ತಂತ್ರಜ್ಞ ತ್ರಿಪದಿಗಳು-೪೦೩ ನಗುವು- ಅಂತಶ್ಶಕ್ತಿ ಚಿಹ್ನೆ
ದುಗುಡವಿರದವರಲ್ಲ ಮುಗುಳುನಗುವವರೆಲ್ಲ!
ಸೊಗದ ಉಷೆ ಬರುವ ನಂಬಿಕೆ ಉಳ್ಳವರು ಅವರು!
ನಗುವು ಅಂತಶ್ಶಕ್ತಿ ಚಿಹ್ನೆ! ತಂತ್ರಜ್ಞ.
TechnoWise Tripods-403 SMILE - SYMBOL OF INNER STRENGTH
All those people with smiles are not free from difficulties!
It's only that they are hopeful of the arrival of the dawn of good times!
A smile is the symbol of inner strength! O! TechnoWise!
ತಂತ್ರಜ್ಞ ತ್ರಿಪದಿಗಳು-೪೦೨ ಗೊಂಬೆಮನೆ
ಮಗುವೊಂದು ಮನೆಯೊಳಗೆ ಬಗೆಮೆಚ್ಚಿ ಗೊಂಬೆಮನೆ
ನಗುತ ಕಟ್ಟುವ ಪರಿಯೆ ನಿನ್ನ ಕಿರುಜಗವ ಹಿರಿ
ಜಗದೊಳಗೆ ನೀ ಕಟ್ಟಿಕೊಳುವೆ ತಂತ್ರಜ್ಞ.
TechnoWise Tripods-402 DOLL HOUSE
Like a child building a Doll House inside the big house,
You live in a small universe of your own creation
Inside this vast universe of the unseen creator! O! TechnoWise!
ತಂತ್ರಜ್ಞ ತ್ರಿಪದಿಗಳು-೪೦೧ ನಗುವಿನ ಉಡುಪು
ಒಂದೆರಡು ಕ್ಷಣ ನಗಲು, ಚಂದ ಛಾಯಾಚಿತ್ರ!
ಚಂದವಾಗದೆ ಬಾಳ ಚಿತ್ರ ನಗುತಿರೆ ನಿತ್ಯ?
ಅಂದಾತಿಶಯ ನಗುವಿನುಡುಪು! ತಂತ್ರಜ್ಞ.
TechnoWise Tripods-401 DRESS OF SMILE
A few seconds of smile can make a photograph more beautiful!
Will it not make your life more beautiful when daily you smile?
A smile is the most gorgeous dress one can wear! O! TechnoWise!
ತಂತ್ರಜ್ಞ ತ್ರಿಪದಿಗಳು-೪೦೦ ಅವಕಾಶಗಳು
ಒದಗಿಸುವುದೆಲ್ಲದಕು ಬದುಕು ಬಹು ಅವಕಾಶ!
ಹದವರಿತು ಕಾಣ್ಕನಸು! ದುಡಿ ಮಾಡಲದ ನನಸು!
ಬದುಕಿಗಿಲ್ಲೆರಡು ಅವಕಾಶ! ತಂತ್ರಜ್ಞ.
TechnoWise Tripods-400 CHANCES
There are many chances for everything in life!
With full awareness, dream something big, and work to make it a reality!
There is no chance of another life! O! TechnoWise!
ತಂತ್ರಜ್ಞ ತ್ರಿಪದಿಗಳು-೩೯೯ ವಿಲಯ ಗದ್ದಲ! - ಸೃಷ್ಟಿ ಮೌನ!
ಮೊಳೆವಾಗ ನಿಶ್ಶಬ್ದ! ಬೆಳೆವಾಗ ನಿಶ್ಶಬ್ದ!
ಬಲು ಶಬ್ದ ಕಡಿವಾಗ! ಮತ್ತೆ ಮರ ಬಿದ್ದಾಗ!
ವಿಲಯ ಗದ್ದಲ! ಸೃಷ್ಟಿ ಮೌನ! ತಂತ್ರಜ್ಞ!
TechnoWise Tripods-399 NOISY DESTRUCTION!- silent creation!
A seed germinates silently! and further grows silently!
A big sound when a tree is cut! and a huge thud when it falls!
Destruction is noisy! whereas Creation is Silent! O! TechnoWise!
ತಂತ್ರಜ್ಞ ತ್ರಿಪದಿಗಳು-೩೯೮ ಪ್ರತ್ಯೇಕತೆ
ನಿತ್ಯ ಸುಖಿಸಲು ಇಂದು ಹತ್ಯಾರು ನೂರು ವಿಧ!
ದೈತ್ಯ ಜ್ಞಾನದ ಜತೆಗೆ ಖಿನ್ನತೆಗೆ ಕಾರಣವು
ಪ್ರತ್ಯೇಕತೆಯ ಮಿಥ್ಯ ಭಾವ! ತಂತ್ರಜ್ಞ.
TechnoWise Tripods-398 EXCLUSIVENESS
Present era has so many gadgets and so many comforts for enjoyment!
The reason for so much of depression in the midst of voluminous knowledge
Is the false feeling of exclusiveness from others! O! TechnoWise!
ತಂತ್ರಜ್ಞ ತ್ರಿಪದಿಗಳು-೩೯೭ ಮನಸ್ಸು - ಮಾತು
ಇಡಬೇಕು ಅಂತರವ ನುಡಿ-ಮನಸುಗಳ ನಡುವೆ!
ನುಡಿಗಿಲ್ಲ ಮನಕಿರುವ ಬದಲಾಗುವಾಯ್ಕೆಗಳು!
ನುಡಿ ಬಾಯಿಬಿಲ್ ಬಿಟ್ಟ ಬಾಣ! ತಂತ್ರಜ್ಞ!
TechnoWise Tripods-397 MIND - SPEECH
Keep sufficient distance between Mind and Speech!
The spoken Words never have the options to change like the Mind!
Words are the arrows released from the bow of the mouth! O! TechnoWise!