Monday, May 29, 2017

ತಂತ್ರಜ್ಞ ತ್ರಿಪದಿ-63 ಬಾಳ ಚೆಲುಚಿತ್ರ

ತಂತ್ರಜ್ಞ ತ್ರಿಪದಿ-63 ಬಾಳ ಚೆಲುಚಿತ್ರ
ಗೆರೆಯನೆಳೆ ಪ್ರಾರ್ಥನೆಯ, ಮರೆತಳಿಸು ತಪ್ಪುಗಳ,
ಬೆರೆಸಿ ಪ್ರೀತಿಯ ಬಣ್ಣ, ಅದ್ದಿ ತಾಳ್ಮೆಯ ಕುಂಚ,
ಬರೆ ನೀನು ಬಾಳ ಚೆಲು ಚಿತ್ರ ತಂತ್ರಜ್ಞ.
BEAUTIFUL PICTURE OF LIFE
Draw lines of Prayers, erase errors with forgiveness,
Mixing colors of Love, dipping brush of Patience,
Draw a beautiful picture of your Life.

ತಂತ್ರಜ್ಞ ತ್ರಿಪದಿ-62 ಕಲ್ಕಿ ನೀ ಎಲೆಕ್ಟ್ರಾನ್ ಬ್ರಹ್ಮ

ತಂತ್ರಜ್ಞ ತ್ರಿಪದಿ-62 ಕಲ್ಕಿ ನೀ ಎಲೆಕ್ಟ್ರಾನ್ ಬ್ರಹ್ಮ
ವಾಸುದೇವನ ಶಿವನ ಏಸು ಬುದ್ಧರ ಮಹಿಮೆ
ಹಾಸುಬೀಸನ್ನರಿಯೆ! ಕಲಿಕಲ್ಕಿ ವಿದ್ಯುತ್ತು!
ನೀ ಸುರಭಿ! ಎಲೆಕ್ಟ್ರಾನ್ ಬ್ರಹ್ಮ ತಂತ್ರಜ್ಞ.
ELECTRONIC KALKI!
Krishna Shiva Jesus and Budha
I know you not! But O Electric Kalki!
Electron Brahma! you can give anything

Saturday, May 27, 2017

ತಂತ್ರಜ್ಞ ತ್ರಿಪದಿ-60 ವರದ ಎಲೆಕ್ಟ್ರಾನ್ ಬ್ರಹ್ಮ

ತಂತ್ರಜ್ಞ ತ್ರಿಪದಿ-60 ವರದ ಎಲೆಕ್ಟ್ರಾನ್ ಬ್ರಹ್ಮ

ಬುದ್ಧಧ್ಯಾನದಲಿದ್ದು ಸಿದ್ಧನೆಲ್ಲೆಡೆ  ಕ್ಷಣದಿ;
ಬುದ್ಧಿಯಲಿ ಶುದ್ಧಿಯಲಿ ನಿಯಮವನು ಪಾಲಿಸಲು,
ವೃದ್ಧಿಸುವೆ ಎಲೆಕ್ಟ್ರಾನ್ ಬ್ರಹ್ಮ ತಂತ್ರಜ್ಞ.

Outwardly appear sleeping deep and silent,
If I touch, you shock and shake me violent;
Nothing that your boon doesn’t cover,

When your laws I respect and transform your power.

Thursday, May 25, 2017

ತಂತ್ರಜ್ಞ ತ್ರಿಪದಿ-59 ಬೆಂಕಿ ನೀ! ಎಲೆಕ್ಟ್ರಾನ್ ಬ್ರಹ್ಮ!
ಶಂಕರನು ಒಪ್ಪಿರೆ, ಭಯಂಕರನು ತಪ್ಪಿದರೆ;
ಕಿಂಕರನು ದಾಸ್ಯಕ್ಕೆ, ದಂಡಧರ ದಂಡನೆಗೆ;
ಬೆಂಕಿ ನೀ! ಎಲೆಕ್ಟ್ರಾನ್ ಬ್ರಹ್ಮ! ತಂತ್ರಜ್ಞ.
FRIEND or FIEND
Mild and harmless as a child's firework sparks
At times fatal as violent lightning strokes
Pacifying, normally, as a bosom friend
At times terrifying as a fearsome fiend

Monday, May 22, 2017

ತಂತ್ರಜ್ಞ ತ್ರಿಪದಿ-58 ಸರ್ವವ್ಯಾಪಿ ಎಲೆಕ್ಟ್ರಾನ್ ಬ್ರಹ್ಮ
ನುಡಿದಾಲಿಸೀಕ್ಷಿಸುವ ನಡೆವ ಯಂತ್ರಗಳಿರಲು
ದುಡಿವ ನಿನ್ನಯ ಕಣ್ಣು ಕಿವಿ ನಾಸಿಕಗಳಿರದ
ಎಡೆಯಿಲ್ಲ ಎಲೆಕ್ಟ್ರಾನ್ ಬ್ರಹ್ಮ ತಂತ್ರಜ್ಞ.
OMNIPRESENCE:
BY you energized machines multitudinous
Move, work, see, and hear;
So your legs, hands, eyes, and ears
Actively present everywhere.

Saturday, May 20, 2017

ತಂತ್ರಜ್ಞ ತ್ರಿಪದಿ-57 ಎಲೆಕ್ಟ್ರಾನ್ ಬ್ರಹ್ಮ ಕಾರಣ

ತಂತ್ರಜ್ಞ ತ್ರಿಪದಿ-57 ಎಲೆಕ್ಟ್ರಾನ್ ಬ್ರಹ್ಮ ಕಾರಣ
ನಿನ್ನನೀಕ್ಷಿಸಲಾರೆ, ನಿನ್ನಿಂದ ಈಕ್ಷಿಸುವೆ
ನಿನ್ನಿಂದ ಕೇಳುತ್ತ ಸವಿದರೂ, ಇಂದ್ರಿಯದಿ
ಅನುಭವಿಸೆ ಎಲೆಕ್ಟ್ರಾನ್ ಬ್ರಹ್ಮ ತಂತ್ರಜ್ಞ.
THROUGH YOU! ELECTRON BRAHMA!
Behold you not, through you I behold;
Smell you not, through you I smell;
Touch you not, through you I touch;
Hear you not, through you I hear.

Thursday, May 18, 2017

ತಂತ್ರಜ್ಞ ತ್ರಿಪದಿ-56 ಅಗೋಚರ ಎಲೆಕ್ಟ್ರಾನ್ ಬ್ರಹ್ಮ

ತಂತ್ರಜ್ಞ ತ್ರಿಪದಿ-56 ಅಗೋಚರ ಎಲೆಕ್ಟ್ರಾನ್ ಬ್ರಹ್ಮ
ಸಾಕಾರ ಕಣ ನೀನು! ಆಕಾರರಹಿತ ಅಲೆ!
ಆಕರವು ವ್ಯಕ್ತಶಕ್ತಿಗೆ ನೀನು ಎಲೆಕ್ಟ್ರಾನ್!
ನಾ ಕಾಣೆ ನಿನ್ನ ನಿಜರೂಪ! ತಂತ್ರಜ್ಞ.
INVISIBLE ELECTRON BRAHMA
As the minutest part of matter
Bound you are with perfect form;
Playing the role of waves at times,
you are without a definite form.