Tuesday, March 6, 2018

ತಂತ್ರಜ್ಞ ತ್ರಿಪದಿಗಳು-೨೭೪ ತುತ್ತೂರಿ


ತಂತ್ರಜ್ಞ ತ್ರಿಪದಿಗಳು-೨೭೪ ತುತ್ತೂರಿ

ಇರಲು ದೀಪಕೆ ಬೆಳಕು, ಪರಿಚಯದ ನುಡಿ ಬೇಕೆ?
ವರಕಾರ್ಯ ಗೈದಿರಲು ಡಂಗುರದ ಧ್ವನಿಯೇಕೆ?
ಹಿರಿಕಜ್ಜ ಅವರ ತುತ್ತೂರಿ! ತಂತ್ರಜ್ಞ.

TechnoWise Tripods-274 TRUMPET

A lighted lamp doesn't require any introduction!
Great achievers needn't boast about their deeds!
Their work is their trumpet! O TechnoWise!

Saturday, March 3, 2018

ತಂತ್ರಜ್ಞ ತ್ರಿಪದಿಗಳು-273 ಆಸೆ - ತೃಪ್ತಿ


ತಂತ್ರಜ್ಞ ತ್ರಿಪದಿಗಳು-273 ಆಸೆ - ತೃಪ್ತಿ
ಹಲವಾರು ಆಸೆಗಳು ಅಳವು ಮೀರಿ ದುಬಾರಿ!
ನಲಿವು ತೃಪ್ತಿಯ ತರುವ ಕೆಲವೊಂದು ಬಹು ಅಗ್ಗ-
ಒಲವು, ನಗು, ಮಧುರ ಸಂಬಂಧ! ತಂತ್ರಜ್ಞ.
TechnoWise Tripods-273 DESIRE - SATISFACTION
Many of our desires are expensive and beyond our reach!
But some that really satisfy and make us happy are totally free-
Love, Laughter, and good relations! O! TechnoWise!


Friday, March 2, 2018

ತಂತ್ರಜ್ಞ ತ್ರಿಪದಿಗಳು-272 ಮುಷ್ಟಿಕಾಳಗದ ಕಣ


ತಂತ್ರಜ್ಞ ತ್ರಿಪದಿಗಳು-272 ಮುಷ್ಟಿಕಾಳಗದ ಕಣ
ಬಾಳು ದಿಟದಲಿ ಮುಷ್ಟಿಕಾಳಗದ ಕಣದಂತೆ!
ಬೀಳಲೊಬ್ಬನು ಕೆಳಗೆ ಸೋತನೆನ್ನುವುದಿಲ್ಲ!
ಮೇಲೇಳದಿರೆ ಮಾತ್ರ ಸೋಲು! ತಂತ್ರಜ್ಞ.
TechnoWise Tripods-272 BOXING RING
Life is verily like a boxing ring! O! TechnoWise!
Defeat isn't declarerd when you fall down!
When you're unable to rise up, you're declared as defeated!

Thursday, March 1, 2018

ತಂತ್ರಜ್ಞ ತ್ರಿಪದಿಗಳು-೨೭೧ ಉಚಿತ-ಅಮೂಲ್ಯ


ತಂತ್ರಜ್ಞ ತ್ರಿಪದಿಗಳು-೨೭೧ ಉಚಿತ-ಅಮೂಲ್ಯ
ನಮಗೆ ಬಂದಿದೆ ಉಚಿತ, ಅಮೂಲ್ಯ ಅನುಪಮವಿದು;
ನಮಗೆ ಸೇರದ, ಸಂಗ್ರಹಕೆ ಸಿಗದ, ಉಪಯುಕ್ತ
"ಸಮಯ" ಕಳೆದರೆ ಸಿಗದು ಮತ್ತೆ! ತಂತ್ರಜ್ಞ.
TechnoWise Tripods-271 FREE-PRICELESS
We got it free, but it's verily priceless;
We can't own it nor keep it, but we can use it, O! TechnoWise!
We can never get it back, once we lose this "TIME".


Wednesday, February 28, 2018

ತಂತ್ರಜ್ಞ ತ್ರಿಪದಿಗಳು-೨೭೦ ಮೌಲ್ಯ ಮಲ್ಲಿಗೆ


ತಂತ್ರಜ್ಞ ತ್ರಿಪದಿಗಳು-೨೭೦ ಮೌಲ್ಯ ಮಲ್ಲಿಗೆ
ಎಲ್ಲಿಗೈದಿದರಲ್ಲಿ, ಎಲ್ಲಿ ಎಂತಿದ್ದರೂ
ಅಲ್ಲೆ ನೆಡು ನೆರೆಯಲ್ಲಿ, ಜನರ ಹಿತ್ತಲಿನಲ್ಲಿ
ಮೌಲ್ಯಮಲ್ಲಿಗೆಯ ಕಿರುಬಳ್ಳಿ! ತಂತ್ರಜ್ಞ.



TechnoWise Tripods-270 JASMINE OF VALUES
Wherever you go, and whoever you are,
In the backyards of people around you, O! TechnoWise!
Plant a small vine of jasmine of human values!



Tuesday, February 27, 2018

ತಂತ್ರಜ್ಞ ತ್ರಿಪದಿಗಳು-೨೬೯ ಬಿಸುಪು-ಬೆಳಕು


ತಂತ್ರಜ್ಞ ತ್ರಿಪದಿಗಳು-೨೬೯ ಬಿಸುಪು-ಬೆಳಕು
"ಇಂದೇನು ಕಲಿಯಲಿದೆ?" ಎಂದು ಕೇಳಲು ನಾನು,
"ಇಂದು ಸಹ ಬಿಸುಪಿಂದ ಅಧಿಕ ಬೆಳಕನು ನೀಡು"
ಎಂದ ರವಿ ಉದಯಗಿರಿಯಿಂದ! ತಂತ್ರಜ್ಞ.
TechnoWise Tripods-269 HEAT - LIGHT
When I asked, "What I have to learn today?",
"Today and everyday generate more light than heat!"
Said the rising sun from the easern hills, O! TechnoWise!


Monday, February 26, 2018

ತಂತ್ರಜ್ಞ ತ್ರಿಪದಿಗಳು-268 ತೃಪ್ತಿ


ತಂತ್ರಜ್ಞ ತ್ರಿಪದಿಗಳು-268 ತೃಪ್ತಿ
ಕಡಲ ಸೇರುವ ತವಕ, ದಡದ ನಡುವಿನ ನದಿಗೆ;
ಒಡಲು ತುಂಬಿದ ಕಡಲ ತೆರೆ, ತೃಪ್ತಿಯಭಿವ್ಯಕ್ತಿ;
ಕಡಲಂತೆ ತೃಪ್ತಿತೆರೆ ಹರಿಸು! ತಂತ್ರಜ್ಞ.
TechnoWise Tripods-268 SATISFACTION
With full of desire to join the sea, the rever is flowing swiftly;
The sea is already fulfilled, and the waves on the surface are expressions of satisfaction;
Like the sea, have waves satisfaction! O! TechnoWise!