Wednesday, April 3, 2019

ತಂತ್ರಜ್ಞ ತ್ರಿಪದಿಗಳು-೫೧೧ ಟೊಳ್ಳು ಕೊಳಲು?


ತಂತ್ರಜ್ಞ ತ್ರಿಪದಿಗಳು-೫೧೧ ಟೊಳ್ಳು ಕೊಳಲು?
ಹಲವು ರಂಧ್ರದ ಟೊಳ್ಳು ಕೊಳಲೇನು ನರಬಾಳ್ವೆ?
ಇಳೆಯ ಮೋಹಿಸುವ ಕೃಷ್ಣನ ಕೊಳಲ ಜ್ಞಾಪಿಸಿಕೊ!
ಲಲಿತ ಸುಸ್ವರ ಗಾನ ಸಾಧ್ಯ! ತಂತ್ರಜ್ಞ.
TechnoWise Tripods-511 EMPTY  FLUTE?
Is Living, a bamboo flute with many holes and emptiness?
You recall the heavenly melody of Krishna's flute!
Your Life has the potential to create a sweet symphony! O! TechnoWise!




Tuesday, April 2, 2019

ತಂತ್ರಜ್ಞ ತ್ರಿಪದಿಗಳು-೫೧೦ ಚಂದ್ರೋದಯ - ಭೂಮ್ಯೋದಯ


ತಂತ್ರಜ್ಞ ತ್ರಿಪದಿಗಳು-೫೧೦ ಚಂದ್ರೋದಯ - ಭೂಮ್ಯೋದಯ
ಚಂದ್ರೋದಯಕು ಮಿಗಿಲು ಚಂದ ಭೂಮ್ಯೋದಯವು!
ಚಂದಿರನು ಚಂದ ದೂರಕ್ಕೆ, ಹತ್ತಿರಕಲ್ಲ!
ಚಂದ ಬುವಿ ದೂರ ಹತ್ತಿರಕು! ತಂತ್ರಜ್ಞ.
TechnoWise Tripods-510 Moon-rise  Earth-rise
More beautiful is Earth-rise than Moon-rise!
Moon is beautiful from far, and not from near!
Mother Earth is beautiful from far and near! O! TechnoWise!

Monday, April 1, 2019

ತಂತ್ರಜ್ಞ ತ್ರಿಪದಿಗಳು-೫೦೯ ನಿಜರೂಪ


ತಂತ್ರಜ್ಞ ತ್ರಿಪದಿಗಳು-೫೦೯ ನಿಜರೂಪ
ವರವಿದ್ಯೆ, ಕೌಶಲ್ಯ, ಸಿರಿ ನಿನ್ನಲಿರಬಹುದು!
ಪರರೊಡನೆ ನಿನ್ನ ನಡೆ ನುಡಿಯ ಕನ್ನಡಿ ಸ್ಪಷ್ಟ
ತೋರುವುದು ನಿನ್ನ ನಿಜರೂಪ! ತಂತ್ರಜ್ಞ.
TechnoWise tripods-509 TRUE  PICTURE
However educated, skilled, and well-to-do you may be,
The mirror of your liaison and interaction with others
Will ultimately show your true picture! O! TechnoWise.


Sunday, March 31, 2019

ತಂತ್ರಜ್ಞ ತ್ರಿಪದಿಗಳು-೫೦೮ ಬಾಧ್ಯತೆ


ತಂತ್ರಜ್ಞ ತ್ರಿಪದಿಗಳು-೫೦೮ ಬಾಧ್ಯತೆ
ಕಿರಿಮನೆಯ ಜತೆಯಲ್ಲ, ಹಿರಿಜಗದ ಮನೆಯೊಡನೆ,
ಗುರುತಿಸಿಕೊ ಜಗದಖಿಲ ಚರ-ಅಚರ ಜೀವಿ ಜತೆ!
ಬರುವ ಬಾಧ್ಯತೆ ಜಗದ ಮಟ್ಟ! ತಂತ್ರಜ್ಞ.
TechnoWise Tripods-508 OBLIGATION 
Identify yourself, not with a small house, but with a big house,
Replete with varieties of flora and fauna innumerable!
And the obligation you inherit will be of global level! O! TechnoWise!


Friday, March 29, 2019

ತಂತ್ರಜ್ಞ ತ್ರಿಪದಿಗಳು -೫೦೭ ಸತ್ಯ - ಮಿಥ್ಯ


ತಂತ್ರಜ್ಞ  ತ್ರಿಪದಿಗಳು -೫೦೭ ಸತ್ಯ - ಮಿಥ್ಯ
ಸಹಜವಿರುವುದೆ ಸತ್ಯ! ಬಹುಕೃತಕವಿರೆ ಮಿಥ್ಯ!
ಬಹಳ ಬೆಂಬಲದ ರಕ್ಷಣೆ ಬೇಕು ಮಿಥ್ಯಕ್ಕೆ!
ಇಹ ಸತ್ಯ ಅಸಹಾಯ ಶೂರ! ತಂತ್ರಜ್ಞ.
TechnoWise Tripods-507 TRUTH - FALSEHOOD
What is natural is Truth! That which is artificial is always False!
Falsehood requires lot of support and protection!
Truth is a hero in a one-man army! O! TechnoWise!



Thursday, March 28, 2019

ತಂತ್ರಜ್ಞ ತ್ರಿಪದಿಗಳು-೫೦೬ ಮಾನವೀಯತೆಯ ಮೌಲ್ಯ


ತಂತ್ರಜ್ಞ ತ್ರಿಪದಿಗಳು-೫೦೬ ಮಾನವೀಯತೆಯ ಮೌಲ್ಯ
ಧನಮೌಲ್ಯವಿನಿತಿಲ್ಲ ಮಾನವತೆ ಸದ್ಗುಣಕೆ!
ಜನಮನವ ಹೃದಯಮಿಲಿಯವ ಕೊಳುವ, ಸಲೆ ಗೆಲುವ
ಅನುಪಮದ ಶಕ್ತಿಯಿದೆ ಅದಕೆ! ತಂತ್ರಜ್ಞ.
TechnoWise Tripods-506 VALUE of HUMANENESS
No monetary value for humaneness and goodness!
But they have the power to win and purchase
Millions of Hearts! O! TechnoWise!






Wednesday, March 27, 2019

ತಂತ್ರಜ್ಞ ತ್ರಿಪದಿಗಳು-೫೦೫ ಪ್ರಜ್ಞಾವಂತ ನೆಲೆ


ತಂತ್ರಜ್ಞ ತ್ರಿಪದಿಗಳು-೫೦೫ ಪ್ರಜ್ಞಾವಂತ ನೆಲೆ
ಬಲಿತ ಪ್ರಜ್ಞಾವಂತ ನೆಲೆಯಿರದೆ ಬದುಕುವುದು
ಚಲನಚಿತ್ರಕೆ ಹೋಗಿ, ಪೂರ್ತಿ ನಿದ್ರೆಯ ಮಾಡಿ,
ನಿಲುವಂತೆ ಚಿತ್ರಾಂತ್ಯವಾಗೆ! ತಂತ್ರಜ್ಞ.
TechnoWise tripods-505 CONSCIOUS  BASE
Leading a life without a conscious base,
Is like going to a cinema, sleeping throughout,
And waking up bewildered when the cinema ends! O! TechnoWise.