ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್ ನೆಟ್)
ಅಂತರ್ಜಾಲಸಮುದ್ರ- ಒಳಗಮಿತ ಸಂಪತ್ತು! ನಮಗೆ ಮುಕ್ತತೆಯಿರುವ ಡಿಜಿಟಲ್ ಜಗತ್ತು! ಜ್ಞಾನಪುಟಗಳ ಯಾನ ತೆರೆ ಮೇಲೆ ಹಡಗಂತೆ! ಬೆರಳೊತ್ತೆ ಮಾಹಿತಿಯ ಸಂತೆ! ತಂತ್ರಜ್ಞ!
TechnoWise Quatrains-005 Internet!
ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ. "ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು. ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ಚೌಪದಿಗಳು-೦೦೫ ಅಂತರ್ಜಾಲ(ಇಂಟರ್ ನೆಟ್)
ಅಂತರ್ಜಾಲಸಮುದ್ರ- ಒಳಗಮಿತ ಸಂಪತ್ತು! ನಮಗೆ ಮುಕ್ತತೆಯಿರುವ ಡಿಜಿಟಲ್ ಜಗತ್ತು! ಜ್ಞಾನಪುಟಗಳ ಯಾನ ತೆರೆ ಮೇಲೆ ಹಡಗಂತೆ! ಬೆರಳೊತ್ತೆ ಮಾಹಿತಿಯ ಸಂತೆ! ತಂತ್ರಜ್ಞ!
TechnoWise Quatrains-005 Internet!
ತಂತ್ರಜ್ಞ ಚೌಪದಿಗಳು-೦೦೩ ಚಿಂತೆಯ ಚೋರ!
ಮನದ ಶಾಂತಿಯ ಕದಿವ ದುಷ್ಟ
ಚೋರನು ಚಿಂತೆ,
ಕೆಳಗಿಳಿಸಬೇಕಾದ ಹಿರಿಹೊರೆಯ ಕಂತೆ!
ಮಬ್ಬು ತರುವುದು ಮನಕೆ ಅನುಮಾನ, ಭಯದ ಹೊಗೆ
ನೂಕುವುದು ಹರ್ಷವನು ಹೊರಗೆ!
ತಂತ್ರಜ್ಞ!
TechnoWise Quatrains-003 Worry, a Thief!
Worry is a thief that steals our peace,
It's a burden that we must release,
It clouds our minds
with fear and doubt,
And keeps our happiness locked up and out.
ತಂತ್ರಜ್ಞ ಚೌಪದಿಗಳು-೦೦೨ ಸಂತೋಷಪಡಿಸು!
ತಂತ್ರಜ್ಞ ತ್ರಿಪದಿಗಳ-೭೧೯ ಗುಲಾಬಿಯ ಹೊಸಕೊಡುಗೆ
ಮಳೆಬಿಲ್ಲೆ ಹೂವಾಗೆ- ವೈಭವದ ಮೆರವಣಿಗೆ!
ಗುಲಾಬಿಯ ಹೊಸ ಕೊಡುಗೆ- ಅಳಿಗಳಿಗೆ ರಸಗಳಿಗೆ!
ಬ್ರಹ್ಮಪ್ರೇಮದ ಓಲೆ ಬುವಿಗೆ! ತಂತ್ರಜ್ಞ!
As if
a rainbow sprang to life, in blossoms of roses in a parade!
A feast for bees, with
nectar sweet, Mother Nature’s party, by her hand!
A love letter from the
creator to the land! O! TechnoWise!
ತಂತ್ರಜ್ಞ ತ್ರಿಪದಿಗಳು-೭೧೮ ಕೃತಕ ಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆಗೆ ಇದೆ ತನ್ನದೇ ತಂತ್ರ!
ಯಂತ್ರಗಳು
ಯೋಚಿಸಲು ಕಲಿವ ತಾಂತ್ರಿಕ ಕ್ಷೇತ್ರ!
ಎಲ್ಲೆಡೆಯು ಇದೆ ಅದರ ಪಾತ್ರ! ತಂತ್ರಜ್ಞ!
TechnoWise Tripods-718 Artificial Intelligence
ತಂತ್ರಜ್ಞ ತ್ರಿಪದಿಗಳು-೭೧೭ ಗುಲಾಬಿಗಳುದ್ಯಾನ
ಗುಲಾಬಿಗಳುದ್ಯಾನ, ಚೆಲುವು ಸೆಳೆಯುವ ಸ್ಥಾನ!
ಎಲ್ಲ ದಳ ವರ್ಣಪಟ, ಸುವಾಸನೆಗಳ ಸ್ನಾನ!
ನಲಿವ ಬಣ್ಣಗಳ ಆಸ್ಥಾನ! ತಂತ್ರಜ್ಞ!ತಂತ್ರಜ್ಞ ತ್ರಿಪದಿಗಳು ೭೧೬ ಮಂತ್ರಜ್ಞಾನ-ಯಂತ್ರಜ್ಞಾನ
ಮಂತ್ರಜ್ಞಾನವು ಬೇಕು, ಯಂತ್ರಜ್ಞಾನವು
ಬೇಕು
ತಂತ್ರಜ್ಞಾನದ ಮಾತೆ
ವಿಜ್ಞಾನವಿರಬೇಕು
ತಂತ್ರ ತಿಳಿದರೆ ಸಾಮರಸ್ಯ!
ತಂತ್ರಜ್ಞ!
TechnoWise Tripods-716 Knowledge of Hymns needed
Knowledge of Hymns is needed, and also the knowledge of machines,
Needed is the knowledge of Science, the mother of technology
Harmony if you know this secret! O! TechnoWise!