Sunday, November 8, 2020

ತಂತ್ರಜ್ಞ ತ್ರಿಪದಿಗಳು-೭೦೫ ಅಧಿಕತರ ಹೊಳಪು!



ತಂತ್ರಜ್ಞ ತ್ರಿಪದಿಗಳು-೭೦೫ ಅಧಿಕತರ ಹೊಳಪು!

ಅಮವಾಸ್ಯೆ ಕತ್ತಲಲಿ ಅಮಿತತರ ಹೊಳಪಿರುವ

ರಮಣೀಯ ನಕ್ಷತ್ರದಂತೆ ನರಸಾಧಕರ

ಸಮಸ್ಯೆಯಮವಾಸ್ಯೆಯಲಿ ಕಾಂತಿ! ತಂತ್ರಜ್ಞ!

TechnoWise Tripods-705 Brighter Twinkle!

Like stars shining brighter in the darkness of new-moon sky,

The stars of great achievements of humans twinkle brighter

In the new-moon darkness of problems! O! TechnoWise!



Thursday, November 5, 2020

ತಂತ್ರಜ್ಞ ತ್ರಿಪದಿಗಳು-೭೦೪ ನಿಗೂಢ ವಿಶ್ವ!!!

 


ತಂತ್ರಜ್ಞ ತ್ರಿಪದಿಗಳು-೭೦೪ ನಿಗೂಢ ವಿಶ್ವ!!!

ನಾವು ನೋಡುವ ವಿಶ್ವ! ಹಾವು ಬಾವಲಿ ವಿಶ್ವ!

ಜೀವಕೋಟಿಯ ವಿಶ್ವ- ಜೀವದಂತೆಯೆ ಭಿನ್ನ!

ವಿಶ್ವವಾಸ್ತವವತಿ ನಿಗೂಢ!!! ತಂತ್ರಜ್ಞ!

TechnoWise Tripods-704 MYSTERIOUS WORLD!!!

The world that we experience, and which the snakes and bats experience

Are all different like that of millions of species in the world!

The reality of the world is a mystery! O! TechnoWise!






Tuesday, October 27, 2020

ತಂತ್ರಜ್ಞ ತ್ರಿಪದಿಗಳು-೭೦೩ ತುಂಗಶಕ್ತಿಯ ಮತಿ!

 


ತಂತ್ರಜ್ಞ ತ್ರಿಪದಿಗಳು-೭೦೩ ತುಂಗಶಕ್ತಿಯ ಮತಿ!

ತುಂಗಶಕ್ತಿಯ ಮತಿಯ ಮಂಗಮನಸಿಗೆ ಕೊಡಲು,

ಮಂಗಳನ ಪ್ರಾಂಗಣಕೆ ಹಾರುವ ವಿಮಾನವನು

ಅಂಗಳದ ಸುತ್ತ ಎಳೆವಂತೆ! ತಂತ್ರಜ್ಞ!

TechnoWise Tripods-703 POWERFUL INTELLECT!

Keeping the all powerful intellect under the control of the monkey-mind,

Is like dragging a Spaceship, capable of flying to the threshold of the mars,

Around the small courtyard of your house! O! TechnoWise!



Monday, October 26, 2020

ತಂತ್ರಜ್ಞ ತ್ರಿಪದಿಗಳು-೭೦೨ ಧ್ಯಾನ! ಜ್ಞಾನ! ಮೌನ!



ತಂತ್ರಜ್ಞ ತ್ರಿಪದಿಗಳು-೭೦೨ ಧ್ಯಾನ! ಜ್ಞಾನ! ಮೌನ!

ನೀನಿಳಿಯೆ ನಿನ್ನೊಳಗೆ- ನೀನು ಗೈವುದು "ಧ್ಯಾನ"!

ನೀನರಿಯೆ ನೀ ನಿನ್ನ- ಅದುವೆ ಆತ್ಮದ "ಜ್ಞಾನ"!

ನೀನಳಿಯೆ- ದೈವಿಕದ "ಮೌನ"! ತಂತ್ರಜ್ಞ!

TechnoWise Tripods-702 MEDITATION! KNOWLEDGE! SILENCE!

When you go down inside yourself- it's Meditation!

When you know yourself- it's Self-Knowledge!

When your Ego vanishes- it's divine Silence! O! TechnoWise!

 


 

Sunday, October 11, 2020

ತಂತ್ರಜ್ಞ ತ್ರಿಪದಿಗಳು-೭೦೧ ಕರ್ಮ! ಮತ್ತು ಪೂಜೆ!

 


ತಂತ್ರಜ್ಞ ತ್ರಿಪದಿಗಳು-೭೦೧ ಕರ್ಮ! ಮತ್ತು ಪೂಜೆ!

ಪೂಜೆ ಮತ್ತದರೊಡನೆ ನಿಜ ಕರ್ಮ ಗೈ ಮೊದಲು!

ಪೂಜೆಯಂತೆಯೆ ಕರ್ಮ ಮಾಡಲೆರಡನೆ ಹೆಜ್ಜೆ!

ಪೂಜೆಯಾಗಲಿ ಕರ್ಮ! ಕೊನೆಗೆ! ತಂತ್ರಜ್ಞ

TechnoWise Tripods-701 WORK! and WORSHIP!

Do Work, along with it Worship, as the first step!

And the second step is to perform Work as Worship!

The Work becomes the Worship at the end! O! TechnoWise!





Monday, October 5, 2020

ತಂತ್ರಜ್ಞ ತ್ರಿಪದಿಗಳು-೭೦೦ ಹಿನ್ನೋಟ!

 


ತಂತ್ರಜ್ಞ ತ್ರಿಪದಿಗಳು-೭೦೦ ಹಿನ್ನೋಟ!

ಒಪ್ಪದಲಿ ಸತ್ತ್ವದಲಿ ಕುಪ್ಪಳಿಸಿ ಮೆರೆದಿದ್ದ

ಇಪ್ಪತ್ತರ ಶರೀರದೆಲ್ಲ ಕಣಗಳು ಮಾಯ-

ಎಪ್ಪತ್ತು ಕೊಡುವ ಹಿನ್ನೋಟ! ತಂತ್ರಜ್ಞ!

TechnoWise Tripods-700 BACKSIGHT!

The vanishing act of the billions of cells of the twenty-year-old body

Bubbling and glittering with youthful fitness and effervescing energy

Is the backsight which the seventy-year-old body gives! O! Technowise!



Sunday, October 4, 2020

 


ತಂತ್ರಜ್ಞ ತ್ರಿಪದಿಗಳು-೬೯೯ ಮೆದುಳುಗಳು!!!

ಯುದ್ಧ ಅತ್ಯಾಚಾರ, ಕ್ರುದ್ಧ ಹಿಂಸಾಚಾರ

ಬುದ್ಧ ಸಿದ್ಧರ ಧ್ಯಾನ, ಅತೀಂದ್ರಿಯಕೆ ಯಾನ

ಸಿದ್ಧವಿದು ಮೆದುಳು ಎಲ್ಲದಕು! ತಂತ್ರಜ್ಞ!

TechnoWise Tripods-699 BRAINS!!!

Bloody wars and violence, frenzy of outrage and nonsense

Meditation of awakened and enlightened ones, and transcendental bliss

Our brains are ready for everything! O! TechnoWise!