ತಂತ್ರಜ್ಞ ತ್ರಿಪದಿಗಳು-೪೭೧ ಪರಿವರ್ತನೆ
ಪರರ ಸಮ್ಮತಿಗೆಂದೆ ಪರಿವರ್ತನೆಯು ಸಲ್ಲ!
ಪರಿಕಿಸಿಯೆ ಪರರರೊಡನೆ ನಿನ್ನ ನೀ ನಿರ್ಧರಿಸು!
ಪರಿವರ್ತನೆಯು ಯಾರಿಗೆಂದು! ತಂತ್ರಜ್ಞ.
TechnoWise Tripods-471 CHANGE
Never change yourself for being accepted by others!
Examine closely your own self with others and decide,
Who really requires a change! O! TechnoWise.
ತಂತ್ರಜ್ಞ ತ್ರಿಪದಿಗಳು-೪೭೦ ಪುರುಸೊತ್ತು
ಮನ ಹರುಷದಿಂದಿರಲು ಧನರಾಶಿ ಬೇಕಿಲ್ಲ!
ಜನರು ಮರಗಿಡ ಗಿರಿಯು ಪುಷ್ಪಕಾಶಿಯೆ ಸಾಕು!
ಅನುಭವಿಸೆ ಬೇಕು ಪುರುಸೊತ್ತು! ತಂತ್ರಜ್ಞ.
TechnoWise Tripods-470 LEISURE TIME
You don't need lots of money for a happy state of mind!
The divine company of good people, trees, plants, forests and flowers are enough!
But to enjoy, most important is leisure time! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೯ ಇಂದು - ಮುಂದು
ಮುಂದಾಗುವುದಕೆಲ್ಲ ಇಂದಿನದೆ ಅಡಿಪಾಯ!
ಚಂದ ಶಿಸ್ತಿರಲಿಂದು, ಮುಂದೆ ಪ್ರಭೆ ಪೂರ್ಣೇಂದು!
ಇಂದು ಸ್ವಚ್ಛಂದ? ಗೋವಿಂದ!!! ತಂತ್ರಜ್ಞ.
TechnoWise Tripods-469 PRESENT and FUTURE
The present moment lays the foundation for the future!
If the present is looked after well, the future will be like the full moon!
God only should help them in future, who are unrestrained in the present! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೮ ಮರಿದುಂಬಿಯಾಗು
ಪರಿಗಣಿಸು ಸ್ಫೂರ್ತಿಯನು ತರುವ ಮಹನೀಯರನು!
ಮರೆತುಬಿಡು ಕಿರಿಕಿರಿಯ ಕೊಡುವ ಕಿರುಕುಳಗಳನು!
ಮರಿದುಂಬಿಯಾಗು ರಸವನದಿ! ತಂತ್ರಜ್ಞ.
TechnoWise Tripods-468 BE A HONEY-BEE
Consider all those people who encourage and inspire you!
Forget those small-minded ones who annoy and discourage you!
Be a young bee and drink nectar in the flower garden! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೭ ಶಿಲ್ಪಿ ನೀ!
ಆದಿಮನುಜನದಲ್ಲ, ಮಾಧವನ ಶಿಲ್ಪಿ ನೀ!
ಸಾಧಿಸುವ ಶ್ರಮವಿರಲಿ, ಗುರಿ ಮುಂದೆ- ಗುರು ಹಿಂದೆ-
ಬಾಧಕವ ಮಟ್ಟಿ, ಮೇಲೇರು ತಂತ್ರಜ್ಞ.
TechnoWise Tripods-467 SCULPTOR, YOU ARE
Toiling hard to succeed with a goal in the front and a Guru at the back,
Be a sculptor of a divine man and not a cave man!
Make all the setbacks as stepping stones! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೬ ಭೂದೇವಿ, ಜೀವವೈವಿಧ್ಯಮಯಿ
ಓಡಾಡುವ ಮೃಗಕುಲ, ಹಾಡುವ ವಿಹಂಗಕುಲ,
ಕಾಡಿನಲಿ ತರುಲತೆಯ ಜೀವವೈವಿಧ್ಯವಿರೆ
ಷೋಡಶಾಲಂಕಾರೆ ವಸುಧೆ! ತಂತ್ರಜ್ಞ.
TechnoWise Tripods-466 BEAUTY OF BIODIVERSITY
With playful animals and singing birds,
With trees and creepers of great Biodiversity,
Mother earth is pretty wearing sixteen ornaments! O! TechnoWise!
ತಂತ್ರಜ್ಞ ತ್ರಿಪದಿಗಳು-೪೬೫ ದೂರು
ದೂರುತ್ತಲಿರೆ ಪರರ, ದೂರವಾಗುವ ಗುರಿಗೆ!
ದೂರುತ್ತಲಿರೆ ತನ್ನ, ದಾರಿ ಕಾಣನು ಗುರಿಗೆ!
ದೂರದವ ದೂರವಿರ ಗುರಿಗೆ! ತಂತ್ರಜ್ಞ.
TechnoWise Tripods-465 COMPLAINING
The one who goes on complaining about others, will be far away from his goal!
The one has constant complaints about himself, will definitely miss the way to his goal!
He alone reaches the goal, who works without any complaints! O! TechnoWise!