Monday, October 1, 2018

ತಂತ್ರಜ್ಞ ತ್ರಿಪದಿಗಳು-೪೨೨ ಬೆಳಕಿನ ದಾರಿ


ತಂತ್ರಜ್ಞ ತ್ರಿಪದಿಗಳು-೪೨೨ ಬೆಳಕಿನ ದಾರಿ
ಬೆಳಕ ತೋರುವೆ ನೀನು, ಕೆಲವೊಮ್ಮೆ ಇತರರಿಗೆ!
ಬೆಳಕ ಬಯಸುವೆ ಬಹಳ, ಇನ್ನೊಮ್ಮೆ ಪರರಿಂದ!
ಬೆಳಕಿರಲು ಭರವಸೆಯ ದಾರಿ! ತಂತ್ರಜ್ಞ!
TechnoWise Tripods-422 LIGHTED  PATH
Some days you'll show light to others!
Some time you'll badly need light from others!
As long there is light, assured is the right way! O! TechnoWise!



Sunday, September 30, 2018

ತಂತ್ರಜ್ಞ ತ್ರಿಪದಿಗಳು-೪೨೧ ಇಂದಿನ ಚಿಂತೆ


ತಂತ್ರಜ್ಞ ತ್ರಿಪದಿಗಳು-೪೨೧ ಇಂದಿನ ಚಿಂತೆ
ಇಂದು ಮಾಡುವ ಚಿಂತೆ ಮುಂದಿನ ಸಮಸ್ಯೆಗಳ
ಒಂದಿಷ್ಟು ಬಿಡಿಸದಲೆ, ಇಂದಿನ ಪ್ರಶಾಂತಿ ಆ
ನಂದಗಳ ಮಾಡುವುದು ಧ್ವಂಸ! ತಂತ್ರಜ್ಞ!
TechnoWise Tripods-421 WORRYING TODAY
Your worrying today doesn't take away
Even a bit of tomorrow's troubles, but definitely takes away
Today's peace and happiness! O! TechnoWise!


Saturday, September 29, 2018

ತಂತ್ರಜ್ಞ ತ್ರಿಪದಿಗಳು-೪೨೦ ಕರ್ತಾರನ ಗರಿಮೆ


ತಂತ್ರಜ್ಞ ತ್ರಿಪದಿಗಳು-೪೨೦ ಕರ್ತಾರನ ಗರಿಮೆ
ಕಿರಿಯದಕು ಕೊನೆಯಿಲ್ಲ, ಹಿರಿಯದಕು ಕೊನೆಯಿಲ್ಲ!
ಅರಿವಿಗೂ ಕೊನೆಯಿಲ್ಲ, ಇರವಿಗೂ ಕೊನೆಯಿಲ್ಲ!
ಗರಿಮೆ ಕರ್ತಾರನದು ಸ್ಪಷ್ಟ! ತಂತ್ರಜ್ಞ.
TechnoWise Tripods-420 CREATOR, THE GREAT!
There's no end to the micros, and no end to the macros!
The knowledge is without an end, and the existence as well!
The Greatness of the Creator is evident! O! TechnoWise!


Monday, September 24, 2018

ತಂತ್ರಜ್ಞ ತ್ರಿಪದಿಗಳು-೪೧೯ ಕಾಫಿ-ಸತ್ಸಂಗ


ತಂತ್ರಜ್ಞ ತ್ರಿಪದಿಗಳು-೪೧೯ ಕಾಫಿ-ಸತ್ಸಂಗ

ರುಚಿ ಕಾಫಿಗಿದೆ ಸ್ವಂತ! ಖಚಿತ ಪ್ರಮಾಣದಲಿ 
ಶುಚಿಯ ಸಕ್ಕರೆ ಹಾಲು ಬೆರೆಸೆ ರುಚಿತಮದಂತೆ

ರುಚಿರ ಜೀವನಕ್ಕೆ ಸತ್ಸಂಗ! ತಂತ್ರಜ್ಞ

Technowise Tripods-419 COFFEE- GOOD COMPANY

Coffee, of course, has a taste of its own! But if you mix it with
Good milk and sugar, its taste is three-fold!
Your individual life becomes the best when you blend with right people! O! Technowise!




Thursday, September 20, 2018

ತಂತ್ರಜ್ಞ ತ್ರಿಪದಿಗಳು-೪೧೮ ಮನ-ಮತಿ-ಹೃದಯ


ತಂತ್ರಜ್ಞ ತ್ರಿಪದಿಗಳು-೪೧೮ ಮನ-ಮತಿ-ಹೃದಯ
ಜನ ಮೆಚ್ಚುವುದಕಿಂತ ಮನ ಮೆಚ್ಚುವುದು ಮುಖ್ಯ!
ಮನದ ಮೆಚ್ಚಿಗೆಗಿಂತ ನಿಶಿತಮತಿಯದು ಮುಖ್ಯ!
ಘನಹೃದಯ ಮುಖ್ಯಾತಿಮುಖ್ಯ!! ತಂತ್ರಜ್ಞ.
TechnoWise Tripods-418 MIND- INTELLECT - HEART
More than other people, your own Mind should approve your actions!
And the approval of  the sharp Intellect is more important than that of the Mind!
The approval of the Heart is of primary imporance! O! TechnoWise!





Saturday, September 15, 2018

ತಂತ್ರಜ್ಞ ತ್ರಿಪದಿಗಳು-೪೧೭ ನಾಕ-ನರಕ


ತಂತ್ರಜ್ಞ ತ್ರಿಪದಿಗಳು-೪೧೭ ನಾಕ-ನರಕ
ಬೆರೆಸಿ ಕ್ರೋಧದ್ವೇಷ ನರಕಲೋಕದ ಸೃಷ್ಟಿ!
ಸರಸ ಸಂತೋಷ ದಯೆಯಿರಿಸಿ ನಾಕದ ಸೃಷ್ಟಿ!
ನರಕ ನಾಕವೊ? ನಿನ್ನ ಸೃಷ್ಟಿ!!! ತಂತ್ರಜ್ಞ.
TechnoWise Tripods-417 HEAVEN - HELL
The building materials of Hell are anger, and hatred!
And those of Heaven are humour, joy, and compassion! 
Which one you want to create? Hell or Heaven?
O! TechnoWise!



ತಂತ್ರಜ್ಞ ತ್ರಿಪದಿಗಳು-೪೧೬ ನಿನ್ನೆ! ಇಂದು! ನಾಳೆ!


ತಂತ್ರಜ್ಞ ತ್ರಿಪದಿಗಳು-೪೧೬ ನಿನ್ನೆ! ಇಂದು! ನಾಳೆ!
ಪ್ರಿಯ ನಿನ್ನೆ! ನಮನ! ಅನುನಯದಿ ಕಲಿಸಿದೆ ಪಾಠ!
ಪ್ರಿಯ ಇಂದು! ನಮನ! ಉಡುಗೊರೆ ಅಮಿತ ತಂದುದಕೆ!
ಪ್ರಿಯ ನಾಳೆ! ನಮನ! ಸ್ವಾಗತಕೆ! ತಂತ್ರಜ್ಞ.
TechnoWise Tripods-416 YESTERDAY! - TODAY! - TOMORROW!
Dear Yesterday! Thank you for teaching all the lessons of life!
Dear Today! Thank you for being with me with all these valuable presents at present!
Dear Tomorrow! Thank you for your hearty invitation! O! TechnoWise!