Tuesday, June 27, 2017

ತಂತ್ರಜ್ಞ ತ್ರಿಪದಿಗಳು-78 ಬದುಕು ಮೋಟಾರ್ ಕಾರು

ತಂತ್ರಜ್ಞ ತ್ರಿಪದಿಗಳು-78 ಬದುಕು ಮೋಟಾರ್ ಕಾರು
ಬದುಕು ಮೋಟಾರ್ ಕಾರು, ಅದರ ಮಾಲಿಕ ನೀನು;
ಚದುರ ಚಾಲಕ ಬುದ್ಧಿ, ಮನಸು ಚಾಲಕಚಕ್ರ;
ಅದರ ಮೇಲಿನ ಹಿಡಿತ ಮುಖ್ಯ ತಂತ್ರಜ್ಞ.
LIFE- A MOTOR CAR
Life is a car and you are its owner;
Clever driver is Intelligence, and mind the steering wheel;
Most important is the steering control.

Monday, June 26, 2017

ತಂತ್ರಜ್ಞ ತ್ರಿಪದಿಗಳು-77 ರಾಹುಕಾಲ

ತಂತ್ರಜ್ಞ ತ್ರಿಪದಿಗಳು-77 ರಾಹುಕಾಲ
ಪರರ ಸುಖ ನೀ ನುಂಗಿ, ಪರರು ನಿನ್ನನು ನುಂಗ
ಹೊರಟ ಕಾಲದ ಕುರಿತು ವಹಿಸು ಕಟ್ಟೆಚ್ಚರವ;
ಅರಿವಿರಲಿ ಅದು ರಾಹುಕಾಲ ತಂತ್ರಜ್ಞ.
INAUSPICIOUS TIME
Beware of the time you spoil the happiness of others and
the time others try to spoil your happiness;
Be aware that it is an inauspicious time.

Saturday, June 24, 2017

ತಂತ್ರಜ್ಞ ತ್ರಿಪದಿ-76 ಸಂಬಂಧಮೌಲ್ಯ

ತಂತ್ರಜ್ಞ ತ್ರಿಪದಿ-76 ಸಂಬಂಧಮೌಲ್ಯ
ನೂಕಿದಂತೆಯೆ ಸಮಯ? ಸಾಕಾಯ್ತೆ ಸಂಬಂಧ?
ಬೇಕಾದುದನು ಕೊಡದೆ, ನಿನಗಿಂದು ನೀಡಿತದು
ಬೇಕಿಲ್ಲವಾದುದರ ಕಲಿಕೆ! ತಂತ್ರಜ್ಞ.
VALUE OF RELATIONSHIP?
Is it waste of time? Are you fed up with this relationship?
If it didn't bring what you needed, it has given you
The lessons of what you don't really need.

Wednesday, June 21, 2017

ತಂತ್ರಜ್ಞ ತ್ರಿಪದಿಗಳು-75 ಕ್ಷಣಗಳು

ತಂತ್ರಜ್ಞ ತ್ರಿಪದಿಗಳು-75 ಕ್ಷಣಗಳು
ಬಂದ ಕ್ಷಣಗಣವೆಲ್ಲ ಮುಂದೋಡುತಿರೆ ನಿಲದೆ
ಹಿಂದುಳಿಯುವುದು ರಸದ ಸಿಹಿ ವಿರಸ ಕಹಿ ಮಾತ್ರ
ನಂದರಸದಲಿ ಕ್ಷಣವನದ್ದು ತಂತ್ರಜ್ಞ.
MOMENTS
One after the other, the moments pass on;
Sweet or bitter experiences only remain;
In joyous sweetness let every moment be drenched

ತಂತ್ರಜ್ಞ ತ್ರಿಪದಿ-74 ಜ್ಞಾನ-ಮಾಹಿತಿ

ತಂತ್ರಜ್ಞ ತ್ರಿಪದಿ-74 ಜ್ಞಾನ-ಮಾಹಿತಿ
ಒಂದು ಹಂಸದ ಸರಸಿ ಸುಂದರತರವು ನೂರ
ವೊಂದು ಬಕಗಳಿಗಿಂತ; ಒಂದು ಜ್ಞಾನದ ಗರಿಯು
ಚಂದ ಮಾಹಿತಿಯ ಗಿರಿಗಿಂತ ತಂತ್ರಜ್ಞ.
KNOWLEDGE-INFORMATION
A lake with one swan is more beautiful than
a lake with one hundred cranes;
Similarly one feather of Knowledge
is prettier than a mountain of Information.

Friday, June 16, 2017

ತಂತ್ರಜ್ಞ ತ್ರಿಪದಿ-73 ಅವಸ್ಥಾತ್ರಯ

ತಂತ್ರಜ್ಞ ತ್ರಿಪದಿ-73 ಅವಸ್ಥಾತ್ರಯ
ಬಲ, ಸಮಯವೆರಡಿರುವ ಎಳವೆಯಲಿ ಧನವಿಲ್ಲ;
ಬಲ, ಧನದ ನಡುಹರಯದಲಿ ಸಮಯವಿನಿತಿಲ್ಲ;
ಬಲವೊಂದೆ ಇರದ ವೃದ್ಧಾಪ್ರ ತಂತ್ರಜ್ಞ.
3 STAGES OF LIFE
In Youth, you have all Time and Energy, but no Money;
In Adulthood, you have Money and Energy, but no Time;
In Old age, You have Money and Time, but no Energy.

ತಂತ್ರಜ್ಞ ತ್ರಿಪದಿ-72 ಯಶಸ್ವೀ ಜೀವನ

ತಂತ್ರಜ್ಞ ತ್ರಿಪದಿ-72 ಯಶಸ್ವೀ ಜೀವನ
ದಶದಿಕ್ಕುಗಳ ಆಸ್ತಿ, ಕಿಸೆಯ ಹಣದಲ್ಲಿಲ್ಲ-
ಖುಷಿ ಕೊಡುವ ಪರಜೀವನೋತ್ಕರ್ಷ ಸಾಧನೆಯೆ
ಯಶಸ್ವೀ ಜೀವನದ ಮಾನ ತಂತ್ರಜ್ಞ.
SUCCESS IN LIFE
Success isn't about how many acres of land or
How much money you make;
It's about the happiness you give and


Difference you make in people's lives.

Saturday, June 10, 2017

ತಂತ್ರಜ್ಞ ತ್ರಿಪದಿ-71 ಬಣ್ಣದ ಗುಟ್ಟು ಜೀನ್ ಗಳಲ್ಲಿ?

ತಂತ್ರಜ್ಞ ತ್ರಿಪದಿ-71 ಬಣ್ಣದ ಗುಟ್ಟು ಜೀನ್ ಗಳಲ್ಲಿ?
ಬೆರೆತಿಲ್ಲ ಬೀಜದಲಿ, ನೆರೆದಿಲ್ಲ ನೀರಿನಲಿ,
ಹರಡಿಲ್ಲ ಮಣ್ಣಿನಲಿ, ಸುಮದ ಬಣ್ಣದ ಗುಟ್ಟು
ಇರಿಸಿದೆಯ ಜೀನುಗಳಲದನು? ತಂತ್ರಜ್ಞ!
SECRET OF COLORS IN GENES?
Neither in the seeds, nor in the water,
The secret of colors, not spread in the soil;
In the Genes, have you hidden them?

Thursday, June 8, 2017

ತಂತ್ರಜ್ಞ ತ್ರಿಪದಿ-70 ಮೂರಳತೆಯ ಚಿತ್ರ

ತಂತ್ರಜ್ಞ ತ್ರಿಪದಿ-70 ಮೂರಳತೆಯ ಚಿತ್ರ
ಪತ್ರಪಾತ್ರೆಗೆ ತುಂಬಿ ಮಿತ್ರಕಿರಣದ ಪುಂಜ
ಚಿತ್ರ ಮೂರಳತೆಯಲಿ ಬರೆದ ಹೂಹಣ್ಣುಗಳ
ಚಿತ್ರಗಾರಳು ಹಸಿರು ಬಳ್ಳಿ ತಂತ್ರಜ್ಞ.
3-D PICTURES
In the cup of leaves, filling the sun rays
Paints three dimensional pictures of flowers and fruits
The painter is the green creeper.

Tuesday, June 6, 2017

ತಂತ್ರಜ್ಞ ತ್ರಿಪದಿಗಳು-69 ಕವಲೊಡೆದ ಹಾದಿಗಳು

ತಂತ್ರಜ್ಞ ತ್ರಿಪದಿಗಳು-69 ಕವಲೊಡೆದ ಹಾದಿಗಳು
ಬುವಿ ಮೇಲೆ ಎದುರಾಗೆ ಕವಲೊಡೆದ ಹಾದಿಗಳು-
ಸವೆದ ದಾರಿಯ ಬಿಟ್ಟು, ಹಿಡಿ ಹೆಜ್ಜೆಯಿರದ ಪಥ;
ಭವಿತವ್ಯವಾಗುವುದು ಭವ್ಯ ತಂತ್ರಜ್ಞ.
TWO ROADS DIVERGED:
Two roads diverged in a wood, and I,
took the one less traveled by,
And that has made all the difference.
-Robert Frost

Sunday, June 4, 2017

ತಂತ್ರಜ್ಞ ತ್ರಿಪದಿ-68 ಮೆದುಳಲ್ಲಿ ಹೂವು

ತಂತ್ರಜ್ಞ ತ್ರಿಪದಿ-68 ಮೆದುಳಲ್ಲಿ ಹೂವು
ಸ್ವರ್ಣಮಯ ಸೊಬಗಿನಲಿ, ವರ್ಣಮಯ ಬೆಡಗಿನಲಿ
ಪರ್ಣಗಳ ನಡುವೆ ಗಿಡವಲ್ಲ ಹೂವಿನ ಸ್ಥಾನ,
ಕರ್ಣಗಳ ನಡುವೆ ಮೆದುಳಿನಲಿ! ತಂತ್ರಜ್ಞ.
SEEING FLOWER IN BRAIN
Golden colorful flowers
You don't see between leaves of a plant
But in the brain between your two ears!

Friday, June 2, 2017

ತಂತ್ರಜ್ಞ ತ್ರಿಪದಿ-67 ಹಸಿರು ಯಂತ್ರದ ಕುಸುಮ

ತಂತ್ರಜ್ಞ ತ್ರಿಪದಿ-67 ಹಸಿರು ಯಂತ್ರದ ಕುಸುಮ
ಹಸಿರುಯಂತ್ರದ ದಿವ್ಯ ಬಸಿರಿಂದ ಜನಿಸಿರುವ
ರಸಿಕಪಿತ ರವಿಯ ಕಾಮನಬಿಲ್ಲ ಬಣ್ಣಗಳ
ಹಸುಳೆ ಸುಮನೋಹರಳು ಕುಸುಮ ತಂತ್ರಜ್ಞ
GREEN-MACHINE FLOWER:
Taking birth from the divine womb of a Green Machine,
Inheriting the rainbow colors from the sun, the epicurean father,
The pretty daughter is the flower

Thursday, June 1, 2017

ತಂತ್ರಜ್ಞ ತ್ರಿಪದಿ-66 ಗಗನಗಾಮಿ

ತಂತ್ರಜ್ಞ ತ್ರಿಪದಿ-66 ಗಗನಗಾಮಿ
ಗಗನಚುಂಬಿತ ಸೌಧ! ಗಗನದಲಿ ನಿಲ್ದಾಣ!
ಗಗನಗಾಮೀ ನೌಕೆ! ಗಗನವೇರಿರುವ ಬೆಲೆ!
ಗಗನಸುಮ ಮಾಡದಿರು ಸುಖವ! ತಂತ್ರಜ್ಞ.
SKY HIGH!
Building sky-scrapers! Resting in sky-stations!
Firing sky-rockets! Raising prices skywards!
Make not Joy a castle in the sky!

ತಂತ್ರಜ್ಞ ತ್ರಿಪದಿ-65 ಎಳೆಮುದುಕ ಫೋಟಾನುಬ್ರಹ್ಮ

ತಂತ್ರಜ್ಞ ತ್ರಿಪದಿ-65 ಎಳೆಮುದುಕ ಫೋಟಾನುಬ್ರಹ್ಮ
ಬೆಳಕು ದೇಹವನಾಂತು ಬೆಳಕು ತೇರಲಿ ನಿಂತು
ಬೆಳಕಿನ ವೇಗದಲಿ ಧಾವಿಸುತಲಿರುವ ನೀ
ಎಳೆಮುದುಕ ಫೋಟಾನುಬ್ರಹ್ಮ ತಂತ್ರಜ್ಞ
AT VELOCITY OF LIGHT
An embody of light,
An emperor in a chariot of light,
You travel with luggage really light
At the velocity of light.
An eternal wayfarer needing no rest
An evergreen resourceful youth.