Thursday, January 31, 2019

ತಂತ್ರಜ್ಞ ತ್ರಿಪದಿಗಳು-೪೮೭ ಹೊಣೆಯ ಮೂರ್ತಿ


ತಂತ್ರಜ್ಞ ತ್ರಿಪದಿಗಳು-೪೮೭ ಹೊಣೆಯ ಮೂರ್ತಿ
ಆನೆ, ದಸರೋತ್ಸವದ ಆನೆಯಂತಿರದೆ, ಮದ
ದಾನೆಯಂತಾಗಿ ಜನಜಾತ್ರೆ ನಡು ನುಗ್ಗದಿರು!
ನೀನು ಹೊರುವುದು ಹೊಣೆಯ ಮೂರ್ತಿ! ತಂತ್ರಜ್ಞ.
TechnoWise Tripods-487 IDOL OF RESPONSIBILITY
Instead of being a royal elephant of Dasara festival,
Don't become a rogue elephant and trample the humans!
What you're carrying is an exquisite idol of responsibility! O! TechnoWise! 




Wednesday, January 30, 2019

ತಂತ್ರಜ್ಞ ತ್ರಿಪದಿಗಳು-೪೮೬ ಜ್ಞಾನಿ - ಸತ್ಪ್ರಜೆ


ತಂತ್ರಜ್ಞ ತ್ರಿಪದಿಗಳು-೪೮೬ ಜ್ಞಾನಿ - ಸತ್ಪ್ರಜೆ
ಆನೆದಂತದ ಮನೆಯ ಜ್ಞಾನಿಗಿಂತಲು ಮೊದಲು
ಏನು? ಹೇಗೆಂದು? ಪ್ರಶ್ನಿಸುವ ಸಂವೇದನೆಯ
ಮಾನವೀಯತೆಯ ಪ್ರಜೆ ಮುಖ್ಯ! ತಂತ್ರಜ್ಞ.
TechnoWise Tripods-486 PUNDITS - CITIZENS
More than the Pundits living in their ivory towers,
The country requires sensitive and humane citizens,
Asking questions of What? How? and When? O! TechnoWise!


Monday, January 28, 2019

ತಂತ್ರಜ್ಞ ತ್ರಿಪದಿಗಳು-೪೮೫ ಜ್ಞಾಪಕ... ಕಲ್ಪನೆ


ತಂತ್ರಜ್ಞ ತ್ರಿಪದಿಗಳು-೪೮೫ ಜ್ಞಾಪಕ... ಕಲ್ಪನೆ
ಜ್ಞಾಪಕವು ಹಳೆಬೇರು! ಕಲ್ಪನೆಯು ಹೊಸಚಿಗುರು!
ಜ್ಞಾಪಿಸುತ... ಕಲ್ಪಿಸುತ... ತಾಪಚಿಂತೆಗಳೇಕೆ?
ಶಾಪವಾಗಿಸಬೇಡ... ವರವ! ತಂತ್ರಜ್ಞ.
TechnoWise Tripods-485 MEMORY... IMAGINATION
Memories are like old roots! and Imaginations like new leaves!
Why become remorseful and worried using Memory and Imagination?
Don't transform boons into curses! O! TechnoWise!




Saturday, January 26, 2019

ತಂತ್ರಜ್ಞ ತ್ರಿಪದಿಗಳು-484 ಎದೆಯಾಳದಲಿ ಜ್ಯೋತಿ


ತಂತ್ರಜ್ಞ ತ್ರಿಪದಿಗಳು-484 ಎದೆಯಾಳದಲಿ ಜ್ಯೋತಿ
ನಡು ಅಡವಿಯಲಿ ಗಂಧ! ಕಡಲಾಳದಲಿ ಮುತ್ತು!
ಪೊಡವಿಯಾಳದಿ ವಜ್ರ! ಇದೆಲ್ಲದಕು ಮಿಗಿಲು
ಒಡಲ ಎದೆಯಾಳದಲಿ ಜ್ಯೋತಿ! ತಂತ್ರಜ್ಞ.
TechnoWise Tripods-484 LIGHT IN THE HEART
Sandal wood in the middle of the forest! Pearls inside deep ocean!
Dimonds deep down in the earth! More than all these is: 
The Light in the heart! O! TechnoWise!


Wednesday, January 23, 2019

ತಂತ್ರಜ್ಞ ತ್ರಿಪದಿಗಳು-೪೮೩ ಅನುಕೂಲೆ ವಧು!


ತಂತ್ರಜ್ಞ ತ್ರಿಪದಿಗಳು-೪೮೩ ಅನುಕೂಲೆ ವಧು!
ಅನುಕೂಲೆ ವಧುವ ಜೀವನದಿ ಬಯಸುವೆಯೇನು?
ಅನುಕೂಲ ವರನು ನೀನಾದಾಗ, ಆಗುವಳು-
ಅನುಕೂಲೆ ನೀ ವರಿಸಿದವಳು! ತಂತ್ರಜ್ಞ.
TechnoWise Tripods-483 RIGHT  BRIDE!
Do you desire to find the right bride to marry?
When you yourself become the right groom-
Whomever you marry, becomes the right bride! O! TechnoWise!



Sunday, January 20, 2019

ತಂತ್ರಜ್ಞ ತ್ರಿಪದಿಗಳು-೪೮೨ ಪರೀಕ್ಷೆಯಲಿ ನಕಲು


ತಂತ್ರಜ್ಞ ತ್ರಿಪದಿಗಳು-೪೮೨ ಪರೀಕ್ಷೆಯಲಿ ನಕಲು 
ಶಾಲಾಪರೀಕ್ಷೆಗಳ ವೇಳೆ ಮಾಡಿದ ನಕಲು
ನಾಳೆ ಬಾಳಿನಲಿ ಮಾಡುವೆಯೇನು? ಸರ್ವರಿಗು
ಬಾಳ ಪತ್ರಿಕೆ ಪ್ರಶ್ನೆ ಭಿನ್ನ! ತಂತ್ರಜ್ಞ!
TechnoWise Tripods-482 COPYING  IN EXAMINATION HALLS
As you do mass copying in examination halls,
Can you do copying in real life also?
Alas! All have different question papers in the tests of Life! O! TechnoWise!



Saturday, January 19, 2019

ತಂತ್ರಜ್ಞ ತ್ರಿಪದಿಗಳು-೪೮೧ ದೃಷ್ಟಿ ಪರಿ ಸೃಷ್ಟಿ!


ತಂತ್ರಜ್ಞ ತ್ರಿಪದಿಗಳು-೪೮೧ ದೃಷ್ಟಿ ಪರಿ ಸೃಷ್ಟಿ!
ವ್ಯಷ್ಟಿಜೀವನದಿ "ಅದೃಷ್ಟ",  "ಅಪ್ರಜ್ಞೆ"ಯಿರೆ!
ಸೃಷ್ಟಿಸಲು "ಪ್ರಜ್ಞೆ"ಯಲಿ, ಗುರಿಯ "ಸಾಧನೆ" ಬಾಳು!
"ದೃಷ್ಟಿ ಪರಿ ಸೃಷ್ಟಿ"- ಇರೆ ಪ್ರಜ್ಞೆ! ತಂತ್ರಜ್ಞ.
TechnoWise Tripods-481 LIKE VISION IS CREATION!
The life, unconsciously created and happened,  is Fate! 
If consciously created, it is goal achievement!  
Your vision becomes your creation , if conscious! O! TechnoWise!