Sunday, March 26, 2017

ಬರಗಾಲ

ಅಕ್ಕರೆಯ ದೇಹದಲಿ ಚೊಕ್ಕದೀ ಭೂಮಿಯಲಿ
ಮುಕ್ಕಾಲು ಇರುವ ಜಲ ಸಿಕ್ಕಂತೆ ಪೋಲಾಗೆ
ಬಿಕ್ಕಟ್ಟು ಮುಂದೆ ಬರಗಾಲ ತಂತ್ರಜ್ಙ
ನರನಾತ್ಮವನು ತಿಳಿದು ಪರಮಾತ್ಮನನ್ನರಿವೆ;
ಪರಮಾಣು ಪರಿಚಯಿಸೆ ಅರುಣಮಂಡಲ ತಿಳಿವೆ;
ಸರುವಕೂ ಒಂದೆ ವಿನ್ಯಾಸ ತಂತ್ರಜ್ಙ .‍‌

Friday, March 24, 2017

ನೀನೆ ಸುತ್ತುವೆ

ತಂತ್ರಜ್ಞ ತ್ರಿಪದಿ-127 ನೀನೆ ಸುತ್ತುವೆ
ಭೂಮಿಕೇಂದ್ರಿತ ಸರ್ವ ವ್ಯೋಮವೆಂದವರಂತೆ
ನಾಮರೂಪದ ಸರ್ವ ನಿನ್ನ ಸುತ್ತದೆ, ನೀನೆ
ಭ್ರಾಮಕತೆಯಲಿ ಸುತ್ತುತಿರುವೆ ತಂತ್ರಜ್ಞ .
As some used to say that everything revolves around the earth, all worldly things are not going around you, but you in your madness are going around them.

Wednesday, March 22, 2017

ಹುಲಿಬೇಟ

ತಂತ್ರಜ್ಞ ತ್ರಿಪದಿ-21 ಹುಲಿಬೇಟ
ಶಿಲೆಯ ಯುಗದಲಿ ನರನ ಹುಲಿಯೆ ಮಾಡಿರೆ ಬೇಟೆ
ಬಲಿತ ನರ ಲೋಹಯುಗದಲ್ಲಿ ಗೈದ ಹುಲಿಬೇಟೆ!
ಕಲಿಯುಗದಿ ಬೇಕು ಹುಲಿಬೇಟ! ತಂತ್ರಜ್ಞ .
Tigers terrorized and hunted man in Stone era;
In Metal era Man relentlessly hunted tigers;
We need a love affair with tigers in this era.

Tuesday, March 21, 2017

ಯೋಗ

ತಂತ್ರಜ್ಞ ತ್ರಿಪದಿ-20 ಯೋಗ
ಒಂದೊಂದೆ ಕೂಡಿದರೆ ಎಂದು ಲಬ್ಧ  ಅನಂತ?
ಒಂದು ಹನಿ ಕೂಡಿ ಕಡಲನು, ಕಡಲೆ ಆದ ಪರಿ
ಒಂದು ಕೂಡೆ ಅನಂತ! ಯೋಗ! ತಂತ್ರಜ್ಞ .
YOGA
By adding 'one's Infinity cannot be reached;
As a drop falling on ocean becomes ocean,
In Yoga, merging with Infinity, one becomes Infinity.

Monday, March 20, 2017

ದ್ವೇಷ

ತಂತ್ರಜ್ಞ ತ್ರಿಪದಿ-19 ದ್ವೇಷ
ದ್ವೇಷ ವಿಷಮಯವಾಗಿ ಕ್ಲೇಶ ಹೊಸತು ಸಮಸ್ಯೆ
ಪೋಷಿಸಿದೆ ಸೃಷ್ಟಿಸುತ; ಪರಿಹರಿಸದೊಂದನೂ
ಘೋಷಿಸಿದೆ ಸಮರಸಂದೇಶ ತಂತ್ರಜ್ಞ .
HATRED
Hatred becoming poisonous creates and nurtures new problems; without solving even one old problem, it sounds war drums.

Sunday, March 19, 2017

ಧೀಮಂತ ಬದುಕು

ತಂತ್ರಜ್ಞ ತ್ರಿಪದಿ-18 ಧೀಮಂತ ಬದುಕು
ನಿಯಂತ್ರಣಕೆ ಸಿಗದು ಬಯಲ ಹೊರಗಣ ಸಂತೆ;
ನಯದಿಂದ ಒಳ ಅಶಾಂತನ ಸಂತನಾಗಿಸಲು
ಲಯ ನಿಂತು, ಬದುಕು ಧೀಮಂತ ತಂತ್ರಜ್ಞ .
RICH   LIFE
One cannot control the market outside;
But if one makes the inner haven peaceful
Then harmony comes and life becomes rich.

Saturday, March 18, 2017

ಪರಿವೀಕ್ಷಣೆ

ತಂತ್ರಜ್ಞ ತ್ರಿಪದಿ-17 ಪರಿವೀಕ್ಷಣೆ
ಬರುವ ಯೋಚನೆಗಳಲಿ ಕರೆಯೊಳಗೆ ಕೆಲವನ್ನು
ಕರೆದ ಕೆಲವನು ಸೋಸಿ ಒಂದನ್ನೆ ಮೆಲುಕುತಿರು;
ಪರಿವೀಕ್ಷಿಸುವೆ ನಿಜದ ಪರಿಯ ತಂತ್ರಜ್ಞ .
                 PERCEPTION
Invite inside a few among thousand thoughts outside;
Empower one of them giving constant attention
Then only you perceive the Reality

Tuesday, March 14, 2017

ಹೊರಗೊಳಗೆ

ತಂತ್ರಜ್ಞ ತ್ರಿಪದಿ-16 ಹೊರಗೊಳಗೆ
ಬಂಗಾರ ಲೇಪನದ ಅಂಗಾರಶಿಲೆಯಂತೆ,
ಕಂಗಳಿಗೆ ಚೆಲುವು ವಿಷವೊಳಗೆ ತುಂಬಿರೆ, ತೋಟ
ಶೃಂಗಾರ - ಒಳಗೆ ಲಂಟಾನ! ತಂತ್ರಜ್ಞ .
OUTER and INNER
That which is beautiful outside, but poisonous inside
Is a gold-plated piece of charcoal,
And like a grand garden from outside with weeds inside.

Monday, March 13, 2017

ಮನಸ್ಸು

ತಂತ್ರಜ್ಞ ತ್ರಿಪದಿ-15 ಮನಸ್ಸು
ಬೊಂಬೆಯಾಗಿಸಿ ನಮ್ಮ ಬೊಂಬೆಯಾಡುವ ಮನವ 
ಕಂಬಕ್ಕೆ ಕಟ್ಟಿ ಎಚ್ಚರದಿಂದ ಮಾಡು ನೀ
ತುಂಬ ಪಳಗಿಸಿದ ಕೈಗೊಂಬೆ ತಂತ್ರಜ್ಞ .
The mind makes us dance like a doll;
Carefully tie the mind to a pole;
And make it your dancing doll.

Sunday, March 12, 2017

ತಂತ್ರಜ್ಞ ತ್ರಿಪದಿ-14 ದಿಕ್ಸೂಚಿ
ಯಾವ ಹಳತೂ ಅಲ್ಲ ಜೀವಾವಧಿಯ ಶಿಕ್ಷೆ!
ಯಾವ ಹೊಸತೂ ಅಲ್ಲ ಜೀವತಾರಕ ರಕ್ಷೆ!
ಹೂವೆದೆಯ ದನಿಯೆ ದಿಕ್ಸೂಚಿ ತಂತ್ರಜ್ಞ .
                    Compass
The Past is not a Court's Life Sentence!
The future is not an assurance of good life!
Pure Heart's whisper is a Compass for the Present.

Friday, March 10, 2017

ಒಬ್ಬಂಟಿ ಮನುಜ

ಒಬ್ಬಂಟಿ ಮನುಜ
ಹಿಂದೆ ಉಳಿದಿದೆ ಧರ್ಮ; ಮುಂದಿಹುದು ವಿಜ್ಞಾನ!
ಮುಂದೆ ಬಹು ಮುಂದೆ ಓಡಿಹುದು ತಂತ್ರಜ್ಞಾನ!
ಇಂದು ಒಬ್ಬಂಟಿ ಈ ಮನುಜ!
LONELY  MAN
Dharma is far behind us! Science is ahead of us!
Technology has run too far ahead!
And alas! Man is alone!


Wednesday, March 8, 2017

ತಂತ್ರಜ್ಞ ತ್ರಿಪದಿ-12 ನಿತ್ಯಶುದ್ಧಿ
ಭಾವನೆಯ ಕೊಳೆಯಿಂದ ಭಾವಗಳ ಕಸದಿಂದ
ಜೀವನವೆ ದುರ್ಗಂಧಮಯವಾಗಿರಲು, ಮಾಡು!
ಜೀವನಾವೆಯ ನಿತ್ಯಶುದ್ಧಿ ತಂತ್ರಜ್ಞ.
Cleansing Daily
Because of mental dirt and emotional rubbish
Life is intolerably stinking;
Cleanse the boat of your Mind and Heart daily.

ನಾಕ! Heaven!

ನಾಕ!
ನಾಕವನು ಕೆಳಗೆ ಭೂಲೋಕದಲ್ಲಿ ಸೃಷ್ಟಿಸುವ 
ಚಾಕಚಕ್ಯತೆ ಗಳಿಸು! ಗಾಳಿಗೋಪುರದಂತೆ
ನಾಕ ಮೇಲಿರುವ ಕಲ್ಪನೆಯು ತಂತ್ರಜ್ಞ.
Heaven!
Get the Skills needed to create Heaven on earth!
The idea of Heaven above us is
a Castle in the air!

Monday, March 6, 2017

ಕಲಿಕೆ ನಿಲಿಸದ ಶಾಲೆ

ತಂತ್ರಜ್ಞ ತ್ರಿಪದಿ-10 ಕಲಿಕೆ ನಿಲಿಸದ ಶಾಲೆ
ಕಲಿಸುವುದ ನಿಲ್ಲಿಸದು ಲಲಿತ-ನಿಷ್ಠುರ ಬದುಕು;
ಕಲಿಯುವುದ ನಿಲಿಸದಿರು ಉಸಿರು ನಿಲ್ಲುವ ತನಕ;
ಕಲಿಕೆ ನಿಲಿಸದ ಶಾಲೆ ಬಾಳ್ವೆ ತಂತ್ರಜ್ಞ.
(Beautiful-tough life does not stop teaching its lessons; hence do not stop learning till your last breath. This life is a school which never stops teaching-learning)

Sunday, March 5, 2017

ಆತ್ಮಬಲ

ತಂತ್ರಜ್ಞ ತ್ರಿಪದಿ-9 ಆತ್ಮಬಲ
ನಿಶ್ವಾಸಗಳ ಹಿಂದೆ ಉಚ್ಛ್ವಾಸ ಬರುವುದರ 
ವಿಶ್ವಾಸವಿಡುವ ದೇಹದ ರೀತಿಯಲಿ ನಿನಗೆ
ವಿಶ್ವಾಸವಿರಲಾತ್ಮಬಲದಿ ತಂತ್ರಜ್ಞ.

Saturday, March 4, 2017

ಮಧುರ ಸಂಬಂಧ

ತಂತ್ರಜ್ಞ ತ್ರಿಪದಿ-8 ಮಧುರ ಸಂಬಂಧ
ಅಧರ ಮುಖಗಳ ಸೊಗಸು, ಮಧುರ ಧ್ವನಿ ಬೇಕಿಲ್ಲ!
ಮಧು ತುಂಬಿರುವ ಹೃದಯ, ತುಂಬುನಂಬುಗೆಯ ಮನ
ಮಧುರಸಂಬಂಧಕ್ಕೆ ಮುಖ್ಯ ತಂತ್ರಜ್ಞ.

Friday, March 3, 2017

ಸಾಧನೆ

ತಂತ್ರಜ್ಞತ್ರಿಪದಿ-7 ಸಾಧನೆ
ಆಲೋಚನೆಯೆ ಬೀಜ, ಕಾಲದಲಿ ಕ್ರಿಯೆಯೆ ಜಲ,
ಬೇಲಿಯೇ ಶ್ರದ್ಧೆಯಿರೆ, ಸಾಧನೆಯ ಸುಮವನಕೆ
ಮಾಲಿಕನು ಮಾಲಿಯೂ ನೀನೆ ತಂತ್ರಜ್ಞ.

Thursday, March 2, 2017

ಜೀವನಧನ್ಯತೆ

ತಂತ್ರಜ್ಞತ್ರಿಪದಿ-6 ಜೀವನಧನ್ಯತೆ
ಎಷ್ಟೊ ಪದವಿಪ್ರಶಸ್ತಿ  ಅಷ್ಟಶ್ರೀಯಿಂದಲ್ಲ!
ಎಷ್ಟೆಷ್ಟು ಜನಕೆ ನೀ ಸಂತುಷ್ಟಿ ಕೊಡುವೆಯೋ
ಅಷ್ಟಷ್ಟು ಜೀವನದಿ ಧನ್ಯ ತಂತ್ರಜ್ಞ.