Wednesday, July 29, 2020

ತಂತ್ರಜ್ಞ ತ್ರಿಪದಿಗಳು-೬೮೩ ಪರಿಪೂರ್ಣ ಧ್ಯಾನ!


ತಂತ್ರಜ್ಞ ತ್ರಿಪದಿಗಳು-೬೮೩ ಪರಿಪೂರ್ಣ ಧ್ಯಾನ!
ಮರದಿಂದ ಮರಕೆ ಕಪಿ ಹಾರುವುದ ತಡೆದದನು
ಇರಿಸೆ ಮರವೊಂದರಲೆ, ಧ್ಯಾನವದು ಪರಿಪೂರ್ಣ
ಮರ-ಮಂಗ-ಮನ ಮಾಯವಾಗೆ! ತಂತ್ರಜ್ಞ!
TechnoWise Tripods-683 REAL MEDITATION!
Preventing the monkey from jumping from tree to tree,
And making it sit quietly on a single tree is real meditation,
When all the trio of Tree-Monkey-Mind vanish! O! TechnoWise! 

Monday, July 27, 2020

ತಂತ್ರಜ್ಞ ತ್ರಿಪದಿಗಳು-೬೮೨ ಸುಪ್ತ-ಪ್ರತ್ಯಕ್ಷ


ತಂತ್ರಜ್ಞ ತ್ರಿಪದಿಗಳು-೬೮೨ ಸುಪ್ತ-ಪ್ರತ್ಯಕ್ಷ
ನವಿಲುಗರಿಗಳ ಸೊಬಗು ಅವಿತಿಹುದು ತತ್ತಿಯಲಿ!
ಸವಿಯು ಗೊರಟಿನ ಒಳಗೆ ಸಿಹಿಮಾವು ಹಣ್ಣಿನಲಿ!
ಬುವಿಯಾಟ ಸುಪ್ತ-ಪ್ರತ್ಯಕ್ಷ! ತಂತ್ರಜ್ಞ!
TechnoWise Tripods-682 HIDE! and SEEK!
The beauty of peacock feathers is concealed in the eggs!
And the sweetness of mango fruits inside the seeds!
Mother earth is playing Hide and Seek! O! TechnoWise!




Saturday, July 25, 2020

ತಂತ್ರಜ್ಞ ತ್ರಿಪದಿಗಳು-೬೮೧ ಉದರಕೆ ಆಹಾರ!


ತಂತ್ರಜ್ಞ ತ್ರಿಪದಿಗಳು-೬೮೧ ಉದರಕೆ ಆಹಾರ!
ಬದುಕಿರಲು ಜೀವಿಗಳ ಉದರ ತುಂಬಲು ಬೇಕು!
ವಿದ್ಯುತ್ತೊ ತೈಲಗಳೊ ಯಂತ್ರದುದರಕು ಬೇಕು!
ಉದರವೇ ಮೊದಲು ಎಲ್ಲದಕು! ತಂತ್ರಜ್ಞ!
TechnoWise Tripods-681 FOOD FOR BELLY!
Like the much needed belly filling of living beings,
Electricity or oil are required for the belly of machines!
Belly filling is primary for everything! O! TechnoWise!





Friday, July 24, 2020

ತಂತ್ರಜ್ಞ ತ್ರಿಪದಿಗಳು-೬೮೦ ರಸಾನುಭವ!


ತಂತ್ರಜ್ಞ ತ್ರಿಪದಿಗಳು-೬೮೦ ರಸಾನುಭವ!
ಬಲು ಭಯದ ಭಾವ ಹೆಬ್ಬುಲಿ ಬರಲು ಗರ್ಜಿಸುತ!
ಹುಲಿಯ ಚಿತ್ರದ ಎದುರು ರಸದ ಮೃದುಲಾನುಭವ!
ಉಳಿಯುವುದು ರಸ, ಅಹಂ ಅಳಿಯೆ! ತಂತ್ರಜ್ಞ!
TechnoWise Tripods-680 AESTHETIC EXPERIENCE!
Intense feeling of fear when a roaring tiger approaches!
In front of a beautiful picture of a tiger, only aesthetic experience!
When the ego vanishes, what remains is aesthetic experience! O! TechnoWise!




Saturday, July 18, 2020

ತಂತ್ರಜ್ಞ ತ್ರಿಪದಿಗಳು-೬೭೮ ನುಡಿ!


ತಂತ್ರಜ್ಞ ತ್ರಿಪದಿಗಳು-೬೭೮ ನುಡಿ!
ವರುಷವೆರಡೇ ಸಾಕು ಸರಿನುಡಿಯ ಶಿಶು ಕಲಿಯೆ!
ಅರಿಯಲೇನನು ನುಡಿಯಬಾರದೆಂಬುದ ತಿಳಿಯೆ
ವರುಷ ನೂರಾದರೂ ಕಡಿಮೆ! ತಂತ್ರಜ್ಞ!f
TechnoWise Tripods-678 SPEECH!
It requires just two years for a child to learn how to speak!
But for elders to realize what not to speak-
Even hundred years are insufficient! O! TechnoWise!



Friday, July 17, 2020

ತಂತ್ರಜ್ಞ ತ್ರಿಪದಿಗಳು-೬೭೭ ವಿಮಾನ ಯಾನ!


ತಂತ್ರಜ್ಞ ತ್ರಿಪದಿಗಳು-೬೭೭ ವಿಮಾನ ಯಾನ!
ಭೂಮಿಯಲಿ ನಿನ್ನಿರವು ವಿಮಾನದೊಳಿರುವಂತೆ!
ವ್ಯೋಮ ಪ್ರಕ್ಷುಬ್ಧತೆಯು ಇಹಸಮಸ್ಯೆಗಳಂತೆ!
ರಮಿಸು ವಿರಮಿಸು ಪೂರ್ಣ ಯಾನ! ತಂತ್ರಜ್ಞ!
TechnoWise Tripods-677 AIR TRAVEL!
Living on earth is like traveling in an airplane!
The turbulence in the sky is like problems in life!
Enjoy and relax throughout the flight! O! TechnoWise!


Thursday, July 16, 2020

ತಂತ್ರಜ್ಞ ತ್ರಿಪದಿಗಳು-೬೭೬ ಪ್ರಜ್ಞಾಸೂರ್ಯ!!


ತಂತ್ರಜ್ಞ ತ್ರಿಪದಿಗಳು-೬೭೬ ಪ್ರಜ್ಞಾಸೂರ್ಯ!!
ಮನುಜ ಜಗವೆಲ್ಲವನು ದಿನಪ ಬೆಳಗಿಸುವ ಪರಿ
ಮನದ ಜಗವೆಲ್ಲವನು ಬೆಳಗುವುದು ಪ್ರಜ್ಞೆಛವಿ!
ದಿನಕಾರ್ಯಗಳಲಿರಿಸು ಪ್ರಜ್ಞೆ! ತಂತ್ರಜ್ಞ!
TechnoWise Tripods-676 THE SUN OF CONSCIOUSNESS!!
The light of Consciousness illuminates the world of the mind
Just like the sun lights up the world of humans!
Do all your worldly tasks consciously! O! TechnoWise!