Tuesday, March 31, 2020

ತಂತ್ರಜ್ಞ ತ್ರಿಪದಿಗಳು-೫೭೯ ಟೀಕೆಗಳು!!!


ತಂತ್ರಜ್ಞ ತ್ರಿಪದಿಗಳು-೫೭೯ ಟೀಕೆಗಳು!!!
ಒಳಗೆ ತುಂಬದೆ ನೀರು, ಮುಳುಗಿಸಲು ಹಡಗನ್ನು
ಜಲಧಿ ಸೋಲುವ ಪರಿಯೆ, ಜನರ ಟೀಕೆಗಳೆಲ್ಲ
ಸೋಲುವುವು ಮಣೆಹಾಕದಿರಲು! ತಂತ್ರಜ್ಞ!
TechnoWise Tripods-579 DENUNCIATIONS!!!
As the mighty ocean fails to sink a ship,
Unless water gets inside the ship, so also the denunciations of people,
Fail to upset you, unless you honour them! O! TechnoWise!


Monday, March 30, 2020

ತಂತ್ರಜ್ಞ ತ್ರಿಪದಿಗಳು-೫೭೮ ಇರಲಿ - ಇರದಿರಲಿ


ತಂತ್ರಜ್ಞ ತ್ರಿಪದಿಗಳು-೫೭೮ ಇರಲಿ - ಇರದಿರಲಿ
ಇರು ಶಾಂತಮನದಿಂದ!  ಇರದಿರಲಿ ಕ್ರಾಂತಿಮನ!
ಇರಲಿ ಹೃದಯದಿ ಸಿಹಿಯು!  ಕಹಿ ದೂರವಾಗಿರಲಿ!
ಇರು ಧ್ಯಾನದಲಿ, ಒರಸಿ ಮ್ಲಾನ! ತಂತ್ರಜ್ಞ!
TechnoWise Tripods-578 TO BE .. NOT TO BE
Be in peace of Mind, not in pieces of agitation!
Let butterness be in the Heart, and not bitterness!
Be in Meditation, not in Medication! O! TechnoWise!



Sunday, March 29, 2020

ತಂತ್ರಜ್ಞ ತ್ರಿಪದಿಗಳು-೫೭೭ ನಿಸ್ಸಾರದಾಹಾರ!!!


ತಂತ್ರಜ್ಞ  ತ್ರಿಪದಿಗಳು-೫೭೭ ನಿಸ್ಸಾರದಾಹಾರ!!!
ತನುವಿಗತಿ ಖಾರ ಕೊಬ್ಬಿನ ಕರಿದ ತಿನಿಸಂತೆ
ಕಿನಿಸು ಮತ್ಸರ ಮೋಹ ಚಿಂತೆ ಭಯ ಮದ ಲೋಭ
ಮನದ ನಿಸ್ಸಾರದಾಹಾರ! ತಂತ್ರಜ್ಞ!
TechnoWise Tripods-577 JUNK  FOOD!!!
As extremely spicy fatty fried Junk Food is for the Body,
So are anger jealosy desire worry fear ego and avidity 
The Junk Food for the Mind! O! TechnoWise!


Saturday, March 28, 2020

ತಂತ್ರಜ್ಞ ತ್ರಿಪದಿಗಳು-೫೭೬ ಸತ್ಸಂಗ???


ತಂತ್ರಜ್ಞ ತ್ರಿಪದಿಗಳು-೫೭೬ ಸತ್ಸಂಗ???
ಸತ್ಪುರುಷ ಸ್ತ್ರೀ ಮಾತ್ರ ಸತ್ಸಂಗದಂಗಗಳೆ?
ಹಿತ್ತಲಿನ ಹೂಬಳ್ಳಿ, ಸಾಕುಮೃಗಗಳು ಸೇರಿ
ಸುತ್ತ ಹಸುರೆಲ್ಲ ಸತ್ಸಂಗ! ತಂತ್ರಜ್ಞ.
TechnoWise Tripods-576 GOOD COMPANY??
Do only good men and women make up good company?
Lovely flowering plants in the kitchen garden, and dear domestic animals,
And all the greenery in the surroundings add up to Good Company! O! TechnoWise!


Friday, March 27, 2020

ತಂತ್ರಜ್ಞ ತ್ರಿಪದಿಗಳು-೫೭೫ ಪರೋಕ್ಷಪ್ರಿಯ!


ತಂತ್ರಜ್ಞ ತ್ರಿಪದಿಗಳು-೫೭೫ ಪರೋಕ್ಷಪ್ರಿಯ!
ಕಿರಣ ಕಣ್ಣಿಗೆ ನೇರ ಬರಲು ಕಣ್‌-ಕತ್ತಲೆಯು!
ಕಿರಣ ಪ್ರತಿಫಲಿಸೆ ಸಾಧ್ಯವು ವಸ್ತುವೀಕ್ಷಣೆಯು!
ಪರೋಕ್ಷಪ್ರಿಯ ಬ್ರಹ್ಮಸೂರ್ಯ! ತಂತ್ರಜ್ಞ!
TechnoWise Tripods-575 LOVES INDIRECT WAYS!
Eyes are blinded if sun rays directly enter the eyes!
Objects become visible when the light is reflected from them!
The creator sun loves indirect ways! O! TechnoWise!

Tuesday, March 24, 2020

ತಂತ್ರಜ್ಞ ತ್ರಿಪದಿಗಳು-೫೭೪ ಯುಗಾದಿಯ ಶುಭಾಶಯಗಳು


ತಂತ್ರಜ್ಞ ತ್ರಿಪದಿಗಳು-೫೭೪ ಯುಗಾದಿಯ ಶುಭಾಶಯಗಳು
ಬೇವು ಬೆಲ್ಲದ ಬೆರಕೆ, ನೋವು ನಲಿವಿನ ಬಾಳು!
ಹಾವು ಹಳೆ ಚರ್ಮ ಕಳೆಯುತ ಹೊಸತ ಪಡೆವಂತೆ
ಕೋವಿದ್‌ ಕಳೆ! ಪಡೆ ಸುಖಶಾಂತಿ! ತಂತ್ರಜ್ಞ!
TechnoWise Tripods-574 YUGADI  GREETINGS
Like a mixture of sweet jaggery and bitter neem is this life with joy and sorrow!
Like a snake getting rid of old skin and wearing a new one,
Triumph over Covid and get Joy and Peace! O! TechnoWise!



Monday, March 23, 2020

ತಂತ್ರಜ್ಞ ತ್ರಿಪದಿಗಳು-೫೭೩ ಪ್ರಾರ್ಥಾನಾ ಬಲ!

ತಂತ್ರಜ್ಞ ತ್ರಿಪದಿಗಳು-೫೭೩ ಪ್ರಾರ್ಥಾನಾ ಬಲ!
ವರ ವಿದ್ಯುತ್ಕಾಂತೀಯ, ಗುರುತ್ವಾಕರ್ಷಣೆಯ,
ಪರಮಾಣು ಬಲದಂತೆ ಪ್ರಾರ್ಥನಾಬಲ ಸೂಕ್ಷ್ಮ!
ಪರುಶದಂತದರ ಪ್ರಭಾವ! ತಂತ್ರಜ್ಞ!
TechnoWise Tripods-573 POWER OF PRAYER!
Like Electro-magnetic, and Gravitational forces,
and like Nuclear forces is the subtle force of Prayer!
It is efficacious like a Touchstone on Human Wefare! O! TechnoWise!




Sunday, March 22, 2020

ತಂತ್ರಜ್ಞ ತ್ರಿಪದಿಗಳು-೫೭೨ ನಿನ್ನೊಳಗೆ ಹೋಗುತಿರು!


ತಂತ್ರಜ್ಞ ತ್ರಿಪದಿಗಳು-೫೭೨ ನಿನ್ನೊಳಗೆ ಹೋಗುತಿರು! 
ಬೆನ್ನುಹಾಕಿ ಕರೊನಾ ಇನ್ನು ಕಾಣದ ತನಕ
ನಿನ್ನೊಳಗೆ ಹೋಗುತಿರು- ಕಲಿ ಬದುಕಿ ಬದುಕಿಸಲು!
ಚೆನ್ನ ಒಳಪಯಣಕ್ಕೆ ಧ್ಯಾನ! ತಂತ್ರಜ್ಞ!
TechnoWise Tripods-572 GO INSIDE YOURSELF FREQUENTLY!
For some more days, till Corona is overcome,
Go inside yourself frequently, and learn to live and let live,
For inner travel, meditation is the best path! O! TechnoWise!


Saturday, March 21, 2020

ತಂತ್ರಜ್ಞ ತ್ರಿಪದಿಗಳು-೫೭೧ ಬೇಡದ ರೋಗಾತಿಥಿ!


ತಂತ್ರಜ್ಞ ತ್ರಿಪದಿಗಳು-೫೭೧ ಬೇಡದ ರೋಗಾತಿಥಿ!
ರೋಗ-ಉಪಶಮನ ಹೊರಹೋಗೆ ಯಾ ಬರಲೊಳಗೆ
ಬಾಗಿಲೇ ಕಲ್ಪನೆಯು! ಮನದ ಮನೆಯಿಂದಾಚೆ
ರೋಗಾತಿಥಿಯ ಬೇಗ ದಬ್ಬು! ತಂತ್ರಜ್ಞ!
TechnoWise Tripods-571 UNWANTED GUEST OF DISEASE!
For entering or leaving of both disease and healing,
Imagination is the only door! denying shelter in the house of your mind,
Oust the unwanted guest of disease! O! TechnoWise!

Thursday, March 19, 2020

ತಂತ್ರಜ್ಞ ತ್ರಿಪದಿಗಳು-೫೭೦ ನಂದನ ವನ? ಜುರೇಸಿಕ್‌ ಪಾರ್ಕ್?‌


ತಂತ್ರಜ್ಞ ತ್ರಿಪದಿಗಳು-೫೭೦ ನಂದನ ವನ? ಜುರೇಸಿಕ್‌ ಪಾರ್ಕ್?‌
ಇಂದು ಜೀವನ ವನದಿ ನಂದನ ವನದ ಚಂದ!
ಮುಂದೆ ಭೀಕರ ಸರೀಸೃಪ ಜುರೇಸಿಕ್‌ ಪಾರ್ಕು?
ಇಂದು ನಲಿ! ಮುಂದೆ ಎಚ್ಚರಿಕೆ!!! ತಂತ್ರಜ್ಞ!
TechnoWise Tripods-570 HEAVENLY GARDEN? JURASSIC  PARK?
Today the garden of life is as beautiful as a heavenly garden!
In future, who knows, it may become like a Jurassic Park with deadful dinosaurs!
Today you enjoy! But be cautious tomorrow! O! TechnoWise!





Wednesday, March 18, 2020

ತಂತ್ರಜ್ಞ ತ್ರಿಪದಿಗಳು-೫೬೯ ಮಂದಹಾಸವು ಶಾಂತಿಮೂಲ!


ತಂತ್ರಜ್ಞ ತ್ರಿಪದಿಗಳು-೫೬೯ ಮಂದಹಾಸವು ಶಾಂತಿಮೂಲ!
ಒಂದೆರಡೆ ಕ್ಷಣ ನಗಲು, ಚಂದ ಛಾಯಾಚಿತ್ರ!
ಅಂದವಾಗದೆ ಬಾಳು ಎಂದೆಂದು ನಗುತಿರಲು?
ಮಂದಹಾಸವು ಶಾಂತಿಮೂಲ! ತಂತ್ರಜ್ಞ!

TechnoWise Tripods-569 SMILE: SOURCE OF PEACE!
A pretty smile of a few seconds makes the photograph more beautiful!
Think how beautiful will be your life if you go on smiling!
A smile is the source of the river of peace! O! TechnoWise!


Tuesday, March 17, 2020

ತಂತ್ರಜ್ಞ ತ್ರಿಪದಿಗಳು-೫೬೮ ಪರಿಪೂರ್ಣತೆ - ಹಿರಿಮೆ ಗರಿಮೆ


ತಂತ್ರಜ್ಞ ತ್ರಿಪದಿಗಳು-೫೬೮ ಪರಿಪೂರ್ಣತೆ - ಹಿರಿಮೆ ಗರಿಮೆ
ಇರುವ ದಾರಿಯನಂತ ಪರಿಪೂರ್ಣತೆಯ ಕಡೆಗೆ!
ಗುರಿಯತ್ತ  ಪಯಣಿಸುತ ಎಲ್ಲಿ ಇಳಿದರು ಅಲ್ಲೆ
ಹಿರಿಮೆ ಗರಿಮೆಗಳ ನಿಲ್ದಾಣ! ತಂತ್ರಜ್ಞ!
TechnoWise Tripods-568 PERFECTION - EXCELLENCE
The road to Perfection is infinetely long!
Be travelling keeping the goal in mind, and wherever you get down,
Be assured it's one of the stations of Excellence!

Monday, March 16, 2020

ತಂತ್ರಜ್ಞ ತ್ರಿಪದಿಗಳು-೫೬೭ ಕರೊನಾ ಗುಡುಗಿದಾಗ-


ತಂತ್ರಜ್ಞ ತ್ರಿಪದಿಗಳು-೫೬೭ ಕರೊನಾ ಗುಡುಗಿದಾಗ-
ಗುಡುಗೆ ಕರೊನಾ ಅಣುವು, ಗುಡಿ ಚರ್ಚು ಮಸಜೀದಿ,
ಉಡುಪಿ ವೆಟಿಕಾನ್‌ ಮೆಕ್ಕ, ಮರೆಯಾಗಿ, -ಆಸ್ಪತ್ರೆ
ಗುಡಿಯಾಗಿ- ವೈದ್ಯ ಪೂಜಾರಿ! ತಂತ್ರಜ್ಞ! 
TechnoWise Tripods-567 WHEN CORONA ROARS- 
When the Corona virus roars, Temple Church and Mosque
Udipi Vetican Mecca all go to the Background and Hospitals
Become Temples of worship and Doctors become the Priests! O! TechnoWise!



Sunday, March 15, 2020

ತಂತ್ರಜ್ಞ ತ್ರಿಪದಿಗಳು-೫೬೬ ಕರೊನಾ-ಎಚ್ಚರಿಕೆ ಗಂಟೆ!



ತಂತ್ರಜ್ಞ ತ್ರಿಪದಿಗಳು-೫೬೬ ಕರೊನಾ-ಎಚ್ಚರಿಕೆ ಗಂಟೆ!
ಕಿಚ್ಚಿಟ್ಟು ದೋಚದಿರಿ ಹಚ್ಚಹಸುರಿಳೆಯ ಸಿರಿ!
ಕಚ್ಚಾಡಿ ಸಾಯದಿರಿ! ಸಮರಸವ ಹೆಚ್ಚಿಸಿರಿ!
ಎಚ್ಚರಿಕೆ ಗಂಟೆ ಮನುಕುಲಕೆ! ತಂತ್ರಜ್ಞ!
TechnoWise Tripods-566 CORONA- WARNING  BELL
Don't set fire and plunder the greenery wealth of mother earth!
Don't fight and kill each other! Augment peace and harmony!
Realize that the Corona is a warning bell to mankind! O! TechnoWise!

Saturday, March 14, 2020

ತಂತ್ರಜ್ಞ ತ್ರಿಪದಿಗಳು-೫೬೫ ವಿದ್ಯುದ್ದೀಪ - ಮಿಂಚುಹುಳ


ತಂತ್ರಜ್ಞ ತ್ರಿಪದಿಗಳು-೫೬೫ ವಿದ್ಯುದ್ದೀಪ - ಮಿಂಚುಹುಳ
ಇಚ್ಛಿಸಿದ ಪರಿ ಪರರು, ಸ್ವಿಚ್ಚು ಹಾಕಲು ಬೆಳಗಿ
ಸ್ವಿಚ್ಚು ತೆಗೆದಾಗ ನಂದುವ ದೀಪವಾಗುವೆಯ?
ಸ್ವೇಚ್ಛೆಯಾ ಮಿಂಚುಹುಳವಾಗು! ತಂತ್ರಜ್ಞ!
TechnoWise Tripods-565 ELECTRIC  LAMP  - GLOW  WORM
Do you want to become like an Electric Lamp,
Lighting up when someone switches on and be extinguished when switched off?
Instead be a natural self-willed Glow Worm! O! technoWise!


Thursday, March 12, 2020

ತಂತ್ರಜ್ಞ ತ್ರಿಪದಿಗಳು-೫೬೪ ಹೊಸ ಕಲಿಕೆ


ತಂತ್ರಜ್ಞ ತ್ರಿಪದಿಗಳು-೫೬೪ ಹೊಸ ಕಲಿಕೆ
ಬದುಕಿನಲಿ ಹೊಸಕಲಿಕೆ ಚಿದಾಕಾಶ ವಿಹಾರ!
ಸದಾ ಕೌತುಕಭರಿತ ನಿತ್ಯಶೈಶವವಿರಲು
ಮುದುಕನಾದರು ನಿತ್ಯಯುವಕ! ತಂತ್ರಜ್ಞ!
TechnoWise Tripods-564 LEARNING  NEW
Learning something new is like a pleasant ramble in the mental sky!
When one is always curious like a child,
Even the old become evergreen young! O! TechnoWise!



Wednesday, March 11, 2020

ತಂತ್ರಜ್ಞ ತ್ರಿಪದಿಗಳು-೫೬೩ ಹಾಗಲಕಾಯಿ!


ತಂತ್ರಜ್ಞ ತ್ರಿಪದಿಗಳು-೫೬೩ ಹಾಗಲಕಾಯಿ!
ಹೀಗೇಕೆ ಬ್ರಹ್ಮ ಕಹಿ ಹಾಗಲವ ಸೃಷ್ಟಿಸಿದ?
ಹಾಗೆನ್ನದಿರು! ಸಕ್ಕರೆಯ ರೋಗರಾವಣಗೆ
ಆಗಿರುವುದದು ರಾಮಬಾಣ! ತಂತ್ರಜ್ಞ!
TechnoWise Tripods-563 BITTER  GOURD!
Why did Brahma create the Bitter Gourd?
Talk not like that! For killing the diabolic diabetic Ravana,
It is a lethal arrow of Rama! O! TechnoWise!


Tuesday, March 10, 2020

ತಂತ್ರಜ್ಞ ತ್ರಿಪದಿಗಳು-೫೬೨ ಮನಸು - ಎದೆ


ತಂತ್ರಜ್ಞ ತ್ರಿಪದಿಗಳು-೫೬೨ ಮನಸು - ಎದೆ
ವಿಷವು ಮನದಿಂದ! ಪೀಯೂಷ ಎದೆಹೂವಿಂದ!
ವಶವಾಗದಿರಲಿ ಎದೆ ಮನಸಿನಾಳ್ವಿಕೆಯಿಂದ!
ಶಿಷ್ಯನಾಗಲಿ ಮನಸು ಎದೆಗೆ! ತಂತ್ರಜ್ಞ!
TechnoWise Tripod-562 MIND - HEART
All poisons start from the Mind, and all nectars from the Heart!
Never allow your Mind to rule your Heart!
Let your Heart be the Guru of your Mind! O! TechnoWise!



Monday, March 9, 2020

ತಂತ್ರಜ್ಞ ತ್ರಿಪದಿಗಳು-೫೬೧ ಭವಿತವ್ಯ


ತಂತ್ರಜ್ಞ ತ್ರಿಪದಿಗಳು-೫೬೧ ಭವಿತವ್ಯ
ಗ್ರಹಚಲನೆಗಳನಲ್ಲ, ಗೃಹದ ವಾಸ್ತುವನಲ್ಲ,
ಬಹುಪರಿಯ ಎಡೆಬಿಡದ ಯೋಚನೆಯ ಗಮನಿಸಲು
ಗ್ರಹಿಸುವುದು ಸಾಧ್ಯ ಭವಿತವ್ಯ! ತಂತ್ರಜ್ಞ!
TechnoWise Tripods-561 DESTINY
Neither the position of the planets, nor the architecture of the house,
But if you closely watch your incessant thoughts,
You'll see your Destiny! O! TechnoWise!

Saturday, March 7, 2020

ತಂತ್ರಜ್ಞ ತ್ರಿಪದಿಗಳು-೫೬೦ ಮಹಿಳಾದಿನದ ಶುಭಾಶಯಗಳು


ತಂತ್ರಜ್ಞ ತ್ರಿಪದಿಗಳು-೫೬೦ ಮಹಿಳಾದಿನದ ಶುಭಾಶಯಗಳು
ನಮನ ಬಲ ಶ್ರೀ ವಿದ್ಯೆ,  ಉಮೆ ರಮೆ ಸರಸ್ವತಿಗೆ
ಅಮಲ ಪ್ರೀತಿಯ ಮನೆಯ ರಾಜ್ಯ ರಾಷ್ಟ್ರದ ಬುವಿಯ
ಅಮ್ಮಂದಿರೆಲ್ಲರೆಗೆ ನಮನ! ತಂತ್ರಜ್ಞ!
TechnoWise Tripods-560 WOMEN'S DAY GREETINGS
Obeisance to Goddesses Uma Rama and Saraswathi of Power Wealth and Knowledge!
Obeisance to mothers of all Homes Languages Countries and Earth!
Who are all full of pure love! O! TechnoWise!



ತಂತ್ರಜ್ಞ ತ್ರಿಪದಿಗಳು-೫೫೯ ನಾಕ - ನರಕ


ತಂತ್ರಜ್ಞ ತ್ರಿಪದಿಗಳು-೫೫೯ ನಾಕ - ನರಕ
ನಾಕವಾಗಿಸಲಿ ಭೂಲೋಕವನು ಎಂದೆಣಿಸಿ,
ಆ ಕರ್ತ ಕಳಿಸಿರಲು ನಿನ್ನನಿಲ್ಲಿಗೆ, ನೀನು
ಯಾಕೆ ಮಾಡುವೆಯಿದನು ನರಕ? ತಂತ್ರಜ್ಞ!
TechnoWise Tripods-559 HEAVEN - HELL
The creator sent you to this beautiful earth
Hoping that that you would make this another Heaven!
Why are you making this a veritable Hell? O! TechnoWise!


Friday, March 6, 2020

ತಂತ್ರಜ್ಞ ತ್ರಿಪದಿಗಳು-೫೫೮ ನಟನೆ... ಘಟನೆ

ತಂತ್ರಜ್ಞ ತ್ರಿಪದಿಗಳು-೫೫೮ ನಟನೆ... ಘಟನೆ
ದಿಟದಿ ನಲಿವಿರುವಂತೆ ತುಟಿಯರಳಿ ನಗುಮೊಗವ
ನಟಿಸುವಭ್ಯಾಸ ಹರುಷವ ಮುಂದೆ ಹರಿಸುವುದು!
ನಟನೆ ಘಟನೆಗೆ ಆದಿಮೂಲ! ತಂತ್ರಜ್ಞ!
TechnoWise Tripods-558 FAKE IT... MAKE IT
Make your lips open up with a broad smile as if your heart is full of Joy!
The act of faking a smile will be a spring for the flow of real happiness!
Fake it till you really make it! O! TechnoWise!

Thursday, March 5, 2020

ತಂತ್ರಜ್ಞ ತ್ರಿಪದಿಗಳು-೫೫೭ ಆಶಾವಾದಿ - ನಿರಾಶಾವಾದಿ

ತಂತ್ರಜ್ಞ ತ್ರಿಪದಿಗಳು-೫೫೭ ಆಶಾವಾದಿ - ನಿರಾಶಾವಾದಿ

ನೀನೆ ಆಶಾವಾದಿ- ಮಾನವತೆ ದಿವ್ಯವೆನೆ!
ನೀ ನಿರಾಶಾವಾದಿ- ಪಶುವಂತೆ ಮನುಜನೆನೆ!
ಮಾನವತೆ ಸಾಧ್ಯತೆಯೆ ಭವ್ಯ! ತಂತ್ರಜ್ಞ!

TechnoWise Tripods-557 OPTIMIST - PESSIMIST

An Optimist you're, if you see divinity in humanity!
If you equate humans with animals, verily you're a Pessimist!
The possibilities of humanity are really sublime! O! TechnoWise!