Saturday, December 8, 2018

ತಂತ್ರಜ್ಞ ತ್ರಿಪದಿಗಳು-೪೫೩ ಸೃಷ್ಟಿಕರ್ತಗೆ ದ್ವಾರ


ತಂತ್ರಜ್ಞ ತ್ರಿಪದಿಗಳು-೪೫೩ ಸೃಷ್ಟಿಕರ್ತಗೆ ದ್ವಾರ
ದುಷ್ಟ ವ್ಯಾಘ್ರನೊ, ಅತಿ ನಿಕೃಷ್ಟ ಮಣ್ಣಿನ ಹುಳವೊ
ದೃಷ್ಟ ತಾವರೆಯೊ, ಅದೃಷ್ಟ ಎದೆತಾವರೆಯೊ
ಸೃಷ್ಟಿಕರ್ತಗೆ ದ್ವಾರ ಸೃಷ್ಟಿ! ತಂತ್ರಜ್ಞ.
TechnoWise Tripods-453 DOORWAY TO THE CREATOR
May be through a ferocious tiger, or through an ordinary earthworm,
May be through a visible lotus of the pond, or through an invisible lotus of the heart,
The doorway to the creator is his creation! O! TechnoWise!



Sunday, December 2, 2018

ತಂತ್ರಜ್ಞ ತ್ರಿಪದಿಗಳು-452 ಮೃತ್ಯು - ಮೋಕ್ಷ


ತಂತ್ರಜ್ಞ ತ್ರಿಪದಿಗಳು-452 ಮೃತ್ಯು - ಮೋಕ್ಷ
ಶ್ವಾಸ ನಿಲುಗಡೆಗೊಂಡು, ಆಸೆಯುಳಿದಿರೆ- ಮೃತ್ಯು!
ಆಸೆ ನಿಲುಗಡೆಗೊಂಡು, ಶ್ವಾಸ ನಡೆದಿರೆ- ಮೋಕ್ಷ!
ಲೇಸುಯೀ ವ್ಯತ್ಯಾಸ ನೆನೆಯೆ! ತಂತ್ರಜ್ಞ!
TechnoWise Tripods-452 DEATH - MOKSHA
When Breath stops and Desire remains, that is Death!
When Desire stops and Breath remains, that is Moksha!
When we reminisce this difference, that is the Essence! O! TechnoWise!

Monday, November 26, 2018

ತಂತ್ರಜ್ಞ ತ್ರಿಪದಿಗಳು-೪೫೧ ಕಜ್ಜ - ಬೀಜ


ತಂತ್ರಜ್ಞ ತ್ರಿಪದಿಗಳು-೪೫೧ ಕಜ್ಜ - ಬೀಜ
ಒಂದೊಂದು ಕಜ್ಜವೂ ಒಂದೊಂದು ಬೀಜವದು!
ಚಂದ ಹೂಗಿಡವೊ ಮುಳ್ಳಿನ ಗಿಡವೊ ಆ ಬೀಜ
ದಿಂದ ಸಾಧ್ಯತೆಯಿರಲು, ಜೋಕೆ! ತಂತ್ರಜ್ಞ.
TechnoWise Tripod-451 DEED - SEED
Each deed you do is like a seed!
As a flower plant or a thorny plant may emerge from that seed,
Be careful in your choice! O! TechnoWise!



Sunday, November 25, 2018

ತಂತ್ರಜ್ಞ ತ್ರಿಪದಿಗಳು-೪೫೦ ಸೊಗಸಕ್ಕರೆಯ ಕಾಫಿ!


ತಂತ್ರಜ್ಞ ತ್ರಿಪದಿಗಳು-೪೫೦ ಸೊಗಸಕ್ಕರೆಯ ಕಾಫಿ!
ಕುಡಿದು ಸಪ್ಪೆಯ ಕಾಫಿ, ಅಡಿಯ ಸಕ್ಕರೆ ಕಂಡು,
ಚಡಪಡಿಸಲೇನು ಫಲ? ಕದಡಿ ಸೊಗಸಕ್ಕರೆಯ,
ಕುಡಿ ಬಿಸಿಯ ಶುಚಿರುಚಿಯ ಕಾಫಿ! ತಂತ್ರಜ್ಞ!
TechnoWise Tripods-450 COFFEE WITH SUGAR OF JOY!
After tasting bitter coffee, if you find sugar lying at the bottom of the cup,
What is the use of repenting? Stir the sugar of Joy well!
And relish a drink of steaming fine coffee! O! TechnoWise!


Wednesday, November 7, 2018

ತಂತ್ರಜ್ಞ ತ್ರಿಪದಿಗಳು-೪೪೯ ಬೆಳಕು


ತಂತ್ರಜ್ಞ ತ್ರಿಪದಿಗಳು-೪೪೯ ಬೆಳಕು
ಉತ್ಸಾಹಪ್ರವಾಹ ವಿದ್ಯುತ್ತು ಹರಿಯುವ ಪರಿಯೆ!
ಪ್ರೀತಿಯಾಕರ್ಷಣೆಯು ಅಯಸ್ಕಾಂತಗಳಂತೆ!
ದ್ಯುತಿಯಿಹುದು ಎಲ್ಲದರ ಹಿಂದೆ! ತಂತ್ರಜ್ಞ.
TechnoWise Tripods-449 LIGHT
Enthusiasm is like the flow of electricity!
Love is like the attractions in magnetism!
Behind everything there is light! O! TechnoWise!

Monday, November 5, 2018

ತಂತ್ರಜ್ಞ ತ್ರಿಪದಿಗಳು-೪೪೮ ದೀಪಾವಳಿಯ ಶುಭಾಶಯಗಳು


ತಂತ್ರಜ್ಞ ತ್ರಿಪದಿಗಳು-೪೪೮ ದೀಪಾವಳಿಯ  ಶುಭಾಶಯಗಳು
ಕೋಪ, ಹಳೆಯದಕೆ ಪರಿತಾಪ, ನಾಳೆಯ ಚಿಂತೆ-
ಈ ಪರಿಯ ಮೊಬ್ಬಳಿದು ಎದೆದೀಪ ಬೆಳಗುವುದೆ
ದೀಪಾವಳಿಯ ಸುಸಂದೇಶ! ತಂತ್ರಜ್ಞ.
TechnoWise Tripods-448 DEEPAVALI  GREETINGS
Making the light the lamp of the heart to dispel the darkness
Of Anger, anguish for the past, and worry of the future
Is the auspicious message of Deepavali! O! TechnoWise!


Sunday, November 4, 2018

ತಂತ್ರಜ್ಞ ತ್ರಿಪದಿಗಳು-೪೪೭ ಮನುಜಸಂಬಂಧ


ತಂತ್ರಜ್ಞ ತ್ರಿಪದಿಗಳು-೪೪೭ ಮನುಜಸಂಬಂಧ
ಹರಣಹೋಗುವುದೊತ್ತೆ! ಹಾರಿ ಕಣ್ಮರೆ ಬಿಡಲು!
ಸರಿಯಾಗಿ ಹಿಡಿದಾಗ ಚಿರವಾಗಿ ಉಳಿಯುವುದು!
ಮರಿಹಕ್ಕಿ ಪರಿಯೆ ಸಂಬಂಧ! ತಂತ್ರಜ್ಞ.
TechnoWise Tripods-447 HUMAN REATIONSHIPS
It dies if you hold very tight! Flies away if loosely held!
Remains with you forever if held with care!
Delicate as a baby bird is human relationship! O! TechnoWise!