ತಂತ್ರಜ್ಞ ತ್ರಿಪದಿಗಳು-೪೨೮ ಹಸ್ತದಲಿ ಧನರೇಖೆ
ಹಸ್ತದಲಿ ಧನರೇಖೆ ನಾಸ್ತಿಯೆನ್ನುವ ಕೊರಗೆ?
ಹಸ್ತವಿರದವರು ಬರೆದಿಹರು ವರ ಭವಿತವ್ಯ!
ಚಿತ್ತಬಲ ಸುಭವಿಷ್ಯ ಚಿಹ್ನೆ! ತಂತ್ರಜ್ಞ.
TechnoWise Tripod-428 Money Line on the Hand
Are you lamenting because no Money Line on your hand?
Remember, people without hands have created very bright future!
Will power is the sign of the future! O! TechnoWise!
ತಂತ್ರಜ್ಞ ತ್ರಿಪದಿಗಳು-೪೨೭ ಕಲಿಕೆಕುಡಿ
ತಿಳಿದಿರುವುದತ್ಯಲ್ಪ! ತಿಳಿಯದುದು ಅತ್ಯಧಿಕ!
ಕಲಿಕೆಕುಡಿ ಚಲನೆ- ತಿಳಿಯದನೊಪ್ಪಿ, ತಿಳಿವಿಂದ
ತಿಳಿಯದುದರತ್ತ ವಿಸ್ತರಣೆ! ತಂತ್ರಜ್ಞ.
TechnoWise Tripods-427 CREEPER OF LEARNING
What's known is infinitesimal, and what's unknown is inordinate!
The slow movement of the creeper of learning is to accept the vast unknown,
And extend the tip from the known to the unknown! O! TechnoWise.
ತಂತ್ರಜ್ಞ ತ್ರಿಪದಿಗಳು-೪೨೬ ಕ್ಷಮೆಯಿತ್ತು ಮರೆತುಬಿಡು
ಪರರ ಶಮನಿಸುವೆ ನೀ, ಧರೆಯಂತೆ ಕ್ಷಮೆಯಿತ್ತು!
ಮರೆಯುತ್ತ ಕಹಿನೆನೆಪ, ಬೆಳೆದು ಬೆಳೆಸುವೆ ಪರರ!
ಮರೆಯದಿರೆ, ಕ್ಷಮೆಕೊಡುವೆಯೆಂತು? ತಂತ್ರಜ್ಞ!
TechnoWise Tripods-426 FORGIVE and FORGET
When you forgive, you heal yourself and others!
When you forget, you grow and let grow others as well!
How can you forgive if you can't forget? O! TechnoWise!
ತಂತ್ರಜ್ಞ ತ್ರಿಪದಿಗಳು-೪೨೫ ಖಾಲಿ ಪಾತ್ರೆ
ಏರುದನಿ ಆವೇಶ ಸಾರುವುದೆ ಸತ್ಯವನು?
ನೀರವತೆ ಮುನಿಮೌನ ಸತ್ತ್ವಹೀನತೆ ಕುರುಹೆ?
ಜೋರುದನಿ, ಪಾತ್ರೆಯಿರೆ ಖಾಲಿ! ತಂತ್ರಜ್ಞ.
TechnoWise Tripods-425 EMPTY VESSEL
Are loud voices and outcries indicators of truth?
And silence and reticence of sages symbols of weakness?
Empty vessels make the most noise! O! TechnoWise!
ತಂತ್ರಜ್ಞ ತ್ರಿಪದಿಗಳು-೪೨೪ ಎದೆಗೆ ಶರಣಾಗು
ಇಹಸಮಸ್ಯೆಯ ಬಿಡಿಸೆ- ಬಹುಪಥಗಳನು ಮನಸು-
ಬಹಳ ಸರಿ ಪಥವ ಮತಿ- ತೋರಿಸದೆ ಇರುವಾಗ-
ಸಹಜದಲಿ ಎದೆಗೆ ಶರಣಾಗು! ತಂತ್ರಜ್ಞ.
TechnoWise Tripods-424 SURRENDER TO THE HEART
For solving a worldly problem, when the Mind is unable to show alternate paths-
And the Intellect fails to indicate the most correct path-
Then, naturally you have to surrender to the Heart! O! TechnoWise!
ತಂತ್ರಜ್ಞ ತ್ರಿಪದಿಗಳು-೪೨೩ ಹೊರಹರಿವು ಮೂಲ
ಅರಿತಾಗ ನೀ ನಿನ್ನ, ಪರರ ಸಮ್ಮತಿ ಗೌಣ!
ಪರಕೊಡುಗೆ ಬೇಕಿಲ್ಲ, ನಿನ್ನ ನೀ ಪ್ರೀತಿಸಲು!
ಹೊರಹರಿವು ಮೂಲ ನೀನಾಗ! ತಂತ್ರಜ್ಞ.
TechnoWise Tripods-423 POWERFUL SOURCE
The more you know who you are, the less you seek approval from others!
When you begin to love yourself, there is less need to be filled from outside!
You become a powerful source of flow outwards! O! TechnoWise!
ತಂತ್ರಜ್ಞ ತ್ರಿಪದಿಗಳು-೪೨೨ ಬೆಳಕಿನ ದಾರಿ
ಬೆಳಕ ತೋರುವೆ ನೀನು, ಕೆಲವೊಮ್ಮೆ ಇತರರಿಗೆ!
ಬೆಳಕ ಬಯಸುವೆ ಬಹಳ, ಇನ್ನೊಮ್ಮೆ ಪರರಿಂದ!
ಬೆಳಕಿರಲು ಭರವಸೆಯ ದಾರಿ! ತಂತ್ರಜ್ಞ!
TechnoWise Tripods-422 LIGHTED PATH
Some days you'll show light to others!
Some time you'll badly need light from others!
As long there is light, assured is the right way! O! TechnoWise!