Wednesday, May 3, 2023

ತಂತ್ರಜ್ಞ ಚೌಪದಿಗಳು-೦೦೮ ಹಳದಿ ನೀಲಿ ಗುಲಾಬಿ!

 

ತಂತ್ರಜ್ಞ ಚೌಪದಿಗಳು-೦೦೮  ಹಳದಿ ನೀಲಿ ಗುಲಾಬಿ!

ದುಂಬಿ ಝೇಂಕಾರವಿರೆ, ಬಣ್ಣದಿಬ್ಭಣದಂತೆ,

ಮಳೆಬಿಲ್ಲು ಜೀವಪಡೆಯುತ ಹರಡಿದಂತೆ

ಹಳದಿ ನೀಲಿ ಗುಲಾಬಿ ಬಿಳಿ ಕೆಂಪು ವರ್ಣತ್ವ!

ಎಲ್ಲದಕು ಸ್ವಂತ ವ್ಯಕ್ತಿತ್ವ! ತಂತ್ರಜ್ಞ!

TechnoWise Quatrains-008 The yellow, the blue, the Rose!

With a symphony of bees, the colors in a pretty parade,

Like a rainbow came to life and freely spread!

The yellow, the blue, the rose, the white, the red hue!

Each with a personality, unique and true! O! TechnoWise!



Tuesday, May 2, 2023

 ತಂತ್ರಜ್ಞ ಚೌಪದಿಗಳು-೦೦೬ ಮೋಬೈಲು!

ಮಂತ್ರದಂಡದ ಪರಿಯೆ ಶಕ್ತಿಯುತ ಮೋಬೈಲು!

ಅಂಗೈಯೆ ವಾಸ! ಜಗವೆಲ್ಲ ಆಡುವ ಬಯಲು!

ಕರತಲಾಮಲಕವಿದು ಸಂಪರ್ಕ ಸಂಪನ್ನ!

ನಿಯಂತ್ರಿಸದಿರಲಿ ಇದು ನಿನ್ನ!!! ತಂತ್ರಜ್ಞ!

TechnoWise Quatrains-006 Mobile!

Mobiles are like magic wands!

You are holding the world in the palm of your hands!

An expert it is, making contacts far and near!

But, don’t come under its control ever! O! TechnoWise!






ತಂತ್ರಜ್ಞ ಚೌಪದಿಗಳು-೦೦೭ ತಂತ್ರಜ್ಞಾನ!

 ತಂತ್ರಜ್ಞ ಚೌಪದಿಗಳು-೦೦೭ ತಂತ್ರಜ್ಞಾನ!

ಕಾರ್ಯತಃ ಉದ್ಯಾನದಂತೆ ತಂತ್ರಜ್ಞಾನ!

ಸಾಧನಗಳೇ ಹಣ್ಣು! ಮಣ್ಣೆ ವಿಜ್ಞಾನ!

ಬೆಳಕಿನತ್ತಲೆ ಚಾಚುತಿರಲಿ ಶಾಖೆಯನೆಲ್ಲ!

ತಂತ್ರವಿರಲಿ, ಕುತಂತ್ರವಲ್ಲ! ತಂತ್ರಜ್ಞ!

TechnoWise Quatrains-007 Technology!

Like a virtual garden, technology grows,

With roots in Science, and fruits as devices,

Let branches reach for the future’s lights!

Needed are techniques, and not deceits! O! TechnoWise!

 



Sunday, April 30, 2023

ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್‌ ನೆಟ್‌)

 ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್‌ ನೆಟ್‌)

ಅಂತರ್ಜಾಲಸಮುದ್ರ- ಒಳಗಮಿತ ಸಂಪತ್ತು!                                       ನಮಗೆ ಮುಕ್ತತೆಯಿರುವ ಡಿಜಿಟಲ್‌ ಜಗತ್ತು!                                 ಜ್ಞಾನಪುಟಗಳ ಯಾನ ತೆರೆ ಮೇಲೆ ಹಡಗಂತೆ!                                ಬೆರಳೊತ್ತೆ ಮಾಹಿತಿಯ ಸಂತೆ! ತಂತ್ರಜ್ಞ!

TechnoWise Quatrains-005 Internet!

The Internet is a vast plentifully rich sea!                                      A digital world where we can all be free!

One sails through pages like ships on waves!

Discovering information with every click one gives!










 

Saturday, April 29, 2023

ತಂತ್ರಜ್ಞ ಚೌಪದಿಗಳು-೦೦೪ ಹರ್ಷ-ಚಿಟ್ಟೆ

ಹರ್ಷ, ಚಿಟ್ಟೆಯ ಪರಿಯೆ ಆಕರ್ಷಣೆಯ ದೃಶ್ಯ!

ಹಿಡಿಯ ಹೋದರೆ ದೂರ ಹಾರಿ ಅದೃಶ್ಯ!

ಸೇವೆಯಲೊ, ಕಲೆಯಲೋ ನಿನ್ನನ್ನೆ ಮರೆತಾಗ,

ನಿನ್ನೆದೆಗೆ ಬರುವುದದು ಬೇಗ! ತಂತ್ರಜ್ಞ!  

TechnoWise Quatrains-004 Happiness-Butterfly

Happiness is a butterfly, flitting and free

By chasing, it cannot be caught, you'll see.

If you forget yourself in Service or Art,

It’ll soar and fly into your heart!



Friday, April 28, 2023

ತಂತ್ರಜ್ಞ ಚೌಪದಿಗಳು-೦೦೩ ಚಿಂತೆಯ ಚೋರ!

 

ತಂತ್ರಜ್ಞ ಚೌಪದಿಗಳು-೦೦೩ ಚಿಂತೆಯ ಚೋರ!

ಮನದ ಶಾಂತಿಯ ಕದಿವ ದುಷ್ಟ ಚೋರನು ಚಿಂತೆ,

ಕೆಳಗಿಳಿಸಬೇಕಾದ ಹಿರಿಹೊರೆಯ ಕಂತೆ!

ಮಬ್ಬು ತರುವುದು ಮನಕೆ ಅನುಮಾನ, ಭಯದ ಹೊಗೆ

ನೂಕುವುದು ಹರ್ಷವನು ಹೊರಗೆ! ತಂತ್ರಜ್ಞ!

TechnoWise Quatrains-003 Worry, a Thief!

Worry is a thief that steals our peace,

It's a burden that we must release,

 It clouds our minds with fear and doubt,

And keeps our happiness locked up and out.



Thursday, April 27, 2023

 ತಂತ್ರಜ್ಞ ಚೌಪದಿಗಳು-೦೦೨ ಸಂತೋಷಪಡಿಸು!

ಸಂತೋಷ ಪಡಲೆಂದು ನಿನ್ನ ಸುಖ ಅರಸದಿರು!
ಹರ್ಷಪಡಿಸಲು ಪರರ, ನೀನೆ ಹರ್ಷದ ತವರು!
ಪರರ ಸೇವೆಯು ನಿನಗೆ ತರುವುದಮಿತದ ಹರ್ಷ!
ಜೀವನಕೆ ಸಂತೃಪ್ತಿ ವರ್ಷ!ತಂತ್ರಜ್ಞ!
TechnoWise Quatrains-002 Make Others Happy:

To find happiness, don't seek your own
Make others happy, and you'll be shown
A life of joy and contentment true
Serving others will bring happiness to you!


Wednesday, April 26, 2023

 ತಂತ್ರಜ್ಞ ಚೌಪದಿಗಳು-೦೦೧ ತಾವರೆ ಹೂವು

ಚಿಟ್ಟೆರೆಕ್ಕೆಯ ಪರಿಯೆ ಚೆಲುವಿರುವ ಕಮಲದಳ

ತಂಗಾಳಿಗಲುಗುತಿವೆ ನಯವಾಗಿ ಬಹಳ!

ಚೆಲುವು ನಿಲುವುಗಳ ಸಂಕೇತ ತಾವರೆ ಹೂವು! 

ಸಂತೋಷ ನಿಧಿಯು ಈ ಚೆಲುವು! ತಂತ್ರಜ್ಞ!

TechnoWise Quatrains-001 The Lotus Flower

Its petals like wings of a butterfly,

Fluttering in the breeze ever so gently!  

The lotus is a symbol of grace and poise,

Its beauty, a treasure for all to rejoice.



Tuesday, April 25, 2023

 ತಂತ್ರಜ್ಞ ತ್ರಿಪದಿಗಳ-೭೧೯ ಗುಲಾಬಿಯ ಹೊಸಕೊಡುಗೆ

ಮಳೆಬಿಲ್ಲೆ ಹೂವಾಗೆ- ವೈಭವದ ಮೆರವಣಿಗೆ!

ಗುಲಾಬಿಯ ಹೊಸ ಕೊಡುಗೆ- ಅಳಿಗಳಿಗೆ ರಸಗಳಿಗೆ!

ಬ್ರಹ್ಮಪ್ರೇಮದ ಓಲೆ ಬುವಿಗೆ! ತಂತ್ರಜ್ಞ!

TechnoWise Tripods-719 Blossoms of Roses  

As if a rainbow sprang to life, in blossoms of roses in a parade!

A feast for bees, with nectar sweet, Mother Nature’s party, by her hand!

A love letter from the creator to the land! O! TechnoWise!



Monday, April 24, 2023

ತಂತ್ರಜ್ಞ ತ್ರಿಪದಿಗಳು-೭೧೮ ಕೃತಕ ಬುದ್ಧಿಮತ್ತೆ

 ತಂತ್ರಜ್ಞ ತ್ರಿಪದಿಗಳು-೭೧೮ ಕೃತಕ ಬುದ್ಧಿಮತ್ತೆ

ಕೃತಕ ಬುದ್ಧಿಮತ್ತೆಗೆ ಇದೆ ತನ್ನದೇ ತಂತ್ರ!

ಯಂತ್ರಗಳು ಯೋಚಿಸಲು ಕಲಿವ ತಾಂತ್ರಿಕ ಕ್ಷೇತ್ರ!

ಎಲ್ಲೆಡೆಯು ಇದೆ ಅದರ ಪಾತ್ರ! ತಂತ್ರಜ್ಞ!

TechnoWise Tripods-718 Artificial Intelligence


Artificial Intelligence, a software world of its own!

A realm where machine Learning has grown!

Everywhere it has a place of its own!









 

Saturday, April 22, 2023

 ತಂತ್ರಜ್ಞ ತ್ರಿಪದಿಗಳು-೭೧೭ ಗುಲಾಬಿಗಳುದ್ಯಾನ

ಗುಲಾಬಿಗಳುದ್ಯಾನ, ಚೆಲುವು ಸೆಳೆಯುವ ಸ್ಥಾನ!

ಎಲ್ಲ ದಳ ವರ್ಣಪಟ, ಸುವಾಸನೆಗಳ ಸ್ನಾನ!

ನಲಿವ ಬಣ್ಣಗಳ ಆಸ್ಥಾನ! ತಂತ್ರಜ್ಞ!
TechnoWise Tripods-717 A Rose garden
A garden of roses, oh how its beauty enchants!
Each petal is a canvas of colors, an invigorating bath of fragrance!
A court of regal colors, a romance! O! Techno-wise!


Tuesday, April 18, 2023

 ತಂತ್ರಜ್ಞ ತ್ರಿಪದಿಗಳು ೭೧೬ ಮಂತ್ರಜ್ಞಾನ-ಯಂತ್ರಜ್ಞಾನ

ಮಂತ್ರಜ್ಞಾನವು ಬೇಕು, ಯಂತ್ರಜ್ಞಾನವು ಬೇಕು

ತಂತ್ರಜ್ಞಾನದ ಮಾತೆ ವಿಜ್ಞಾನವಿರಬೇಕು

ತಂತ್ರ ತಿಳಿದರೆ ಸಾಮರಸ್ಯ! ತಂತ್ರಜ್ಞ!



TechnoWise Tripods-716 Knowledge of Hymns needed

Knowledge of Hymns is needed, and also the knowledge of machines,

Needed is the knowledge of Science, the mother of technology

Harmony if you know this secret! O! TechnoWise!


Tuesday, January 10, 2023

 ತಂತ್ರಜ್ಞ ತ್ರಿಪದಿಗಳು-೧೫ ಕೂಗುತ್ತಲಿದೆ ಹೊಟ್ಟೆ!

ಜಾಗ ಒಳಗಿದೆಯೆಂದು ತೇಗಿ ತೇಗುತ ತಿಂದು,

ರೋಗ ಬಂದರೆ ಹೊಣೆಯು ಚಪಲ ಜಿಹ್ವೆಯದೆಂದು,

ಕೂಗಿ ಕೂಗುತ್ತಲಿದೆ ಹೊಟ್ಟೆ! ತಂತ್ರಜ್ಞ!

Technowise Tripods-715 Stomach is Crying!

Unaware of the space inside, In nonstop eating and belching you indulge!

If you fall ill, Lies the responsibility wholly on the greedy tongue!

Crying aloud the poor stomach, overfull! O! TechnoWise!



ತಂತ್ರಜ್ಞ ತ್ರಿಪದಿಗಳು-೧೪ ಸೃಷ್ಟಿ: ಒಂದು ಮಾಯಾಕಾವ್ಯ

ಪರಬ್ರಹ್ಮ ಕವಿಯಾಗಿ ಬರೆವ ಹಾಳೆಗಳಾಗಿ,

ಧರಿಸಿ ಅಗಣಿತ ಪಾತ್ರ, ತುಂಬಿ ಜೀವದ ಅಮೃತ

ಬರೆದ ಮಾಯಾಕಾವ್ಯ ಸೃಷ್ಟಿ! ತಂತ್ರಜ್ಞ! 


Technowise Tripods-714 Creation: A mystical epic poetry

The creator became a poet as well as writing papers,

An actor of countless roles filled with the nectar of life

The writer of this mystical epic poetry, the creation! O! TechnoWise!


Thursday, January 5, 2023

 ತಂತ್ರಜ್ಞ ತ್ರಿಪದಿಗಳು-೭೧ ಸಾಧನೆ

ಖಿನ್ನನಾಗಲು ಬೇಡ ಬನ್ನ ಬಂದಿಹುದೆಂದು!

ಸೊನ್ನೆಯಿಂದಲೆ ಗಣಿತದೆಲ್ಲ ಸಾಧನೆಯುಗಮ!

ಸೊನ್ನೆ ಎಡ ಬಲಕಿರಿಸು ಒಂದು! ತಂತ್ರಜ್ಞ!



 

                                TechnoWise Tripods-713 Achievement                        

    Don’t be depressed that a problem has arisen!

All achievements in Maths start from ‘zero’!

Put ‘one’ to the left and the right of ‘zero’! O! TechnoWise!



Wednesday, January 4, 2023



TechnoWise Tripods-712 Behavior

Can’t you bear with the misbehavior of others?

Don’t forget that others bear with you!

Do self-discovery when 

others misbehave! O! TechnoWise! 

 

                                                ತಂತ್ರಜ್ಞ ತ್ರಿಪದಿಗಳು-೭೧ ಪರರ ವರ್ತನೆ

ಪರರ ವರ್ತನೆ ಸಹಿಸಿ ಇರಲಾರೆ ಎನ್ನುವೆಯ?

ಮರೆಯದಿರು ಪರರು ನಿನ್ನನು ಸಹಿಸಿ ಇರುವುದನು!

ಪರರ ನಡೆಯಿಂದಾತ್ಮಶೋಧ! ತಂತ್ರಜ್ಞ!


Tuesday, January 3, 2023

 

                            TechnoWise Tripods-711 Smile!

Smile a baby smile! Let go of seriousness and smile!

Smile tenderly as a bud becomes a flower!

May your face be replete with smiles! O! TechnoWise!


 


ತಂತ್ರಜ್ಞ ತ್ರಿಪದಿಗಳು-೭೧ ನಗು!

ಮಗುವಂತೆ ನಗಬೇಕು! ಬಿಗು ತೊರೆದು ನಗಬೇಕು!

ಮುಗುಳು ಅರಳುವ ಪರಿಯೆ ಮೃದುವಾಗಿ ನಗಬೇಕು!

ಮುಗುಳುನಗು ಮೊಗ ತುಂಬ ಬೇಕು! ತಂತ್ರಜ್ಞ!

Monday, January 2, 2023

 

                        TechnoWise Tripods-710 Opulence Everywhere

    Using intellect in all actions, and purity in all interactions,

   Knowledge through diligence, and mind in mindfulness

 Everywhere you gain opulence! O! TechnoWise!


 

                                            ತಂತ್ರಜ್ಞ ತ್ರಿಪದಿಗಳು-೭೧೦ ವೃದ್ಧಿ-ಸಮೃದ್ಧಿ

                                                    ಬುದ್ಧಿ ಕಾರ್ಯಕೆ ಕೊಟ್ಟು, ಶುದ್ಧಿ ಬಾಳಿನೊಳಿಟ್ಟು,

                                                    ಶ್ರದ್ಧೆ  ಜ್ಞಾನವ ತರಲು, ಪೂರ್ಣಮನಸ್ಕತೆಯಿರಲು

                                                    ವೃದ್ಧಿ ಸಮೃದ್ಧಿ ಎಲ್ಲೆಲ್ಲು! ತಂತ್ರಜ್ಞ!