Friday, August 31, 2018

ತಂತ್ರಜ್ಞ ತ್ರಿಪದಿಗಳು-೪೦೩ ನಗುವು- ಅಂತಶ್ಶಕ್ತಿ ಚಿಹ್ನೆ


ತಂತ್ರಜ್ಞ ತ್ರಿಪದಿಗಳು-೪೦೩ ನಗುವು- ಅಂತಶ್ಶಕ್ತಿ ಚಿಹ್ನೆ
ದುಗುಡವಿರದವರಲ್ಲ ಮುಗುಳುನಗುವವರೆಲ್ಲ!
ಸೊಗದ ಉಷೆ ಬರುವ ನಂಬಿಕೆ ಉಳ್ಳವರು ಅವರು!
ನಗುವು ಅಂತಶ್ಶಕ್ತಿ ಚಿಹ್ನೆ! ತಂತ್ರಜ್ಞ.
TechnoWise Tripods-403 SMILE - SYMBOL OF INNER STRENGTH
All those people with smiles are not free from difficulties!
It's only that they are hopeful of the arrival of the dawn of good times!
A smile is the symbol of inner strength! O! TechnoWise!


Thursday, August 30, 2018

ತಂತ್ರಜ್ಞ ತ್ರಿಪದಿಗಳು-೪೦೨ ಗೊಂಬೆಮನೆ


ತಂತ್ರಜ್ಞ ತ್ರಿಪದಿಗಳು-೪೦೨ ಗೊಂಬೆಮನೆ
ಮಗುವೊಂದು ಮನೆಯೊಳಗೆ ಬಗೆಮೆಚ್ಚಿ ಗೊಂಬೆಮನೆ
ನಗುತ ಕಟ್ಟುವ ಪರಿಯೆ ನಿನ್ನ ಕಿರುಜಗವ ಹಿರಿ
ಜಗದೊಳಗೆ ನೀ ಕಟ್ಟಿಕೊಳುವೆ ತಂತ್ರಜ್ಞ.
TechnoWise Tripods-402 DOLL HOUSE
Like a child building a Doll House inside the big house,
You live in a small universe of your own creation
Inside this vast universe of the unseen creator! O! TechnoWise!






Wednesday, August 29, 2018

ತಂತ್ರಜ್ಞ ತ್ರಿಪದಿಗಳು-೪೦೧ ನಗುವಿನ ಉಡುಪು


ತಂತ್ರಜ್ಞ ತ್ರಿಪದಿಗಳು-೪೦೧ ನಗುವಿನ ಉಡುಪು
ಒಂದೆರಡು ಕ್ಷಣ ನಗಲು, ಚಂದ ಛಾಯಾಚಿತ್ರ!
ಚಂದವಾಗದೆ ಬಾಳ ಚಿತ್ರ ನಗುತಿರೆ ನಿತ್ಯ?
ಅಂದಾತಿಶಯ ನಗುವಿನುಡುಪು! ತಂತ್ರಜ್ಞ.
TechnoWise Tripods-401 DRESS OF SMILE
A few seconds of smile can make a photograph more beautiful!
Will it not make your life more beautiful when daily you smile?
A smile is the most gorgeous dress one can wear! O! TechnoWise!


Tuesday, August 28, 2018

ತಂತ್ರಜ್ಞ ತ್ರಿಪದಿಗಳು-೪೦೦ ಅವಕಾಶಗಳು


ತಂತ್ರಜ್ಞ ತ್ರಿಪದಿಗಳು-೪೦೦ ಅವಕಾಶಗಳು
ಒದಗಿಸುವುದೆಲ್ಲದಕು ಬದುಕು ಬಹು ಅವಕಾಶ!
ಹದವರಿತು ಕಾಣ್ಕನಸು! ದುಡಿ ಮಾಡಲದ ನನಸು!
ಬದುಕಿಗಿಲ್ಲೆರಡು ಅವಕಾಶ! ತಂತ್ರಜ್ಞ.
TechnoWise Tripods-400 CHANCES
There are many chances for everything in life!
With full awareness, dream something big, and work to make it a reality! 
There is no chance of another life! O! TechnoWise! 




Monday, August 27, 2018

ತಂತ್ರಜ್ಞ ತ್ರಿಪದಿಗಳು-೩೯೯ ವಿಲಯ ಗದ್ದಲ! - ಸೃಷ್ಟಿ ಮೌನ!


ತಂತ್ರಜ್ಞ ತ್ರಿಪದಿಗಳು-೩೯೯ ವಿಲಯ ಗದ್ದಲ! - ಸೃಷ್ಟಿ ಮೌನ!
ಮೊಳೆವಾಗ ನಿಶ್ಶಬ್ದ! ಬೆಳೆವಾಗ ನಿಶ್ಶಬ್ದ!
ಬಲು ಶಬ್ದ ಕಡಿವಾಗ! ಮತ್ತೆ ಮರ ಬಿದ್ದಾಗ!
ವಿಲಯ ಗದ್ದಲ! ಸೃಷ್ಟಿ ಮೌನ! ತಂತ್ರಜ್ಞ!
TechnoWise Tripods-399 NOISY DESTRUCTION!- silent creation!
A seed germinates silently! and further grows silently!
A big sound when a tree is cut! and a huge thud when it falls!
Destruction is noisy! whereas Creation is Silent! O! TechnoWise!










Sunday, August 26, 2018

ತಂತ್ರಜ್ಞ ತ್ರಿಪದಿಗಳು-೩೯೮ ಪ್ರತ್ಯೇಕತೆ


ತಂತ್ರಜ್ಞ ತ್ರಿಪದಿಗಳು-೩೯೮ ಪ್ರತ್ಯೇಕತೆ
ನಿತ್ಯ ಸುಖಿಸಲು ಇಂದು ಹತ್ಯಾರು ನೂರು ವಿಧ!
ದೈತ್ಯ ಜ್ಞಾನದ ಜತೆಗೆ ಖಿನ್ನತೆಗೆ ಕಾರಣವು
ಪ್ರತ್ಯೇಕತೆಯ ಮಿಥ್ಯ ಭಾವ! ತಂತ್ರಜ್ಞ.
TechnoWise Tripods-398 EXCLUSIVENESS
Present era has so many gadgets and so many comforts for enjoyment!
The reason for so much of depression in the midst of voluminous knowledge
Is the false feeling of exclusiveness from others! O! TechnoWise!







Friday, August 24, 2018

ತಂತ್ರಜ್ಞ ತ್ರಿಪದಿಗಳು-೩೯೭ ಮನಸ್ಸು - ಮಾತು


ತಂತ್ರಜ್ಞ ತ್ರಿಪದಿಗಳು-೩೯೭ ಮನಸ್ಸು - ಮಾತು
ಇಡಬೇಕು ಅಂತರವ ನುಡಿ-ಮನಸುಗಳ ನಡುವೆ!
ನುಡಿಗಿಲ್ಲ ಮನಕಿರುವ ಬದಲಾಗುವಾಯ್ಕೆಗಳು!
ನುಡಿ ಬಾಯಿಬಿಲ್‌ ಬಿಟ್ಟ ಬಾಣ! ತಂತ್ರಜ್ಞ!
TechnoWise Tripods-397 MIND - SPEECH
Keep sufficient distance between Mind and Speech!
The spoken Words never have the options to change like the Mind!
Words are the arrows released from the bow of the mouth! O! TechnoWise!

Thursday, August 23, 2018

ತಂತ್ರಜ್ಞ ತ್ರಿಪದಿಗಳು-೩೯೬ ಅಮ್ಮ - ಅನ್ನ


ತಂತ್ರಜ್ಞ ತ್ರಿಪದಿಗಳು-೩೯೬ ಅಮ್ಮ - ಅನ್ನ
ಸುಮ್ಮಾನದಲಿ ತಿನ್ನು ಅಮ್ಮನೊಲವಿನ ಅಡಿಗೆ!
ಅಮ್ಮ ಕೆಲವರಿಗಿಲ್ಲ! ಅನ್ನ ಕೆಲವರಿಗಿಲ್ಲ!
ದುಮ್ಮಾನ! ಅವೆರಡೂ ಇರದೆ! ತಂತ್ರಜ್ಞ.
TechnoWise Tripods-396 MOTHER - FOOD
Relish and eat the food prepared with love by the mother!
Some don't have the mother! and some don't have the food!
What a pity! when both are absent! O! TechnoWise!

Wednesday, August 22, 2018

ತಂತ್ರಜ್ಞ ತ್ರಿಪದಿಗಳು-೩೯೫ ದಿವ್ಯ ಔಷಧಿ


ತಂತ್ರಜ್ಞ ತ್ರಿಪದಿಗಳು-೩೯೫ ದಿವ್ಯ ಔಷಧಿ
ವಿಷ ಬೆರಕೆಯಿರದ ಪೀಯೂಷಸಮ ಬಹುದಿವ್ಯ
ಔಷಧಿಯು ನಿನ್ನಲಿದೆ! ಅಂಗಡಿಯಲದು ಸಿಗದು!
"ಹಸನ್ಮುಖ"ವೆಂದದರ ಹೆಸರು! ತಂತ್ರಜ್ಞ.
TechnoWise Tripods-395 DIVINE MEDICINE
The best medicine without any side effects and poisonous elements,
Is always with you, and is not available in any of the medical stores!
It is called 'A Smiling Face', O! TechnoWise!


Tuesday, August 21, 2018

ತಂತ್ರಜ್ಞ ತ್ರಿಪದಿಗಳು-೩೯೪ ಸತ್ಯ - ಅಸತ್ಯ


ತಂತ್ರಜ್ಞ ತ್ರಿಪದಿಗಳು-೩೯೪ ಸತ್ಯ - ಅಸತ್ಯ
ಸತ್ಯವೆನಿಸಲು ನೀನಸತ್ಯ ಪೋಷಿಸಬೇಕು!
ನಿತ್ಯ ಕೊಡಬೇಕದಕೆ ಹುಸಿಯ ರಸಭೋಜನವ!
ಸತ್ಯವಾನ್‌ ನಿತ್ಯೋವಾಸಿ! ತಂತ್ರಜ್ಞ.
TechnoWise Tripods-394 TRUTH - UNTRUTH
To keep a lie as truth, you'll have to constantly nurture it!
It requires daily feed of dainty dishes of lies!
Ever-fasting truth exists without nurturing! O! TechnoWise!

Monday, August 20, 2018

ತಂತ್ರಜ್ಞ ತ್ರಿಪದಿಗಳು-೩೯೩ ವಸ್ತು-ವ್ಯಕ್ತಿ


ತಂತ್ರಜ್ಞ ತ್ರಿಪದಿಗಳು-೩೯೩ ವಸ್ತು-ವ್ಯಕ್ತಿ
ಒಲವಿಗೆಂದಿರೆ ವ್ಯಕ್ತಿ, ಬಳಕೆಗೆಂದಿರೆ ವಸ್ತು,
ಬಳಸಿ ವ್ಯಕ್ತಿಯ, ವಸ್ತುವಲಿ ಒಲವನಿಡುವುದೇ
ಇಳೆಯೆಲ್ಲ ಗೊಂದಲದ ಮೂಲ! ತಂತ್ರಜ್ಞ.
TechnoWise Tripods-393 THINGS - PEOPLE
People are meant to be loved, and things are meant to be used!
But now, as things are being loved, and people are being used,
The world is replete with chaos! O! TechnoWise!

Sunday, August 19, 2018

ತಂತ್ರಜ್ಞ ತ್ರಿಪದಿಗಳು-೩೯೨ ಪರಸ್ಪರ ಅರಿವು


ತಂತ್ರಜ್ಞ ತ್ರಿಪದಿಗಳು-೩೯೨ ಪರಸ್ಪರ ಅರಿವು
ನಯವಿರದು ಸಹಬಾಳ್ವೆ ಭಯ ಪರಸ್ಪರವಿರಲು!
ಭಯಕೆ ಕಾರಣ ಕೊರತೆ  ಸಂವಹನವಿಬ್ಬರಲಿ!
ನಯನಗಳು ಸೇರೆ ಅಲ್ಲರಿವು! ತಂತ್ರಜ್ಞ.
TechnoWise Tripods-392 MUTUAL UNDERSTANDING
When people fear each other, they fail to get along!
People fear each other when one doesn't know the other!
Meeting of the eyes brings mutual understanding! O! TechnoWise!






Saturday, August 18, 2018

ತಂತ್ರಜ್ಞ ತ್ರಿಪದಿಗಳು-೩೯೧ ಶ್ರೇಷ್ಠತಮ ನಾಯಕ


ತಂತ್ರಜ್ಞ ತ್ರಿಪದಿಗಳು-೩೯೧ ಶ್ರೇಷ್ಠತಮ ನಾಯಕ
ಕಷ್ಟತಮವಾದುದನು ಸ್ಪಷ್ಟ ನಿರ್ವಹಿಸುತಿರೆ,
ನಷ್ಟಕೂಪದ ಸ್ಥಿತಿಯ ಲಾಭನಭಕೆತ್ತರಿಸೆ,
ಶ್ರೇಷ್ಠತಮ ನಾಯಕನ ಪಟ್ಟ! ತಂತ್ರಜ್ಞ!
TechnoWise Tripods-391 BEST LEADERSHIP
If the worst is handled in the best way,
If the status is lifted from the nadir of loss to the pinnacle of gain,
That person alone deserves the throne of best leadership! O! TechnoWise!

Friday, August 17, 2018

ತಂತ್ರಜ್ಞ ತ್ರಿಪದಿಗಳು-೩೯೦ ಭಾರತರತ್ನ


ತಂತ್ರಜ್ಞ ತ್ರಿಪದಿಗಳು-೩೯೦ ಭಾರತರತ್ನ
ಶತ್ರುತ್ವ ಮರುಧರೆಯ ಮಿತ್ರತ್ವ ಓಯಸಿಸ್‌,
ಚಿತ್ರಪದ್ಯವು ಗದ್ಯ ರಾಜಕೀಯದ ನಡುವೆ,
ಅತುಲ ಮೌಲ್ಯದ ಭರತರತ್ನ! ತಂತ್ರಜ್ಞ.
TechnoWise Tripods-390 Bharata Ratna
Like an oasis of friendship in the midst of a desert of animosity,
And a beautiful poem in the middle of the dry prose of politics,
He was an invaluable Jewel of India! O! TechnoWise!

Thursday, August 16, 2018

ತಂತ್ರಜ್ಞ ತ್ರಿಪದಿಗಳು-೩೮೯ ಹತ್ತು ತಲೆ! - ಒಂಬತ್ತು ಟೋಪಿ!


ತಂತ್ರಜ್ಞ ತ್ರಿಪದಿಗಳು-೩೮೯ ಹತ್ತು ತಲೆ! - ಒಂಬತ್ತು ಟೋಪಿ!
ಹತ್ತು ತಲೆಗಳಿಗೆ ಒಂಬತ್ತು ಟೋಪಿಗಳಿರಲು,
ಕತ್ತರಿಸೆ ಒಂದು ತಲೆ, ಬಲು ಘೋರ! ಹೊಲಿಯೆ ನೀ
ಹತ್ತನೆಯ ಟೋಪಿ, ಪರಿಹಾರ! ತಂತ್ರಜ್ಞ!
TechnoWise Tripods-389 TEN HEADS! - NINE HATS!
When there are ten Heads and nine Hats,
Cutting off one Head is inhuman!
Stitching one more Hat is the solution! O! TechnoWise!






Tuesday, August 14, 2018

ತಂತ್ರಜ್ಞ ತ್ರಿಪದಿಗಳು-೩೮೮ ಅಚ್ಚ ಹೊಸತು


ತಂತ್ರಜ್ಞ ತ್ರಿಪದಿಗಳು-೩೮೮ ಅಚ್ಚ ಹೊಸತು
ಎಚ್ಚತ್ತು ಈ ಕ್ಷಣವೆ, ಮುಚ್ಚಿ ನಿನ್ನೆಯ ದ್ವಾರ
ಸ್ವಚ್ಛ ಮನದಿಂದ ಭವಿತವ್ಯ ದ್ವಾರವ ತೆರೆದು
ಅಚ್ಚ ಹೊಸಸವಿ ಎದೆಗೆ ಕರೆಯೊ! ತಂತ್ರಜ್ಞ!
TechnoWise Tripods-388 SWEET NOVELTY
Awake at this very moment, close the door to your past,
Open the door to a bright future, with a pure mind,
And invite a sweet novelty to your heart! O! TechnoWise!






Thursday, August 9, 2018

ತಂತ್ರಜ್ಞ ತ್ರಿಪದಿಗಳು-೩೮೭ ಅದ್ಭುತ ಯಂತ್ರ




ತಂತ್ರಜ್ಞ ತ್ರಿಪದಿಗಳು-೩೮೭ ಅದ್ಭುತ ಯಂತ್ರ
ಪರಿಹರಿಸಬೇಕಾದ ಪರಿಪ್ರಶ್ನೆಯಲ್ಲ, ನರ!
ಪರಿವೀಕ್ಷಣಾಯೋಗ್ಯ ಪರಮ ಅದ್ಭುತ ಯಂತ್ರ!
ಪರತತ್ತ್ವವಾಧರಿತ ರೂಪ! ತಂತ್ರಜ್ಞ!
TechnoWise Tripods-387 MARVELLOUS MACHINE
A human is not a tough problem to be resoved!
He is the most marvellous machine worthy of deep perception!
A model based on a divine blue-print! O! TechnoWise!









ತಂತ್ರಜ್ಞ ತ್ರಿಪದಿಗಳು-೩೮೬ ಜ್ಞಾಪನೆ-ಕಲ್ಪನೆ


ತಂತ್ರಜ್ಞ ತ್ರಿಪದಿಗಳು-೩೮೬ ಜ್ಞಾಪನೆ-ಕಲ್ಪನೆ
ಜ್ಞಾಪಕಬಲವು ವರವು, ತಾಪಶಾಪವದಲ್ಲ!
ಕಲ್ಪನೆಯ ಗುರಿ ಚಿಂತೆ ಚಿತೆಯಲ್ಲ, ಸಿರಿಹಣತೆ!
ದೀಪ ಬೆಳಕಿಗೆ, ದಹನಕಲ್ಲ! ತಂತ್ರಜ್ಞ!
TechnoWise Tripods-386 MEMORY and IMAGINATION
Memory is a boon and not a curse of remorse!
Imagination is a divine light, and not a funeral fire of worry!
A lamp is meant for illumination, and not for incineration! O! TechnoWise!




ತಂತ್ರಜ್ಞ ತ್ರಿಪದಿಗಳು-೩೮೫ ಪರಿವರ್ತನೆ


ತಂತ್ರಜ್ಞ ತ್ರಿಪದಿಗಳು-೩೮೫ ಪರಿವರ್ತನೆ

ನಿನ್ನ ಬದಲಿಸೆ ಸೋತು ಸುಣ್ಣವಾಗಿರುವಾಗ,
ಇನ್ನು ಪರರನ್ನೆಂತು ಪರಿವರ್ತಿಸುವೆ ನೀನು?
ಚೆನ್ನ ಹಾರೈಕೆ ಗೈ ಸಾಕು! ತಂತ್ರಜ್ಞ!

TechnoWise Tripods-385 CHANGING

When you have utterly failed to change yourself,
What chance you really have in trying to change others?
What all you can do is to wish them well! O! technoWise!





ತಂತ್ರಜ್ಞ ತ್ರಿಪದಿಗಳು-೩೮೪ ಎರಡು ತುದಿಯುರಿವ ಮೋಂಬತ್ತಿ!


ತಂತ್ರಜ್ಞ ತ್ರಿಪದಿಗಳು-೩೮೪ ಎರಡು ತುದಿಯುರಿವ ಮೋಂಬತ್ತಿ!

ತೆರಳಿ ಹೋದುದ ನೆನೆದು ಕೊರಗುತಿರುವುದರೊಡನೆ,
ಬರುವ ಕಷ್ಟದ ಚಿಂತೆ ಚಿತೆಯುರಿಯುತಿರೆ- ಬಾಳು
ಎರಡು ತುದಿಯುರಿವ ಮೋಂಬತ್ತಿ! ತಂತ್ರಜ್ಞ!

TechnoWise Tripods-384 BURNING A CANDLE FROM BOTH ENDS

When the memory of the past is bringing grief and repentance,
And the imagination of the future is is igniting pyres of worries,
Life is like burning a candle from both ends! O! TechnoWise!



Tuesday, August 7, 2018

ತಂತ್ರಜ್ಞ ತ್ರಿಪದಿಗಳು-೩೮೩ ಪ್ರೀತಿಯಮೃತ


ತಂತ್ರಜ್ಞ ತ್ರಿಪದಿಗಳು-೩೮೩ ಪ್ರೀತಿಯಮೃತ
ಹಸಿರು ಮರಗಿಡಬಳ್ಳಿ, ಹಸನಿರುವ ನದಿಸರಸಿ
ಪಶುಪಕ್ಷಿ ಜನಕೋಟಿ ಬೇಸತ್ತಿಹುದು ಜಗದಿ
ತೃಷೆಗೆ ದೊರಕದೆ ಪ್ರೀತಿಯಮೃತ! ತಂತ್ರಜ್ಞ!
TechnoWise Tripods-383 NECTAR OF LOVE
The greenery of forests and crystal clear waters of lakes and rivers,
And billions of animals, birds and humans are in weariness
Bereft of the nectar of love for quenching their thirsts! O! TechnoWise!



Monday, August 6, 2018

ತಂತ್ರಜ್ಞ ತ್ರಿಪದಿಗಳು-೩೮೨ ಗೆದ್ದು ಸೋಲುವ ಯುದ್ಧ!


ತಂತ್ರಜ್ಞ ತ್ರಿಪದಿಗಳು-೩೮೨ ಗೆದ್ದು ಸೋಲುವ ಯುದ್ಧ!
ಮುದ್ದು ಕುವರರೆ ಸಾಯೆ, ಗೆದ್ದರೇ ಪಾಂಡವರು?
ಬಿದ್ದು ಸತ್ತರು ಸೋತ ಕೌರವರು! ಯುದ್ಧವಿದು 
ಗೆದ್ದು ಸೋಲುವ, ಸೋತು ಸಾವ! ತಂತ್ರಜ್ಞ!
TechnoWise Tripods-382 WARS OF DEFEAT AFTER VICTORY
When all their children died, were Pandavas really victorious in Mahabharata war?
And the entire race of Duryodhana was wiped out when defeated!
In wars, the victoious one loses, and the defeated one dies! O! TechnoWise!