Wednesday, April 25, 2018

ತಂತ್ರಜ್ಞ ತ್ರಿಪದಿಗಳು-೩೧೫ ಅಷ್ಟಾವಕ್ರ-ಮನ್ಮಥ


ತಂತ್ರಜ್ಞ ತ್ರಿಪದಿಗಳು-೩೧೫ ಅಷ್ಟಾವಕ್ರ-ಮನ್ಮಥ
ಅಷ್ಟವಕ್ರತೆ ದೇಹಕೆಷ್ಟಿದ್ದರೇನಂತೆ?
ಶಿಷ್ಟಪ್ರೀತಿಯ ದಯೆಯ ರವಿ ಹೃದಯನಭದೊಳಿರೆ
ಸೃಷ್ಟಿಯಲಿ ಮನ್ಮಥನು ಅವನೆ! ತಂತ್ರಜ್ಞ.
TechnoWise Tripods-315 GAWKY-CUPID
One may be physically challenged in eight or more ways!
But if the sun of love and compassion shines in the sky of his heart,
He's the most handsome person in the world! O! TechnoWise!




ತಂತ್ರಜ್ಞ ತ್ರಿಪದಿಗಳು-೩೧೪ ಬಲು ಕಡಿಮೆ ಕಾಲ


ತಂತ್ರಜ್ಞ ತ್ರಿಪದಿಗಳು-೩೧೪ ಬಲು ಕಡಿಮೆ ಕಾಲ
ಅಲೆಗೈಯ ಬಿಳಿನೊರೆಯ ಜಲಧಿಯದೆ ಬಲು ಸನಿಹ!
ಹೊಲಕೆ ಹಸಿರನು ಜೀವಜಾಲಕುಸಿರನು ಹರಿಸು!
ಬಲು ಕಡಿಮೆ ನಿನಗಿರುವ ಕಾಲ! ತಂತ್ರಜ್ಞ.
TechnoWise Tripods-314 TIME IS VERY SHORT:
The ocean is very near and welcoming with wavy hands and white foams!
May your flow bring greenery to the fields and energy to the web of life!
Time available for you is very short! O! TechnoWise!





Tuesday, April 24, 2018

ತಂತ್ರಜ್ಞ ತ್ರಿಪದಿಗಳು-೩೧೩ ಪರಿವರ್ತಿಸಿಕೊ ನಿನ್ನ!


ತಂತ್ರಜ್ಞ ತ್ರಿಪದಿಗಳು-೩೧೩ ಪರಿವರ್ತಿಸಿಕೊ ನಿನ್ನ!
ಪರಿಪರಿಯ ಕಟುನುಡಿಯ, ಸರಿಯಿರದ ವರ್ತನೆಯ
ಪರರು ತೋರಿಸಲವರ ಪರಿವರ್ತಿಸುವೆಯೆಂತು?
ಪರಿವರ್ತಿಸಿಕೊ ನಿನ್ನ ನೀನು! ತಂತ್ರಜ್ಞ.
TechnoWise Tripods-313 CHANGE YOURSELF
How can you change others, who
Talk ill of you and badly treat you?
Change yourself and how you react to it! O! TechnoWise!






ತಂತ್ರಜ್ಞ ತ್ರಿಪದಿಗಳು-312 ಅಂತರಂಗ ಸಿರಿ



ತಂತ್ರಜ್ಞ ತ್ರಿಪದಿಗಳು-312 ಅಂತರಂಗ ಸಿರಿ
ನಿನ್ನ ಮುಂದೇನಿಹುದೊ ನಿನ್ನ ಹಿಂದೇನಿಹುದೊ
ನಿನ್ನ ಸುತ್ತೇನಿಹುದೊ ಈಯೆಲ್ಲ ಸಿರಿಗಿಂತ
ನಿನ್ನಂತರಂಗ ಸಿರಿ ಮೇಲು ತಂತ್ರಜ್ಞ.
TechnoWise Tripods-312 Invaluable Inside
What is in front of you and what is behind you
And what is surrounding you is nothing
Compared to what is inside you! O! TechnoWise!


Sunday, April 22, 2018

ತಂತ್ರಜ್ಞ ತ್ರಿಪದಿಗಳು-೩೧೧ ರಸಕಾವ್ಯವೀ ಬಾಳು!


ತಂತ್ರಜ್ಞ ತ್ರಿಪದಿಗಳು-೩೧೧ ರಸಕಾವ್ಯವೀ  ಬಾಳು!
ಬರೆದ ಒಂದೊಂದು ಅಕ್ಷರ ಅಳಿಸಲೆಡೆಯಿರದ
ಬರೆಯುತ್ತ ಮುನ್ನಡೆವ ರಸಕಾವ್ಯವೀ ಬಾಳು!
ಹರುಷಾಂತ್ಯವಿರಲಿ ಕಾವ್ಯಕ್ಕೆ! ತಂತ್ರಜ್ಞ!
TechnoWise Tripods-311 LIFE, AN EPIC POEM!
Life is a beautiful epic poem! 
Where you can't change even one letter after writing!
Make this poetry have an happy ending! O! TechnoWise!






Saturday, April 21, 2018

ತಂತ್ರಜ್ಞ ತ್ರಿಪದಿಗಳು-೩೧೦ ನುಡಿ-ಭಾವ


ತಂತ್ರಜ್ಞ ತ್ರಿಪದಿಗಳು-೩೧೦ ನುಡಿ-ಭಾವ
ಒಡಗೂಡಿ ಬೆರೆಸದಿರು ನುಡಿಯೊಡನೆ ಭಾವವನು!
ಎಡೆಯಿಹುದು ಭಾವಗಳ ಬದಲಿಸಲು ನೂರು ಸಲ!
ನುಡಿ, ಬಿಟ್ಟ ಬಾಣ ಬಿಲ್ಲಿಂದ! ತಂತ್ರಜ್ಞ.
TechnoWise Tripods-310 WORDS - EMOTIONS
Don't mix your words with your emotions! O! Technowise!
You'll have many possibilities to change your emotions!
But spoken words are like an arrow discharded from the bow!


Monday, April 16, 2018

ತಂತ್ರಜ್ಞ ತ್ರಿಪದಿಗಳು-೩೦೯ ಹುಡುಕದಿರು ಸಂತೋಷ:


ತಂತ್ರಜ್ಞ ತ್ರಿಪದಿಗಳು-೩೦೯ ಹುಡುಕದಿರು ಸಂತೋಷ:
ನುಡಿಯಲ್ಲಿ ಮುದವಿರಲಿ, ನಡೆಯಲ್ಲಿ ಕಾಣಿಸಲಿ,
ಅಡಗಿರುವ ಮನನಭದಿ ಮುದದ ರವಿ ಉದಯಿಸಲಿ,
ಹುಡುಕದಿರು ಹೊರಗೆ ಮುದವಸ್ತು! ತಂತ್ರಜ್ಞ.
TechnoWise Tripods-309 SEEK NOT HAPPINESS:
May your speech and actions express happiness;
May the sunrise of happiness happen in the sky of your mind!
Don't seek happiness in external objects! O! TechnoWise!