Monday, May 28, 2018

ತಂತ್ರಜ್ಞ ತ್ರಿಪದಿಗಳು-೩೨೯ ವಿಪರ್ಯಾಸ


ತಂತ್ರಜ್ಞ ತ್ರಿಪದಿಗಳು-೩೨೯ ವಿಪರ್ಯಾಸ
ಠೀವಿಯುಡುಪುಗಳ ನಿರ್ಜೀವ ಗೊಂಬೆಯ ಕಂಡು
ಜೀವಂತ ಹರಿದಂಗಿ ಹೈದ ದಂಗಾಗುವುದು 
ಯಾವ ಮಟ್ಟದ ವಿಪರ್ಯಾಸ! ತಂತ್ರಜ್ಞ!
TechnoWise Tripods-329 PARADOX
When an animated boy with tattered clothes, views with flabbergasted eyes
The fashionable dress worn by a life-less doll in a shopper's window,
What a paradox! O! TechnoWise!

Friday, May 25, 2018

ತಂತ್ರಜ್ಞ ತ್ರಿಪದಿಗಳು-೩೨೮ ಪ್ರೌಢಲಕ್ಷಣ


ತಂತ್ರಜ್ಞ ತ್ರಿಪದಿಗಳು-೩೨೮ ಪ್ರೌಢಲಕ್ಷಣ
ತನ್ನ ಅಭಿಮತದೊಡನೆ ಭಿನ್ನಮತ ನುಡಿವವರ
ಮನ್ನಿಸುತ ಪ್ರೀತಿಸುವ ಸದ್ಗುಣವು ಮಾನವನ
ಉನ್ನತಿಯ ಪ್ರೌಢಲಕ್ಷಣವು ತಂತ್ರಜ್ಞ.
TechnoWise Tripods-328 SIGN OF MATURITY
Showing respect and love to those
Who are in total disagreement with our own opinion
Is the clear sign of highest maturity of human quality! O! TechnoWise!


Tuesday, May 22, 2018

ತಂತ್ರಜ್ಞ ತ್ರಿಪದಿಗಳು-೩೨೭ ಶಾಂತಿ ಮತ್ತು ಸಂತೋಷ


ತಂತ್ರಜ್ಞ ತ್ರಿಪದಿಗಳು-೩೨೭ ಶಾಂತಿ ಮತ್ತು ಸಂತೋಷ
ಅರಿವು ಊಹೆಗು ಹೆಚ್ಚು, ಇರೆ ಪರಸ್ಪರ ನೆಚ್ಚು,
ಇರಲೊಂದು ಕ್ಷಣ ತಾಳ್ಮೆ, ಶುಭ ಪ್ರತೀಕ್ಷೆಯ ಬಲ್ಮೆ
ಹರುಷ ಶಾಂತಿಯ ಬೀಡು, ನಾಡು! ತಂತ್ರಜ್ಞ.
TechnoWise Tripods-327 PEACE & JOY
If all tied to understand instead of judging, and believe each other instead of doubting,
Paused a second before reacting, become optimists instead of pessimists,
What a happy and peaceful place would be this World! O! TechnoWise!

Sunday, May 20, 2018

ತಂತ್ರಜ್ಞ ತ್ರಿಪದಿಗಳು-326 ಪುಟಿವ ಯೋಚನೆಗಳು


ತಂತ್ರಜ್ಞ ತ್ರಿಪದಿಗಳು-326 ಪುಟಿವ ಯೋಚನೆಗಳು
ಸಂತಸದ ಹೊಂಬಿಸಿಲು, ಸಂತಾಪದುರಿಬಿಸಿಲು-
ಅಂತಿರುವ ವಿಪರೀತ ಭಾವಗಳ ಸೃಜಿಸುವುದು
ಅಂತಃಸ್ಥ ಪುಟಿವ ಯೋಚನೆಯು! ತಂತ್ರಜ್ಞ.
TechnoWise Tripods-326 BOUNCING THOUGHTS
The one thing which creates opposite emotions of 
Pleasing sunlight of Happiness or the scorching sun of Misery
Is the bouncing thought of humans! O! TechnoWise!

Wednesday, May 16, 2018

ತಂತ್ರಜ್ಞ ತ್ರಿಪದಿಗಳು-೩೨೫ ಬಾಳೊಂದು ಚದುರಂಗದಾಟ


ತಂತ್ರಜ್ಞ ತ್ರಿಪದಿಗಳು-೩೨೫ ಬಾಳೊಂದು ಚದುರಂಗದಾಟ
ಮುಂದೆ ಮುಂದೆಯೆ ನಡೆದು, ಎಂದು ಗೆದ್ದವರುಂಟು
ಬಂಧ-ಮೋಕ್ಷದ ಬಾಳ ಚದುರಂಗದಾಟದಲಿ?
ಹಿಂದೆಯೂ ನಡೆ, ಮುಂದೆ ಗೆಲಲು! ತಂತ್ರಜ್ಞ.
TechnoWise tripods-325 LIFE IS A GAME OF CHESS
This life with dualities of Bondage and Freedom is like a game of Chess!
No one has ever won a game by taking only forward moves! O! TechnoWise!
Many a time, you've to move backwards for going forward in future and win!

Monday, May 14, 2018

ತಂತ್ರಜ್ಞ ತ್ರಿಪದಿಗಳು-೩೨೪ ವಿಜ್ಞಾನ-ಅಧ್ಯಾತ್ಮ


ತಂತ್ರಜ್ಞ ತ್ರಿಪದಿಗಳು-೩೨೪ ವಿಜ್ಞಾನ-ಅಧ್ಯಾತ್ಮ
ಹೊರಟು ಕಾರಣದಿಂದ, ಗುರಿ ಕಾರ್ಯ- ಅಧ್ಯಾತ್ಮ!
ಕಾರಣದ ಕಡೆ, ಕಾರ್ಯದಿಂದ ವಿಜ್ಞಾನಪಥ!
ದಾರಿಗನು ಆಗು ಪಥದ್ವಯದಿ! ತಂತ್ರಜ್ಞ.
TechnoWise Tripods-324 SCIENCE- SPIRITUALITY
From cause to effect is the path of Spirituality!
And Science moves from Effect to Cause!
Be a wayfarer in both the paths! O! TechnoWise!




Sunday, May 13, 2018

ತಂತ್ರಜ್ಞ ತ್ರಿಪದಿಗಳು-೩೨೩ ತಂತ್ರಜ್ಞಾನಿಯೆ ವಿಶ್ವಕರ್ಮ?


ತಂತ್ರಜ್ಞ ತ್ರಿಪದಿಗಳು-೩೨೩ ತಂತ್ರಜ್ಞಾನಿಯೆ ವಿಶ್ವಕರ್ಮ?
ತಂತ್ರಮಾಯೆಯ ಜತೆ ಕುತಂತ್ರಖಳನಿಲ್ಲದಿರೆ,
ಯಂತ್ರ ನೆರವಿನ ಹಿಂದೆ ಷಡ್ಯಂತ್ರವಿಲ್ಲದಿರೆ,
ತಂತ್ರಜ್ಞಾನಿಯೆ ವಿಶ್ವಕರ್ಮ! ತಂತ್ರಜ್ಞ!
TechnoWise Tripods-323 TECHNOLOGIST- A DIVINE ARCHITECT?
When technological marvels are not accompanied by cunning villains,
And when there's no wily ruse behind helping hands of machines,
A Technologist becomes verily a divine architect! O! TechnoWise!