ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್ ನೆಟ್)
ಅಂತರ್ಜಾಲಸಮುದ್ರ- ಒಳಗಮಿತ ಸಂಪತ್ತು! ನಮಗೆ ಮುಕ್ತತೆಯಿರುವ ಡಿಜಿಟಲ್ ಜಗತ್ತು! ಜ್ಞಾನಪುಟಗಳ ಯಾನ ತೆರೆ ಮೇಲೆ ಹಡಗಂತೆ! ಬೆರಳೊತ್ತೆ ಮಾಹಿತಿಯ ಸಂತೆ! ತಂತ್ರಜ್ಞ!
TechnoWise Quatrains-005 Internet!
ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ. "ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು. ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್ ನೆಟ್)
ಅಂತರ್ಜಾಲಸಮುದ್ರ- ಒಳಗಮಿತ ಸಂಪತ್ತು! ನಮಗೆ ಮುಕ್ತತೆಯಿರುವ ಡಿಜಿಟಲ್ ಜಗತ್ತು! ಜ್ಞಾನಪುಟಗಳ ಯಾನ ತೆರೆ ಮೇಲೆ ಹಡಗಂತೆ! ಬೆರಳೊತ್ತೆ ಮಾಹಿತಿಯ ಸಂತೆ! ತಂತ್ರಜ್ಞ!
TechnoWise Quatrains-005 Internet!
ತಂತ್ರಜ್ಞ ಚೌಪದಿಗಳು-೦೦೩ ಚಿಂತೆಯ ಚೋರ!
ಮನದ ಶಾಂತಿಯ ಕದಿವ ದುಷ್ಟ
ಚೋರನು ಚಿಂತೆ,
ಕೆಳಗಿಳಿಸಬೇಕಾದ ಹಿರಿಹೊರೆಯ ಕಂತೆ!
ಮಬ್ಬು ತರುವುದು ಮನಕೆ ಅನುಮಾನ, ಭಯದ ಹೊಗೆ
ನೂಕುವುದು ಹರ್ಷವನು ಹೊರಗೆ!
ತಂತ್ರಜ್ಞ!
TechnoWise Quatrains-003 Worry, a Thief!
Worry is a thief that steals our peace,
It's a burden that we must release,
It clouds our minds
with fear and doubt,
And keeps our happiness locked up and out.
ತಂತ್ರಜ್ಞ ಚೌಪದಿಗಳು-೦೦೨ ಸಂತೋಷಪಡಿಸು!
ತಂತ್ರಜ್ಞ ತ್ರಿಪದಿಗಳ-೭೧೯ ಗುಲಾಬಿಯ ಹೊಸಕೊಡುಗೆ
ಮಳೆಬಿಲ್ಲೆ ಹೂವಾಗೆ- ವೈಭವದ ಮೆರವಣಿಗೆ!
ಗುಲಾಬಿಯ ಹೊಸ ಕೊಡುಗೆ- ಅಳಿಗಳಿಗೆ ರಸಗಳಿಗೆ!
ಬ್ರಹ್ಮಪ್ರೇಮದ ಓಲೆ ಬುವಿಗೆ! ತಂತ್ರಜ್ಞ!
As if
a rainbow sprang to life, in blossoms of roses in a parade!
A feast for bees, with
nectar sweet, Mother Nature’s party, by her hand!
A love letter from the
creator to the land! O! TechnoWise!
ತಂತ್ರಜ್ಞ ತ್ರಿಪದಿಗಳು-೭೧೮ ಕೃತಕ ಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆಗೆ ಇದೆ ತನ್ನದೇ ತಂತ್ರ!
ಯಂತ್ರಗಳು
ಯೋಚಿಸಲು ಕಲಿವ ತಾಂತ್ರಿಕ ಕ್ಷೇತ್ರ!
ಎಲ್ಲೆಡೆಯು ಇದೆ ಅದರ ಪಾತ್ರ! ತಂತ್ರಜ್ಞ!
TechnoWise Tripods-718 Artificial Intelligence