Monday, June 4, 2018

ತಂತ್ರಜ್ಞ ತ್ರಿಪದಿಗಳು-೩೩೬ ಮಾನಸಿಕ ನಿಲುವು - ಹಮ್ಮು


ತಂತ್ರಜ್ಞ ತ್ರಿಪದಿಗಳು-೩೩೬ ಮಾನಸಿಕ ನಿಲುವು - ಹಮ್ಮು
ಭಿನ್ನತನ ನೀಡುವುದು ನಿನ್ನ ಮನಸಿನ ನಿಲುವು!
ನಿನ್ನನ್ನು ಪರರಿಂದ ದೂರತರುವುದು ಹಮ್ಮು!
ಸಣ್ಣ ಹಮ್ಮಿರಲಿ, ಚೆಲು ನಿಲುವು! ತಂತ್ರಜ್ಞ.
TechnoWise Tripods-336 ATTITUDE - EGO
Attitude makes you quite different from others!
Whereas, Ego takes you away from others!
May your Ego be small and attitude good! O! TechnoWise!


Sunday, June 3, 2018

ತಂತ್ರಜ್ಞ ತ್ರಿಪದಿಗಳು-೩೩೫ ಕೆಸರಿನ ಕಮಲ


ತಂತ್ರಜ್ಞ ತ್ರಿಪದಿಗಳು-೩೩೫ ಕೆಸರಿನ ಕಮಲ
ಎಲ್ಲರೂ ನೋಡುವುದು ಎಲ್ಲಿ ತಲಪಿದರೆಂದು!
ಎಲ್ಲಿಂದ ಬಂದರೆಂಬುದು ಗೌಣವೆಂಬುದನು
ಎಲ್ಲರಿಗು ಕಲಿಸುವುದು ಕಮಲ! ತಂತ್ರಜ್ಞ.
TechnoWise Tripods-335 LOTUS OF THE MUD
The thing people see is where you finally reach!
And where you came from is verily very subordinate!
This is the lesson taught by the lotus of the muddy pond! O! technoWise!





Saturday, June 2, 2018

ತಂತ್ರಜ್ಞ ತ್ರಿಪದಿಗಳು-೩೩೪ ಬೇಕು-ಸಾಕು


ತಂತ್ರಜ್ಞ ತ್ರಿಪದಿಗಳು-೩೩೪ ಬೇಕು-ಸಾಕು
ಪರಿಣಯಕೆ ಸಂಭ್ರಮಕೆ ಸರುವ ಹಿತವರು ಬೇಕು!
ಸರಸ ವಿರಸಕೆ ಸತಿಪತಿಯರಿಬ್ಬರೇ ಸಾಕು!
ಅರಿವು ನಲಿವಿಗೆ ನೀನೆ ಸಾಕು! ತಂತ್ರಜ್ಞ.
TechnoWise Tripods-334 NEED - ENOUGH
All the near and dear ones are needed for the jibilees of weddings and festivals!
For love and romance, two are more than enough!
And just one is enough to know oneself and be happy! O! TechnoWise!


  

Friday, June 1, 2018

ತಂತ್ರಜ್ಞ ತ್ರಿಪದಿಗಳು-೩೩೩ ಆಸೆ DESIRE


ತಂತ್ರಜ್ಞ ತ್ರಿಪದಿಗಳು-೩೩೩ ಆಸೆ
"ಅರಸಲೇ ಅಲ್ಲ, ಕತ್ತರಿಸಲೇ ಕೂದಲನು?"
ಕ್ಷೌರಿಗನು ಕೇಳಿದನು ಬಕ್ಕತಲೆ ವೃದ್ಧರನು!
ಕರಿಬಣ್ಣ ಹಾಕೆಂದರವರು! ತಂತ್ರಜ್ಞ.
TechnoWise Tripods-333 DESIRE
"Shall I count the hair or cut the hair?"
Asked the barber seeing the bald-headed elderly customer!
"You color them black" thoughtfully replied the old man!


Thursday, May 31, 2018

ತಂತ್ರಜ್ಞ ತ್ರಿಪದಿಗಳು-೩೩೨ ಸಮಸ್ಯೆ - ಪರಿಹಾರ PROBLEMS - SOLUTIONS


ತಂತ್ರಜ್ಞ ತ್ರಿಪದಿಗಳು-೩೩೨ ಸಮಸ್ಯೆ - ಪರಿಹಾರ
ಸಮಸ್ಯಾಮೂಲವದು ತುಮುಲ ಕ್ಷೋಭೆಯ ಮನಸು!
ಸಮತೆ ತುಂಬಿದ ಮನವು ಪರಿಹಾರಭಂಡಾರ!
ಸಮತೆಗೊಂದೇ ದಾರಿ! ಧ್ಯಾನ! ತಂತ್ರಜ್ಞ.
TechnoWise tripods-332 PROBLEMS - SOLUTIONS
A source of all problems is a disturbed agitated mind!
And a storehouse of all solutions is a tranquil equable mind!

The royal road to equability is Meditation! O! TechnoWise!


Wednesday, May 30, 2018

ತಂತ್ರಜ್ಞ ತ್ರಿಪದಿಗಳು-೩೩೧ ಆನೆ-ಕುದುರೆ TechnoWise tripods-331 ELEPHANT-HORSE


ತಂತ್ರಜ್ಞ ತ್ರಿಪದಿಗಳು-೩೩೧ ಆನೆ-ಕುದುರೆ
ವಾಯುವೇಗದ ಅಶ್ವ, ಹಾಯಾಗಿ ನಡೆವ ಗಜ-
ಈಯೆರಡು ಕಟ್ಟಿರುವ ಬಂಡಿ ನಮ್ಮಯ ಬದುಕು!
ಈಯಾನೆ ದೇಹ! ಮನವಶ್ವ! ತಂತ್ರಜ್ಞ!
TechnoWise tripods-331 ELEPHANT-HORSE
Our life is a beautiful chariot drawn by
A galloping horse and a slowly walking elephant!
The elephant is the body and the horse is the mind! O! TechnoWise!

Tuesday, May 29, 2018

ತಂತ್ರಜ್ಞ ವಚನಗಳು-೩೩೦ಪ್ರವಾಸೀ ವೀಸಾ


ತಂತ್ರಜ್ಞ ವಚನಗಳು-೩೩೦ಪ್ರವಾಸೀ ವೀಸಾ
ವಾಸ ದಿನ ನಾಕು! ಪ್ರವಾಸಿ ನೀ ಬಂದವನು!
ಹಾಸದಲಿ ನಲಿದಾತಿಥೇಯರನು ಮುದಗೊಳಿಸಿ,
"ವೀಸ" ಮುಗಿಯಲು ಮರಳು ಮನೆಗೆ! ತಂತ್ರಜ್ಞ.
TechnoWise Tripods-330 TOURIST VISA
You've come here as a tourist for a short time!
Enjoy yourself  fully and making the hosts extremely happy,
Return home contented when the Visa expires! O! TechnoWise!