Saturday, December 31, 2022

 

ತಂತ್ರಜ್ಞ ತ್ರಿಪದಿಗಳು-೭೦ ಸುಜ್ಞಾನರವಿಯ ಹೊಸವರ್ಷ!

ಅಜ್ಞಾನ ನಿಶೆ ಕಳೆದು, ಪ್ರಜ್ಞಾನ ಉಷೆ ಬೆಳೆದು,

ವಿಜ್ಞಾನದಲಿ ಹೊಸತು, ತಂತ್ರಜ್ಞಾನದಿ ಒಳಿತು,

ಸುಜ್ಞಾನರವಿಯ ಹೊಸವರ್ಷ! ತಂತ್ರಜ್ಞ!

TechnoWise Tripods-709 A New Year of True Knowledge!

After the night of ignorance departs, may the dawn of wisdom come;

May a new science be discovered,  The technology used for good,

And the sun of true knowledge rises this new year! O! TechnoWise!


 TechnoWise Tripods-708 Bid Goodbye!

Let go of old mistakes, wraths, and enmities;

Preserve inside Old roots, principles, and values;

Bid goodbye to the previous year! O! TechnoWise! 

 

 ತಂತ್ರಜ್ಞ ತ್ರಿಪದಿಗಳು-೭೦ ಶುಭ ವಿದಾಯ!

ಹಳೆ ದೋಷ, ಹಳೆ ಸಿಟ್ಟು, ಹಳೆ ದ್ವೇಷ ಹೊರಗಿಟ್ಟು

ಹಳೆ ಬೇರು, ಹಳೆ ತತ್ತ್ವ, ಹಳೆ ಮೌಲ್ಯ ಒಳಗಿಟ್ಟು

ಕಳೆದ ವರ್ಷಕೆ ಶುಭ ವಿದಾಯ! ತಂತ್ರಜ್ಞ!


Saturday, April 17, 2021

ತಂತ್ರಜ್ಞ ತ್ರಿಪದಿಗಳು-೭೦೭ ನಿಯಂತ್ರಣ!

 


ತಂತ್ರಜ್ಞ ತ್ರಿಪದಿಗಳು-೭೦೭ ನಿಯಂತ್ರಣ!

ಉರಿದೇಳುವುದು ಅಗ್ನಿ, ಕಿರಣ ಕೇಂದ್ರೀಕರಿಸೆ!

ಚರವಾಗುವುದು ರೈಲು, ತಡೆಯೆ ಉಗಿ ಹರಡುವಿಕೆ!

ನರನೆ ಹರ, ಮನವ ಹಿಡಿದಿಡಲು! ತಂತ್ರಜ್ಞ!



TechnoWise Tripods-707 CONTROL!

If a light ray is focused and controlled, there appears the fire!

If the steam is contained and controlled, it pulls a long heavy train!

A human becomes divine when the jumping mind is controlled! O! TechnoWise!


Monday, April 12, 2021


 

ತಂತ್ರಜ್ಞ ತ್ರಿಪದಿಗಳು-೭೦೬ ಯುಗಾದಿ

ಯೋಗವಿದು ಸಿಹಿ ಕಹಿಯ, ಭೋಗ ಹೂ ಹಸಿರುಗಳ,

ಯಾಗ ಸಂತೋಷಗಳ, ತ್ಯಾಗ ಹಳೆ ದ್ವೇಷಗಳ,

ರಾಗ ಸುಸ್ವಾಗತ ಯುಗಾದಿ! ತಂತ್ರಜ್ಞ.

TechnoWise Tripods-706 Yugadi

It's the yoga of sweet and bitter, and a savoring of flowers and greenery;

It is a creative space for happiness, and bidding goodbye to old hatreds;

Its tune is welcoming Yugadi festival! O! TechnoWise!



Wednesday, January 13, 2021

TechnoWise Bipeds-1 Comparison

Comparing with others your own person,
is like comparing the moon with the sun!
When time comes, they have their own luminosity! Festivity! O! TechnoWise!


ತಂತ್ರಜ್ಞ ದ್ವಿಪದಿಗಳು-೧ ಹೋಲಿಸುವುದು


ಹೋಲಿಸಲು ಪರರೊಡನೆ ನಿನ್ನ! ಹೋಲಿಸಿದ ಪರಿ ಶಶಿ ರವಿಗಳನ್ನ!
ಕಾಲಬರಲವರದೇ ಕಾಂತಿ! ಸಂಕ್ರಾಂತಿ! ತಂತ್ರಜ್ಞ!