Saturday, April 11, 2020

ತಂತ್ರಜ್ಞ ತ್ರಿಪದಿಗಳು- ೫೯೦ ಪರಾನುಭೂತಿ


ತಂತ್ರಜ್ಞ ತ್ರಿಪದಿಗಳು- ೫೯೦ ಪರಾನುಭೂತಿ
ಭಾವಪ್ರೇಷಿತ ಕೇಂದ್ರ, ಜೀವಕೋಟಿಗಳೆಲ್ಲ
ನೋವು ನಲಿವಿನ ಅಲೆಗಳನು ಬಿತ್ತರಿಸುತಿರಲು,
ಓವಿ ಹಿಡಿ, ಹೃದಯಗ್ರಾಹಕದಿ! ತಂತ್ರಜ್ಞ!
TechnoWise Tripods-590 EMPATHY
The billion billion living beings, the transmitters of emotions,
Are constantly broadcasting waves of their happiness and pains!
Lovingly tune into their feelings through your Heart, the Receiver! O! TechnoWise!


Friday, April 10, 2020

ತಂತ್ರಜ್ಞ ತ್ರಿಪದಿಗಳು-೫೮೯ ಕರೊನಾದ ಹಿಂದೆ – ಮುಂದೆ




ತಂತ್ರಜ್ಞ ತ್ರಿಪದಿಗಳು-೫೮೯ ಕರೊನಾದ ಹಿಂದೆ – ಮುಂದೆ

ಕರೊನಾದ ಹಿಂದಿದ್ದ, ಕರೊನಾದ ಮುಂದಿರುವ
ಎರಡು ಜೀವನಶೈಲಿ ಕೆಂಪು-ಹಸುರಿನ ದೀಪ!
ಬರಲಿ ಹಸುರಧಿಕ! ಕೆಂಪಿಳಿದು! ತಂತ್ರಜ್ಞ!

TechnoWise Tripods-589 BEFORE and AFTER CORONA

Let the life-style be like the Red and Green traffic light!
In the periods before the Corona and after the Corona!
Make the period of Green more and more, and Red less and less! O! TechnoWise!


Thursday, April 9, 2020

ತಂತ್ರಜ್ಞ ತ್ರಿಪದಿಗಳು-೫೮೮ ಸ್ವಸ್ಥ ಬದುಕು!


ತಂತ್ರಜ್ಞ  ತ್ರಿಪದಿಗಳು-೫೮೮ ಸ್ವಸ್ಥ ಬದುಕು!
ಸ್ವಸ್ಥಿತಿಯು ಹೊರ ಪರಿಸ್ಥಿತಿಯನವಲಂಬಿಸದೆ,
ಸ್ಥಿತವಿರಲು ನಿನ್ನಂತರಂಗ ನಿರ್ದೇಶನದಿ,
ಸ್ವಸ್ಥ ಬದುಕಿನ ಸುಲಕ್ಷಣವು! ತಂತ್ರಜ್ಞ!
TechnoWise Tripods-588 HEALTHY  LIFE-STYLE
If your internal state is independent of external circumstances,
And is stable under your own internal control,
Then it is an auspicious sign of a healthy life-style! O! TechnoWise!


Wednesday, April 8, 2020

ತಂತ್ರಜ್ಞ ತ್ರಿಪದಿಗಳು-೫೮೭ ಯಾರು ಹಿತವರು ನಿನಗೆ?


ತಂತ್ರಜ್ಞ ತ್ರಿಪದಿಗಳು-೫೮೭ ಯಾರು ಹಿತವರು ನಿನಗೆ?
ಅತಿ ಹಿತರು ನಿನಗಾರು? ಪಿತನೆ? ಮಾತೆಯೆ? ಮತ್ತೆ
ಸತಿಸುತರೆ? ಮಿತ್ರ ಗುರು ಬಾಂಧವರೆ? ಯಾರವರು?
ಪ್ರಥಮ ಆದ್ಯತೆ ಶರೀರಕ್ಕೆ! ತಂತ್ರಜ್ಞ!
TechnoWise Tripods-587 WHO IS YOUR BEST BENEFACTOR?
Who is your best benefactor? Is your father? or mother?
Or your spouse and children? Or friends? teachers? relatives? who is the one?
Your first and your best benefactor is your own body! O! TechnoWise! 


Saturday, April 4, 2020


ತಂತ್ರಜ್ಞ ತ್ರಿಪದಿಗಳು-೫೮೪ ಜ್ಯೋತಿ- ಮತಿಯುನ್ನತಿಯ ಚಿಹ್ನೆ!
ಜ್ಯೋತಿವೇಗದ ವರ್ಗ, ವಸ್ತು-ಶಕ್ತಿಯ ಕೊಂಡಿ!
ಭೌತಿಕವು ಜೈವಿಕವು ಬ್ರಹ್ಮಕ್ಕೆ ಬೆಳಕಂಡಿ!
ಜ್ಯೋತಿ, ಮತಿಯುನ್ನತಿಯ ಚಿಹ್ನೆ! ತಂತ್ರಜ್ಞ!
TechnoWise Tripods-584 LIGHT IS THE SYMBOL OF EMINENT  INTELLIGENCE!
Light velocity is the link between Mass and Energy!
Physical and Biological entities are bright windows to Conscious Universe!
Light is the symbol of eminent Intelligence! O! TechnoWise!



Thursday, April 2, 2020

ತಂತ್ರಜ್ಞ ತ್ರಿಪದಿಗಳು-೫೮೧ ನಿನಗೆ ನಿನ್ನದೆ ಸಂಗದೋಷ!


ತಂತ್ರಜ್ಞ ತ್ರಿಪದಿಗಳು-೫೮೧ ನಿನಗೆ ನಿನ್ನದೆ ಸಂಗದೋಷ!
ಮನೆಯಲೊಬ್ಬನೆ ಇರಲು, ಘನಖಿನ್ನತೆಯು ಬರಲು,
ಜನರನ್ಯರಲ್ಲ ಕಾರಣರು ನಿನ್ನನು ಹೊರತು,
ನಿನಗೆ ನಿನ್ನದೆ ಸಂಗದೋಷ! ತಂತ್ರಜ್ಞ!
TechnoWise Tripods-581 YOUR OWN BAD COMPANY!
If you're miserable being alone in your own house,
Responsible no one else is for your misery!
Surely, you're in your own bad company! O! TechnoWise!




Wednesday, April 1, 2020

ತಂತ್ರಜ್ಞ ತ್ರಿಪದಿಗಳು-೫೮೦ ದುಡ್ಡಿರಲು ದೊಡ್ಡಪ್ಪನಲ್ಲ!


ತಂತ್ರಜ್ಞ ತ್ರಿಪದಿಗಳು-೫೮೦ ದುಡ್ಡಿರಲು ದೊಡ್ಡಪ್ಪನಲ್ಲ!
ದೊಡ್ಡವಳು ಭೂಮಾತೆ!  ದೊಡ್ಡದಿದೆ ಮಾನವತೆ!
ದೊಡ್ಡ ವರ ಆರೋಗ್ಯ!  ಜೀವಾತ್ಮವೇ ಭಾಗ್ಯ!
ದುಡ್ಡಿರಲು ದೊಡ್ಡಪ್ಪನಲ್ಲ! ತಂತ್ರಜ್ಞ!
TechnoWise Tripoda-580 MONEY ISN'T EVERYTHING!
Great is Mother Earth!  Great is Humanity!
Great boon is Health!  Life is real Wealth!
Money isn't Everything! O! TechnoWise!