Thursday, April 27, 2017

ತಂತ್ರಜ್ಞ ತ್ರಿಪದಿ-44 ನಿಸರ್ಗ ಸೌಂದರ್ಯ

ತಂತ್ರಜ್ಞ ತ್ರಿಪದಿ-44 ನಿಸರ್ಗ ಸೌಂದರ್ಯ
ಎರಡು ಆಯಾಮಗಳ ಪರದೆಯಲಿ ಕತ್ತಲಲಿ
ಸುರಜಗದ ಚೆಲುವಿಗಿಂತಲು ಮಿಗಿಲು, ಬೆಳಕಿನಲಿ
ಮೂರು ಆಯಾಮದ ನಿಸರ್ಗ ತಂತ್ರಜ್ಞ .
NATURE'S  BEAUTY:
The three dimensional Nature that you see in the daylight is superior to two dimensional paradise that you see on the screen in darkness.

Wednesday, April 26, 2017

ತಂತ್ರಜ್ಞ ತ್ರಿಪದಿ-43 ಶ್ರೀಪ್ರಜೆಯ ಗಂತವ್ಯಗಣಿತ

ತಂತ್ರಜ್ಞ ತ್ರಿಪದಿ-43 ಶ್ರೀಪ್ರಜೆಯ  ಗಂತವ್ಯಗಣಿತ
ಸಂತಾಪ ಕಳೆಯುವುದು, ಸಂತೋಷ ಕೂಡುವುದು,
ಚಿಂತೆ ಭಾಗಾಹಾರ, ಕಾಯಕ ಗುಣಾಕಾರ
ಗಂತವ್ಯಗಣಿತ  ಶ್ರೀಪ್ರಜೆಗೆ  ತಂತ್ರಜ್ಞ .
MATHEMATICS OF A CITIZEN'S GOAL:
Mathematics of a good citizen's goal in life is to subtract Misery, add Joy, divide Worry, and multiply the Duties. 

ತಂತ್ರಜ್ಞ ತ್ರಿಪದಿ-42 ನೀ ಮೆಚ್ಚೆ


 ತಂತ್ರಜ್ಞ ತ್ರಿಪದಿ-42 ನೀ ಮೆಚ್ಚೆ
ಚೆನ್ನವೆನ್ನುತ ಮೆಚ್ಚೆ ನಿನ್ನ ಯೋಚನೆಯ ನೀ,
ಚಿನ್ನವೆನ್ನುತ ನಿನ್ನ ನಡೆನುಡಿಯ ನೀ ಮೆಚ್ಚೆ,
ರನ್ನ ನೀ ನಿನ್ನ ನೀ ಮೆಚ್ಚೆ ತಂತ್ರಜ್ಞ .
If you like what you think as good,
if you like what you speak and do as gold,
and if you like yourself, a pearl verily you are.

Tuesday, April 25, 2017

ತಂತ್ರಜ್ಞ ತ್ರಿಪದಿ-41 ತುಂಬಿದ ಕೊಡ

ತಂತ್ರಜ್ಞ ತ್ರಿಪದಿ-41 ತುಂಬಿದ ಕೊಡ
ತುಂಬಿ ಹಟ ಹಮ್ಮು ಚಟ! ತುಂಬಿದ ಕೊಡ ನೀ ದಿಟ!
ಹುಂಬನಾಗದೆ ಹಳೆಯ ಕೊಳೆ ಚೆಲ್ಲಿ ಶುಚಿಗೊಳಿಸಿ ತುಂಬೊಲವು ಶಾಂತಿ ಸಂತೋಷ ತಂತ್ರಜ್ಞ .
PITCHER, FULLY FILLED UP:
Filled with Obstinacy, Ego, and Addictions
You are a fully filled up pitcher. Don't be a dunce! Empty and clean your pitcher so that you can fill it with Love, Peace, and Joy.

Monday, April 24, 2017

ತಂತ್ರಜ್ಞ ತ್ರಿಪದಿ-40 ಮನೋನಿಯಂತ್ರಣ

ತಂತ್ರಜ್ಞ ತ್ರಿಪದಿ-40 ಮನೋನಿಯಂತ್ರಣ
ಜೀವನದಲಾಶಿಸುವ ಭಾವಗಳ ಲಾಲಿತ್ಯ,
ಭಾವನೆಯ ಔನ್ನತ್ಯ, ಕಾರ್ಯ ನೈಪುಣ್ಯಕ್ಕೆ
ಯಾವಾಗಲೂ ಮಣಿಸು ಮನಸು! ತಂತ್ರಜ್ಞ .
Mind Management:
Always manage the mind for achieving these three: Joy in Emotions, Grandeur in Thoughts, and Skill in Works.


Saturday, April 22, 2017

ತಂತ್ರಜ್ಞ ತ್ರಿಪದಿ-39 ಜೀವನ ಅತ್ಯಮೂಲ್ಯ

ತಂತ್ರಜ್ಞ ತ್ರಿಪದಿ-39 ಜೀವನ  ಅತ್ಯಮೂಲ್ಯ
ಮನ ಮೆಚ್ಚಿದವರೊಡನೆ ಅನುಭವದ ಸುಖದ ದಿನ,
ದಿನದ  ಆ  ಕ್ಷಣ ಕ್ಷಣಕೆ, ಸಲಿಸು ಅಭಿವಂದನೆಯ!
ಮನುಜ ಜೀವನ ಅತ್ಯಮೂಲ್ಯ! ತಂತ್ರಜ್ಞ .
Be thankful for every second of every day that you happily spend with the people you love!
Life is very precious and valuable.

ತಂತ್ರಜ್ಞ ತ್ರಿಪದಿ-38 ಏಕಾಕಿ

ತಂತ್ರಜ್ಞ ತ್ರಿಪದಿ-38 ಏಕಾಕಿ
ಬೇಕು ಪ್ರೀತಿಯ ಸೇತು! ಯಾಕೆ ಕಟ್ಟುವೆ ಕೋಟೆ?
ಬೇಕು ಹೃದಯದ ಹರಿವು! ಯಾಕೆ ಹಮ್ಮಿನ ಕಟ್ಟೆ?
ಏಕಾಕಿ ನಿಲುವೆ ನೀ! ಜೋಕೆ! ತಂತ್ರಜ್ಞ .
If you build walls instead of bridges of Love,
and if you build dams of Ego instead of flow from the Heart, beware! you will be lonely!

Friday, April 21, 2017

ತಂತ್ರಜ್ಞ ತ್ರಿಪದಿ-37 ತ್ರಿಕರಣ

ತಂತ್ರಜ್ಞ ತ್ರಿಪದಿ-37 ತ್ರಿಕರಣ
ಯಾರು ಇರದಿರೆ ಕೃತಿಯ, ಹಾರುವಾಲೋಚನೆಯ,
ನೂರು ಜನರಿರೆ ನುಡಿಯ, ಕುರಿತು ಎಚ್ಚರವಹಿಸು!
ತೋರು ಕೈ ಬಾಯಿ ಮನ ಶುದ್ಧಿ ತಂತ್ರಜ್ಞ .
Take care of your actions and jumping thoughts when no one sees you, and take care of your words when you are with hundreds of people. Show harmony of Action, Words, and Thoughts.

Wednesday, April 19, 2017

ತಂತ್ರಜ್ಞ ತ್ರಿಪದಿ-36 ಹಿಂದು- ಮುಂದು -ಇಂದು

ತಂತ್ರಜ್ಞ ತ್ರಿಪದಿ-36 ಹಿಂದು- ಮುಂದು -ಇಂದು
ಹಿಂದಿನ ದುಗುಡಮೋಡ, ಮುಂದಿನ ಭಯದ ಭೂತ
ಇಂದಿನ ದಿನದ ಸುಖದ ಸುಮವ ಬಾಡಿಸದಿರಲಿ
ಇಂದಿನೀ ಕ್ಷಣದಿ ಮನ ನಿಲಲಿ ತಂತ್ರಜ್ಞ .
Don't let the cloud of sadness of the Past and the ghost of fear of the Future wither the flower of happiness of today; let the mind be with the Present.

Tuesday, April 18, 2017

ತಂತ್ರಜ್ಞ ತ್ರಿಪದಿ-35 ಪರಿಚಿತರು- ಅರಿತವರು

ತಂತ್ರಜ್ಞ ತ್ರಿಪದಿ-35 ಪರಿಚಿತರು- ಅರಿತವರು
ಪರಿಚಿತರು ಬಹುಮಂದಿ, ಬೆರಳೆಣಿಕೆ ಅರಿತವರು;
ಪರಿಚಯವು ತೊಗಲಾಳ, ಕಡಲಾಳ ಅರಿಯುವಿಕೆ;
ಅರಿವು ಪರಿಪೂರ್ಣ ಪ್ರಜ್ಞಾನ ತಂತ್ರಜ್ಞ .
Many know us, but very few understand us. 
Knowing is skin-deep whereas understanding is ocean-deep. Understanding is perfect knowledge.

Sunday, April 16, 2017

ತಂತ್ರಜ್ಞ ತ್ರಿಪದಿಗಳು-34 ಹರ್ಷದ ಕೀಲಿಕೈ

ತಂತ್ರಜ್ಞ ತ್ರಿಪದಿಗಳು-34 ಹರ್ಷದ ಕೀಲಿಕೈ
ನಿನ್ನೊಳಗೆ ಇದೆ ಹರುಷಹೊನ್ನು ಸಂದೂಕದಲಿ;
ಇನ್ನೊಬ್ಬರಿಗೆ ಅದರ ಕೀಲಿಕೈ ಕೊಡಬೇಡ;
ನಿನ್ನ ಜೇಬಿನಲಿರಿಸಿ, ಬಳಸು ತಂತ್ರಜ್ಞ .
The gold of happiness is inside you in a box; Don't give its key to someone else; keep it safely in your pocket and use it beneficially. 

ತಂತ್ರಜ್ಞ ತ್ರಿಪದಿಗಳು-34 ಹರ್ಷದ ಕೀಲಿಕೈ

ತಂತ್ರಜ್ಞ ತ್ರಿಪದಿಗಳು-34 ಹರ್ಷದ ಕೀಲಿಕೈ
ನಿನ್ನೊಳಗೆ ಇದೆ ಹರುಷಹೊನ್ನು ಸಂದೂಕದಲಿ;
ಇನ್ನೊಬ್ಬರಿಗೆ ಅದರ ಕೀಲಿಕೈ ಕೊಡಬೇಡ;
ನಿನ್ನ ಜೇಬಿನಲಿರಿಸಿ, ಬಳಸು ತಂತ್ರಜ್ಞ .
The gold of happiness is inside you in a box; Don't give its key to someone else; keep it safely in your pocket and use it beneficially. 

ತಂತ್ರಜ್ಞ ತ್ರಿಪದಿ-33 ಗುರಿ-ದಾರಿ

ತಂತ್ರಜ್ಞ ತ್ರಿಪದಿ-33 ಗುರಿ-ದಾರಿ
ಪಯಣಕಾಲ ಸುದೀರ್ಘ, ಲಯನಯದಿ ಕಳೆಯದನು;
ಪಯಣಾಂತ್ಯ ಕ್ಷಣಮಾತ್ರ, ನಾಂದಿಯಿನ್ನೊಂದಕ್ಕೆ;
ಪ್ರಿಯವಿರಲಿ ಗುರಿ-ದಾರಿಯೆರಡು ತಂತ್ರಜ್ಞ .
As travel time is long, spend it wisely and smoothly; end of travel at destination is short and is simply a beginning for the next journey. Endear both journey and destination.

Saturday, April 15, 2017

ತಂತ್ರಜ್ಞ ತ್ರಿಪದಿ-32 ಎಣಿಸಿ ಕುಣಿ

ತಂತ್ರಜ್ಞ ತ್ರಿಪದಿ-32 ಎಣಿಸಿ ಕುಣಿ
ಎಣಿಸೆ ಸುಖಸಂತೋಷ, ಗಣಿಸದಲೆ ಸಂತಾಪ;
ಎಣಿಸೆ ಸಖಬಂಧುಗಳ, ವೈರಿಸಂಖ್ಯೆಯನಲ್ಲ;
ಕುಣಿವೆ ಋಣಿಯಿರುವೆ ಸಂಪದಕೆ ತಂತ್ರಜ್ಞ .
If you count your joys instead of woes;
If you count your dear ones instead of foes;
You'll happily dance and be thankful for your wealth.

Thursday, April 13, 2017

ತಂತ್ರಜ್ಞ ತ್ರಿಪದಿ-31 ಕುರಿ-ಕೇಸರಿ

ತಂತ್ರಜ್ಞ ತ್ರಿಪದಿ-31 ಕುರಿ-ಕೇಸರಿ
ಕುರಿ ರಾಜನಿರುವ ಕೇಸರಿಶತದ ಸೈನ್ಯ, ಕೇ
ಸರಿನಾಯಕತ್ವದಲಿ ಕುರಿಶತಕೆ, ಸೋಲುವುದು;
ಗರಿಗಿಂತ ಶರದ ಮೊನೆ ಮುಖ್ಯ ತಂತ್ರಜ್ಞ .
An army of 100 lions lead by a sheep, will be defeated by an army of 100 sheep lead by a lion; the Head of an arrow is more important than the feathers at the back.

Tuesday, April 11, 2017

ತಂತ್ರಜ್ಞ ತ್ರಿಪದಿ-30 ಹರುಷೋದಯ

ತಂತ್ರಜ್ಞ ತ್ರಿಪದಿ-30 ಹರುಷೋದಯ
ಹರುಷೋದಯವು ನಿನಗೆ ಪರರಿಗದನಿತ್ತಾಗ;
ಪರರಿಗೀಯುವ ನೆರವು ಬಲಗೊಂಡು ಮರಳುವುದು;
ಪರಿಮಳ ಕೊಡುವ ಕೈ ಸುಗಂಧ! ತಂತ್ರಜ್ಞ .
Happiness rises in you when you make others Happy; The help you give to others returns empowered; The hand is fragrant that sprinkles sweet scent on others.

Monday, April 10, 2017

ತಂತ್ರಜ್ಞ ತ್ರಿಪದಿ-29 ಆರು ಮಿತ್ರವರರು

ತಂತ್ರಜ್ಞ ತ್ರಿಪದಿ-29 ಆರು ಮಿತ್ರವರರು
ತಿಳಿನೀರು, ತಂಗಾಳಿ, ಬೆಳಕಿನಾಶೀರ್ವಾದ,
ಕುಳಿತ ಮನ, ದೇಹಶ್ರಮ, ಹಿತಮಿತದ ರಸದೂಟ
ತಿಳಿ, ಮಿತ್ರವರರಿವರು ಆರು! ತಂತ್ರಜ್ಞ .
The six Best Friends are Pure water, Fresh air, Blessings of sunshine, Rested mind, Physical work, and Good food.

ತಂತ್ರಜ್ಞ ತ್ರಿಪದಿ-28 ದಿಟದ ಮುಂದಾಳು

ತಂತ್ರಜ್ಞ ತ್ರಿಪದಿ-28 ದಿಟದ ಮುಂದಾಳು
ಹಿಂದಿರುವ ಕುರಿಹಿಂಡ ಕಂದರಕೆ ಬೀಳಿಸುವ
ಮುಂದಿರುವ ಕುರಿಯಲ್ಲ! ನಿಜದ ಮುಂದಾಳಿಂದ
ಹಿಂದಾಳು ಅರಳಿ, ಮುಂದಾಳು! ತಂತ್ರಜ್ಞ .
Unlike the sheep in the front leading the others to abyss, true Leaders don't create followers, but create more Leaders.

Sunday, April 9, 2017

ತಂತ್ರಜ್ಞ ತ್ರಿಪದಿ-27 ಆತ್ಮವಿಶ್ವಾಸ

ತಂತ್ರಜ್ಞ ತ್ರಿಪದಿ-27 ಆತ್ಮವಿಶ್ವಾಸ
ಜನ ಮೆಚ್ಚಬೇಕಿಲ್ಲ ಮನ ನಿನ್ನದೊಪ್ಪಿರಲು;
ನಿನಗಿರುವ ತೃಪ್ತಿಯೇ ಸಾಕು ಜಗಸಮ್ಮತಿಗೆ;
ಅನುಪಮವು ಆತ್ಮವಿಶ್ವಾಸ ತಂತ್ರಜ್ಞ .
If you believe in yourself, you need not convince the world.  If you are content with yourself, world's approval is unnecessary. Self confidence is incomparable. 

Friday, April 7, 2017

ತಂತ್ರಜ್ಞ ತ್ರಿಪದಿ-26 ಹಮ್ಮು

ತಂತ್ರಜ್ಞ ತ್ರಿಪದಿ-26 ಹಮ್ಮು
ಜಗವೆಲ್ಲ ಅಸ್ಪಷ್ಟ  ಹುಗಲು ಕಸ ಕಣ್ಣೊಳಗೆ;
ತೆಗೆವಂತೆ ಕಣ್ಣಕಸ, ಕಳೆಯೆ ಹಮ್ಮೊಳಗಿಂದ,
ಸಿಗುವ ನೋಟವು ಸ್ಪಷ್ಟ ಸತ್ಯ ತಂತ್ರಜ್ಞ .
When dust enters the eyes, you can't see anything clearly. When you clear the Ego, like you clear the dust, then only you will see the world clearly and truthfully. 

Thursday, April 6, 2017

ತಂತ್ರಜ್ಞ ತ್ರಿಪದಿ-25

ತಂತ್ರಜ್ಞ ತ್ರಿಪದಿ-25 ಚಿಂತೆ
ಮಾಡಿಂದ ಬಹುಮೇಲೆ ಹಾಡಿ ಹಾರಲಿ ಹಕ್ಕಿ!
ಗೂಡು ಕಟ್ಟದೆ ಇರಲಿ ಮನೆಯೊಳಗೆ! ಚಿಂತೆಗಳ
ಮಾಡಬಿಡದಿರು ಮನದಿ ಗೂಡು! ತಂತ್ರಜ್ಞ .
Let the birds fly above your house; 
and not build nests inside!
 Let the worries fly away and let them not build mental nests inside!

Wednesday, April 5, 2017

ತಂತ್ರಜ್ಞ ತ್ರಿಪದಿ-24 ನಿಸರ್ಗ ನಾಶ

ತಂತ್ರಜ್ಞ ತ್ರಿಪದಿ-24 ನಿಸರ್ಗ ನಾಶ
ಕೊಂಬೆ ತುದಿಯಲಿ ಕುಳಿತು, ಕೊಂಬೆ ಬುಡವನು ಕಡಿಯೆ,
ಇಂಬಿರದೆ ಬಿದ್ದಂತೆ- ಬುವಿಯತ್ತ ನೀ ಬಿಟ್ಟ
ಅಂಬು ಮರಳುವುದು ನಿನ್ನತ್ತ ತಂತ್ರಜ್ಞ .
As you fall down when you cut the stem sitting on the tip of the tree-branch, so also the arrow will return and hit you if you discharge a harmful arrow at mother earth.

Tuesday, April 4, 2017

ತಂತ್ರಜ್ಞ ತ್ರಿಪದಿ-23 ದಿನ

ತಂತ್ರಜ್ಞ ತ್ರಿಪದಿ-23 ದಿನ
ಹರುಷ ಕೊಡುವುದು ಸುದಿನ, ವರದಿನವು ನೆನಪು, ದು
ರ್ಭರ ದಿನವು ಪಾಠಗಳ, ಅನುಭವವ ದುರ್ದಿನವು;
ಮರುಗದಿರು ಯಾವುದೇ ದಿನಕು ತಂತ್ರಜ್ಞ .
Good days give Joy, Best days Reminiscences,
Worst days make you learn, bad days give experience;
Never regret a day in your life.