ತಂತ್ರಜ್ಞ ತ್ರಿಪದಿಗಳು-೬೦೯ ಪ್ರಜ್ಞೆ: ಜೀವ-ನಿರ್ಜೀವದಲಿ
ಮನ ಮತೀಂದ್ರಿಯ ಮೂರ ಮನುಜರಲಿ ಬೆಳಗಿಸುವ,
ಮನಸೇಂದ್ರಿಯವ ಮೃಗದಿ, ಇಂದ್ರಿಯವ ಸಸ್ಯದಲಿ,
ಖನಿಜದಲಿ ಸುಮ್ಮನಿದೆ! ಪ್ರಜ್ಞೆ! ತಂತ್ರಜ್ಞ.
TechnoWise Tripods-609 CONSCIOUSNESS: IN LIVING & NON-LIVING!
Lighting up the trio of Senses, Mind, and Intellect in Humans,
Illuminating the Senses and Mind in Animals, and only Senses in Plants,
The Consciousness just exists in Non-Living! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೮ ಪ್ರಕೃತಿ-ವಿಕೃತಿ-ಸಂಸ್ಕೃತಿ
ಪ್ರಕೃತಿಸಹಜವು ಉಣಲು ಸುಕೃತಫಲ ನಿನ್ನದನು!
ವಿಕೃತಿಯದು ಪರರ ವಸ್ತುವ ಸೆಳೆದು ಉಣ್ಣುವುದು!
ಸಂಸ್ಕೃತಿಯು ಉಣಿಸಿ ಉಣ್ಣುವುದು! ತಂತ್ರಜ್ಞ!
TechnoWise Tripods-608 GOOD - BAD - BEST
It is but natural to relish the fruits of your own good deeds!
But it is sheer ugliness to usurp and enjoy things belonging to others!
To feed others before you feed yourself is a divine culture! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೭ ಸೂಕ್ಷ್ಮಮನ ಗಾಜಿನಂತೆ!
ಸೂಕ್ಷ್ಮ ದೂರಕೆ ಹೊರಗೆ ವೀಕ್ಷಿಸೆ ಮಸೂರವದು!
ವೀಕ್ಷಿಸಲು ನಿನ್ನೊಳಗೆ ಒಳಕನ್ನಡಿಯ ಪರಿಯು!
ಸೂಕ್ಷ್ಮಮನವದು ಗಾಜಿನಂತೆ! ತಂತ್ರಜ್ಞ!
TechnoWise Tripods-607 SUBTLE MIND IS LIKE GLASS!
It is like a lens to externally see the micro and macro things!
When you want to see inside yourself, it becomes an internal mirror!
The subtle mind is like glass! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೬ ಕರ್ಮ! ಮತ್ತು ಪೂಜೆ!
ಕರ್ಮ-ಪೂಜೆ ವಿಭಿನ್ನ! ಮರ್ಮ ಮಾತ್ರ ಅಭಿನ್ನ!
ಕರ್ಮವನು ಶ್ರದ್ಧೆಯಲಿ ಪೂಜೆಯಂತೆಯೆ ಮಾಡೆ,
ಕರ್ಮ ಕೊನೆಗಾಗುವುದು ಪೂಜೆ! ತಂತ್ರಜ್ಞ!
TechnoWise Tripods-606 WORK! and WORSHIP!
Although Work and Worship appear different, their essence is the same!
When you go on doing your work devotedly as if it is a worship,
At the end, the Work becomes Worship! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೫ ವಿಶ್ವಗುರು ಬಸವಣ್ಣ
ಬುವಿಯ ಜನರನ್ನೆಲ್ಲ "ಇವ ನಮ್ಮವ"ನೆನುತ್ತ,
ಶಿವನೆಲ್ಲರಲು ಕಂಡ ಸಮಾನತೆಯನುಭಾವಿ,
ವಿಶ್ವಗುರು ಬಸವಣ್ಣ! ನಮನ! ತಂತ್ರಜ್ಞ.
TechnoWise Tripods-605 BASAVANNA, GURU OF THE WORLD
Calling all the people of the world as "My own",
As a mystic of equality, you saw God in everyone!
To Basavanna, the Guru of the world, offer salutations! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೪ ಕರೋನಾ-ಜನರು-ಪ್ರಕೃತಿ
ಒಳಬರಲು ಕೊರೋನಾ, ಅಳುತಲಿದ್ದರು ಜನರು,
ನಲಿಯುತ್ತಲಿದೆ ಪ್ರಕೃತಿ! ಹೊರಹೋಗೆ ಕೊರೋನಾ-
ಕಲಿಯೊ, ನಲಿಯಲು ಪ್ರಕೃತಿ ಜತೆಗೆ! ತಂತ್ರಜ್ಞ!
TechnoWise Tripods-604 Corona- People -Nature
Since Corona entered, although people are sorrowful,
Nature is peaceful! And when Corona leaves,
Learn to live and enjoy with Nature! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೩ ಗಣಿತಶಾಸ್ತ್ರ+-=?
ಭೂಪ್ರದೇಶದ ವಿವರ ಭೂಪಟವು ಕೊಡುವಂತೆ,
ರೂಪಕವ ನೀಡುವುದು ಗಣಿತಶಾಸ್ತ್ರದ ಮುಕುರ
ಪ್ರಪಂಚದರಿವನ್ನು ನರಗೆ! ತಂತ್ರಜ್ಞ!
TechnoWise Tripods-603 MATHEMATICS-+?
Like a map that shows the details of a terrain on earth,
The mirror of Mathematics shows a metaphorical image
Of the knowledge about the universe to humans! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೨ ಪುಸ್ತಕವು ಚಿತ್ತಕ್ಕೆ ಜ್ಯೋತಿ!
ಹಸ್ತದಲ್ಲೊಂದು ಇರೆ ಪುಸ್ತಕವು, ನಿನ್ನ ಮನ
ಸುತ್ತುವುದು ಮೈಮರೆಸಿ, ದೇಶಕಾಲಗಳಾಚೆ!
ಪುಸ್ತಕವು ಸಖ, ಚಿತ್ತ ಜ್ಯೋತಿ! ತಂತ್ರಜ್ಞ!
TechnoWise Tripods-602 A BOOK IS THE LIGHT OF THE MIND!
With a book in hand, you become unconscious of your body,
And your mind soars and roams beyond space and time!
A book is a friend, and for the Mind and Heart, a bright light! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೧ ಹಿಂದೆ-ಮುಂದೆ-ಇಂದು!
ಹಿಂದಾದುದಕೆ ತೃಪ್ತಿ, ಮುಂದೆ ಹೆಗ್ಗುರಿ ಪ್ರಾಪ್ತಿ,
ಇಂದು ಕರ್ತವ್ಯದಲಿ ಮನದ ಕೇಂದ್ರೀಕರಣ-
ನಿಂದಿರಲು ಚಿಂತೆಯೇ ನಾಸ್ತಿ! ತಂತ್ರಜ್ಞ!
TechnoWise Tripods-601 PAST- PRESENT- FUTURE
Full satisfaction about the Past, and high aim for the Future,
And concentrated mind in the duty of the Present,
Then the worry will be nil! O! TechnoWise!
ತಂತ್ರಜ್ಞ ತ್ರಿಪದಿಗಳು-೬೦೦ ಮನೆನೊಣ - ಜೇನುನೊಣ
ತಿನಿಸೊ ಹೊಲಸೋ ಕೆಸರೊ ನೊಣಕೆ ಸಿಂಹಾಸನವು!
ತನಿರಸ ಪರಾಗ ಪರಿಮಳ ಜೇನುನೊಣಕೊಲವು!
ನೊಣವಲ್ಲ, ಜೇನುನೊಣವಾಗು! ತಂತ್ರಜ್ಞ!
TechnoWise Tripods-600 HOUSE-FLY and HONEY-BEE!
Dead bodies, dirt and mud are all like thrones for a House-Fly!
Nectar, Pollen and Fragrance are the attractions for a Honey-Bee!
Not a House-Fly, but be a Honey-Bee! O! TechnoWise!
ತಂತ್ರಜ್ಞ ತ್ರಿಪದಿಗಳು-೫೯೯ ನಂಬಿಕೆ ... ಸಾಧನೆ
ತುಂಬ ಮಳೆ ಬರುತಿರಲು, ತುಂಬಿಕೊಳುವುದು ಸಾಧ್ಯ
ಚೊಂಬಿನೊಳೊ ಕೆರೆಯೊ ಅಣೆಕಟ್ಟಿನೊಳೊ ನೀರನ್ನು!
ನಂಬಿಕೆಯ ಗಾತ್ರ ಸಾಧನೆಯು! ತಂತ್ರಜ್ಞ!
TechnoWise Tripods-599 BELIEF ... ACHIEVEMENT
When it is raining heavily, you can collect and store water
Either in a mug, a lake, or in a big dam!
Your achievement will be as big as your belief! O! TechnoWise!
ತಂತ್ರಜ್ಞ ತ್ರಿಪದಿಗಳು-೫೯೮ ಪ್ರಜ್ಞೆ!!!
ಪ್ರಜ್ಞೆ ನಿನ್ನೊಳಗೆನಲು ವಿಜ್ಞಾನಿಯೊಪ್ಪುವನು!
ಪ್ರಜ್ಞೆಯಲಿ ನೀನೆನಲು ಪ್ರಾಜ್ಞ ಸರಿಯೆನ್ನುವನು!!
ಪ್ರಜ್ಞೆಯೇ ನೀನೆನುವ ಸ್ವಜ್ಞ!!! ತಂತ್ರಜ್ಞ!
TechnoWise Tripods-598 CONSCIOUSNESS!!!
Scientists agree when you say Consciousness is inside you!
Wise people agree when you say that you are in Consciousness!!
A self-realized one says that you are nothing but Consciousness!!! O! TechnoWise!
ತಂತ್ರಜ್ಞ ತ್ರಿಪದಿಗಳು-೫೯೭ ನಡೆಯದ ಗಡಿಯಾರ!
ನಡೆಯದೇ ಇರುವೊಂದು ಗಡಿಯಾರ ಸರಿ ಸಮಯ
ಬಿಡದೆರಡು ಬಾರಿ ದಿನದಲಿ ಕೊಡುವ ಪರಿ ಜಗದಿ
ಕಡುಪಾಪಿಗಳ ಪುಣ್ಯ ಕೆಲಸ! ತಂತ್ರಜ್ಞ!
TechnoWise Tripods-597 NON-FUNCTIONAL CLOCK!
Like the showing of correct time twice a day
By non-functional and stopped clocks,
Are the good deeds done by wicked people! O! TechnoWise!
ತಂತ್ರಜ್ಞ ತ್ರಿಪದಿಗಳು-೫೯೬ ಆಸ್ತಿಕ - ನಾಸ್ತಿಕ
ನಾಸ್ತಿ ಹೆಬ್ಬುಲಿಯೆಂದು ನಾಸ್ತಿಕನು ಮಲೆಯೇರೆ,
ಆಸ್ತಿಕನು ಮಲೆಗಿಳಿದ ನಂಬಿ, ಸಿದ್ಧತೆಯೊಡನೆ!
ಜಾಸ್ತಿ ರಕ್ಷಿತನಾರು? ಗ್ರಹಿಸು! ತಂತ್ರಜ್ಞ!
TechnoWise Tripods-596 THEIST - ATHEIST
The atheist entered the jungle believing tigers don't exist!
The theist entered the jungle with preparations, believing tigers do exist!
Among the two believers, who is safer more? O! TechnoWise!
ತಂತ್ರಜ್ಞ ತ್ರಿಪದಿಗಳು-೫೯೫ ಅರೆ-ಜ್ಞಾನ: ಅರಗದ ಆಹಾರ!
ಅರೆ-ದೃಷ್ಟಿ ಅರೆ-ಜ್ಞಾನ ಇರಲು ಧಾರ್ಮಿಕ ಭ್ರಾಂತಿ!
ಸರಿ-ದೃಷ್ಟಿ ಸರಿ-ಜ್ಞಾನ ಇರಲು ಸಮರಸ ಶಾಂತಿ!
ಅರಗದಾಹಾರ ಅರೆ-ಜ್ಞಾನ! ತಂತ್ರಜ್ಞ!
TechnoWise Tripods-595 HALF-BAKED KNOWLEDGE: UNDIGESTED FOOD!
Half-view and half-baked knowledge
are the root causes of religious fanaticism!
Harmony and peace prevail with holistic view and wisdom!
Like undigested food is half-baked knowledge! O! TechnoWise!
ತಂತ್ರಜ್ಞ ತ್ರಿಪದಿಗಳು-೫೯೪ ಮೊದಲು ಯಾವುದು?
ವೃಕ್ಷ, ಬೀಜದ ತಾಯೆ? ವೃಕ್ಷ, ಬೀಜದ ಮಗಳೆ?
ಹಕ್ಕಿ ಮೊಟ್ಟೆಗು ಮೊದಲೊ? ಜೀವ ಪ್ರಜ್ಞೆಗು ಮೊದಲೊ?
ಸೂಕ್ಷ್ಮ ವಿಕಸಿಸೆ ಭೂಮವೇನು? ತಂತ್ರಜ್ಞ!
TechnoWise Tripods-594 WHICH WAS THE FIRST?
Is tree the mother of seed? Or, is tree the daughter of seed?
Which was the first? Bird or Egg? Consciousness or Life?
Did Micro evolve into Macro? O! TechnoWise!
ತಂತ್ರಜ್ಞ ತ್ರಿಪದಿಗಳು-೫೯೩ ಹರುಷವಿಲ್ಲದೆ ಇರುವುದೆಂತು?
ನಿರೀಕ್ಷೆಯದೊಂದು ಸರ್ವರ ಹರ್ಷ ಪಡಿಸುವುದು-
ಹರುಷವೆಲ್ಲರು ಕೊಡುವ ನಿರೀಕ್ಷೆಯದಿನ್ನೊಂದು-
ಹರುಷ ಪಡದಿರಲೆರಡು ಮಾರ್ಗ! ತಂತ್ರಜ್ಞ!
TechnoWise Tripods-593 HOW TO REMAIN UNHAPPY?
Expecting to make everyone happy, and
Expecting that all others will make you happy,
Are the two ways of remaining unhappy! O! TechnoWise!
ತಂತ್ರಜ್ಞ ತ್ರಿಪದಿಗಳು-೫೯೧ ಚಿಂತಾಮಣಿಯಂತೀ ಕಾಲ!
"ಎಂತು ಕಳೆಯಲಿ ಕಾಲ?": ಇಂತು ಚಿಂತೆಯೆ ನಿನಗೆ?
ಕುಂತು ನಿಂತೇ ಕಾಲ ಕಳೆದುದಕೆ ಗೈ ಚಿಂತೆ!
ಚಿಂತಾಮಣಿಯಂತೀ ಕಾಲ! ತಂತ್ರಜ್ಞ!
TechnoWise Tripods-591 WISH FULFILLING GEM IS TIME!
Your worry should not be : "How to spend Time?"
Simply sitting and standing and wasting Time should be your worry!
Like a wish fulfilling gem is Time! O! TechnoWise!
ತಂತ್ರಜ್ಞ ತ್ರಿಪದಿಗಳು- ೫೯೦ ಪರಾನುಭೂತಿ
ಭಾವಪ್ರೇಷಿತ ಕೇಂದ್ರ, ಜೀವಕೋಟಿಗಳೆಲ್ಲ
ನೋವು ನಲಿವಿನ ಅಲೆಗಳನು ಬಿತ್ತರಿಸುತಿರಲು,
ಓವಿ ಹಿಡಿ, ಹೃದಯಗ್ರಾಹಕದಿ! ತಂತ್ರಜ್ಞ!
TechnoWise Tripods-590 EMPATHY
The billion billion living beings, the transmitters of emotions,
Are constantly broadcasting waves of their happiness and pains!
Lovingly tune into their feelings through your Heart, the Receiver! O! TechnoWise!