Wednesday, January 31, 2018

ತಂತ್ರಜ್ಞ ತ್ರಿಪದಿಗಳು-೨೪೮ ಮರುಕ್ಷಣ ಮರಣ


ತಂತ್ರಜ್ಞ ತ್ರಿಪದಿಗಳು-೨೪೮ ಮರುಕ್ಷಣ ಮರಣ
ಬರಬಹುದು ಮರುಕ್ಷಣವೆ ಮರಣವೆಂಬುದನರಿತು,
ಸ್ಮರಣೆಗೈ ಎಲ್ಲೆಲ್ಲಿ ಪ್ರೀತಿ ಕೊಡಲಿದೆಯೆಂದು,
ಇರದು ದ್ವೇಷಕೆ ಆಗ ಕಾಲ! ತಂತ್ರಜ್ಞ.
TechnoWise Tripods-248 ANY MOMENT DEATH
Realising that death may come at any moment,
Recollect all those to whom profuse love is to be given,
Then, no time for malice at all! O! TechnoWise!





Tuesday, January 30, 2018

ತಂತ್ರಜ್ಞ ತ್ರಿಪದಿಗಳು-247 ಆಗು... ಆಗು


ತಂತ್ರಜ್ಞ ತ್ರಿಪದಿಗಳು-247 ಆಗು... ಆಗು
ಮನದ ಓದುಗನು, ಜೀವನದ ಲೇಖಕನು, ಎದೆ
ದನಿಯ ಕೇಳುಗನು, ಮತಿ ಬಳಕೆದಾರನೆ ಆಗು, 
ಕೊನೆಗೆ ನೀ ನಿನ್ನ ತಿಳಿದವನು! ತಂತ್ರಜ್ಞ.
TechnoWise Tripods-247 BE...BE
Be a reader of your mind, a writer of your life,
A listener of your heart, a user of your intellect,
And finally, a knower of Yourself! O! TechnoWise!





Monday, January 29, 2018

ತಂತ್ರಜ್ಞ ತ್ರಿಪದಿಗಳು-೨೪೬ ಬೇಡುವವರೆ!


ತಂತ್ರಜ್ಞ ತ್ರಿಪದಿಗಳು-೨೪೬ ಬೇಡುವವರೆ!
ಕುಕ್ಷಿಯಲಿ ಹಸಿವೆನುತ ಭಿಕ್ಷುಕರು ಗುಡಿ ಹೊರಗೆ;
ಲಕ್ಷ ಬೇಡಿಕೆ ಹೊತ್ತ ಭಕ್ತಜನ ಗುಡಿಯೊಳಗೆ;
ಪಕ್ಷವೆರಡೂ ಬೇಡುವವರೆ! ತಂತ್ರಜ್ಞ.
TechnoWise Tripods-246 BEGGING!
Outside the temple the beggars are begging for food;
Inside the temple the devotees are begging for the fulfilment of their desires;
Both parties outside and inside are begging! O! TechnoWise!





Sunday, January 28, 2018

ತಂತ್ರಜ್ಞ ತ್ರಿಪದಿಗಳು-೨೪೫ ಪ್ರಜ್ಞಾಪ್ರತಿಫಲನ


ತಂತ್ರಜ್ಞ ತ್ರಿಪದಿಗಳು-೨೪೫ ಪ್ರಜ್ಞಾಪ್ರತಿಫಲನ
ನರರು ಕನ್ನಡಿಯಂತೆ, ಕೆರೆಯಂತೆ ಪಶುಪಕ್ಷಿ,
ಮರವು ಬಟ್ಟಲಿನಂತೆ, ಶಿಲೆ ಅಪಾರಕವಾಗಿ
ತರತಮದಿ ಪ್ರತಿಫಲನ ಪ್ರಜ್ಞೆ ತಂತ್ರಜ್ಞ. 
TechnoWise tripods-245 REFLECTION OF CONSCIOUSNESS
Humans like a mirror, and animals like a pond,
Trees like a silver plate, and stones opaquely
Reflect consciousness at various levels, O! TechnoWise!







Saturday, January 27, 2018

ತಂತ್ರಜ್ಞ ತ್ರಿಪದಿಗಳು-೨೪೪ ಚಂದ್ರನಲ್ಲಿ ಹೊಲಗದ್ದೆ


ತಂತ್ರಜ್ಞ ತ್ರಿಪದಿಗಳು-೨೪೪ ಚಂದ್ರನಲ್ಲಿ ಹೊಲಗದ್ದೆ
ಮುಟ್ಟಿ ಚಂದ್ರನ ನೆಲವ, ಉತ್ತು ಬಿತ್ತುತ ಹೊಲವ
ರೊಟ್ಟಿ ತಟ್ಟನೆ ಅಲ್ಲಿ? ಬೆಟ್ಟಕ್ಕೆ ಹಾರಿದವ
ಅಟ್ಟಕ್ಕೆ ಹಾರನೇ ನರನು? ತಂತ್ರಜ್ಞ!
TechnoWise Tripods-244 LUNAR FIELDS
Having landed on the moon, after cultivating lunar fields,
Can he not bake bread there? Man who has jumped over a mountain,
Can he not jump over a loft? O! TechnoWise!





Friday, January 26, 2018


ತಂತ್ರಜ್ಞ ತ್ರಿಪದಿಗಳು-೨೪೩ ಮಾನವೀಯತೆ
ಒಂದು ಕೈಯ ಸಹಾಯ ವಂದಿಸುವ ಕೈಗಳಿಗು,
ಒಂದು ಒಲೆ ಉರಿಸಿದ ನೆರವು ನೂರು ಆರತಿಗು,
ಸುಂದರವು ಬಹು ಮಾನವೀಯ ತಂತ್ರಜ್ಞ.
TechnoWise Tripods-243 MORE HUMANE
Extending one hand to help rather than joining two hands for prayer,
And helping to light an oven rather than waving of hundred lamps before an image,
Are more beautiful and more humane, O! TechnoWise!








Thursday, January 25, 2018

ತಂತ್ರಜ್ಞ ತ್ರಿಪದಿಗಳು-೨೪೨ ಕಾಲವು ಸಾಪೇಕ್ಷ


ತಂತ್ರಜ್ಞ ತ್ರಿಪದಿಗಳು-೨೪೨ ಕಾಲವು ಸಾಪೇಕ್ಷ
ಭಯಗೊಂಡವಗೆ ಬೇಗ, ಕಾಯುವವಗೆ ನಿಧಾನ;
ನಯನಜಲವಿರೆ ಉದ್ದ, ನಗುನಗುತಲಿರೆ ಗಿಡ್ಡ;
ಪ್ರಿಯರೊಡನೆ ಶಾಶ್ವತವು ಕಾಲ! ತಂತ್ರಜ್ಞ.
TechnoWise tripods-242 RELATIVITY OF TIME
Time is very fast for those who are in fear, and very slow for those who wait;
It is very long for those who cry, and very short for those who laugh;
And eternal for those who love! O! TechnoWise!







Wednesday, January 24, 2018


ತಂತ್ರಜ್ಞ ತ್ರಿಪದಿಗಳು-೨೪೧ ಯಂತ್ರಕನ್ಯೆ ಸೋಫಿಯಾ
ಯಂತ್ರಜ್ಞಾನದ ಮುಗುಳು, ತಂತ್ರಜ್ಞಾನಿಯ ಮಗಳು,
ಸ್ವಂತಮನಮತಿರಹಿತೆ, ಅತಿಕೃತಕಮತಿಸಹಿತೆ;
ದಂತದೇಹದ ಹೃದಯಶೂನ್ಯೆ! ತಂತ್ರಜ್ಞ.
TechnoWise Tripods-241 ROBO-GIRL SOPHIA
She is the bud of machine knowledge, and daughter of a technological wizard,
Has no natural intelligence, but full of artificial intelligence;
She is ivory-bodied, and heartless, O! TechnoWise!






daughter 

Tuesday, January 16, 2018

ತಂತ್ರಜ್ಞ ತ್ರಿಪದಿಗಳು-240 ವ್ಯಾಪಾರ-ಮಮತೆ


ತಂತ್ರಜ್ಞ ತ್ರಿಪದಿಗಳು-240 ವ್ಯಾಪಾರ-ಮಮತೆ
ಮೂರು ಕೊಡುತಾರ್ಜಿಸಲು ಆರು! ಅದು ವ್ಯಾಪಾರ!
ಸಾರಸರ್ವವನಿತ್ತು ಬಯಸದಿರುವುದೆ ಮಮತೆ!
ಗೌರವಾನ್ವಿತೆ ಮಾತೆಯಂತೆ ತಂತ್ರಜ್ಞ.
TechnoWise Tripods-240 BUSINESS-LOVE
Giving less and getting more is business!
Giving everything without expecting any returns is Love!
Loving mother is a vivid example! O! TechnoWise!






Monday, January 15, 2018

ತಂತ್ರಜ್ಞ ತ್ರಿಪದಿಗಳು-೨೩೯ ಪರೀಕ್ಷೆಯಲ್ಲಿ ನಕಲು


ತಂತ್ರಜ್ಞ ತ್ರಿಪದಿಗಳು-೨೩೯ ಪರೀಕ್ಷೆಯಲ್ಲಿ ನಕಲು
ಪರಮವಿದು ಕಠಿಣದಲಿ, ನರರ ಬಾಳ ಪರೀಕ್ಷೆ;
ಅರಿಯದಲೆ ಸೋಲುವರು ನಕಲಿಮಾಡುತ ಪರರ;
ಬರುವ ಪ್ರಶ್ನೆಗಳೆಲ್ಲ ಭಿನ್ನ! ತಂತ್ರಜ್ಞ!
TechnoWise Tripods-239 COPYING IN EXAMS
Life examination is the most difficult one, O! TechnoWise!
Many people fail because they try to copy others;
They don't realise that each has a different set of questions.








Sunday, January 14, 2018

ತಂತ್ರಜ್ಞ ತ್ರಿಪದಿಗಳು-೨೩೮ ಗೆದ್ದು ಸೋಲುವೆವು!


ತಂತ್ರಜ್ಞ ತ್ರಿಪದಿಗಳು-೨೩೮ ಗೆದ್ದು ಸೋಲುವೆವು!
ಗೆಲ್ಲ ತುದಿಯಲಿ ಕುಳಿತು, ಗೆಲ್ಲ ಬುಡವನೆ ಕಡಿದು,
ಗೆಲ್ಲು ಬೀಳಲು ಗೆಲುವು! ಜತೆಗೆ ಬೀಳಲು ಸೋಲು!
ಎಲ್ಲ ಹೊನ್ನಾದಂತೆ ಹಸಿರು! ತಂತ್ರಜ್ಞ.
TechnoWise Tripods-238 LOSING AFTER WINNING
Sitting on the tip of the branch, if you cut the supporting stem,
You win when the branch falls down! and you lose when you also go down with it!
Like all green trees turned into yellow gold! O! TechnoWise!












Saturday, January 13, 2018


ತಂತ್ರಜ್ಞ ತ್ರಿಪದಿಗಳು-೨೩೭ ಜಾಗತೀಕರಣ-ಜಾಗೃತೀಕರಣ!
ಜಾಗತೀಕರಣ ಬರೆ, ಜಾಗೃತೀಕರಣ ಕರೆ!
ನೇಗಿಲನು ಯಂತ್ರವನು ತಂತ್ರವನು ಮಂತ್ರವನು
ತೂಗಿ ಸರಿಯಿಡು ಸಾಮರಸ್ಯ! ತಂತ್ರಜ್ಞ!
TechnoWise tripods-237 GLOBALIZATION
Awake and Arise when Globalization enters!
Weigh pros and cons locally and globally to bring harmony, O! TechnoWise!
Between Ploughs, Machines, Technologies and Vision.






Friday, January 12, 2018

ತಂತ್ರಜ್ಞ ತ್ರಿಪದಿಗಳು-236 ಯುವಜನ ದಿನ


ತಂತ್ರಜ್ಞ ತ್ರಿಪದಿಗಳು-236 ಯುವಜನ ದಿನ
ಯುವಜನರು ಭಾರತದ ಭವಿತವ್ಯ ಸಾಧಕರು
ವಿವೇಕಿ ಜ್ಞಾನಾರ್ಥಿ ಭುವನವಿಜಯಿಗಳಿವರು
ಯುವಜನರ ದಿನಕೆ ನಲ್ವರಕೆ ತಂತ್ರಜ್ಞ.
TechnoWise Tripods-236 NATIONAL YOUTH DAY
Our youth are achievers of India's bright future,
They are knowledgeable, wise, and capable of peacefully conquering the world,
Greetings for a happy Youth Day, O! TechnoWise!

Thursday, January 11, 2018

ತಂತ್ರಜ್ಞ ತ್ರಿಪದಿಗಳು-೨೩೫ ನಂಬಿಕೆ


ತಂತ್ರಜ್ಞ ತ್ರಿಪದಿಗಳು-೨೩೫ ನಂಬಿಕೆ
ಹಸ್ತರೇಖೆಯನಲ್ಲ, ಹಸ್ತಕೌಶಲ ನಂಬು;
ಮಸ್ತಕದ ಲಿಪಿಯಲ್ಲ, ಮಸ್ತಿಷ್ಕವನು ನಂಬು;
ಚಿತ್ತದರಿವನು ಎದೆಯ ದನಿಯ ತಂತ್ರಜ್ಞ.
TechnoWise Tripods-235 RELIANCE
Rely on the skill of your hands rather than on the lines on your palm;
Rely, not on the writings on the forehead, but on the power of the brain,
On the knowledge in the mind and the voice of your heart, O! TechnoWise! 

Wednesday, January 10, 2018

ತಂತ್ರಜ್ಞ ತ್ರಿಪದಿಗಳು-೨೩೪ ಹಿತ್ತಲ ಗಿಡ ಮದ್ದಲ್ಲ!



ತಂತ್ರಜ್ಞ ತ್ರಿಪದಿಗಳು-೨೩೪ ಹಿತ್ತಲ ಗಿಡ ಮದ್ದಲ್ಲ!
ಇಲ್ಲಿ ಲಾಯರು ಗಾಂಧಿ, ಅಲ್ಲಿ ಬೆಳೆದು ಮಹಾತ್ಮ!
ಇಲ್ಲಿ ಸಾಧು, ಅಮೇರಿಕದಿ ವಿವೇಕಾನಂದ!
ಅಲ್ಲ ಹಿತ್ತಲ ಗಿಡವು ಮದ್ದು! ತಂತ್ರಜ್ಞ.
TechnoWise Tripods-234 BACKYARD PLANTS!
He left India as barrister Gandhi, and in South Africa he grew to become Mahatma;
He left India as an unknown saint, and in America he became famous Vivekananda!
Familiar plants in the backyard have no medicinal values, O! TechnoWise!


Tuesday, January 9, 2018

ತಂತ್ರಜ್ಞ ತ್ರಿಪದಿಗಳು-೨೩೩ ಕಣ್ಣೀರೆ ನೀರು!


ತಂತ್ರಜ್ಞ ತ್ರಿಪದಿಗಳು-೨೩೩ ಕಣ್ಣೀರೆ ನೀರು!
ಹರಿವ ತೊರೆಯಿಂದಜ್ಜ, ಕೆರೆಬಾವಿಯಿಂದಪ್ಪ,
ಬರಿಯ ಬಾಟಲಿಯಿಂದ ಮೊಮ್ಮಗಗೆ ತಣ್ಣೀರು;
ಮರಿಮಗಗೊ! ಕಣ್ಣೀರೆ ನೀರು! ತಂತ್ರಜ್ಞ!
TechnoWise Tripods-233 WATERS FROM TEARS
Grandfather from the flowing river, and Father from the lake and the well,
Now Grandson from the bottles, gets water, O! TechnoWise!
And  the Great-Grandson in future will've only waters from tears! 



Monday, January 8, 2018

ತಂತ್ರಜ್ಞ ತ್ರಿಪದಿಗಳು-೨೩೨ ಹೊಸ ಅಧ್ಯಾಯ


ತಂತ್ರಜ್ಞ ತ್ರಿಪದಿಗಳು-೨೩೨ ಹೊಸ ಅಧ್ಯಾಯ
ಹಿಂದಿನದರಿಂದ ಕಲಿ, ಮುಂದೆ ಶುಭ ಹಾರೈಸು,
ಇಂದು ಜೀವಿಸಿ ಪೂರ್ಣ, ಮುದದಿ ಬರೆ ಹೆಗ್ಗುರಿಯ
ಮುಂದಿರಿಸಿ ಹೊಸತು ಅಧ್ಯಾಯ ತಂತ್ರಜ್ಞ.
TechnoWise Tripods-232 A NEW CHAPTER
Learn from the past, hope for the future,
Live fully today, set new goals, O! TechnoWise!
And write a new chapter in the book of life.