ತಂತ್ರಜ್ಞ ತ್ರಿಪದಿಗಳು-೫೧೫ ತಾರೆಗಳ ತೇರುಗಳು!
ತಾರೆಗಳ ತೇರುಗಳ, ನೀರಧಿಯ ನೀಲಿಮೆಯ,
ಹಾರುಹಕ್ಕಿಯ ಹಾಡು, ಹೂಹಸಿರು, ಸಿರಿಕಾಡು!
ಯಾರು ಸವಿಯುವುದಿಲ್ಲ ಜಗದಿ? ತಂತ್ರಜ್ಞ!
TechnoWise Tripods-515 CHARIOTS OF THE STARS!
Chariots of the stars, bluish beauty of the ocean,
Sweet chirping of the birds, fragrant flowers, greenary, and the deep forests!
Who will not relish on earth? O! TechnoWise!
ತಂತ್ರಜ್ಞ ತ್ರಿಪದಿಗಳು-೫೧೩ ಆಯ್ಕೆ ಮಾಡಲಿ ಹೃದಯ!
ಸರಿಯಾಯ್ಕೆ ಮಾಡುವುದ ಪರಭಾರೆ ಮಾಡದಿರು!
ವರಪಥದ ಅರಿವು ನಿನ್ನಂತರಂಗದಲಿಹುದು!
ಸರಿಯಾಯ್ಕೆ ಮೂಲ ನಿನ್ನೆದೆಯೆ! ತಂತ್ರಜ್ಞ!
TechnoWise Tripods-513 HEART- RIGHT DECISIONS
Don't alienate the choice of your decisions to others!
The knowledge of the right way to progress lies deep inside you!
Your own Heart is the source of right decisions! O! TechnoWise!
ತಂತ್ರಜ್ಞ ತ್ರಿಪದಿಗಳು-೫೧೨ ವಿಮಾನದಂತೆ ವಿಶ್ವೇಶ್ವರ!
ತೋರುವಿಕೆ ಕಿರುಚುಕ್ಕಿ, ದೂರ ನಭದ ವಿಮಾನ!
ಸಾರಿದರೆ ಹತ್ತಿರಕೆ, ಬಹುಗಾತ್ರ ಬಹುಭವ್ಯ!
ಪರಮನಂತೆಮ್ಮ ಜೀವನದಿ! ತಂತ್ರಜ್ಞ.
TechnoWise Tripods-512 LIKE AN AEROPLANE IS GOD!
Up inthe sky, the aeroplane appears like a small dot!
Appears verily huge and grand when one goes really near!
In our life also, the creator God is like this! O! technoWise!
ತಂತ್ರಜ್ಞ ತ್ರಿಪದಿಗಳು-೫೧೧ ಟೊಳ್ಳು ಕೊಳಲು?
ಹಲವು ರಂಧ್ರದ ಟೊಳ್ಳು ಕೊಳಲೇನು ನರಬಾಳ್ವೆ?
ಇಳೆಯ ಮೋಹಿಸುವ ಕೃಷ್ಣನ ಕೊಳಲ ಜ್ಞಾಪಿಸಿಕೊ!
ಲಲಿತ ಸುಸ್ವರ ಗಾನ ಸಾಧ್ಯ! ತಂತ್ರಜ್ಞ.
TechnoWise Tripods-511 EMPTY FLUTE?
Is Living, a bamboo flute with many holes and emptiness?
You recall the heavenly melody of Krishna's flute!
Your Life has the potential to create a sweet symphony! O! TechnoWise!
ತಂತ್ರಜ್ಞ ತ್ರಿಪದಿಗಳು-೫೧೦ ಚಂದ್ರೋದಯ - ಭೂಮ್ಯೋದಯ
ಚಂದ್ರೋದಯಕು ಮಿಗಿಲು ಚಂದ ಭೂಮ್ಯೋದಯವು!
ಚಂದಿರನು ಚಂದ ದೂರಕ್ಕೆ, ಹತ್ತಿರಕಲ್ಲ!
ಚಂದ ಬುವಿ ದೂರ ಹತ್ತಿರಕು! ತಂತ್ರಜ್ಞ.
TechnoWise Tripods-510 Moon-rise Earth-rise
More beautiful is Earth-rise than Moon-rise!
Moon is beautiful from far, and not from near!
Mother Earth is beautiful from far and near! O! TechnoWise!
ತಂತ್ರಜ್ಞ ತ್ರಿಪದಿಗಳು-೫೦೯ ನಿಜರೂಪ
ವರವಿದ್ಯೆ, ಕೌಶಲ್ಯ, ಸಿರಿ ನಿನ್ನಲಿರಬಹುದು!
ಪರರೊಡನೆ ನಿನ್ನ ನಡೆ ನುಡಿಯ ಕನ್ನಡಿ ಸ್ಪಷ್ಟ
ತೋರುವುದು ನಿನ್ನ ನಿಜರೂಪ! ತಂತ್ರಜ್ಞ.
TechnoWise tripods-509 TRUE PICTURE
However educated, skilled, and well-to-do you may be,
The mirror of your liaison and interaction with others
Will ultimately show your true picture! O! TechnoWise.