TechnoWise
Tripods-711 Smile!
Smile a baby smile! Let go of seriousness and smile!
Smile tenderly as a bud becomes a flower!
May your face
be replete with smiles! O! TechnoWise!
ಬದುಕಿಗೆ ಸಂಬಂಧಿಸಿದ ಒಂದು ವಿಶೇಷ ಘಟನೆ(ಕಿರುಗತೆ), ಅದು ಬೀರುವ ಬೆಳಕು, ಇವುಗಳಿಗೆ ಸಂಬಂಧಿಸಿದ ಒಂದು ತಂತ್ರಜ್ಞ ತ್ರಿಪದಿ(ಚುಟುಕು) ಇವು ಇಲ್ಲಿ ಪ್ರತಿ ವಾರವೂ ಮೂಡಿಬರುತ್ತವೆ. ಇವು ಅಂಕಣ(ಕಿರುಲೇಖನ)ಗಳಾಗಿ ಕಸ್ತೂರಿ, ಮಂಜುವಾಣಿ, ಕನ್ನಡ ಟೈಮ್ಸ್, ವಿವೇಕಪ್ರಭಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ/ಆಗುತ್ತಿವೆ. "ಅಚ್ಚಗನ್ನಡದ ನುಡಿವಣಿ" ಪುಟವು ಅಚ್ಚಗನ್ನಡದಲ್ಲೇ ೩ ಕೃತಿಗಳನ್ನು (ಅಚ್ಚಗನ್ನಡ ನುಡಿಕೋಶ, ಕಾಲೂರ ಚೆಲುವೆ, ನುಡಿವಣಿಗಳು) ಬರೆದ ನಮ್ಮ ತಂದೆ ಕೊಳಂಬೆ ಪುಟ್ಟಣ್ಣಗೌಡರ "ನುಡಿವಣಿಗಳು" ಪುಸ್ತಕದಿಂದ ಆಯ್ದವು. ಓದಲು ದಯವಿಟ್ಟು ಕ್ಲಿಕ್ ಮಾಡಿ: ಸಂಪುಟ-೧ / ಸಂಪುಟ-೨ / ಅಚ್ಚಗನ್ನಡದ ನುಡಿವಣಿ
ತಂತ್ರಜ್ಞ ತ್ರಿಪದಿಗಳು-೭೦೯ ಸುಜ್ಞಾನರವಿಯ ಹೊಸವರ್ಷ!
ಅಜ್ಞಾನ ನಿಶೆ ಕಳೆದು, ಪ್ರಜ್ಞಾನ ಉಷೆ ಬೆಳೆದು,
ವಿಜ್ಞಾನದಲಿ ಹೊಸತು, ತಂತ್ರಜ್ಞಾನದಿ ಒಳಿತು,
ಸುಜ್ಞಾನರವಿಯ ಹೊಸವರ್ಷ! ತಂತ್ರಜ್ಞ!
TechnoWise
Tripods-709 A New Year of True Knowledge!
After the night of ignorance departs, may the dawn of wisdom come;
May a new science be discovered,
The technology used for good,
And the sun of true knowledge rises this new year! O! TechnoWise!