ತಂತ್ರಜ್ಞ ತ್ರಿಪದಿಗಳು-೪೬೫ ದೂರು
ದೂರುತ್ತಲಿರೆ ಪರರ, ದೂರವಾಗುವ ಗುರಿಗೆ!
ದೂರುತ್ತಲಿರೆ ತನ್ನ, ದಾರಿ ಕಾಣನು ಗುರಿಗೆ!
ದೂರದವ ದೂರವಿರ ಗುರಿಗೆ! ತಂತ್ರಜ್ಞ.
TechnoWise Tripods-465 COMPLAINING
The one who goes on complaining about others, will be far away from his goal!
The one has constant complaints about himself, will definitely miss the way to his goal!
He alone reaches the goal, who works without any complaints! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೪ ಕ್ರಿಸ್‌ಮಸ್ ಸಂದೇಶ
ಎದೆಯೊಳಗೆ ಪ್ರೀತಿಮಧು, ಅದರೊಡನೆ ದಯೆಯಮೃತ!
ಬದುಕಿನಲಿ ಹರುಷ, ನಗು; ವಿಶ್ವದಲಿ ಭ್ರಾತೃತ್ವ!
ಇದನು ಕ್ರಿಸ್‌ಮಸ್ ಹಬ್ಬ ತರಲಿ! ತಂತ್ರಜ್ಞ!
TechnoWise Tripods-464 CHRISTMAS MESSAGE
Honey of Love and nectar of Compassion in the Heart;
Joy and Smiles in Life; and sense of brotherhood in the World!
May Christmas shower all of them! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೩ ಆನೆ - ಇರುವೆ
ಇರಲು ನೀನಾನೆ- ಎಚ್ಚರದಿಂದ ಹೆಜ್ಜೆಯಿಡು!
ಇರುವೆಯಿರೆ- ನೀನು ಮನಬಂದಂತೆ ಅಲೆದಾಡು!
ಗುರು, ನಾಯಕರು ಆನೆಯಂತೆ! ತಂತ್ರಜ್ಞ.
TechnoWise Tripods-463 ELEPHANT - ANT
You will have to walk carefully, if you are an elephant;
You are free to move about as you like, if you are an ant!
Gurus and Leaders are like elephants! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೨ ನಿರ್ಧಾರಗಳು: ಸರಿ? ತಪ್ಪು?
ಕೆಟ್ಟ ನಿರ್ಧಾರಗಳು ಕೊಟ್ಟ ಅನುಭವ ಮುಂದೆ
ದಿಟ್ಟ ನಿರ್ಧಾರಗಳ ಕಟ್ಟಡದ ಅಡಿಗಟ್ಟು!
ಕೆಟ್ಟುದೊಳಿತಿನ ಮೆಟ್ಟುಗಲ್ಲು! ತಂತ್ರಜ್ಞ!
TechnoWise Tripods-462 DECISIONS: RIGHT? WRONG?
The experience gained by the taking of wrong decisions,
Are the brick stones of the foundation of subsequent good decisions!
A failure is the stepping stone for success! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೨ ನಿರ್ಧಾರಗಳು: ಸರಿ? ತಪ್ಪು?
ಕೆಟ್ಟ ನಿರ್ಧಾರಗಳು ಕೊಟ್ಟ ಅನುಭವ ಮುಂದೆ
ದಿಟ್ಟ ನಿರ್ಧಾರಗಳ ಕಟ್ಟಡದ ಅಡಿಗಟ್ಟು!
ಕೆಟ್ಟುದೊಳಿತಿನ ಮೆಟ್ಟುಗಲ್ಲು! ತಂತ್ರಜ್ಞ!
TechnoWise Tripods-462 DECISIONS: RIGHT? WRONG?
The experience gained by the taking of wrong decisions,
Are the brick stones of the foundation of subsequent good decisions!
A failure is the stepping stone for success! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೧ ಬುದ್ಧಿ - ಲದ್ದಿ
ಗಮನಿಸುವ ಗುಣಸಹಿತ ಭ್ರಮೆರಹಿತ ನಿರ್ಧಾರ,
ಅಮಿತ ಹರಿತವು ಬೇಕು, ಬುದ್ಧಿಯಾಗೆ ಪ್ರಸಿದ್ಧಿ!
ಸಮಯಕಿಲ್ಲದ ಬುದ್ಧಿ, -ಲದ್ದಿ! ತಂತ್ರಜ್ಞ.
TechnoWise Tripods-461 INTELLECT DROPPINGS
Along with good perception, ability to make proper decisions,
The Intellect becomes a celebrity when it is very sharp!
If it cannot make timely decisions, it is like droppings! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೦ ಬಾಳೊಂದು ರಾಸಾಯನಿಕ ಸೂಪ
ರಾಸಾಯನಿಕ ಸೂಪ ನೀ ಸಮೆವ ಈ ಬದುಕು!
ಈ ಸೂಪವಿರುವ ಶುಚಿರುಚಿಗೆ ನಿನ್ನದೆ ಅಡುಗೆ!
ಲೇಸಾಗಿ ಮಾಡು ನಳಪಾಕ! ತಂತ್ರಜ್ಞ.
TechnoWise Tripod-460 LIFE IS A CHEMICAL SOUP
The life you make is like a chemical soup!
For the flavour and taste of this soup, only you are responsible!
Be a cook of Nala's caliber! O! TechnoWise!
ತಂತ್ರಜ್ಞ ತ್ರಿಪದಿಗಳು-೪೫೯ ಜ್ಞಾಪನೆ - ಕಲ್ಪನೆ
ಜ್ಞಾಪನೆಯು, ಕಲ್ಪನೆಯು- ಗೌಪ್ಯಬಲ ನರಗೆರಡು!
ತಾಪ ಜ್ಞಾಪಿಸೆ ನಿನ್ನೆ! ಚಿಂತೆ ಕಲ್ಪಿಸೆ ನಾಳೆ!
ಶಾಪವಾಗದೆ ಇರಲಿ ವರವು! ತಂತ್ರಜ್ಞ.
TechnoWise Tripods-459 MEMORY - IMAGINATION
For humans, two secret boons are Memory and Imagination!
Brooding over a bad yesterday is misery, and imagining a worse tomorrow is worry!
Let not the boons become curses! O! TechnoWise!