ತಂತ್ರಜ್ಞ ತ್ರಿಪದಿಗಳು-೨೯೪ ಪರಾನುಭೂತಿ
ನಿನ್ನ ತಪ್ಪನು ನೀನು ಖಿನ್ನನಾಗಿಯೆ ಹಳಿದು,
ನಿನ್ನ ಮೆಚ್ಚುವ ಪರಿಯೆ, ದ್ವೇಷಿಸುತ ಪಾಪವನು
ಮನ್ನಣೆಯನಿಡು ಪಾಪಿಯತ್ತ! ತಂತ್ರಜ್ಞ.
TechnoWise Tripods-294 EMPATHY
As you disapprove your own wrong doings,
And still love yourself, likewise hate the sins of the sinners,
But love the sinners! O! TechnoWise.
ತಂತ್ರಜ್ಞ ತ್ರಿಪದಿಗಳು-೨೯೨ ಸಂಭಾಷಣೆಯ ಸೊಗಸು
ಹೇಳು ಆಸಕ್ತಿಯಲಿ, ಕೇಳುವವ ನಲಿವಂತೆ;
ಕೇಳು ತನ್ಮಯನಾಗಿ, ಹೇಳುವವನೊಲಿವಂತೆ;
ಹೇಳಿಕೇಳುವುದಾಗ ಸೊಗಸು! ತಂತ್ರಜ್ಞ.
TechnoWise Tripods-292 DELIGHTFUL DIALOGUES
Speak in such a way that the listener enjoys listening to you;
Listen in such a way that the speaker loves to talk to you;
In such a case, speaking and listening become delightful! O! TechnoWise!
ತಂತ್ರಜ್ಞ ತ್ರಿಪದಿಗಳು-೨೯೧ ಎತ್ತಿಗೆ ಜ್ವರ - ಎಮ್ಮೆಗೆ ಬರೆ
ಚಿತ್ತದೇಹಗಳೊಂದು! ಚಿತ್ತ ದೇಹವು ಎರಡು!
ಚಿತ್ತವ್ಯಾಧಿಗೆ ದೇಹಕೌಷಧಿಯೆ? ಶೀತಜ್ವರ
ಎತ್ತಿಗಿರೆ, ಬರೆ ಎಮ್ಮೆಗೇಕೆ? ತಂತ್ರಜ್ಞ!
TechnoWise Tripods-291 BODY - MIND
Mind-Body are one! Mind and Body are two, as well!
Is it proper to medicate the body for ailments of the mind? O! TechnoWise!
When the ox is down with fever, why give stripes to the she-buffalo with red hot iron?
ತಂತ್ರಜ್ಞ ತ್ರಿಪದಿಗಳು-೨೯೦ ಪ್ರಜ್ಞಾವಿದ್ಯುತ್
ಹರಿಯುತಿರೆ ವಿದ್ಯುತ್ತು ತಿರುಗುತಿವೆ ಪಂಖಗಳು!
ಉರಿಯುವುದು ಅಡಿಗೆಯೊಲೆ! ರೇಡಿಯೋ ಹಾಡುವುದು!
ನರನ ವಿದ್ಯುಚ್ಛಕ್ತಿ ಪ್ರಜ್ಞೆ! ತಂತ್ರಜ್ಞ.
TechnoWise Tripods-290 CONSCIOUSNESS ELECTRIFIES
With the flow of electricity fans turn!
The ovens cook! and the radios sing!
Consciousness electrifies humans! O! TechnoWise!
ತಂತ್ರಜ್ಞ ತ್ರಿಪದಿಗಳು-೨೮೯ ಮಧ್ಯಮ ಮಾರ್ಗ
ಎಡವು ಎಡವಟ್ಟೆನುತ ನುಡಿಯುತಿರೆ ಬಲದಂಡೆ,
ದಡಗಳಲಿ ಬಲವು ದುರ್ಬಲವೆನಲು ಎಡದಂಡೆ,
ನಡುವೆ ನದಿ ಹರಿದು ಹರಸಿತ್ತು! ತಂತ್ರಜ್ಞ.
TechnoWise tripods-289 MIDDLE PATH
When the Right bank is blaming Left as being not correct,
And the Left bank is claiming that the Right is not alright,
In between the river is flowing and blessing along the middle path!
ತಂತ್ರಜ್ಞ ತ್ರಿಪದಿಗಳು-೨೮೮ ವಿಶ್ವ ಜಲದಿನ ಇಂದು!
ಒಲವಿರದ ಬದುಕುಂಟು! ಜಲವಿರದ ಬದುಕಿರದು!
ಜಲವು ಹಸಿರಿಗೆ ಮೂಲ! ವಿಮಲ ಸಂಪನ್ಮೂಲ!
ಉಳಿಸಿ ಜಲ, ತಡೆ ಯುದ್ಧ! ಮುಂದೆ! ತಂತ್ರಜ್ಞ.
TechnoWise Tripods-288 WORLD WATER DAY TODAY!
People can live without love, but not without water!
For greenery, water is the driving force! and a resource, most critical!
Save water now to prevent wars of the future! O! TechnoWise!
ತಂತ್ರಜ್ಞ ತ್ರಿಪದಿಗಳು-೨೮೭ ವಿಶ್ವ ಅರಣ್ಯದಿನ ಇಂದು
ಮರ ಅರಣ್ಯದ ಕೊಡುಗೆ- ಹರಿವ ಶೀತಲ ಸುಜಲ,
ಪೊರೆವ ವರ ಸುಫಲ ನೆಲ, ವಾಯು ಪ್ರಾಣಾಧಾರ!
ನರನುಳಿವ ಅರಣ್ಯವದುಳಿಯೆ! ತಂತ್ರಜ್ಞ.
TechnoWise Tripods-287 WORLD FOREST DAY TODAY
Flowing cool waters of rivers! Life preserving prolific soils!
And breath sustaining oxygen! Are the heavenly gifts from trees and forests!
Mankind'll survive if forests survive! O! TechnoWise!