ತಂತ್ರಜ್ಞ ತ್ರಿಪದಿಗಳು-೫೩೦ ಅರಿವು- ಹೆಚ್ಚು ಇನ್ನೂ ಹೆಚ್ಚು
ನುಚ್ಚು ನುಚ್ಚಿಸಿ ಅಣುವ, ಹೆಚ್ಚು ಇನ್ನೂ ಹೆಚ್ಚು
ಅಚ್ಚರಿಯಲರಿಯೆ ಬ್ರಹ್ಮಾಂಡವನು ಶೂನ್ಯದಲಿ
ಮೆಚ್ಚುಗೆಯ ಪಥವೆ ವಿಜ್ಞಾನ! ತಂತ್ರಜ್ಞ!
TechnoWise Tripods-530 KNOWING MORE AND MORE
Knowing more and more about less and less,
And finally knowing everything about nothing
Is the path of celebrated Science! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೯ ಖಾಲಿ ಮನಸ್ಸು!
ನಮ್ಮ ಖಾಲಿ ಮನಸ್ಸು ಕಮ್ಮಟವೆ ದೆವ್ವಕ್ಕೆ?
ಸುಮ್ಮನೇ ಹೇಳುವರು ಧ್ಯಾನದಜ್ಞಾನಿಗಳು!
ನೆಮ್ಮದಿಯ ಅದು ಬುದ್ಧಧಾಮ! ತಂತ್ರಜ್ಞ!
TechnoWise Tripods-529 AN EMPTY MIND!
Is an empty mind a devil's workshop?
This's an empty talk of those unaware of meditation!
It's a haven of peaceful Budha! O! TechnoWise!
ತಂತ್ರಜ್ಞ ತ್ರಿಪದಿಗಳು-528 ಸುಗ್ಗಿಯಲು ಕುಗ್ಗಿರುವೆಯೇಕೆ?
ಸುಗ್ಗಿ ಬಂದಿದೆ ಮರಳಿ! ಮೊಗ್ಗು ನಗುತಿದೆ ಅರಳಿ!
ಹಿಗ್ಗಿ ತಿರೆ ಸಂಭ್ರಮಿಸಿ ಹಬ್ಬವಾಚರಿಸುತಿರೆ,
ಸುಗ್ಗಿಯಲು ಕುಗ್ಗಿರುವೆಯೇಕೆ? ತಂತ್ರಜ್ಞ!
TechnoWise Tripods-528 LANGUISHING IN SPRINGTIME?
Spring has arrived again! and the buds have blossomed and smiling!
While the entire earth is jubilating in a festival mood,
Why are you languishing even in Springtime? O! TechnoWise!
ತಂತ್ರಜ್ಞ ತ್ರಿಪದಿಗಳು-೫೨೭ ಭಾರ-ಜಾಣ್ಮೆ
ಭಾರವೀ ಬಾಳಿನಲಿ ಯಾರಿಗಿಲ್ಲವು? ಹೇಳು!
ಭಾರ ನಿರ್ವಹಣೆಯಲಿ ಜಾಣ್ಮೆ ನಿನಗಿರುವಾಗ
ಗುರುಸಮಸ್ಯೆಯೆ ಅಲ್ಲ, ಭಾರ! ತಂತ್ರಜ್ಞ.
TechnoWise Tripods-527 BURDEN-INGENUITY
Who will not have budens in life?
If you have the ingenuity how to manage them,
Burdens aren't problems at all! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೬ ಕಲಿಕಾ ಸೇತು
ಅರಿತಿರದವನು ಪ್ರಾಜ್ಞ, ನುರಿತಿರದವನು ತಜ್ಞ,
ಕಿರುಶಿಷ್ಯ ವಿಶ್ವಗುರುವಾದ ಅದ್ಭುತ ಸಾಧ್ಯ
ವರ ಕಲಿಕೆಸೇತುವನು ದಾಟೆ! ತಂತ್ರಜ್ಞ!
TechnoWise Tripods-526 BRIDGE OF LEARNING
The miracle of an ignorant becoming a Pundit, a novice becoming an Expert,
A meek student becoming a world-Guru are all possible,
When they cross the magical bridge of learning! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೫ ಪರಿಸರವೆ ಪುರುಷಾರ್ಥ!
ಧರ್ಮ ರಕ್ಷಿಸುವವನ ಧರ್ಮ ರಕ್ಷಿಸುವಂತೆ,
ಪರಿಸರವ ಕಾಯುವರ, ಕಾಯುವುದು ಪರಿಸರವು!
ಪರಿಸರವೆ ಪರಮ ಪುರುಷಾರ್ಥ! ತಂತ್ರಜ್ಞ!
TechnoWise Tripods-525 ENVIRONMENT- VALUE SUPREME!
As Dharma protects those who protect Dharma,
Environment also protects those who protect Environment!
Environment is your Value Supreme! O! TechnoWise!
ತಂತ್ರಜ್ಞ ತ್ರಿಪದಿಗಳು-೫೨೪ ಮನದ ಮಾಯೆ!
ಕೋಗಿಲೆಯ ದನಿಯಿಂಪೆ? ಕಾಗೆ ಬಣ್ಣವು ಕಪ್ಪೆ?
ಹಾಗಲಕೆ ಕಹಿರುಚಿಯೆ? ಹೂಗಳಿಗೆ ಕಂಪಿದೆಯೆ?
ಹಾಗೆ ತೋರಿಕೆ ಮನದ ಮಾಯೆ! ತಂತ್ರಜ್ಞ!
TechnoWise Tripods-524 QUALIA OF THE MIND
Is cuckoo's note melodious and crow's colour black?
Is the taste of bitter-gourd really bitter and flowers have fragrance?
Everything is an illusion, a qualia of the mind! O! TechnoWise!