Thursday, June 28, 2018

ತಂತ್ರಜ್ಞ ತ್ರಿಪದಿಗಳು-೩೫೮ ಪ್ರತಿಭಟನೆ


ತಂತ್ರಜ್ಞ ತ್ರಿಪದಿಗಳು-೩೫೮ ಪ್ರತಿಭಟನೆ
ಕುಜನಕೃತ್ಯದ ಕೆಡುಕ, ಸುಜನವೃಂದವು ಕಂಡು,
ತ್ಯಜಿಸಿ ಜಾಡ್ಯದ ಮೌನ, ಪ್ರತಿಭಟಿಸದಿರುವುದೇ
ನಿಜದ ಕಾರಣ ದೌಷ್ಟ್ಯ ಹೆಚ್ಚೆ! ತಂತ್ರಜ್ಞ!
TechnoWise Tripods-358 ತಂತ್ರಜ್ಞ ತ್ರಿಪದಿಗಳು-೩೫೮ ಪ್ರತಿಭಟನೆ
The act of the good people not breaking their silence, and not protesting,
Even after seeing the evil deeds of bad people,
Is the real cause for the increase of bad deeds and problems in this world! O! TechnoWise!


Wednesday, June 27, 2018

ತಂತ್ರಜ್ಞ ತ್ರಿಪದಿಗಳು-೩೫೭ ಮರ-ನರ


ತಂತ್ರಜ್ಞ ತ್ರಿಪದಿಗಳು-೩೫೭ ಮರ-ನರ
ಮರಕಿಲ್ಲ ವೃದ್ಧಾಪ್ಯ! ಬರಿಯ ಬೆಳವಣಿಗೆಯಿದೆ!
ನರನಿಗಂತೆಯೆ ಇರದು ವೃದ್ಧಾಪ್ಯ! ಬೆಳವಣಿಗೆ 
ಹೊರಗಿರದೆ, ನಡೆದಿರಲಿ ಒಳಗೆ! ತಂತ್ರಜ್ಞ.
TechnoWise tripods-357 TREES-HUMANS
Trees don't get older, they are just growing!
In the same way, people don't get older, they just grow!
The human growth is internal, and not external! O! TechnoWise!


Tuesday, June 26, 2018

ತಂತ್ರಜ್ಞ ತ್ರಿಪದಿಗಳು ೩೫೬ ನಲಿ!


ತಂತ್ರಜ್ಞ  ತ್ರಿಪದಿಗಳು ೩೫೬ ನಲಿ! 
ಜಳಕಕೆಂದೇ ಬೇರೆ ಅಲೆ ಕಡಲಲಿರದಂತೆ
ನಲಿವಿಗೆಂದೇ ಬೇರೆ ಕಾಲ ಬಾಳಿನೊಳಿರದು!
ನಲಿ ಬಾಳ ಕಾಲದಲೆಯೊಡನೆ! ತಂತ್ರಜ್ಞ. 
TechnoWise Tripods-356 BE HAPPY
There're no special waves in the ocean for taking bath!
Likewise, there're no special days and times in life for being happy!
So Be Happy while swimming with the waves of time in life! O! TechnoWise!


Monday, June 25, 2018

ತಂತ್ರಜ್ಞ ತ್ರಿಪದಿಗಳು-೩೫೫ ಸಹಜಮಾರ್ಗ


ತಂತ್ರಜ್ಞ ತ್ರಿಪದಿಗಳು-೩೫೫ ಸಹಜಮಾರ್ಗ
ಹೊರಗಿಂದೊಡೆಯೆ ಮೊಟ್ಟೆ, ಮರಿ ಒಳಗೆ ಸಾಯುವುದು!
ಮರಿ ಹೊರಗೆ ಹಾರುವುದು, ಒಳಗಿಂದೊಡೆಯೆ ಮೊಟ್ಟೆ!
ಹೊರಬರಲಿ ಸಹಜದಲಿ ಸತ್ತ್ವ! ತಂತ್ರಜ್ಞ.
TechnoWise Tripods-355 NATURAL WAY
If you break the egg from outside, the growing chick dies inside!
When the egg naturally breaks from inside, the chick lively comes outside!
Let the inner existence come out naturally! O! TechnoWise!

Sunday, June 24, 2018

ತಂತ್ರಜ್ಞ ತ್ರಿಪದಿಗಳು-೩೫೪ ಬರೆ ಚಂದ, ಎದೆಯಿಂದ



ತಂತ್ರಜ್ಞ ತ್ರಿಪದಿಗಳು-೩೫೪ ಬರೆ ಚಂದ, ಎದೆಯಿಂದ

ಹೊರಗಿಂದ ಹೇರಿದರೆ, ಹೊರೆಯಾಗುವುದು ನಿಯಮ!
ಹೊರಹೊಮ್ಮಲೊಳಗಿಂದ, ಪರಿಮಳದ ಪರಿ ನಿಯಮ!
ಬರೆ ಚಂದ, ಎಲ್ಲ ಎದೆಯಿಂದ! ತಂತ್ರಜ್ಞ.
TechnoWise Tripods-354 BEAUTIFUL HEART

When discipline is imposed from outside, it is a heavy burden!
It is like sweet fragrance, when it blooms from inside!
Everything is beautiful when it comes from the Heart! O! TechnoWise!


Saturday, June 23, 2018

ತಂತ್ರಜ್ಞ ತ್ರಿಪದಿಗಳು-೩೫೩ ತರವಲ್ಲ ನಾಲಿಗೆಗೆ


ತಂತ್ರಜ್ಞ ತ್ರಿಪದಿಗಳು-೩೫೩ ತರವಲ್ಲ ನಾಲಿಗೆಗೆ
ಹರುಷವಿರೆ ವಾಗ್ದಾನ! ಬಿರುನುಡಿಯು ಕೋಪವಿರೆ!
ಸರಿತಪ್ಪು ನಿರ್ಣಯದ ಮಾತು ಗೊಂದಲಮನದಿ!
ತರವಲ್ಲ ಜಿಹ್ವೆಗೀ ಮೂರು! ತಂತ್ರಜ್ಞ.
TechnoWise Tripods-353 PROHIBITED FOR THE TONGUE
Words of promise when extremely happy! and harsh-tongued answers when in rage!
And Decisive talks when the mind is in terrible confusion!
These three are always prohibited for the Tongue! O! TechnoWise!






Friday, June 22, 2018

ತಂತ್ರಜ್ಞ ತ್ರಿಪದಿಗಳು-೩೫೨ ಸಮಸ್ಯೆಯ ಕೆಂಪುದೀಪ


ತಂತ್ರಜ್ಞ ತ್ರಿಪದಿಗಳು-೩೫೨ ಸಮಸ್ಯೆಯ   ಕೆಂಪುದೀಪ 
ಕೊಂಚ ಕಾದರೆ ನೀನು, ಸಂಚಾರ ಹಿಡಿದಿಡುವ
ಕೆಂಚುಬಣ್ಣದ ದೀಪ ಹಸುರಾಗುವಂತೆ ಪ್ರ
ಪಂಚದಲಿ ಸಮಸ್ಯೆಸ್ಥಿತಿಯು ತಂತ್ರಜ್ಞ.
TechnoWise Tripods-352 RED LIGHT OF PROBLEMS
If you wait for some more time, the traffic signal
Which is showing red now, will turn green!
The problems in life are similar!  O! TechnoWise!

Thursday, June 21, 2018

ತಂತ್ರಜ್ಞ ತ್ರಿಪದಿಗಳು-೩೫೧ ಧ್ಯಾನಯೋಗ


ತಂತ್ರಜ್ಞ ತ್ರಿಪದಿಗಳು-೩೫೧ ಧ್ಯಾನಯೋಗ
ಅರಳೆ ಕಮಲವು ಕಂಪು ಹೊರಸೂಸುವುದು ಸಹಜ!
ಇರಲು ಎದೆಯಲಿ ಹರುಷ, ಮುಖದಿ ನಗು ಬಲು ಸಹಜ!
ಇರಲು ಧ್ಯಾನದಿ ಹರುಷ ಸಹಜ! ತಂತ್ರಜ್ಞ.
TechnoWise Tripods-351 MEDITATION-YOGA
Emission of sweet fragrance is natural when a lotus blooms!
When there is joy in the heart, a smile in the face is natural!
When you're in meditation, joy is quite natural! O! TechnoWise!

Wednesday, June 20, 2018

ತಂತ್ರಜ್ಞ ತ್ರಿಪದಿಗಳು-೩೫೦ ರೇಷ್ಮೆಗೂಡು


ತಂತ್ರಜ್ಞ ತ್ರಿಪದಿಗಳು-೩೫೦ ರೇಷ್ಮೆಗೂಡು
ಆಚೀಚೆ ಧಾವಿಸುವ ಯೋಚನಾಸೂತ್ರದಲಿ
ಚಾಚು ತಪ್ಪದೆ ನೆಯ್ದ ರೇಷ್ಮೆಗೂಡಿನ ಬಂಧಿ!
ಈಚೆ ಬಾ! ಗೂಡನ್ನು ಒಡೆದು! ತಂತ್ರಜ್ಞ.
TechnoWise Tripods-350 SILK COCOON
You're a prisoner inside a fine cocoon of silk threads,
Made of incessantly jumping thoughts of all sorts!
Come out, breaking open this cocoon! O! TechnoWise!




Saturday, June 16, 2018

ತಂತ್ರಜ್ಞ ತ್ರಿಪದಿಗಳು-೩೪೮ ಪೆನ್ನು-ರಬ್ಬರು


ತಂತ್ರಜ್ಞ ತ್ರಿಪದಿಗಳು-೩೪೮ ಪೆನ್ನು-ರಬ್ಬರು
ಪರರ ಬಾಳಲಿ ಹರುಷ ಬರೆವ ಪೆನ್ನಾಗದಿರೆ,
ಇರುವ ದುಗುಡವನಳಿಸೆ ರಬ್ಬರಾದರು ಆಗು!
ಎರಡ ಸೇರಿಸಿ ಒಂದೆ ಆಗು! ತಂತ್ರಜ್ಞ.
TechnoWise Tripods-348 PEN-ERASER
If you can't be a Pen to write joy in someone's life,
Then atleast become a fine Eraser to remove the existing sorrow!
Be Two in One! O! TechnoWise.

Friday, June 15, 2018

ತಂತ್ರಜ್ಞ ತ್ರಿಪದಿಗಳು-೩೪೭ ಎದೆತುಂಬಿ ಮುಗಿದಿರುವೆ ಕೈ HEARTFELT THANKS


ತಂತ್ರಜ್ಞ ತ್ರಿಪದಿಗಳು-೩೪೭ ಎದೆತುಂಬಿ ಮುಗಿದಿರುವೆ ಕೈ
ಸ್ಮರಿಸಿ ಜನುಮದ ದಿವಸ, ಇರಿಸಿ ಚಿತ್ತದಿ ಪ್ರೀತಿ,
ಹರಸಿ ಹಾರೈಸಿರುವ ಬಂಧುಮಿತ್ರರಿಗೆಲ್ಲ
ಕರ ಜೋಡಿಸುವೆನು ಎದೆ ತುಂಬಿ! ತಂತ್ರಜ್ಞ.
TechnoWise Tripods-347 HEARTFELT THANKS
All my near and dear ones, who have remembered my birthday,
And conveyed greetings and godspeed, with full of love in the heart,
To them I join my palms and offer salutation with gratitude in my heart! O! TechnoWise!


Thursday, June 14, 2018

ತಂತ್ರಜ್ಞ ತ್ರಿಪದಿಗಳು-೩೪೬ ಎರಡಲಗುಗಳ ಖಡ್ಗ


ತಂತ್ರಜ್ಞ ತ್ರಿಪದಿಗಳು-೩೪೬ ಎರಡಲಗುಗಳ ಖಡ್ಗ
ವರ ಕೊಡುವ ಒಂದಲಗು! ಮರಣ ತರುವಿನ್ನೊಂದು!
ಎರಡಲಗುಗಳ ಖಡ್ಗ ಹಿಡಿದ ತಂತ್ರಜ್ಞಾನ!
ವರ ತರಲು ಬೇಕು ಸುಜ್ಞಾನ! ತಂತ್ರಜ್ಞ.
TechnoWise tripods-346 DOUBLE-EDGED SWORD
Technology is a sharp double-edged sword!
One edge is a saviour, and the other verily lethal!

When wisdom is kindled bright, it's a saviour! O! TechnoWise!


Wednesday, June 13, 2018

ತಂತ್ರಜ್ಞ ತ್ರಿಪದಿಗಳು-೩೪೫ ಬೆಲೂನುಗಳು ನಾವು


ತಂತ್ರಜ್ಞ ತ್ರಿಪದಿಗಳು-೩೪೫ ಬೆಲೂನುಗಳು ನಾವು
ಹಿರಿಕಿರಿಯ ಪರಿಪರಿಯ ಸಿರಿ ಬೆಲೂನೇ ನಾವು!
ಬಿರಿಯೆ ತೇಲುತ್ತ, ಒಳಗಾಳಿ ಹೊರಗೆ ವಿಲೀನ!
ವರಪ್ರಜ್ಞೆ ಒಳಗಾಳಿಯಂತೆ! ತಂತ್ರಜ್ಞ.
TechnoWise Tripods-345 BALLOONS WE ARE
We're all balloons of different sizes and shapes!
When a floating balloon bursts open, the air inside becomes one with the outside air!
The inner consciousness is like the inner air of balloons! O! TechnoWise.

Tuesday, June 12, 2018

ತಂತ್ರಜ್ಞ ತ್ರಿಪದಿಗಳು-೩೪೪ ಕಲಿ - ಕಲ್ಕಿ


ತಂತ್ರಜ್ಞ ತ್ರಿಪದಿಗಳು-೩೪೪ ಕಲಿ - ಕಲ್ಕಿ
ಅಲೆಯ ನಿಲಿಸುವುದೆಂತು? ಕಲಿ, ಕಡಲಲೀಜಲಿಕೆ!
ನಿಲಿಸಲಸದಳ ಕಾಲ! ಕಲಿ, ಸದ್ಬಳಕೆ ಮಾಡೆ!
ಕಲಿಯುಗದಿ ಕಲಿಕೆಯೇ ಕಲ್ಕಿ! ತಂತ್ರಜ್ಞ.
TechnoWise Tripods-344 LEARNING - KALKI
How to stop the ocean waves? You can only Learn how to swim with the waves!
You cann't stop time, but you can only Learn how to make good use of time!
Lifelong Learning is the incarnation of Kalki in this Era! O! TechnoWise!

Monday, June 11, 2018

ತಂತ್ರಜ್ಞ ತ್ರಿಪದಿಗಳು-೩೪೩ ಸಂಭ್ರಮಿಸಿ ಬದುಕು!



ತಂತ್ರಜ್ಞ ತ್ರಿಪದಿಗಳು-೩೪೩ ಸಂಭ್ರಮಿಸಿ ಬದುಕು!
"ಒಂದು ದಿನ ಮರಣ! ದಿಟ!" ಎಂದೆನಲು ಋಣವಾದಿ,
"ಚಂದ ಬದುಕಿದು! ಆಗು ಋಣಿ!" ಎನುವ ಧನವಾದಿ!
ಇಂದಿರುವ ಬದುಕ ಸಂಭ್ರಮಿಸು! ತಂತ್ರಜ್ಞ!
TechnoWise Tripods-343 CELEBRATE LIFE
Whe a pessimist sadly said that "Some day we will all die!"
An optimist with a radiant face said:"Yes, but be grateful for all other beautiful days when you are alive!"
Celebrate life every today! every now! till it lasts! O! TechnoWise!


Sunday, June 10, 2018

ತಂತ್ರಜ್ಞ ತ್ರಿಪದಿಗಳು-೩೪೨ ಕತ್ತರಿ- ಸೂಜಿದಾರ


ತಂತ್ರಜ್ಞ ತ್ರಿಪದಿಗಳು-೩೪೨ ಕತ್ತರಿ- ಸೂಜಿದಾರ
ಕತ್ತರಿಸಿ ವಿಭಜಿಸುವ ಕತ್ತರಿಯ ಪರಿ ಬುದ್ಧಿ!
ಬಿತ್ತರಿಸಿ ಬೆಸೆವ ಎದೆ ಸೂಜಿದಾರದ ರೀತಿ!
ಪ್ರೀತಿ ದಾರವು! ಎದೆಯೆ ಸೂಜಿ! ತಂತ್ರಜ್ಞ.
TechnoWise Tripods-342 SCISSORS - NEEDLE & THREAD
The Intellect always disects like the scissors that cuts and separates!
The Heart that unites and expands is like the needle and the thread!
The Heart is the Needle, and the love passing through it, is the Thread! O! TechnoWise.


Saturday, June 9, 2018

ತಂತ್ರಜ್ಞ ತ್ರಿಪದಿಗಳು-೩೪೧ ಕೇಂದ್ರದ ಅರಸುವಿಕೆ


ತಂತ್ರಜ್ಞ ತ್ರಿಪದಿಗಳು-೩೪೧ ಕೇಂದ್ರದ ಅರಸುವಿಕೆ
ಕೇಂದ್ರವಿರುವಂತೆ ಪ್ರತಿಯೊಂದು ಅಣು, ವೃತ್ತದಲಿ
ಚಂದ್ರಸೂರ್ಯರ ಮಹಾ ಬ್ರಹ್ಮಾಂಡ ವೃತ್ತದಲು!
ಕೇಂದ್ರವಿದನರಸುವವ ಋಷಿಯು! ತಂತ್ರಜ್ಞ.
TechnoWise Tripods-341 DISCOVERING THE CENTRE
Just as every circle and every atom has a centre,
So also this vast circle of manifestations of the universe of suns and moons!
To discover this centre is the aim of sages and scientists! O! TechnoWise!


Friday, June 8, 2018

ತಂತ್ರಜ್ಞ ತ್ರಿಪದಿಗಳು-೩೪೦ ಮನಶ್ಶಾಂತಿ


ತಂತ್ರಜ್ಞ ತ್ರಿಪದಿಗಳು-೩೪೦ ಮನಶ್ಶಾಂತಿ
ಎಣಿಕೆಯಲಿ ಘನತೆಯಿರೆ, ದನಿಯೊಪ್ಪೆ ಎದೆಯೊಳಗೆ,
ನಿನಗಿರುವ ಶಕ್ತಿಯನು ಮೀರಿ ಕಾರ್ಯವ ಗೈಯೆ,
ದಿನದ ಕೊನೆಯಲಿ ಮನಶ್ಶಾಂತಿ! ತಂತ್ರಜ್ಞ.
TechnoWise Tripods-340 PEACEFUL
If your intentions are noble, and the voice of the heart is in agreement,
And if you put in your very best in all your efforts,
You'll be at peace at the end of the day! O! TechnoWise!

Thursday, June 7, 2018

ತಂತ್ರಜ್ಞ ತ್ರಿಪದಿಗಳು-೩೩೯ ಸಂವಹನ


ತಂತ್ರಜ್ಞ ತ್ರಿಪದಿಗಳು-೩೩೯ ಸಂವಹನ
ನಯವಿರದು ಸಹಬಾಳ್ವೆ ಭಯ ಪರಸ್ಪರವಿರಲು,
ಭಯಕೆ ಕಾರಣ ಕೊರತೆ ಉಭಯರಲಿ ಸಂವಹನ!
ನಯನ ಸೇರಲು ಬರುವುದರಿವು! ತಂತ್ರಜ್ಞ.
TechnoWise Tripods-339 COMMUNICATION
When people fear each other, they fail to get along!
They fear each other when they don't know each other!
When the eyes meet and communicate, each knows the other! O! TechnoWise!