Monday, October 29, 2018

ತಂತ್ರಜ್ಞ ತ್ರಿಪದಿಗಳು-೪೪೬ ಶುಚಿರುಚಿಯ ಬಿಸಿಕಾಫಿ!!!


ತಂತ್ರಜ್ಞ ತ್ರಿಪದಿಗಳು-೪೪೬ ಶುಚಿರುಚಿಯ ಬಿಸಿಕಾಫಿ!!!
ತನ್ನ ರುಚಿಯೀ ರೀತಿ ಚೆನ್ನ ಸಿಹಿಯೆನ್ನುವುದು
ಭಿನ್ನ ಸಕ್ಕರೆ ಹಾಲು ಬೆರೆಯೆ ಕಾಫಿಗೆ ಅರಿವು!
ಮನ್ನೆಯರ ಸಂಗ ಪರಮಾನ್ನ! ತಂತ್ರಜ್ಞ!
TechnoWise Tripods-446 BLENDED COFFEE
Only when it blended nicely with milk and sugar,
Did coffee realise that it tasted so good and sweet!
Blending with right people is like sweet porridge! O! TechnoWise!


Friday, October 26, 2018

ತಂತ್ರಜ್ಞ ತ್ರಿಪದಿಗಳು-೪೪೪ ವೀಣೆ - ಬ್ರಹ್ಮವಾದ್ಯ


ತಂತ್ರಜ್ಞ ತ್ರಿಪದಿಗಳು-೪೪೪ ವೀಣೆ - ಬ್ರಹ್ಮವಾದ್ಯ
ಚದುರಕವಿಗಳು ಬರೆದ ಪದ್ಯರಸದೌತಣಕೆ
ವಾದನದ ಸಹಯೋಗ ನೀಡೆದೆಯ ವೀಣೆಯಲಿ!
ಎದೆಯ ವೀಣೆಯು ಬ್ರಹ್ಮವಾದ್ಯ! ತಂತ್ರಜ್ಞ.
TechnoWise Tripods-444 VEENA, AN INSTRUMENT OF THE CREATOR
For relishing the lyrical feast of great poets,
Make the Veena of your heart, an instrument accompanying!
This Veena is an instrument of the creator! O! TechnoWise!

Thursday, October 25, 2018

ತಂತ್ರಜ್ಞ ತ್ರಿಪದಿಗಳು-೪೪೩ ಹನ್ನೆರಡು ವರುಷ ಪ್ರಿಯಸಂಗ


ತಂತ್ರಜ್ಞ ತ್ರಿಪದಿಗಳು-೪೪೩ ಹನ್ನೆರಡು ವರುಷ ಪ್ರಿಯಸಂಗ
ಹನ್ನೆರಡು ವರುಷಗಳ ಬಿನ್ನಾಣದೊಡನಾಟ,
ಭಿನ್ನಮತ ವಿಚ್ಛೇದವಿರದ ಪ್ರೀತಿಯ ಸಂಗ,
ಕುನ್ನಿಮರಿ ಮನೆಗೆ ತಂದಾಗ! ತಂತ್ರಜ್ಞ.
TechnoWise Tripods-443 TWELVE YEARS OF ROMANCE
It is twelve years of fun filled endless romance,
A companionship and love with no difference of opinions or divorce,
When you bring home a smart puppy! O! TechnoWise!

Wednesday, October 24, 2018

ತಂತ್ರಜ್ಞ ತ್ರಿಪದಿಗಳು-೪೪೨ ಯಶಸ್ವೀ ವ್ಯಕ್ತಿ


ತಂತ್ರಜ್ಞ ತ್ರಿಪದಿಗಳು-೪೪೨ ಯಶಸ್ವೀ ವ್ಯಕ್ತಿಗಳು
ಯಶಸ್ವೀ ವ್ಯಕ್ತಿ ಪರಯಶಕೆ ಹೋರಾಡುವನು!
ಯಶವ ಬಯಸದೆ ಪರರ ಯಶವನಪಹರಿಸುವವ 
ದಶಮುಖನ ಅಪರಾವತಾರ! ತಂತ್ರಜ್ಞ!
TechnoWise Tripods-442 SUCCESSFUL PEOPLE
Successful people strive for the success of others!
He who wants others to fail, and kidnaps the success of others
Is a devilish incarnation of the ten-headed Ravana! O! TechnoWise!



Tuesday, October 23, 2018

ತಂತ್ರಜ್ಞ ತ್ರಿಪದಿಗಳು-೪೪೧ ನಂಬು


ತಂತ್ರಜ್ಞ ತ್ರಿಪದಿಗಳು-೪೪೧ ನಂಬು
ನಂಬದಿರು - ಕಿವಿ! ಕಣ್ಣ - ನಂಬು ಕಾಲಂಶ! ಮನ -
ನಂಬು ಅರ್ಧಾಂಶ! ಮತಿ - ಮುಕ್ಕಾಲು ಭಾಗವನು!
ನಂಬು - ಎದೆ ನೂರಕ್ಕೆ ನೂರು! ತಂತ್ರಜ್ಞ.
TechnoWise Tripods-441 BELIEVE
Believe nothing you hear! Only a quarter of what you see!
Believe only half of what your mind thinks! and three fourths of what the intellect reasons!
But believe hundred percent of everything what your heart feels! O! TechnoWise!


Monday, October 22, 2018

ತಂತ್ರಜ್ಞ ತ್ರಿಪದಿಗಳು-೪೪೦ ಬೆಳಕಿಂಡಿ


ತಂತ್ರಜ್ಞ ತ್ರಿಪದಿಗಳು-೪೪೦ ಬೆಳಕಿಂಡಿ
ತಿಳಿದಿರುವುದತ್ಯಲ್ಪ! ತಿಳಿಯದುದು ಅತ್ಯಧಿಕ!
ತಿಳಿವೆ ವರ! ತಿಳಿಯದುದ ನಂಬುವುದೆ ಭೂಶಾಪ!
ತಿಳಿಯದೆಂಬರಿವೆ ಬೆಳಕಿಂಡಿ! ತಂತ್ರಜ್ಞ.
TechnoWise Tripods-440 OPENING FOR A LIGHT
What we know is infinitesimally small! and what is unknown is really vast!
Knowledge is a boon! and ignorant belief is a curse on earth!
The realisation of not-knowing is an opening for light! O! TechnoWise!


Sunday, October 21, 2018

ತಂತ್ರಜ್ಞ ತ್ರಿಪದಿಗಳು-೪೩೯ ಹೊಣೆ


ತಂತ್ರಜ್ಞ ತ್ರಿಪದಿಗಳು-೪೩೯ ಹೊಣೆ
ಕಾಯಮನವೆರಡಕೂ ಗಾಯವಾಗಿದೆ ಆಳ!
ನೋಯಿಸಿದವರು ಪರರು! ಉಪಶಮನ ಹೊಣೆ ಪೂರ್ಣ
ನ್ಯಾಯವಾಗಿಯೆ ನಿನ್ನ ಮೇಲೆ! ತಂತ್ರಜ್ಞ.
TechnoWise Tripods-439 RESPONSIBILITY
Your body and mind are deeply wounded by others!
Although their act in unjust, yet as far as healing is concerned,
Full responsibility is on you! O! TechnoWise!

Saturday, October 20, 2018

ತಂತ್ರಜ್ಞ ತ್ರಿಪದಿಗಳು-೪೩೮ ನಾಕ-ನರಕ


ತಂತ್ರಜ್ಞ ತ್ರಿಪದಿಗಳು-೪೩೮ ನಾಕ-ನರಕ
ಲೋಕವಿದರಿಂದಾಚೆ ನಾಕ-ನರಕದ ಇರವೆ?
ಲೋಕವಿದರಲೆ ನಾಕ ನರಕಸೃಷ್ಟಿಯು ಸಾಧ್ಯ!
ನಾಕ ಅರಿವಿರೆ! ನರಕ ಮೌಢ್ಯ! ತಂತ್ರಜ್ಞ.
TechnoWise Tripods-438 HEAVEN - HELL
Are there Heaven and Hell beyond this world?
The creation of both is a possibility in this world itself!
Wisdom is Heaven and Ignorance is Hell! O! TechnoWise! 


Thursday, October 18, 2018

ತಂತ್ರಜ್ಞ ತ್ರಿಪದಿಗಳು-೪೩೭ ಕಾಲವೇ ಜೀವನವು!


ತಂತ್ರಜ್ಞ ತ್ರಿಪದಿಗಳು-೪೩೭ ಕಾಲವೇ ಜೀವನವು!
ಕಾಲ-ಊರ್ಜಗಳೆರಡು ಕಾಲು ಬಾಳಲಿ ನಡೆಯೆ!
ತಾಳತಪ್ಪಿದ ಬಾಳು ಕಾಲವೇ ಹಣವೆನಲು!
ಕಾಲವೇ ಮನುಜಜೀವನವು! ತಂತ್ರಜ್ಞ.
TechnoWise Tripods-437 TIME  IS  LIFE!
Time and Energy are the two legs of  mankind!
Unbalanced becomes life when you believe Time is Money!
Time is not Money! Time is Life! O! TechnoWise!



Tuesday, October 16, 2018

ತಂತ್ರಜ್ಞ ತ್ರಿಪದಿಗಳು-೪೩೫ ಪರಿಸರವಿನಾಶ


ತಂತ್ರಜ್ಞ ತ್ರಿಪದಿಗಳು-೪೩೫ ಪರಿಸರವಿನಾಶ
ತುದಿಕೊಂಬೆಯಲಿ ಕುಳಿತು, ಅದರ ಬುಡ ಕಡಿವಂತೆ-
ನದಿಗೆ ಕಟ್ಟೆಯ ಕಟ್ಟಿ, ನದಿಮೂಲ ಮುರಿವಂತೆ-
ಮೇದಿನಿಯ ಪರಿಸರವಿನಾಶ! ತಂತ್ರಜ್ಞ!
TechnoWise Tripods-435 ENVIRONMENT POLLUTION
Like cutting the stem, sitting on the tip of the branch-
Like drying out the river source, after building a dam-
Is the act of polluting the earth environment! O! TechnoWise!

Monday, October 15, 2018

ತಂತ್ರಜ್ಞ ತ್ರಿಪದಿಗಳು-೪೩೪ ದುರ್ಜನರ ಸಹವಾಸ


ತಂತ್ರಜ್ಞ ತ್ರಿಪದಿಗಳು-೪೩೪ ದುರ್ಜನರ  ಸಹವಾಸ
ಜಜ್ಜಿ ತುರಿಕೆಯ ಸೊಪ್ಪು, ಉಜ್ಜಿ ಮೈಗಿಡುವಂತೆ-
ಕಜ್ಜಿ ಮೈಯವನೊಡನೆ ಜಟ್ಟಿಕಾಳಗದಂತೆ-
ದುರ್ಜನರ ಸಹವಾಸ ಕಷ್ಟ! ತಂತ್ರಜ್ಞ!
TechnoWise Tripods-434 COMPANY OF THE BAD
Like smearing the body with the paste of itching leaves-
Like wrestling with a person full of scabies and ulcers-
Is the predicament of the company of the bad! O! TechnoWise!


Sunday, October 14, 2018

ತಂತ್ರಜ್ಞ ತ್ರಿಪದಿಗಳು-೪೩೩ ಸುಜನರ ಸಂಗ


ತಂತ್ರಜ್ಞ ತ್ರಿಪದಿಗಳು-೪೩೩ ಸುಜನರ ಸಂಗ
ಅಗರು ಚಂದನದಿಂದ ಮಗಮಗಿಸುವಾಲಯದ
ಸೊಗದಂತೆ- ಅರಳು ಹೂಬನದ ನಡುವಿರುವಂತೆ-
ಜಗದಿ ಸುಜನರ ಸಂಗ ಸೊಗಸು! ತಂತ್ರಜ್ಞ!
TechnoWise Tripods-433 COMPANY OF GOOD PEOPLE
As if inside a temple luscious with sandal wood and other fragrant substances-
Or enjoying in the midst of blossoming flowers in a beautiful garden-
Is the grandness of the company of good people! O! TechnoWise!


Friday, October 12, 2018

ತಂತ್ರಜ್ಞ ತ್ರಿಪದಿಗಳು-೪೩೨ ಕನ್ನಡಿಗಳಂತೆ ಮಾನವರು


ತಂತ್ರಜ್ಞ ತ್ರಿಪದಿಗಳು-೪೩೨ ಕನ್ನಡಿಗಳಂತೆ ಮಾನವರು
ನಿನ್ನೊಳಗೆ ಇರುವುದೇ ಅನ್ಯರಲಿ ಕಾಣುವುದು!
ನಿನ್ನಲ್ಲಿ ಪರರೆಲ್ಲ ಕಾಣುವುದು ತಮ್ಮನ್ನೆ!
ಕನ್ನಡಿಗಳಂತೆ ಮಾನವರು! ತಂತ್ರಜ್ಞ!
TechnoWise Tripods-432 PEOPLE ARE LIKE MIRRORS
What you see in others is more due to what is inside you!
And what others see in you is also more due to what they have inside them!
People are like mirrors! O! TechnoWise!


Thursday, October 11, 2018

ತಂತ್ರಜ್ಞ ತ್ರಿಪದಿಗಳು-೪೩೧ ಮುಗುಳುನಗುವೇ ಕೀಲಿಕೈ


ತಂತ್ರಜ್ಞ ತ್ರಿಪದಿಗಳು-೪೩೧ ಮುಗುಳುನಗುವೇ  ಕೀಲಿಕೈ
ಎಲ್ಲದಕು ಸಿಹಿ ತರುವ ಬೆಲ್ಲಸಕ್ಕರೆಯಂತೆ,
ಎಲ್ಲದಕು ರುಚಿ ಕೊಡುವ ಉಪ್ಪಂತೆ, ಮುಗುಳುನಗು
ಎಲ್ಲ ಎದೆಬೀಗಗಳ ಕೀಲಿ! ತಂತ್ರಜ್ಞ.
TechnoWise Tripods-431 SMILE IS THE KEY
As jaggery and sugar sweeten everything,
And salt enhances the taste of all types of food,
Smile is golden the key that opens the locks of all hearts! O! TechnoWise!

Tuesday, October 9, 2018

ತಂತ್ರಜ್ಞ ತ್ರಿಪದಿಗಳು-೪೩೦ ಹರುಷದ ಅಶ್ವ


ತಂತ್ರಜ್ಞ ತ್ರಿಪದಿಗಳು-೪೩೦ ಹರುಷದ ಅಶ್ವ
ಕಿರಿದಾಗಿರದ ಹಮ್ಮು-  ಹರಿತ ಕುಂದದ ಬುದ್ಧಿ-
ಕರುಬುಗೊಳ್ಳದ ಮನಸು- ರೋಗ ಬಾರದ ದೇಹ-
ಹರುಷ ಅಶ್ವದ ನಾಲ್ಕು ಕಾಲು! ತಂತ್ರಜ್ಞ!
TechnoWise Tripods-430 HORSE OF JOY
The ego not at all restricted but global, the intellect that has not lost its sharpness,
The mind without a pang of jealousy, and a body without any malady,
Are the four legs of the Horse of Joy! O! TechnoWise!


ತಂತ್ರಜ್ಞ ತ್ರಿಪದಿಗಳು-೪೨೯ ಸೇತುವೆಗಳೆರಡು



ತಂತ್ರಜ್ಞ ತ್ರಿಪದಿಗಳು-೪೨೯ ಸೇತುವೆಗಳೆರಡು
ಹೊರಟಿರುವ ಸ್ಥಳದಿಂದ ಗುರಿಯ ತಾಣದ ತನಕ
"ನಿರತಪ್ರಯತ್ನ", "ತಳಮಳರಹಿತ ತಾಳ್ಮೆ"ಗಳ
ಎರಡು ಸೇತುವೆಯಿರುವ ದಾರಿ! ತಂತ್ರಜ್ಞ.
TechnoWise Tripods-429 TWO  BRIDGES
Between the starting point and your destination
"Incessant efforts" and "anxiety-free patience"
Are the two bridges to be crossed! O! TechnoWise!

Monday, October 8, 2018

ತಂತ್ರಜ್ಞ ತ್ರಿಪದಿಗಳು-೪೨೮ ಹಸ್ತದಲಿ ಧನರೇಖೆ


ತಂತ್ರಜ್ಞ ತ್ರಿಪದಿಗಳು-೪೨೮ ಹಸ್ತದಲಿ ಧನರೇಖೆ
ಹಸ್ತದಲಿ ಧನರೇಖೆ ನಾಸ್ತಿಯೆನ್ನುವ ಕೊರಗೆ?
ಹಸ್ತವಿರದವರು ಬರೆದಿಹರು ವರ ಭವಿತವ್ಯ!
ಚಿತ್ತಬಲ ಸುಭವಿಷ್ಯ ಚಿಹ್ನೆ! ತಂತ್ರಜ್ಞ.
TechnoWise Tripod-428 Money Line on the Hand
Are you lamenting because no Money Line on your hand?
Remember, people without hands have created very bright future!
Will power is the sign of the future! O! TechnoWise!

Sunday, October 7, 2018

ತಂತ್ರಜ್ಞ ತ್ರಿಪದಿಗಳು-೪೨೭ ಕಲಿಕೆಕುಡಿ


ತಂತ್ರಜ್ಞ ತ್ರಿಪದಿಗಳು-೪೨೭ ಕಲಿಕೆಕುಡಿ
ತಿಳಿದಿರುವುದತ್ಯಲ್ಪ! ತಿಳಿಯದುದು ಅತ್ಯಧಿಕ!
ಕಲಿಕೆಕುಡಿ ಚಲನೆ- ತಿಳಿಯದನೊಪ್ಪಿ, ತಿಳಿವಿಂದ
ತಿಳಿಯದುದರತ್ತ ವಿಸ್ತರಣೆ! ತಂತ್ರಜ್ಞ.
TechnoWise Tripods-427 CREEPER OF LEARNING
What's known is infinitesimal, and what's unknown is inordinate!
The slow movement of the creeper of learning is to accept the vast unknown,
And extend the tip from the known to the unknown! O! TechnoWise.

Thursday, October 4, 2018

ತಂತ್ರಜ್ಞ ತ್ರಿಪದಿಗಳು-೪೨೬ ಕ್ಷಮೆಯಿತ್ತು ಮರೆತುಬಿಡು


ತಂತ್ರಜ್ಞ ತ್ರಿಪದಿಗಳು-೪೨೬ ಕ್ಷಮೆಯಿತ್ತು ಮರೆತುಬಿಡು
ಪರರ ಶಮನಿಸುವೆ ನೀ, ಧರೆಯಂತೆ ಕ್ಷಮೆಯಿತ್ತು!
ಮರೆಯುತ್ತ ಕಹಿನೆನೆಪ, ಬೆಳೆದು ಬೆಳೆಸುವೆ ಪರರ!
ಮರೆಯದಿರೆ, ಕ್ಷಮೆಕೊಡುವೆಯೆಂತು? ತಂತ್ರಜ್ಞ!
TechnoWise Tripods-426 FORGIVE and FORGET
When you forgive, you heal yourself and others!
When you forget, you grow and let grow others as well!
How can you forgive if you can't forget? O! TechnoWise!

ತಂತ್ರಜ್ಞ ತ್ರಿಪದಿಗಳು-೪೨೫ ಖಾಲಿ ಪಾತ್ರೆ


ತಂತ್ರಜ್ಞ ತ್ರಿಪದಿಗಳು-೪೨೫ ಖಾಲಿ ಪಾತ್ರೆ
ಏರುದನಿ ಆವೇಶ ಸಾರುವುದೆ ಸತ್ಯವನು?
ನೀರವತೆ ಮುನಿಮೌನ ಸತ್ತ್ವಹೀನತೆ ಕುರುಹೆ?
ಜೋರುದನಿ, ಪಾತ್ರೆಯಿರೆ ಖಾಲಿ! ತಂತ್ರಜ್ಞ.
TechnoWise Tripods-425 EMPTY VESSEL
Are loud voices and outcries indicators of truth?
And silence and reticence of sages symbols of weakness?
Empty vessels make the most noise! O! TechnoWise!


Wednesday, October 3, 2018

ತಂತ್ರಜ್ಞ ತ್ರಿಪದಿಗಳು-೪೨೪ ಎದೆಗೆ ಶರಣಾಗು


ತಂತ್ರಜ್ಞ ತ್ರಿಪದಿಗಳು-೪೨೪ ಎದೆಗೆ ಶರಣಾಗು
ಇಹಸಮಸ್ಯೆಯ ಬಿಡಿಸೆ-  ಬಹುಪಥಗಳನು ಮನಸು-
ಬಹಳ ಸರಿ ಪಥವ ಮತಿ-  ತೋರಿಸದೆ ಇರುವಾಗ-
ಸಹಜದಲಿ ಎದೆಗೆ ಶರಣಾಗು! ತಂತ್ರಜ್ಞ.
TechnoWise Tripods-424 SURRENDER TO THE HEART
For solving a worldly problem, when the Mind is unable to show alternate paths-
And the Intellect fails to indicate the most correct path- 
Then, naturally you have to surrender to the Heart! O! TechnoWise!



Tuesday, October 2, 2018

ತಂತ್ರಜ್ಞ ತ್ರಿಪದಿಗಳು-೪೨೩ ಹೊರಹರಿವು ಮೂಲ


ತಂತ್ರಜ್ಞ ತ್ರಿಪದಿಗಳು-೪೨೩ ಹೊರಹರಿವು ಮೂಲ
ಅರಿತಾಗ ನೀ ನಿನ್ನ, ಪರರ ಸಮ್ಮತಿ ಗೌಣ!
ಪರಕೊಡುಗೆ ಬೇಕಿಲ್ಲ, ನಿನ್ನ ನೀ ಪ್ರೀತಿಸಲು!
ಹೊರಹರಿವು ಮೂಲ ನೀನಾಗ! ತಂತ್ರಜ್ಞ.
TechnoWise Tripods-423 POWERFUL SOURCE
The more you know who you are, the less you seek approval from others!
When you begin to love yourself, there is less need to be filled from outside!
You become a powerful source of flow outwards! O! TechnoWise!