Wednesday, May 3, 2023

ತಂತ್ರಜ್ಞ ಚೌಪದಿಗಳು-೦೦೮ ಹಳದಿ ನೀಲಿ ಗುಲಾಬಿ!

 

ತಂತ್ರಜ್ಞ ಚೌಪದಿಗಳು-೦೦೮  ಹಳದಿ ನೀಲಿ ಗುಲಾಬಿ!

ದುಂಬಿ ಝೇಂಕಾರವಿರೆ, ಬಣ್ಣದಿಬ್ಭಣದಂತೆ,

ಮಳೆಬಿಲ್ಲು ಜೀವಪಡೆಯುತ ಹರಡಿದಂತೆ

ಹಳದಿ ನೀಲಿ ಗುಲಾಬಿ ಬಿಳಿ ಕೆಂಪು ವರ್ಣತ್ವ!

ಎಲ್ಲದಕು ಸ್ವಂತ ವ್ಯಕ್ತಿತ್ವ! ತಂತ್ರಜ್ಞ!

TechnoWise Quatrains-008 The yellow, the blue, the Rose!

With a symphony of bees, the colors in a pretty parade,

Like a rainbow came to life and freely spread!

The yellow, the blue, the rose, the white, the red hue!

Each with a personality, unique and true! O! TechnoWise!



Tuesday, May 2, 2023

 ತಂತ್ರಜ್ಞ ಚೌಪದಿಗಳು-೦೦೬ ಮೋಬೈಲು!

ಮಂತ್ರದಂಡದ ಪರಿಯೆ ಶಕ್ತಿಯುತ ಮೋಬೈಲು!

ಅಂಗೈಯೆ ವಾಸ! ಜಗವೆಲ್ಲ ಆಡುವ ಬಯಲು!

ಕರತಲಾಮಲಕವಿದು ಸಂಪರ್ಕ ಸಂಪನ್ನ!

ನಿಯಂತ್ರಿಸದಿರಲಿ ಇದು ನಿನ್ನ!!! ತಂತ್ರಜ್ಞ!

TechnoWise Quatrains-006 Mobile!

Mobiles are like magic wands!

You are holding the world in the palm of your hands!

An expert it is, making contacts far and near!

But, don’t come under its control ever! O! TechnoWise!






ತಂತ್ರಜ್ಞ ಚೌಪದಿಗಳು-೦೦೭ ತಂತ್ರಜ್ಞಾನ!

 ತಂತ್ರಜ್ಞ ಚೌಪದಿಗಳು-೦೦೭ ತಂತ್ರಜ್ಞಾನ!

ಕಾರ್ಯತಃ ಉದ್ಯಾನದಂತೆ ತಂತ್ರಜ್ಞಾನ!

ಸಾಧನಗಳೇ ಹಣ್ಣು! ಮಣ್ಣೆ ವಿಜ್ಞಾನ!

ಬೆಳಕಿನತ್ತಲೆ ಚಾಚುತಿರಲಿ ಶಾಖೆಯನೆಲ್ಲ!

ತಂತ್ರವಿರಲಿ, ಕುತಂತ್ರವಲ್ಲ! ತಂತ್ರಜ್ಞ!

TechnoWise Quatrains-007 Technology!

Like a virtual garden, technology grows,

With roots in Science, and fruits as devices,

Let branches reach for the future’s lights!

Needed are techniques, and not deceits! O! TechnoWise!

 



Sunday, April 30, 2023

ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್‌ ನೆಟ್‌)

 ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್‌ ನೆಟ್‌)

ಅಂತರ್ಜಾಲಸಮುದ್ರ- ಒಳಗಮಿತ ಸಂಪತ್ತು!                                       ನಮಗೆ ಮುಕ್ತತೆಯಿರುವ ಡಿಜಿಟಲ್‌ ಜಗತ್ತು!                                 ಜ್ಞಾನಪುಟಗಳ ಯಾನ ತೆರೆ ಮೇಲೆ ಹಡಗಂತೆ!                                ಬೆರಳೊತ್ತೆ ಮಾಹಿತಿಯ ಸಂತೆ! ತಂತ್ರಜ್ಞ!

TechnoWise Quatrains-005 Internet!

The Internet is a vast plentifully rich sea!                                      A digital world where we can all be free!

One sails through pages like ships on waves!

Discovering information with every click one gives!










 

Saturday, April 29, 2023

ತಂತ್ರಜ್ಞ ಚೌಪದಿಗಳು-೦೦೪ ಹರ್ಷ-ಚಿಟ್ಟೆ

ಹರ್ಷ, ಚಿಟ್ಟೆಯ ಪರಿಯೆ ಆಕರ್ಷಣೆಯ ದೃಶ್ಯ!

ಹಿಡಿಯ ಹೋದರೆ ದೂರ ಹಾರಿ ಅದೃಶ್ಯ!

ಸೇವೆಯಲೊ, ಕಲೆಯಲೋ ನಿನ್ನನ್ನೆ ಮರೆತಾಗ,

ನಿನ್ನೆದೆಗೆ ಬರುವುದದು ಬೇಗ! ತಂತ್ರಜ್ಞ!  

TechnoWise Quatrains-004 Happiness-Butterfly

Happiness is a butterfly, flitting and free

By chasing, it cannot be caught, you'll see.

If you forget yourself in Service or Art,

It’ll soar and fly into your heart!



Friday, April 28, 2023

ತಂತ್ರಜ್ಞ ಚೌಪದಿಗಳು-೦೦೩ ಚಿಂತೆಯ ಚೋರ!

 

ತಂತ್ರಜ್ಞ ಚೌಪದಿಗಳು-೦೦೩ ಚಿಂತೆಯ ಚೋರ!

ಮನದ ಶಾಂತಿಯ ಕದಿವ ದುಷ್ಟ ಚೋರನು ಚಿಂತೆ,

ಕೆಳಗಿಳಿಸಬೇಕಾದ ಹಿರಿಹೊರೆಯ ಕಂತೆ!

ಮಬ್ಬು ತರುವುದು ಮನಕೆ ಅನುಮಾನ, ಭಯದ ಹೊಗೆ

ನೂಕುವುದು ಹರ್ಷವನು ಹೊರಗೆ! ತಂತ್ರಜ್ಞ!

TechnoWise Quatrains-003 Worry, a Thief!

Worry is a thief that steals our peace,

It's a burden that we must release,

 It clouds our minds with fear and doubt,

And keeps our happiness locked up and out.



Thursday, April 27, 2023

 ತಂತ್ರಜ್ಞ ಚೌಪದಿಗಳು-೦೦೨ ಸಂತೋಷಪಡಿಸು!

ಸಂತೋಷ ಪಡಲೆಂದು ನಿನ್ನ ಸುಖ ಅರಸದಿರು!
ಹರ್ಷಪಡಿಸಲು ಪರರ, ನೀನೆ ಹರ್ಷದ ತವರು!
ಪರರ ಸೇವೆಯು ನಿನಗೆ ತರುವುದಮಿತದ ಹರ್ಷ!
ಜೀವನಕೆ ಸಂತೃಪ್ತಿ ವರ್ಷ!ತಂತ್ರಜ್ಞ!
TechnoWise Quatrains-002 Make Others Happy:

To find happiness, don't seek your own
Make others happy, and you'll be shown
A life of joy and contentment true
Serving others will bring happiness to you!