ತಂತ್ರಜ್ಞ ತ್ರಿಪದಿಗಳು-೩೮೬ ಜ್ಞಾಪನೆ-ಕಲ್ಪನೆ
ಜ್ಞಾಪಕಬಲವು ವರವು, ತಾಪಶಾಪವದಲ್ಲ!
ಕಲ್ಪನೆಯ ಗುರಿ ಚಿಂತೆ ಚಿತೆಯಲ್ಲ, ಸಿರಿಹಣತೆ!
ದೀಪ ಬೆಳಕಿಗೆ, ದಹನಕಲ್ಲ! ತಂತ್ರಜ್ಞ!
TechnoWise Tripods-386 MEMORY and IMAGINATION
Memory is a boon and not a curse of remorse!
Imagination is a divine light, and not a funeral fire of worry!
A lamp is meant for illumination, and not for incineration! O! TechnoWise!
ತಂತ್ರಜ್ಞ ತ್ರಿಪದಿಗಳು-೩೮೫ ಪರಿವರ್ತನೆ
ನಿನ್ನ ಬದಲಿಸೆ ಸೋತು ಸುಣ್ಣವಾಗಿರುವಾಗ,
ಇನ್ನು ಪರರನ್ನೆಂತು ಪರಿವರ್ತಿಸುವೆ ನೀನು?
ಚೆನ್ನ ಹಾರೈಕೆ ಗೈ ಸಾಕು! ತಂತ್ರಜ್ಞ!
TechnoWise Tripods-385 CHANGING
When you have utterly failed to change yourself,
What chance you really have in trying to change others?
What all you can do is to wish them well! O! technoWise!
ತಂತ್ರಜ್ಞ ತ್ರಿಪದಿಗಳು-೩೮೪ ಎರಡು ತುದಿಯುರಿವ ಮೋಂಬತ್ತಿ!
ತೆರಳಿ ಹೋದುದ ನೆನೆದು ಕೊರಗುತಿರುವುದರೊಡನೆ,
ಬರುವ ಕಷ್ಟದ ಚಿಂತೆ ಚಿತೆಯುರಿಯುತಿರೆ- ಬಾಳು
ಎರಡು ತುದಿಯುರಿವ ಮೋಂಬತ್ತಿ! ತಂತ್ರಜ್ಞ!
TechnoWise Tripods-384 BURNING A CANDLE FROM BOTH ENDS
When the memory of the past is bringing grief and repentance,
And the imagination of the future is is igniting pyres of worries,
Life is like burning a candle from both ends! O! TechnoWise!
ತಂತ್ರಜ್ಞ ತ್ರಿಪದಿಗಳು-೩೮೩ ಪ್ರೀತಿಯಮೃತ
ಹಸಿರು ಮರಗಿಡಬಳ್ಳಿ, ಹಸನಿರುವ ನದಿಸರಸಿ
ಪಶುಪಕ್ಷಿ ಜನಕೋಟಿ ಬೇಸತ್ತಿಹುದು ಜಗದಿ
ತೃಷೆಗೆ ದೊರಕದೆ ಪ್ರೀತಿಯಮೃತ! ತಂತ್ರಜ್ಞ!
TechnoWise Tripods-383 NECTAR OF LOVE
The greenery of forests and crystal clear waters of lakes and rivers,
And billions of animals, birds and humans are in weariness
Bereft of the nectar of love for quenching their thirsts! O! TechnoWise!
ತಂತ್ರಜ್ಞ ತ್ರಿಪದಿಗಳು-೩೮೨ ಗೆದ್ದು ಸೋಲುವ ಯುದ್ಧ!
ಮುದ್ದು ಕುವರರೆ ಸಾಯೆ, ಗೆದ್ದರೇ ಪಾಂಡವರು?
ಬಿದ್ದು ಸತ್ತರು ಸೋತ ಕೌರವರು! ಯುದ್ಧವಿದು
ಗೆದ್ದು ಸೋಲುವ, ಸೋತು ಸಾವ! ತಂತ್ರಜ್ಞ!
TechnoWise Tripods-382 WARS OF DEFEAT AFTER VICTORY
When all their children died, were Pandavas really victorious in Mahabharata war?
And the entire race of Duryodhana was wiped out when defeated!
In wars, the victoious one loses, and the defeated one dies! O! TechnoWise!
ತಂತ್ರಜ್ಞ ತ್ರಿಪದಿಗಳು-೩೮೧ ಪರಿಪೂರ್ಣ
ಬಲವಂತ ನೀನು ದುರ್ಬಲತೆ ನಿನ್ನದನರಿಯೆ!
ಕಲಿಯೆ ತಪ್ಪುಗಳಿಂದ, ಕಲಿಯುಗದ ಕಲಿ ನೀನು!
ತಿಳಿಯೆ ಕುಂದೆಲ್ಲ, ಪರಿಪೂರ್ಣ! ತಂತ್ರಜ್ಞ!
TechnoWise Tripods-381 PERFECTION
When you know your weaknesses, you become strong!
You are the wisest of the era, when you learn from your mistakes!
When you know your faults, you are the most perfect! O! TechnoWise!
ತಂತ್ರಜ್ಞ ತ್ರಿಪದಿಗಳು-380 ಬಹುಚಂದ ಈ ಶಾಲೆ
ಚಂದ ಶಾಲೆಯಿದೆಂದು ಮುಂದೆ ಉತ್ತೀರ್ಣಗೊಳ
ದೊಂದೆ ತರಗತಿಯ ವಿದ್ಯಾರ್ಥಿ ನೀನಾಗದಿರು!
ಮುಂದುವರಿ ಕಲಿತು ಬಾಳುದ್ದ! ತಂತ್ರಜ್ಞ!
TechnoWise tripods-380 BEAUTIFUL SCHOOL
Enamoured by the beauty of the school,
Don't remain in the same class without seeking promotion!
Keep advancing with Life Long Learnig! O TechnoWise!