Wednesday, January 31, 2018

ತಂತ್ರಜ್ಞ ತ್ರಿಪದಿಗಳು-೨೪೮ ಮರುಕ್ಷಣ ಮರಣ


ತಂತ್ರಜ್ಞ ತ್ರಿಪದಿಗಳು-೨೪೮ ಮರುಕ್ಷಣ ಮರಣ
ಬರಬಹುದು ಮರುಕ್ಷಣವೆ ಮರಣವೆಂಬುದನರಿತು,
ಸ್ಮರಣೆಗೈ ಎಲ್ಲೆಲ್ಲಿ ಪ್ರೀತಿ ಕೊಡಲಿದೆಯೆಂದು,
ಇರದು ದ್ವೇಷಕೆ ಆಗ ಕಾಲ! ತಂತ್ರಜ್ಞ.
TechnoWise Tripods-248 ANY MOMENT DEATH
Realising that death may come at any moment,
Recollect all those to whom profuse love is to be given,
Then, no time for malice at all! O! TechnoWise!





Tuesday, January 30, 2018

ತಂತ್ರಜ್ಞ ತ್ರಿಪದಿಗಳು-247 ಆಗು... ಆಗು


ತಂತ್ರಜ್ಞ ತ್ರಿಪದಿಗಳು-247 ಆಗು... ಆಗು
ಮನದ ಓದುಗನು, ಜೀವನದ ಲೇಖಕನು, ಎದೆ
ದನಿಯ ಕೇಳುಗನು, ಮತಿ ಬಳಕೆದಾರನೆ ಆಗು, 
ಕೊನೆಗೆ ನೀ ನಿನ್ನ ತಿಳಿದವನು! ತಂತ್ರಜ್ಞ.
TechnoWise Tripods-247 BE...BE
Be a reader of your mind, a writer of your life,
A listener of your heart, a user of your intellect,
And finally, a knower of Yourself! O! TechnoWise!





Monday, January 29, 2018

ತಂತ್ರಜ್ಞ ತ್ರಿಪದಿಗಳು-೨೪೬ ಬೇಡುವವರೆ!


ತಂತ್ರಜ್ಞ ತ್ರಿಪದಿಗಳು-೨೪೬ ಬೇಡುವವರೆ!
ಕುಕ್ಷಿಯಲಿ ಹಸಿವೆನುತ ಭಿಕ್ಷುಕರು ಗುಡಿ ಹೊರಗೆ;
ಲಕ್ಷ ಬೇಡಿಕೆ ಹೊತ್ತ ಭಕ್ತಜನ ಗುಡಿಯೊಳಗೆ;
ಪಕ್ಷವೆರಡೂ ಬೇಡುವವರೆ! ತಂತ್ರಜ್ಞ.
TechnoWise Tripods-246 BEGGING!
Outside the temple the beggars are begging for food;
Inside the temple the devotees are begging for the fulfilment of their desires;
Both parties outside and inside are begging! O! TechnoWise!





Sunday, January 28, 2018

ತಂತ್ರಜ್ಞ ತ್ರಿಪದಿಗಳು-೨೪೫ ಪ್ರಜ್ಞಾಪ್ರತಿಫಲನ


ತಂತ್ರಜ್ಞ ತ್ರಿಪದಿಗಳು-೨೪೫ ಪ್ರಜ್ಞಾಪ್ರತಿಫಲನ
ನರರು ಕನ್ನಡಿಯಂತೆ, ಕೆರೆಯಂತೆ ಪಶುಪಕ್ಷಿ,
ಮರವು ಬಟ್ಟಲಿನಂತೆ, ಶಿಲೆ ಅಪಾರಕವಾಗಿ
ತರತಮದಿ ಪ್ರತಿಫಲನ ಪ್ರಜ್ಞೆ ತಂತ್ರಜ್ಞ. 
TechnoWise tripods-245 REFLECTION OF CONSCIOUSNESS
Humans like a mirror, and animals like a pond,
Trees like a silver plate, and stones opaquely
Reflect consciousness at various levels, O! TechnoWise!







Saturday, January 27, 2018

ತಂತ್ರಜ್ಞ ತ್ರಿಪದಿಗಳು-೨೪೪ ಚಂದ್ರನಲ್ಲಿ ಹೊಲಗದ್ದೆ


ತಂತ್ರಜ್ಞ ತ್ರಿಪದಿಗಳು-೨೪೪ ಚಂದ್ರನಲ್ಲಿ ಹೊಲಗದ್ದೆ
ಮುಟ್ಟಿ ಚಂದ್ರನ ನೆಲವ, ಉತ್ತು ಬಿತ್ತುತ ಹೊಲವ
ರೊಟ್ಟಿ ತಟ್ಟನೆ ಅಲ್ಲಿ? ಬೆಟ್ಟಕ್ಕೆ ಹಾರಿದವ
ಅಟ್ಟಕ್ಕೆ ಹಾರನೇ ನರನು? ತಂತ್ರಜ್ಞ!
TechnoWise Tripods-244 LUNAR FIELDS
Having landed on the moon, after cultivating lunar fields,
Can he not bake bread there? Man who has jumped over a mountain,
Can he not jump over a loft? O! TechnoWise!





Friday, January 26, 2018


ತಂತ್ರಜ್ಞ ತ್ರಿಪದಿಗಳು-೨೪೩ ಮಾನವೀಯತೆ
ಒಂದು ಕೈಯ ಸಹಾಯ ವಂದಿಸುವ ಕೈಗಳಿಗು,
ಒಂದು ಒಲೆ ಉರಿಸಿದ ನೆರವು ನೂರು ಆರತಿಗು,
ಸುಂದರವು ಬಹು ಮಾನವೀಯ ತಂತ್ರಜ್ಞ.
TechnoWise Tripods-243 MORE HUMANE
Extending one hand to help rather than joining two hands for prayer,
And helping to light an oven rather than waving of hundred lamps before an image,
Are more beautiful and more humane, O! TechnoWise!








Thursday, January 25, 2018

ತಂತ್ರಜ್ಞ ತ್ರಿಪದಿಗಳು-೨೪೨ ಕಾಲವು ಸಾಪೇಕ್ಷ


ತಂತ್ರಜ್ಞ ತ್ರಿಪದಿಗಳು-೨೪೨ ಕಾಲವು ಸಾಪೇಕ್ಷ
ಭಯಗೊಂಡವಗೆ ಬೇಗ, ಕಾಯುವವಗೆ ನಿಧಾನ;
ನಯನಜಲವಿರೆ ಉದ್ದ, ನಗುನಗುತಲಿರೆ ಗಿಡ್ಡ;
ಪ್ರಿಯರೊಡನೆ ಶಾಶ್ವತವು ಕಾಲ! ತಂತ್ರಜ್ಞ.
TechnoWise tripods-242 RELATIVITY OF TIME
Time is very fast for those who are in fear, and very slow for those who wait;
It is very long for those who cry, and very short for those who laugh;
And eternal for those who love! O! TechnoWise!