Tuesday, June 9, 2020

ತಂತ್ರಜ್ಞ ತ್ರಿಪದಿಗಳು-೬೪೫ ಶಾಸ್ತ್ರ! ಮತ್ತು ಶಸ್ತ್ರ!


ತಂತ್ರಜ್ಞ ತ್ರಿಪದಿಗಳು-೬೪೫ ಶಾಸ್ತ್ರ!  ಮತ್ತು  ಶಸ್ತ್ರ!
ಪುಟ್ಟ ಅಣು, ತಾರೆಗಳ ಗುಟ್ಟನರಸುವ ಶಾಸ್ತ್ರ!
ಕೆಟ್ಟ ವೈರಾಣು ಪರಮಾಣುಗಳ ಶಸ್ತ್ರಾಸ್ತ್ರ!
ಕೆಟ್ಟುದೊಳಿತಿಗು ಮನಸು ಶಕ್ತ! ತಂತ್ರಜ್ಞ!
TechnoWise Tripods-645  SCIENCE! and WEAPONRY!
Science seeks the truth behind micro particles and macro stars!
It will also make life threatening biological and nuclear weapons!
For doing both evil and good, the mind is capable! O! TechnoWise! 


Sunday, June 7, 2020

ತಂತ್ರಜ್ಞ ತ್ರಿಪದಿಗಳು-೬೪೪ ಮುತ್ತು ಈ ಹೊತ್ತು!


ತಂತ್ರಜ್ಞ ತ್ರಿಪದಿಗಳು-೬೪೪ ಮುತ್ತು ಈ ಹೊತ್ತು!
ಸತ್ತ ಕ್ಷಣಗಳ ನೆನೆದು ಹೊತ್ತು ನೀ ಕಳೆಯದಿರು!
ಅತ್ತು ನಾಳೆಯ ನೆನೆದು ಚಿಂತೆಯಲಿ ಬಾಡದಿರು!
ಮುತ್ತು ಈ ಹೊತ್ತಿನ ಇವತ್ತು! ತಂತ್ರಜ್ಞ!
TechnoWise Tripods-644 PRESENT TIME - A PEARLY PRESENT!
Don't waste your precious time engrossed in the dead yesterdays!
Don't be afflicted by the fire of worry thinking about the unborn tomorrows!
A pearly present is the present Time! O! TechnoWise!






Saturday, June 6, 2020

ತಂತ್ರಜ್ಞ ತ್ರಿಪದಿಗಳು-೬೪೩ ಕೇಶರಾಶಿಯ ಅಂದ!


ತಂತ್ರಜ್ಞ ತ್ರಿಪದಿಗಳು-೬೪೩ ಕೇಶರಾಶಿಯ ಅಂದ!
ಕೇಶ ಪ್ರತಿಯೊಂದಂದ, ಕೇಶರಾಶಿಯಲಿರಲು!
ಹೇಸಿಕೆಯ ತರಿಸುವುದು ಪಾಯಸದಿ ಬಿದ್ದಿರಲು!
ರಾಶಿಯಲಿ ಒಂದಾಗೆ ಅಂದ! ತಂತ್ರಜ್ಞ!
TechnoWise Tripods-643 BEAUTIFUL  HAIR!
Every hair on the head is pretty if it is a part of the braid of hair!
Even if it is a pretty hair, disgusting if found inside the sweet porridge!
It is beautiful only if you blend harmoniously with the Team! O! TechnoWise!

Friday, June 5, 2020

ತಂತ್ರಜ್ಞ ತ್ರಿಪದಿಗಳು-೬೪೨ ಜೀವಂತ ಪರಿಸರ


ತಂತ್ರಜ್ಞ ತ್ರಿಪದಿಗಳು-೬೪೨ ಜೀವಂತ ಪರಿಸರ
ಶರಧಿ, ನದಿ ಜೀವಂತ; ಧರಣಿ, ನಭ ಜೀವಂತ;
ಚರಾಚರ ಜೀವಕುಲ ಜೀವಂತ; -ಇರುವುದಕೆ
ಪರಿಸರವು ಬೇಕು ಜೀವಂತ! ತಂತ್ರಜ್ಞ!
TechnoWise Tripods-642 LIVING GAIA ENVIRONMENT
For keeping alive all the seas and the rivers, the earth and the sky
Along with the movable and immovable life forms of million types
Essential is to nurture nature and keep Gaia Environment alive! O! TechnoWise!




Thursday, June 4, 2020

ತಂತ್ರಜ್ಞ ತ್ರಿಪದಿಗಳು-೬೪೧ ರಾಮನೇ ಇಲ್ಲದ ಅಯೋಧ್ಯೆ!


ತಂತ್ರಜ್ಞ ತ್ರಿಪದಿಗಳು-೬೪೧ ರಾಮನೇ ಇಲ್ಲದ ಅಯೋಧ್ಯೆ!
ಕ್ಷೇಮವಿಲ್ಲದ ದೇಹ, ಪ್ರೇಮವಿಲ್ಲದ ಸ್ನೇಹ
ನೇಮವಿಲ್ಲದ ಗೈಮೆ, ಮೌಲ್ಯವಿಲ್ಲದ ವಿದ್ಯೆ-
ರಾಮನೇ ಇಲ್ಲದ ಅಯೋಧ್ಯೆ! ತಂತ್ರಜ್ಞ!
TechnoWise Tripods-641 AYODHYA WITHOUT  RAMA
A body without health, a friendship without love
And work without rules, and education without Values-
Are like the city Ayodhya without its king Rama! O! TechnoWise!


Wednesday, June 3, 2020

ತಂತ್ರಜ್ಞ ತ್ರಿಪದಿಗಳು-೬೪೦ ಜ್ವಾಲಾಮುಖಿ!


ತಂತ್ರಜ್ಞ ತ್ರಿಪದಿಗಳು-೬೪೦ ಜ್ವಾಲಾಮುಖಿ!
ನಿದ್ರಿಸಲು ಶಾಂತಮುಖಿ, ಎದ್ದಾಗ ಪ್ರಳಯಶಿಖಿ
ಅದ್ದಿ ಲಾವಾರಸದಿ ಕುದಿವ ಜ್ವಾಲಾಮುಖಿಯು
ಕದ್ದು ಅಡಗಿದೆಯೆ ಮನದೊಳಗೆ? ತಂತ್ರಜ್ಞ!
TechnoWise Tripods-640 VOLCANO!
Peaceful while asleep, but a tongue of fire while awake
The simmering volcano scorches everything with flowing lava!
Is it hiding inside everyone's mind? O! TechnoWise!




Monday, June 1, 2020

ತಂತ್ರಜ್ಞ ತ್ರಿಪದಿಗಳು-೬೩೮ ಮುತ್ತಿನಂತಹ ಹಲ್ಲುಗಳು...


ತಂತ್ರಜ್ಞ ತ್ರಿಪದಿಗಳು-೬೩೮ ಮುತ್ತಿನಂತಹ ಹಲ್ಲುಗಳು...
ಹಲ್ಲು ಮುತ್ತಂತೆ ಬಾಯಲ್ಲಿರಲು ಬಲು ಚಂದ!
ಹಲ್ಲು ಕಲ್ಲಿಗು ಕಡೆಯು ಬಿದ್ದಾಗ ಬಾಯಿಂದ!
ಎಲ್ಲಿ ಸಹಜವೊ ಅಲ್ಲೆ ಚಂದ! ತಂತ್ರಜ್ಞ!
TechnoWise Tripods-638 PEARLY  TEETH...
While inside the mouth, each tooth is beautiful like a pearl!
If it falls out of the mouth, inferior it is even to a pebble!
The presence of something, in its own natural place, is beautiful ! O! TechnoWise!