Saturday, July 11, 2020

ತಂತ್ರಜ್ಞ ತ್ರಿಪದಿಗಳು-೬೭೨ ಯಜಮಾನ ಪ್ರಜ್ಞೆ!!!


ತಂತ್ರಜ್ಞ ತ್ರಿಪದಿಗಳು-೬೭೨ ಯಜಮಾನ ಪ್ರಜ್ಞೆ!!!
ಲೇಸು- ವ್ಯಕ್ತಿತ್ವ ಸುವಿಕಾಸಕ್ಕೆ ಮತಿಮನಸು
ದಾಸರಿರುವುದು ಸದಾ ಪ್ರಜ್ಞೆಯಜಮಾನನಿಗೆ!
ಕ್ಲೇಶ- ಮತಿಮನಸೊಡೆಯರಾಗೆ! ತಂತ್ರಜ್ಞ!

TechnoWise Tripods-672 CONSCIOUSNESS, the MASTER!!!
For Personality development, essential that the Mind and the Intellect
Are always servants to the real Master, the Consciousness!
Troublesome indeed if the Mind and the Intellect act like the Master! O! TechnoWise!





Friday, July 10, 2020

ತಂತ್ರಜ್ಞ ತ್ರಿಪದಿಗಳು-೬೭೧ ಇಪ್ಪತ್ತು - ಎಪ್ಪತ್ತು - "ನಾನು"


ತಂತ್ರಜ್ಞ ತ್ರಿಪದಿಗಳು-೬೭೧ ಇಪ್ಪತ್ತು - ಎಪ್ಪತ್ತು - "ನಾನು"
ಇಪ್ಪತ್ತರ ಶರೀರದೊಪ್ಪ ಯೋಚನೆಯೆಲ್ಲ
ಎಪ್ಪತ್ತರಲಿ ಮಾಯವಾಗಿ  ನಿಂದಿರೆ ಭಿನ್ನ,
ತಪ್ಪದಿದೆ ಬದಲಿರದೆ "ನಾನು" ತಂತ್ರಜ್ಞ!
TechnoWise Tripods-671 TWENTY - SEVENTY - "I AM"
Although the fitness and thoughts of the body in Twenties
Have disappeared and become different in Seventies,
Yet, what has remained unchanged in all these years is "I am"! O! TechnoWise!





Thursday, July 9, 2020

ತಂತ್ರಜ್ಞ ತ್ರಿಪದಿಗಳು-೬೭೦ ಹಳತು! - ಹೊಸತು!


ತಂತ್ರಜ್ಞ ತ್ರಿಪದಿಗಳು-೬೭೦ ಹಳತು! - ಹೊಸತು!
ತೈಲ ಸುರಿವವರಿರದೆ ಹಳೆಹಣತೆ ಅರೆ ಮಿಣುಕು!
ಇಳಿದು ವಿದ್ಯುತ್ತು ಹೊಸ ದೀಪವಾಗಿದೆ ಮಂಕು!
ಹಳತಿಲ್ಲ! ಹೊಸತು ಸರಿಯಿಲ್ಲ! ತಂತ್ರಜ್ಞ!
TechnoWise Tripods-670 THE OLD! -
THE NEW!
The old earthen lamp is flickering for want of oil!
Because of low voltage , the new electric light is dull!
The old is gone! The new one is out of order! O! TechnoWise!

Wednesday, July 8, 2020

ತಂತ್ರಜ್ಞ ತ್ರಿಪದಿಗಳು-೬೬೯ ನುರಿತ ನಾವಿಕ!


ತಂತ್ರಜ್ಞ ತ್ರಿಪದಿಗಳು-೬೬೯ ನುರಿತ ನಾವಿಕ!
ಬಿರುಗಾಳಿಯನು ತಡೆದು, ತೆರೆಗಳನು ನಿಲಿಸಿ ಸಾ
ಗರ ನಿಯಂತ್ರಿಸಲಾರೆ! ಭದ್ರ ನೌಕೆಯ ರಚಿಸೆ-
ನುರಿತ ನಾವಿಕನಾಗೆ- ಕಲಿಯೊ! ತಂತ್ರಜ್ಞ!
TechnoWise Tripods-669 EXPERT SAILOR!
You can't control either the oceanic tempest or the rising waves
Of the vast mighty ocean! But you can learn how to build
A safe and strong ship! and to become an expert sailor! O! TechnoWise!

Tuesday, July 7, 2020

ತಂತ್ರಜ್ಞ ತ್ರಿಪದಿಗಳು-೬೬೮ ತುಂಬುನಗು!+ಹರುಷ ಕಂಬನಿ!


ತಂತ್ರಜ್ಞ ತ್ರಿಪದಿಗಳು-೬೬೮ ತುಂಬುನಗು!+ಹರುಷ ಕಂಬನಿ!
ಹೊಂಬಿಸಿಲು-ಮಳೆಯಂತೆ ತುಂಬ ಅಪರೂಪ ಕ್ಷಣ,
ತುಂಬುನಗು-ಹರುಷಕಂಬನಿ ಬಾಳಿನಲಿ ಮಿಲನ!
ಸಂಭವಿಸೆ ಸ್ವರ್ಣಕ್ಕೆ ಘಮಲು! ತಂತ್ರಜ್ಞ!
TechnoWise Tripods-668 SUNSHINE!+RAIN!
Sunshine and Rain occurring together is very rare!
So also Laughter and Tears of Joy coming together!
If they occur, it is like gold getting sweet fragrance! O! TechnoWise!



Sunday, July 5, 2020

ತಂತ್ರಜ್ಞ ತ್ರಿಪದಿಗಳು-೬೬೭ಪ್ರಜ್ಞೆ!!!


ತಂತ್ರಜ್ಞ ತ್ರಿಪದಿಗಳು-೬೬೭ಪ್ರಜ್ಞೆ!!!
ಅಡಕವಿರೆ ಪ್ರಜ್ಞೆಯಲಿ, ಜಡಮನದ ಸ್ಥಿತಿಗತಿಯು!
ಅಡಕವಿಲ್ಲದ ಪ್ರಜ್ಞೆ- ಧ್ಯಾನಸ್ಥ ಮನದ ಸ್ಥಿತಿ!
ಅಡಗೆ ಮನ ಪ್ರಜ್ಞೆಯಲಿ, ಸಮಾಧಿ! ತಂತ್ರಜ್ಞ!
TechnoWise Tripods-667 CONSCIOUSNESS!
Consciousness with content, generates ordinary state of the fickle mind!
Consciousness without any content is the state of the meditative mind!
With the mind returning and vanishing in consciousness, it is Samadhi! O! TechnoWise!

Saturday, July 4, 2020

ತಂತ್ರಜ್ಞ ತ್ರಿಪದಿಗಳು-೬೬೬ ಮಾತು ಮತ್ತು ಮೌನ!


ತಂತ್ರಜ್ಞ ತ್ರಿಪದಿಗಳು-೬೬೬ ಮಾತು ಮತ್ತು ಮೌನ!
ತಲೆನೋವು ನಿನಗೆನುತ, ತಲೆನೋವ ವಿವರಿಸುತ
ತಲಪಿಸದಿರನ್ಯರಿಗೆ! ಎಷ್ಟೊ ಸಂದರ್ಭದಲಿ
ಮೈಲಿಗೆಯು ಮಾತು! ಮಡಿ ಮೌನ! ತಂತ್ರಜ್ಞ!
TechnoWise Tripods-666 WORDS and SILENCE!
Talking about your headache, and giving full descriptions,
Don't transfer it to your listeners! In many circumstances,
Words are dirt! and silence is immaculate! O! TechnoWise!