ತಂತ್ರಜ್ಞ ತ್ರಿಪದಿಗಳು-೩೪೩ ಸಂಭ್ರಮಿಸಿ ಬದುಕು!
"ಒಂದು ದಿನ ಮರಣ! ದಿಟ!" ಎಂದೆನಲು ಋಣವಾದಿ,
"ಚಂದ ಬದುಕಿದು! ಆಗು ಋಣಿ!" ಎನುವ ಧನವಾದಿ!
ಇಂದಿರುವ ಬದುಕ ಸಂಭ್ರಮಿಸು! ತಂತ್ರಜ್ಞ!
TechnoWise Tripods-343 CELEBRATE LIFE
Whe a pessimist sadly said that "Some day we will all die!"
An optimist with a radiant face said:"Yes, but be grateful for all other beautiful days when you are alive!"
Celebrate life every today! every now! till it lasts! O! TechnoWise!
ತಂತ್ರಜ್ಞ ತ್ರಿಪದಿಗಳು-೩೪೨ ಕತ್ತರಿ- ಸೂಜಿದಾರ
ಕತ್ತರಿಸಿ ವಿಭಜಿಸುವ ಕತ್ತರಿಯ ಪರಿ ಬುದ್ಧಿ!
ಬಿತ್ತರಿಸಿ ಬೆಸೆವ ಎದೆ ಸೂಜಿದಾರದ ರೀತಿ!
ಪ್ರೀತಿ ದಾರವು! ಎದೆಯೆ ಸೂಜಿ! ತಂತ್ರಜ್ಞ.
TechnoWise Tripods-342 SCISSORS - NEEDLE & THREAD
The Intellect always disects like the scissors that cuts and separates!
The Heart that unites and expands is like the needle and the thread!
The Heart is the Needle, and the love passing through it, is the Thread! O! TechnoWise.
ತಂತ್ರಜ್ಞ ತ್ರಿಪದಿಗಳು-೩೪೧ ಕೇಂದ್ರದ ಅರಸುವಿಕೆ
ಕೇಂದ್ರವಿರುವಂತೆ ಪ್ರತಿಯೊಂದು ಅಣು, ವೃತ್ತದಲಿ
ಚಂದ್ರಸೂರ್ಯರ ಮಹಾ ಬ್ರಹ್ಮಾಂಡ ವೃತ್ತದಲು!
ಕೇಂದ್ರವಿದನರಸುವವ ಋಷಿಯು! ತಂತ್ರಜ್ಞ.
TechnoWise Tripods-341 DISCOVERING THE CENTRE
Just as every circle and every atom has a centre,
So also this vast circle of manifestations of the universe of suns and moons!
To discover this centre is the aim of sages and scientists! O! TechnoWise!
ತಂತ್ರಜ್ಞ ತ್ರಿಪದಿಗಳು-೩೪೦ ಮನಶ್ಶಾಂತಿ
ಎಣಿಕೆಯಲಿ ಘನತೆಯಿರೆ, ದನಿಯೊಪ್ಪೆ ಎದೆಯೊಳಗೆ,
ನಿನಗಿರುವ ಶಕ್ತಿಯನು ಮೀರಿ ಕಾರ್ಯವ ಗೈಯೆ,
ದಿನದ ಕೊನೆಯಲಿ ಮನಶ್ಶಾಂತಿ! ತಂತ್ರಜ್ಞ.
TechnoWise Tripods-340 PEACEFUL
If your intentions are noble, and the voice of the heart is in agreement,
And if you put in your very best in all your efforts,
You'll be at peace at the end of the day! O! TechnoWise!
ತಂತ್ರಜ್ಞ ತ್ರಿಪದಿಗಳು-೩೩೯ ಸಂವಹನ
ನಯವಿರದು ಸಹಬಾಳ್ವೆ ಭಯ ಪರಸ್ಪರವಿರಲು,
ಭಯಕೆ ಕಾರಣ ಕೊರತೆ ಉಭಯರಲಿ ಸಂವಹನ!
ನಯನ ಸೇರಲು ಬರುವುದರಿವು! ತಂತ್ರಜ್ಞ.
TechnoWise Tripods-339 COMMUNICATION
When people fear each other, they fail to get along!
They fear each other when they don't know each other!
When the eyes meet and communicate, each knows the other! O! TechnoWise!
ತಂತ್ರಜ್ಞ ತ್ರಿಪದಿಗಳು-೩೩೮ ಜೀವಸಂವೇದನೆ
ತರುಭೀಮವನು ಕಂಡು, ಮರದ ಬಹುಧನವಲ್ಲ,
ಸರುವ ಜೀವರ ಪ್ರಾಣವಾಯು ಸ್ಮರಣೆಗೆ ಬರಲಿ!
ಇರಲಿ ಜೀವಸಂವೇದನೆಯು! ತಂತ್ರಜ್ಞ.
TechnoWise Tripods-338 BE LIFE-SENSITIVE
When you see a gigantic tree, not the huge amount of money,
But think of the amount of life-sustaining oxygen it provides!
Be life-sensitive! and not ego-sensitive! O! TechnoWise!
ತಂತ್ರಜ್ಞ ತ್ರಿಪದಿಗಳು-೩೩೭ ಪರಿಸರ?
"ಕೊಡಲಿಗಳ ಹಿಂದಿರುವ ಹಿಡಿಯೆಮ್ಮ ಜಾತಿಯದು!"
ನುಡಿದಿಂತು ತರುಕೋಟಿ "ಕೊಡಲಿ"ಗಿತ್ತವು ಓಟು!
ಬಡವಾಯ್ತು ದಟ್ಟ ಕಗ್ಗಾಡು! ತಂತ್ರಜ್ಞ.
TechnoWise Tripods-337 ENVIRONMENT?
"The gripper of the axe belongs to our community!"
So saying, crores of trees of the dense jungle voted for the "Axe"!
Soon the thick forest became a desert! O! TechnoWise!