ತಂತ್ರಜ್ಞ ಚೌಪದಿಗಳು-೦೦೧ ತಾವರೆ ಹೂವು
ಚಿಟ್ಟೆರೆಕ್ಕೆಯ ಪರಿಯೆ ಚೆಲುವಿರುವ ಕಮಲದಳ
ತಂಗಾಳಿಗಲುಗುತಿವೆ ನಯವಾಗಿ ಬಹಳ!
ಚೆಲುವು ನಿಲುವುಗಳ ಸಂಕೇತ ತಾವರೆ ಹೂವು!
ಸಂತೋಷ ನಿಧಿಯು ಈ ಚೆಲುವು!
ತಂತ್ರಜ್ಞ!
TechnoWise Quatrains-001 The Lotus Flower
ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ. "ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು. ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
No comments:
Post a Comment