ತಂತ್ರಜ್ಞ ತ್ರಿಪದಿಗಳು-೫೦೦ ನಾಕಕ್ಕೆ ಸೋಪಾನ!
ಹಾಕಿ ಸೋಪಾನಗಳ ನಾಕಕೇರುವೆಯೇನು?
ನಾಕವೀ ಭೂಲೋಕ, ಕ್ಷೀರಪಥದಂಚಿನಲಿ!
ಸಾಕು! ಮಾಡದಿರಿದನು ನರಕ! ತಂತ್ರಜ್ಞ.
TechnoWise Tripods-500 STAIRCASE TO HEAVEN!
Are you trying to go to Heaven building a staircase?
Mother earth is verily Heaven, in the edge of the Milky-way!
Enough is enough! make it not a Hell! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೯ ಮನಸ್ಸು: ಮಿತ್ರ? ವೈರಿ?
ಕಡುವೈರಿಯೀ ಮನಸು, ಹಿಡಿತದಲ್ಲಿಡೆ ನಿನ್ನ!
ಹಿಡಿದಿಡಲು ನೀ ಮನವ, ಒಡನಾಡಿ! ಸನ್ಮಿತ್ರ!
ಹಿಡಿತ ಯಾರದು? ಅದುವೆ ಮುಖ್ಯ! ತಂತ್ರಜ್ಞ.
TechnoWise Tripods-499 MIND: FRIEND? or FOE?
Greatest enemy is your mind, if it controls you!
Greatest friend it becomes, if you control it!
Who controls whom? That's vital! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೮ ಬದುಕು ಮತ್ತು ಬದುಕುವುದು
"ಬದುಕು" ಆಗಲು ಕ್ರಿಯಾಪದ, ನಿನಗೆ "ಮತಿ" ಮುಖ್ಯ!
"ಹೃದಯ" ನಿನಗತಿ ಮುಖ್ಯ "ಬದುಕು" ಇರೆ ನಾಮಪದ!
ಹದುಳಕೆದೆ ಮುಖ್ಯ, ಮತಿ ಗೌಣ! ತಂತ್ರಜ್ಞ.
TechnoWise Tripods-498 LIFE and LIVING
When "Life" takes the verbal form of "Living", Intellect becomes primary!
"Life" as noun, requires more of Heart, and Intellect is secondary!
For human well-being, primary is Heart and Intellect is secondary! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೭ ಕಾಲ ಕಾಯುವುದಿಲ್ಲ!
ಕಾಲ ಕಾಯುವುದಿಲ್ಲ! ಗಾಳಿ ನಿಲುವುದೆ ಇಲ್ಲ!
ಕಾಲವನು ಬಳಸಿ, ಅನುಕೂಲ ಗಾಳಿಯ ಪಥದಿ
ಏಳಿಗೆಯ ಮಾಳಿಗೆಯನೇರು! ತಂತ್ರಜ್ಞ.
TechnoWise Tripods-497 TIME NEVER WAITS!
Time never waits, and wind never stops blowing!
By using time wisely and following the path of favourable winds,
Climb up the steps of prosperity! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೬ ಪ್ರಜ್ಞಾಬಲದ ಅಡಿಪಾಯ
ಕಾಯಬಲವನು ಮೀರಿ, ಆಯುಧದ ಬಲ ಬಂತು!
ಈ ಯುಗದಿ ಬುದ್ಧಿಬಲ! ಮುಂದೆ ಪ್ರಜ್ಞಾಬಲವೆ
ಪಾಯ ಮನುಕುಲದ ವಿಕಸನಕೆ! ತಂತ್ರಜ್ಞ.
TechnoWise Tripods-496 FOUNDATION OF CONSCIOUSNESS
The power of the weapons overpowered the muscle power!
The knowledge era is ruled by the Intellectual power! and in the future, O! TechnoWise!
The power of the consciousness will be the foundation for the evolution!
ತಂತ್ರಜ್ಞ ತ್ರಿಪದಿಗಳು-೪೯೫ ಮಹಾ ಸಾಧಕರು
ಸಿದ್ಧ ಕನಸಿನ ಜತೆಯೆ ನಿದ್ದೆಹೋಗುವರಿವರು!
ಬದ್ಧತೆಯ ಜತೆಯಲ್ಲೆ ಎದ್ದೇಳುವೀ ಜನರು
ಜಿದ್ದಿನಲೆ ಗೆಲುವ ಸಾಧಕರು! ತಂತ್ರಜ್ಞ.
TechnoWise Tripods-495 GREAT ACHIEVERS
Those who sleep with ready-made dreams,
And wake up with strong commitments,
Are the great achievers with firm resolutions! O! TechnoWise!
ತಂತ್ರಜ್ಞ ತ್ರಿಪದಿಗಳು-೪೯೪ ಬರಿ ಅನುಕರಣೆ
ಪರರ ಬರಿ ಅನುಕರಣೆ ಪರಿ ನಿನಗೆ ಶುಭವಲ್ಲ!
ತಿರೆಯ ಜನರಲ್ಲೆಲ್ಲ ಏಕೈಕ ಸೃಷ್ಟಿ ನೀ!
ಗೌರವಿಸಿ ಹಳತ, ಕರೆ ಹೊಸತ! ತಂತ್ರಜ್ಞ.
TechnoWise Tripods- 494 SIMPLY APING!
Simply aping someone may not do good to yourself!
In the entire creation there is none like your goodself!
Respecting the Old, welcome the New! O! TechnoWise!