Friday, September 29, 2017

ತಂತ್ರಜ್ಞ ತ್ರಿಪದಿಗಳು-145 ಮರದೆರಡು ಗಿಳಿ-ಕರದೊಂದು ಗಿಳಿ

ತಂತ್ರಜ್ಞ ತ್ರಿಪದಿಗಳು-145 ಮರದೆರಡು ಗಿಳಿ-ಕರದೊಂದು ಗಿಳಿ
ಬರುವುದ ನಿರೀಕ್ಷಿಸುತ ಕೊರಗಿ ಸೊರಗುವ ಬದಲು
ಇರುವುದನೆ ಸವಿಯುತಿರು! ಮರದೆರಡು ಗಿಳಿಗಿಂತ
ಕರದಲಿರುವೊಂದು ಗಿಳಿ ಮೇಲು ತಂತ್ರಜ್ಞ.
TecnoWise-145 Two birds on the tree-one in hand
Instead of expecting something better, and worrying and languishing, 
Enjoy whatever you have! more than two birds in the tree
It is always better having one bird in hand.

ತಂತ್ರಜ್ಞ ತ್ರಿಪದಿಗಳು-೧೪೪ ಗೋಮಟನ ಮುಂದೆ

ತಂತ್ರಜ್ಞ ತ್ರಿಪದಿಗಳು-೧೪೪ ಗೋಮಟನ ಮುಂದೆ
ಹೇಮಸೌಧವ ಛತ್ರ ಚಾಮರವ ತ್ಯಜಿಸಿರುವ 
ಭೂಮ ತಾಪಸಿ ಮಹಿಮ ನಿನ್ನೆದುರು ನಾವೆಲ್ಲ
ಆಮೆಗಳು ಹೇರಾನೆ ಮುಂದೆ ತಂತ್ರಜ್ಞ.
TechnoWise-144 Standing before Gomata
Leaving behind golden palace and all kingly comforts
O Great ascetic! you are standing here, and before you,
We are like small tortoises before a big elephant.

Thursday, September 28, 2017

ತಂತ್ರಜ್ಞ ತ್ರಿಪದಿಗಳು-೧೪೩ ಹರಿಣದಂತಿರು ಇಂದು

ತಂತ್ರಜ್ಞ ತ್ರಿಪದಿಗಳು-೧೪೩ ಹರಿಣದಂತಿರು ಇಂದು 
ಹರಿದ್ವರ್ಣ ವನದಲ್ಲಿ ಹರಿಣಮನವೂ ಹಸಿರು;
ಚಿರತೆ ಹುಲಿ ಸೀಳ್ನಾಯಿ ಮುಂದೆ ಬರುವುದ ಮರೆತು
ಹರುಷದಲ್ಲಿವೆ ಇಲ್ಲಿ ಇಂದು ತಂತ್ರಜ್ಞ.
TechnoWise-143 Be like a Deer Today
In an evergreen forest, green are the minds of deers as well,
Forgetting the future dangers from Cheetas, Tigers, and wild dogs,
Today the deers are verily happy here.  

Wednesday, September 27, 2017

ತಂತ್ರಜ್ಞ ತ್ರಿಪದಿಗಳು-142 ದೀಪಧರ ಗುರು

ತಂತ್ರಜ್ಞ ತ್ರಿಪದಿಗಳು-142 ದೀಪಧರ ಗುರು
ದ್ವೀಪವನು ನೀರಂತೆ, ದೀಪವನು ಬೆಳಕಂತೆ
ನೂಪುರವ ಇನಿದನಿಯು ಸತತ ಸುತ್ತಿರುವಂತೆ
ದೀಪಧರ ಗುರುವ ಅರಿವಿರವು ತಂತ್ರಜ್ಞ.
TechnoWise-142 Enlightened Guru
As an island is surrounded by water, and a lamp by light,
And an anklet by the tinkling sweet sound, 
An enlightened Guru surrounded by the presence of wisdom.

Tuesday, September 26, 2017

ತಂತ್ರಜ್ಞ ತ್ರಿಪದಿಗಳು-141 ನುಡಿಗಿಂತ ದಯೆ ಮುಖ್ಯ

ತಂತ್ರಜ್ಞ ತ್ರಿಪದಿಗಳು-141 ನುಡಿಗಿಂತ ದಯೆ ಮುಖ್ಯ
ನೇರ ನುಡಿವುದಕಿಂತ ತೋರಿಸುವ ದಯೆ ಮುಖ್ಯ;
ಭೂರಿಭಾಷಣಕಿಂತ ನೊಂದವರು ಬಯಸುವುದು
ಚಾರು ಮೃದುಹೃದಯ ಸಂಶ್ರವಣ ತಂತ್ರಜ್ಞ.
TechnoWise-141 Kindness of the Heart
Kindness is more important than a straight talk;
More than words from the mind, the heartsore people desire
The listening from a lovely soft Heart.

Monday, September 25, 2017

ತಂತ್ರಜ್ಞ ತ್ರಿಪದಿಗಳು-140 ಲಯ

ತಂತ್ರಜ್ಞ ತ್ರಿಪದಿಗಳು-140 ಲಯ
ಧ್ವನಿ ಹಲವು ಸೇರಿ ಗಾಯನ, ಚಲನೆ ನರ್ತನವು;
ಮನದ ಯೋಚನೆ ಧ್ಯಾನ, ಕ್ಷಣಗಣನೆ ಸತ್ಕಾಲ
ಧುನಿಯಾಗಿ ಲಯ ಹರಿದು ಬರಲು ತಂತ್ರಜ್ಞ.
TechnoWise-140 Rythm
Several sounds become Music, different movements become Dance, 
Thoughts become Meditation, and seconds become Good Time
When the rythms flow like a river.

Sunday, September 24, 2017

ತಂತ್ರಜ್ಞ ತ್ರಿಪದಿಗಳು-೧೩೯ ಬಾಕ್ಸಿಂಗ್‌ ಕಣ

ತಂತ್ರಜ್ಞ ತ್ರಿಪದಿಗಳು-೧೩೯ ಬಾಕ್ಸಿಂಗ್‌ ಕಣ
ಗುದ್ದಾಟ ಕಣದಂತೆ ಬಿದ್ದೇಳು! ಬಾಳಿನಲಿ;
ಬಿದ್ದನೆನ್ನುತ ಸೋತನೆಂದಿಲ್ಲ ಹಣೆಪಟ್ಟಿ!
ಎದ್ದೇಳಬಲ್ಲವಗೆ ಪಟ್ಟ! ತಂತ್ರಜ್ಞ.
TechnoWise-139 Boxing Ring
As in a Boxing Ring, are Falls and Rises in Life!
When one falls down, defeat is not declared;
One who rises and fights becomes a champion.