Friday, January 31, 2020

ತಂತ್ರಜ್ಞ ತ್ರಿಪದಿಗಳು-೫೪೧ ಒಪ್ಪಿಕೊಳುವುದು


ತಂತ್ರಜ್ಞ ತ್ರಿಪದಿಗಳು-೫೪೧ ಒಪ್ಪಿಕೊಳುವುದು

ಒಪ್ಪೆ ಪರಿಸ್ಥಿತಿಗಳನು, ಒಪ್ಪ ಓರಣ ಮನಸು!
ಒಪ್ಪದೇ ಹಾರಾಡೆ, ತಿಪ್ಪೆಗುಂಡಿಯ ಹೊಲಸು!
ಒಪ್ಪಿಕೊಳುವುದೆ ಧನಾತ್ಮಕವು! ತಂತ್ರಜ್ಞ!

TechnoWise Tripods-541 ACCEPTANCE

When you accept a situation, tidy and beautiful will be your mind!
It will be like a filthy garbage, if you don't accept and jump with rage!
Acceptance always leads to positive emotions! O! TechnoWise!


Thursday, January 30, 2020

ತಂತ್ರಜ್ಞ ತ್ರಿಪದಿಗಳು-೫೪೦ ಆರು ಗುರುಗಳು!

ತಂತ್ರಜ್ಞ ತ್ರಿಪದಿಗಳು-೫೪೦ ಆರು ಗುರುಗಳು!

ಅದು ಏನು? ಅದು ಯಾಕೆ? ಅದು ಹೇಗೆ? ಅದು ಎಂದು?
ಇದು ಎಲ್ಲಿ? ಇದು ಯಾರು? ಜೀವ ಜಗದೀಶ್ವರನ
ಹದನ ಬೋಧೆಯ ಗುರುಗಳಾರು! ತಂತ್ರಜ್ಞ!

TechnoWise Tripods-540 SIX GURUS

What is that? Why is that? How is that? When is that?
Where is this? Who is this? All the knowledge of Life, the Creator and the Universe
Are taught by these six Gurus! O! TechnoWise!



Wednesday, January 29, 2020

ತಂತ್ರಜ್ಞ ತ್ರಿಪದಿಗಳು-೫೩೯ ಆಸೆ

ತಂತ್ರಜ್ಞ ತ್ರಿಪದಿಗಳು-೫೩೯ ಆಸೆ

ಭೂಸುತೆಯ ರಾವಣನು, ದಾಶರಥಿಯರ ಅಸುರಿ
ಶ್ರೀಸೀತೆ ಸ್ವರ್ಣಹರಿಣವ ಬಯಸಿ, ಬಳಲಿದರು
ಆಸೆಯೇ ದುಃಖಕ್ಕೆ ಮೂಲ! ತಂತ್ರಜ್ಞ!

TechnoWise Tripods-539 DESIRE

Ravana desired for Sita, and his sister desired for both Rama and Laxmana!
Sita desired for the golden deer, and all of them suffered!
Desire is the root of all misery! O! TechnoWise!

Tuesday, January 28, 2020

ತಂತ್ರಜ್ಞ ತ್ರಿಪದಿಗಳು-೫೩೮ ಪಂಚ ಇಂದ್ರಿಯಪತ್ನಿ


ತಂತ್ರಜ್ಞ ತ್ರಿಪದಿಗಳು-೫೩೮ ಪಂಚ ಇಂದ್ರಿಯಪತ್ನಿ

ಪಾಂಚಾಲಿ ಪರಿ ಈಕೆ ಪಂಚ ಇಂದ್ರಿಯಪತ್ನಿ!
ಚಂಚಲೆಗೆ ಹಗಲಿರುಳು ಪತಿಸೇವೆ! ಪತಿಕನಸು!
ಕೊಂಚವೇ ಬಿಡುವು ನಡುರಾತ್ರಿ! ತಂತ್ರಜ್ಞ!

TechnoWise Tripods-538 WIFE  OF  FIVE SENSES

Like Draupadi of Mahabharata, she is the wife of five Senses!
Day and night this fickle lady is busy serving and dreaming about her husbands!
Takes some rest only in the middle of the night! O! TechnoWise!


Monday, January 27, 2020

ತಂತ್ರಜ್ಞ ತ್ರಿಪದಿಗಳು-೫೩೭ ಸಾಹಸಿಗನಾಗು!


ತಂತ್ರಜ್ಞ ತ್ರಿಪದಿಗಳು-೫೩೭ ಸಾಹಸಿಗನಾಗು!

ಜಯಿಸೆ ಸಾಹಸಿಯಾಗಿ, ನಾಯಕನ ಗೌರವವು!
ಜಯ ಲಭ್ಯವಾಗದಿರೆ, ಖಚಿತ ಪಥದರ್ಶಿ ಪದ!
ಭಯರಹಿತ ಸಾಹಸಿಗನಾಗು! ತಂತ್ರಜ್ಞ!

TechnoWise Tripod-537 BE  A  VENTURER

An esteemed leader you'll be, if you win in a Venture!
If you lose, an expert guide of help you'll be for others!
Be a Venturer in Life! O! TechnoWise!




Sunday, January 26, 2020

ತಂತ್ರಜ್ಞ ತ್ರಿಪದಿಗಳು-೫೩೬ ಇಂದೀ ಕ್ಷಣ!


ತಂತ್ರಜ್ಞ ತ್ರಿಪದಿಗಳು-೫೩೬ ಇಂದೀ ಕ್ಷಣ!

ಹಿಂದಿನದನೇ ಮಥಿಸೆ, ಇಂದು ಪಶ್ಚಾತ್ತಾಪ!
ಮುಂದಿನದನೇ ನೆನೆಯೆ, ಇಂದೆ ಚಿಂತೆಯ ಶಾಪ!
ಇಂದೀ ಕ್ಷಣದ ಮನ ಪ್ರದೀಪ! ತಂತ್ರಜ್ಞ!

TECHNOWISE TRIPODS-536  THE PRESENT MOMENT

Today also you'll suffer from repentance if you go on analyzing the past!
You'll have the curse of worry today itself if you go on thinking about the future!
A lustrous lamp is the still mind at the present moment! O! TechnoWise!





Saturday, January 25, 2020

ತಂತ್ರಜ್ಞ ತ್ರಿಪದಿಗಳು-೫೩೫ ವಿಶ್ವ - ವಿಶ್ವೇಶ್ವರ
ರವಿ ಕಾಣಿಸನು ರಾತ್ರಿ, ಅವನ ಬೆಳಕೇ ಜೊನ್ನ!
ಕವಿ ಕಾಣಿಸನು, ಅವನ ಕವನಗಾನವೆ ಜೇನು!
ಶಿವ ಮೌನ, ವಿಶ್ವ ಸಂಗೀತ! ತಂತ್ರಜ್ಞ!
TechnoWise Tripods-535 CREATION - CREATOR
The sun is unseen in the night, but the moonlight is his own light!
We may not see the poet, but the melody of his songs is like honey!
The creator is silent, but his creation is divine music! O! TechnoWise!



Friday, January 24, 2020

ತಂತ್ರಜ್ಞ ತ್ರಿಪದಿಗಳು-೫೩೪ ಬದಲಾವಣೆ

ತಂತ್ರಜ್ಞ ತ್ರಿಪದಿಗಳು-೫೩೪ ಬದಲಾವಣೆ

ಬದಲಾವಣೆಯ ಜಗದಿ ಎದುರುನೋಡುವ ನೀನು
ಅದನೆ ನಿನ್ನೊಳಗು ಹೊರಗುಗಳಲ್ಲಿ ಮಾಡು, ನೀ
ಅದಕಿದಕು ಎಲ್ಲದಕು ಮೂಲ! ತಂತ್ರಜ್ಞ!

TechnoWise Tripods-534 CHANGE

Whatever changes you want to see in the world,
Make it and show it within and without!
You are the source of all that and this and everything! O! TechnoWise!

Thursday, January 23, 2020

ತಂತ್ರಜ್ಞ ತ್ರಿಪದಿಗಳು-೫೩೩ ಆರೋಗ್ಯ TechnoWise Tripods-533 HEALTH


ತಂತ್ರಜ್ಞ ತ್ರಿಪದಿಗಳು-೫೩೩ ಆರೋಗ್ಯ
ಬರುವುದೌಷಧಿಯಿಂದ ಆರೋಗ್ಯವೆನ್ನುವೆಯ?
ಬರುವುದದು ಇರೆ ಮನದಿ ಆರಾಮ ಪ್ರೀತಿ ದಯೆ!
ಅರಳಿರಲು ನಗೆಮುಗುಳು ನಿತ್ಯ! ತಂತ್ರಜ್ಞ!
TechnoWise Tripods-533 HEALTH
Do you think Health always comes from medicine?
It comes most of the time from peace of mind, love and compassion in the heart!
It comes when the bud of smile blossoms daily! O! TechnoWise!