know it's a dream!
If you dream while awake during the day, you know it's a daydream!
It's a nightmare if you dream day and night! O! TechnoWise!


Tuesday, July 14, 2020

ತಂತ್ರಜ್ಞ ತ್ರಿಪದಿಗಳು-೬೭೪ ಹೂವುಗಳ ಸೌಂದರ್ಯ!


ತಂತ್ರಜ್ಞ ತ್ರಿಪದಿಗಳು-೬೭೪ ಹೂವುಗಳ ಸೌಂದರ್ಯ!
ಬುವಿಯ ನರಲೋಕದಲಿ ಹೂವುಗಳ ಸೌಂದರ್ಯ!
ಹೂವೆಲ್ಲ ಆಹಾರ ಕ್ರಿಮಿಕೀಟ ಲೋಕದಲಿ!
ಜೀವಿಗಳಿಗವುಗಳದೆ ಲೋಕ! ತಂತ್ರಜ್ಞ!
TechnoWise Tripods-674 BEAUTY OF FLOWERS!
The flowers have the value of Beauty only in the human world!
In the world of flower-eating insects, the flowers have only Food value!
Every living being has its own world! O! TechnoWise!


Monday, July 13, 2020

ತಂತ್ರಜ್ಞ ತ್ರಿಪದಿಗಳು-೬೭೩ ಆತ್ಮವಿಶ್ವಾಸ!


ತಂತ್ರಜ್ಞ ತ್ರಿಪದಿಗಳು-೬೭೩ ಆತ್ಮವಿಶ್ವಾಸ!
ಕಿರು ಹಣತೆ ಹಚ್ಚಿಟ್ಟ ಪರಿ ಆತ್ಮವಿಶ್ವಾಸ!
ಪರಿಹರಿಸದಿರಬಹುದು ಸುತ್ತಿರುವ ಕತ್ತಲೆಯ!
ಕಿರು ಹೆಜ್ಜೆಗಾ ಬೆಳಕೆ ಸಾಕು! ತಂತ್ರಜ್ಞ!
TechnoWise Tripods-673 SELF-CONFIDENCE!
Like lighting a small lamp is self-confidence!
It may not remove all the surrounding darkness!
But its light is sufficient to take the next small step! O! TechnoWise!